‘ಲೋಕಲೀ ಯುವರ್ಸ್’ ಅಭಿಯಾನದ ಮೂಲಕ ಭಾರತದ ರಿಟೇಲ್ ವ್ಯಾಪಾರಿಗಳ ಗೌರವಿಸಿದ ಕೋಕಾ-ಕೋಲಾ
ಬಹುತೇಕ ಗ್ರಾಹಕರನ್ನು ಹೆಸರಿನಿಂದ ಗುರುತಿಸುವ, ಹಬ್ಬಹರಿದಿನಗಳಿಗೆ ಅಗತ್ಯವಾದ ಸಾಮಾಗ್ರಿ ಗಳನ್ನು ಒದಗಿಸುವ ಮತ್ತು ಅಂಗಡಿಗಳನ್ನು ಸಂಭಾಷಣೆ, ಕಥೆಗಳು ಮತ್ತು ಹರಟೆಯ ತಾಣಗಳಾಗಿ ರೂಪಿಸಿರುವ ಈ ರಿಟೇಲ್ ವ್ಯಾಪಾರಿಗಳನ್ನು ಕೋಕಾ-ಕೋಲಾ ಇಂಡಿಯಾ ಸಂಸ್ಥೆಯು ‘ಲೋಕಲೀ ಯುವರ್ಸ್’ ಎಂಬ ಅಭಿಯಾನದ ಮೂಲಕ ಗೌರವಿಸಿ ಸಂಭ್ರಮಿಸುತ್ತಿದೆ.

-

ಬೆಂಗಳೂರು: ಬೆಳಿಗ್ಗೆ ಎಲ್ಲರಿಗಿಂತ ಮೊದಲು ಬಾಗಿಲು ತೆರೆಯುವವರು, ರಾತ್ರಿ ಎಲ್ಲರಿಗಿಂತ ತಡವಾಗಿ ಬಾಗಿಲು ಮುಚ್ಚುವವರು ಮತ್ತು ಸಮಾಜ ಜೀವನದ ಪ್ರಮುಖ ಭಾಗಿರುವವರು ಈ ರಿಟೇಲ್ ವ್ಯಾಪಾರಿಗಳು. ಕಳೆದ ಹಲವಾರು ದಶಕಗಳಿಂದ ಭಾರತದ ರಿಟೇಲ್ ವ್ಯಾಪಾರಿಗಳು ದೈನಂದಿನ ಜೀವನದ ಮಹತ್ವದ ಭಾಗವಾಗಿದ್ದಾರೆ.
ಬಹುತೇಕ ಗ್ರಾಹಕರನ್ನು ಹೆಸರಿನಿಂದ ಗುರುತಿಸುವ, ಹಬ್ಬಹರಿದಿನಗಳಿಗೆ ಅಗತ್ಯವಾದ ಸಾಮಾಗ್ರಿ ಗಳನ್ನು ಒದಗಿಸುವ ಮತ್ತು ಅಂಗಡಿಗಳನ್ನು ಸಂಭಾಷಣೆ, ಕಥೆಗಳು ಮತ್ತು ಹರಟೆಯ ತಾಣಗಳಾಗಿ ರೂಪಿಸಿರುವ ಈ ರಿಟೇಲ್ ವ್ಯಾಪಾರಿಗಳನ್ನು ಕೋಕಾ-ಕೋಲಾ ಇಂಡಿಯಾ ಸಂಸ್ಥೆಯು ‘ಲೋಕಲೀ ಯುವರ್ಸ್’ ಎಂಬ ಅಭಿಯಾನದ ಮೂಲಕ ಗೌರವಿಸಿ ಸಂಭ್ರಮಿಸುತ್ತಿದೆ.
ಲಕ್ಷಾಂತರ ಸಣ್ಣ ವ್ಯಾಪಾರಗಳು ಗ್ರಾಹಕರಿಗೆ ಹೆಚ್ಚಿನ ಲಭ್ಯತೆ, ಅನುಕೂಲತೆ ಒದಗಿಸುತ್ತಿದ್ದು, ಸಮಾಜದಲ್ಲಿ ಸಂಪರ್ಕವನ್ನು ಉಂಟು ಮಾಡುತ್ತವೆ. ಈ ಮೂಲಕ ಸ್ಥಳೀಯ ಅಂಗಡಿಗಳಿಂದ ಹಿಡಿದು ರಾಷ್ಟ್ರೀಯ ಮಟ್ಟದವರೆಗೆ ಹರಡಿಕೊಂಡಿರುವ ರಿಟೇಲ್ ವ್ಯಾಪಾರಿಗಳು ವಿಶ್ವದ ಅತಿ ದೊಡ್ಡ ರಿಟೇಲ್ ಜಾಲಗಳಲ್ಲಿ ಒಂದನ್ನು ನಡೆಸುತ್ತಿದ್ದಾರೆ. ‘ಲೋಕಲೀ ಯುವರ್ಸ್’ ಮೂಲಕ ಕೋಕಾ-ಕೋಲಾ ಇಂಡಿಯಾ ಸಂಸ್ಥೆಯು ಜೀವನೋಪಾಯವನ್ನು ಒದಗಿಸುವ, ಸ್ಥಳೀಯ ವ್ಯಾಪಾರ ಗಳನ್ನು ಬೆಳೆಸುವ ಮತ್ತು ವರ್ಷವಿಡೀ ಸಮಾಜದ ಹುಮ್ಮಸ್ಸನ್ನು ಜೀವಂತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುವ ತಮ್ಮ ರಿಟೇಲ್ ಪಾಲುದಾರರ ಮೇಲೆ ಬೆಳಕು ಚೆಲ್ಲುತ್ತಿದೆ.
