ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru Digital Arrest: ಬೆಂಗಳೂರಿನ ವೃದ್ಧೆಗೆ ಡಿಜಿಟಲ್‌ ಅರೆಸ್ಟ್; 98.40 ಲಕ್ಷ ದೋಚಿದ ಸೈಬರ್ ವಂಚಕರು!

ದೆಹಲಿಯ ಪೊಲೀಸ್ ಅಧಿಕಾರಿ ಎಂದು ವೃದ್ಧೆಗೆ ಕರೆ ಮಾಡಿದ ಸೈಬರ್ ಖದೀಮ,‌ ನಿಮ್ಮ ಖಾತೆಗಳಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಬೆದರಿಸಿ ವಂಚಿಸಿದ್ದಾನೆ. ವೃದ್ಧೆಯಿಂದ ಹಂತ ಹಂತವಾಗಿ 98.40 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್ ಅಪರಾಧ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ವೃದ್ಧೆಗೆ ಡಿಜಿಟಲ್‌ ಅರೆಸ್ಟ್; 98.40 ಲಕ್ಷ ದೋಚಿದ ಸೈಬರ್ ವಂಚಕರು!

ಸಾಂದರ್ಭಿಕ ಚಿತ್ರ -

Prabhakara R
Prabhakara R Jun 9, 2026 9:39 PM

ಬೆಂಗಳೂರು: ವೃದ್ಧೆಯನ್ನು ಡಿಜಿಟಲ್ ಅರೆಸ್ಟ್ (Bengaluru Digital Arrest) ಮಾಡುವ ಮೂಲಕ ಸೈಬರ್ ವಂಚಕರು 98.40 ಲಕ್ಷ ದೋಚಿರುವುದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೊಮ್ಮನಹಳ್ಳಿ ನಿವಾಸಿ ಸ್ವರ್ಣಲತಾ ಹಣ ಕಳೆದುಕೊಂಡವರು. ಸ್ವರ್ಣಲತಾ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 18ರಂದು ವೃದ್ಧೆಗೆ ಕರೆ ಮಾಡಿದ್ದ ಸೈಬರ್ ವಂಚಕನೊಬ್ಬ, ದೆಹಲಿ ಪೊಲೀಸ್ ಕಚೇರಿಯಿಂದ ಡಿಸಿಪಿ ಭೀಷಮ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ, ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ನೀವು ಭಾಗಿಯಾಗಿದ್ದು, ನಿಮ್ಮ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ನಿಮ್ಮನ್ನು ಬಂಧಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ ಎಂಬುದಾಗಿ ಹೆದರಿಸಿದ್ದ ಎನ್ನಲಾಗಿದೆ.

ಇನ್‌ಸ್ಟಾಗ್ರಾಂ ಪೋಸ್ಟ್‌ ಮಾಡಿ ಆತ್ಮಹತ್ಯೆ ಯತ್ನ : 8 ನಿಮಿಷಗಳಲ್ಲಿ ಯುವಕನ ಜೀವ ಉಳಿಸಿದ ಪೊಲೀಸರು

ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಕೆಲವು ಸೂಚನೆಗಳನ್ನು ಪಾಲಿಸದಿದ್ದರೆ ನಿಮ್ಮ ಕುಟುಂಬದವರಿಗೂ ಸಮಸ್ಯೆಯಾಗಲಿದೆ ಎಂದು ವಂಚಕ ಹೇಳಿದ್ದ. ನಂತರ, ಪೊಲೀಸ್ ಕಾನ್‌ಸ್ಟೇಬಲ್ ಸೋಗಿನಲ್ಲಿ ರವಿಕುಮಾರ್ ಎಂಬಾತ ಕರೆ ಮಾಡಿ, ನಿಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು. ವಿಚಾರಣೆಗಾಗಿ ದೆಹಲಿಗೂ ಬರಬೇಕು ಎಂದು ವಿಡಿಯೊ ಕರೆಯಲ್ಲಿ ಸೂಚಿಸಿದ್ದ. ಅದಾದ ಮೇಲೆ ಭೀಷಮ್ ಸಿಂಗ್ ವಿಡಿಯೊ ಕರೆ ಮಾಡಿ ಬೆದರಿಸಿ, ವೃದ್ಧೆಯಿಂದ ಹಂತಹಂತವಾಗಿ ಹಣ ದೋಚಲಾಗಿತ್ತು ಎಂದು ತಿಳಿದುಬಂದಿದೆ.