ಬಹಳಷ್ಟು ರಿಟೇಲ್ ಮಂದಿಗೆ ಕೋಕಾ-ಕೋಲಾ ಕೇವಲ ಪಾನೀಯವಾಗಿ ಉಳಿದಿಲ್ಲ, ಬದಲಿಗೆ ಅವರ ಬೆಳವಣಿಗೆಯ ಪಯಣದಲ್ಲಿ ಉತ್ತಮ ಸಂಗಾತಿಯಾಗಿದೆ. 2002ರಿಂದ ಕಂಪನಿಯೊಂದಿಗೆ ಸಂಬಂಧ ಹೊಂದಿರುವ ವಿತರಕ ಅಜಯ್ ಸಾಹಾ ಅವರು ಈ ಕುರಿತು ಮಾತನಾಡಿ, “ಕಳೆದು ಇಪ್ಪತ್ತು ವರ್ಷಗಳಿಂದಲೂ ಹೆಚ್ಚು ಕಾಲದ ಈ ನನ್ನ ಉದ್ಯಮ ಪಯಣ ತುಂಬಾ ಫಲಪ್ರದವಾಗಿದೆ. ಕೋಕಾ-ಕೋಲಾ ಇಂಡಿಯಾ ಜೊತೆಗಿನ ನಮ್ಮ ಈ ಸಂಬಂಧ ವರ್ಷದಿಂದ ವರ್ಷಕ್ಕೆ ಗಟ್ಟಿಯಾಗಿ ಬೆಳೆದಿದೆ. ಕಂಪನಿಯ ನಿರಂತರ ಬೆಂಬಲ ಮತ್ತು ಮಾರ್ಗದರ್ಶನವು ನಮ್ಮ ವ್ಯಾಪಾರದ ಯಶಸ್ಸಿಗೆ ನೆರವಾಗಿದೆ ಮತ್ತು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಿದೆ” ಎಂದು ಹೇಳಿದರು.
ಇದೇ ರೀತಿಯ ಭಾವನೆ ವ್ಯಕ್ತ ಪಡಿಸಿದ ಒರಿಸ್ಸಾದ 25 ವರ್ಷಗಳಿಗಿಂತ ಹಳೆಯ ಸಾಂಪ್ರದಾಯಿಕ ಸಿಹಿತಿಂಡಿಗಳ ಅಂಗಡಿಯ ಮಾಲೀಕ ರಾಜೇಶ್ ಕುಮಾರ್ ರಾಣಾ ಅವರು, “ಕೋಕಾ ಕೋಲಾ ಇಂಡಿಯಾ ನಮ್ಮ ಯಶಸ್ಸಿನ ಪಯಣದ ಅವಿಭಾಜ್ಯ ಅಂಗವಾಗಿದೆ. ನಮ್ಮ ಅಂಗಡಿಯಲ್ಲಿ ನಾವು ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ಮಾತ್ರವಲ್ಲ, ನಮ್ಮ ಗ್ರಾಹಕರಿಗೆ ಅವರಿಷ್ಟದ ಪಾನೀಯಗಳಾದ ಕೋಕಾ-ಕೋಲಾ, ಸ್ಪ್ರೈಟ್, ಥಮ್ಸ್ ಅಪ್ ಮತ್ತು ನೀರನ್ನು ಒದಗಿಸುತ್ತೇವೆ. ಅವರಿಗೆ ಏನು ಬೇಕಾ ದರೂ, ಅದು ಇಲ್ಲಿ ಲಭ್ಯವಿರುವಂತೆ ನೋಡಿಕೊಳ್ಳುತ್ತೇವೆ” ಎಂದು ಹೇಳಿದರು.
ಈ ಕುರಿತು ಕೋಕಾ-ಕೋಲಾ ಇಂಡಿಯಾದ ಉಪಾಧ್ಯಕ್ಷ ಸಂದೀಪ್ ಬಜೋರಿಯಾ ಅವರು, “ಭಾರತ ದಲ್ಲಿ ರಿಟೇಲ್ ವ್ಯಾಪಾರವು ಅತಿದೊಡ್ಡ ಉದ್ಯೋಗ ಕ್ಷೇತ್ರವಾಗಿರುವುದಷ್ಟೇ ಅಲ್ಲ, ಸ್ಥಳೀಯ ಆರ್ಥಿಕ ಚಕ್ರದ ಬಲಿಷ್ಠ ಆಧಾರ ಸ್ತಂಭವಾಗಿದೆ. ಕೋಕಾ ಕೋಲಾದಲ್ಲಿ, ನಾವು ಯಾವಾಗಲೂ ರಿಟೇಲ್ ವ್ಯಾಪಾರಿಗಳೊಂದಿಗಿನ ಸಹಭಾಗಿತ್ವದ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಎದುರು ನೋಡುತ್ತೇವೆ ಮತ್ತು ಆ ನಿಟ್ಟಿನಲ್ಲಿ ಅವರ ಸಾಮರ್ಥ್ಯವನ್ನು ಬಲಪಡಿಸು ತ್ತೇವೆ.
ವ್ಯಾಪಾರ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಮೂಲಕ, ಕೂಲರ್ ಗಳು ಮತ್ತು ಫೌಂಟೇನ್ ಯಂತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ನಾವು ಅತ್ಯುತ್ತಮ ವ್ಯವಸ್ಥೆ ಯನ್ನು ನಿರ್ಮಿಸುತ್ತಿದ್ದೇವೆ ಮತ್ತು ಉದ್ಯಮಶೀಲತೆಗೆ ಪ್ರೋತ್ಸಾಹಿಸುತ್ತಿದ್ದೇವೆ. ಸೂಪರ್ ಪವರ್ ರಿಟೇಲರ್ ಪ್ರೋಗ್ರಾಂ ಮತ್ತು ಕೋಕ್ ಬಡ್ಡಿ ಮುಂತಾದ ಯೋಜನೆಗಳ ಮೂಲಕ, ರಿಟೇಲ್ ವ್ಯಾಪಾರಿಗಳಿಗೆ ಹೊಸ ಕೌಶಲ್ಯಗಳು ಮತ್ತು ಡಿಜಿಟಲ್ ಉಪಕರಣಗಳನ್ನು ಒದಗಿಸುವ ಮೂಲಕ ಅವರನ್ನು ಬಲಪಡಿಸುತ್ತಿದ್ದೇವೆ. ‘ಲೋಕಲೀ ಯುವರ್ಸ್’ ಮೂಲಕ ನಾವು ಅವರ ಉದ್ಯಮದ ಹುಮ್ಮಸ್ಸು, ಸಮಾಜ ರೂಪಿಸುವಲ್ಲಿನ ಅವರ ಪಾತ್ರ ಮತ್ತು ದೈನಂದಿನ ಜೀವನಕ್ಕೆ ಅವರು ನೀಡುವ ಕೊಡುಗೆಗಾಗಿ ಅವರನ್ನು ಗೌರವಿಸಿ ಸಂಭ್ರಮಿಸುತ್ತಿದ್ದೇವೆ” ಎಂದು ಹೇಳಿದರು.
‘ಲೋಕಲೀ ಯುವರ್ಸ್’ ಈ ರಿಟೇಲ್ ಸಾಹಸಿಗಳ ಬದ್ಧತೆ, ಉತ್ಸಾಹ ಮತ್ತು ಹುಮ್ಮಸ್ಸನ್ನು ಸೆರೆ ಹಿಡಿಯುವ ಚಿತ್ರಣಗಳು ಮತ್ತು ಸಣ್ಣ ಚಿತ್ರಗಳ ಸರಣಿಯನ್ನು ಪ್ರದರ್ಶಿಸುತ್ತದೆ. ಕೌಂಟರ್ ನ ಹಿಂದೆ ಇರುವ ಈ ಜನರ ಕಥೆಗಳನ್ನು ಹೇಳುವ ಮೂಲಕ ಈ ಅಭಿಯಾನವು ಭಾರತದ ರಿಟೇಲ್ ಜಗತ್ತಿನ ಕುರಿತು ಬೆಳಕು ಚೆಲ್ಲುತ್ತದೆ.
ರಾಷ್ಟ್ರವ್ಯಾಪಿ ಆರು ದಶಲಕ್ಷಕ್ಕೂ ಹೆಚ್ಚು ರಿಟೇಲ್ ವ್ಯಾಪಾರಿಗಳು ಮತ್ತು ವಿತರಕರ ಜಾಲ ಹೊಂದಿರುವ ಕೋಕಾ-ಕೋಲಾ ಇಂಡಿಯಾ ಸಂಸ್ಥೆಯು ಭಾರತದ ಅತ್ಯಂತ ಆಕರ್ಷಕ ರಿಟೇಲ್ ಪರಿಸರ ವ್ಯವಸ್ಥೆಯ ಭಾಗವಾಗಿರಲು ಹೆಮ್ಮೆಪಡುತ್ತದೆ.