ಉದ್ಯಮಿಗೆ ಹನಿಟ್ರ್ಯಾಪ್ ಮಾಡಿ 2.77 ಕೋಟಿ ವಸೂಲಿ; ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಉದ್ಯಮಿಗೆ ಹನಿಟ್ರ್ಯಾಪ್‌, ಬ್ಲ್ಯಾಕ್‌ಮೇಲ್‌ ಮಾಡಿ 2.77 ಕೋಟಿ ರೂ. ವಸೂಲಿ ಮಾಡಿರುವ ಆರೋಪದಲ್ಲಿ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಜಾಮ್ ಅಲಿಯಾಸ್‌ ಇಬ್ರಾಹಿಂ ಹಾಗೂ ಜಿತೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಫೋಟೊ-ವಿಡಿಯೊಗಳನ್ನು ಪತ್ನಿಗೆ ತೋರಿಸುವುದಾಗಿ ಉದ್ಯಮಿಗೆ ಬ್ಲ್ಯಾಕ್​ ಮೇಲ್ ​ ಮಾಡಿದ ಆರೋಪಿಗಳು, ಸೂಸೈಡ್​ ಕಥೆ ಕಟ್ಟಿ ಕೋಟ್ಯಂತರ ರೂಪಾಯಿ ವಸೂಲಿ ಪೊಲೀಸರ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.

2024ರಲ್ಲೇ ಖ್ಯಾತ ಉದ್ಯಮಿಗೆ ಹನಿಟ್ರ್ಯಾಪ್ ಖೆಡ್ಡಾ ತೋಡಿದ್ದ ಆರೋಪಿ ಜಿತೇಶ್, ಉದ್ಯಮಿಯ ಅಶ್ಲೀಲ ಫೋಟೊ, ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಆಟ ಶುರು ಮಾಡಿದ್ದ. ಹಣ ಕೊಡದಿದ್ದರೆ ಪತ್ನಿಗೆ ವಿಡಿಯೊ ತೋರಿಸುವುದಾಗಿ ಉದ್ಯಮಿಗೆ ಬೆದರಿಕೆ ಹಾಕಿದ್ದ. ಮೊದಲಿಗೆ ಜಿತೇಶ್​ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮರ್ಯಾದೆಗೆ ಹೆದರಿ ಚೆಕ್ ಮೂಲಕ ಜಿತೇಶ್​ಗೆ ಉದ್ಯಮಿ ಹಣ ನೀಡಿದ್ದರಂತೆ.

ಈ ಬಗ್ಗೆ ಯುವ ಕಾಂಗ್ರೆಸ್ ಮುಖಂಡ ನಿಜಾಮ್​ಗೆ ಉದ್ಯಮಿಯೇ ಮಾಹಿತಿ ನೀಡಿದ್ದರಂತೆ. ಆದರೆ ಉದ್ಯಮಿಯ ಸಹಾಯಕ್ಕೆ ಹೋಗದ ಕಾಂಗ್ರೆಸ್ ಮುಖಂಡ, ಜಿತೇಶ್ ಜತೆ ಸೇರಿ ಉದ್ಯಮಿಗೆ ಇನ್ನಷ್ಟು ಬ್ಲ್ಯಾಕ್​​ಮೇಲ್ ಮಾಡಿದ್ದಾನೆ. ಉದ್ಯಮಿಯಿಂದ ನಿಜಾಮ್​ ಮತ್ತೆ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದು, ಈವರೆಗೆ ಬರೋಬ್ಬರಿ 2.77 ಕೋಟಿ ದೋಚಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.