Chikkaballapur News: ಮುಚ್ಚಿ ಹೋಗಿರುವ ಪುರಾತನ ಕಲ್ಯಾಣಿ ಮರುಜೀವಕ್ಕೆ ಯತ್ನ : ಸಾರ್ವಜನಿಕರಲ್ಲಿ ಗರಿಗೆದರಿದ ಕುತೂಹಲ
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಗೆ ಒಳಪಡುವ ಕಂದವಾರ ಗ್ರಾಮದ ಸರ್ವೆನಂಬರ್ ೪೨/೨ರಲ್ಲಿ ರುವ ಒಂದು ಕಲ್ಯಾಣಿ, ೪೩/೧ರ ೭ ಗುಂಟೆಯಲ್ಲಿರುವ ಒಂದು ಮಂಟಪ ಮತ್ತು ಛತ್ರ,ಮಾವಿನ ತೋಪು, ೪೩/೩ರಲ್ಲಿ ೮ ಗುಂಟೆಯಲ್ಲಿ ಭೂಮಿ ಇವಿಷ್ಟೂ ಆಸ್ತಿಯನ್ನು ಸಬ್ ರಿಜಿಸ್ಟ್ರಾರ್ ಕಛೇರಿ ಯಲ್ಲಿ ೧೯೦೨ರಲ್ಲಿ ನೋಂದಣಿ ಮಾಡಿಸಿ ಇನ್ನು ಮುಂದೆ ಇದರ ಮೇಲೆ ನಮಗಾಗಲಿ, ನಮ್ಮ ರಕ್ತ ಸಂಬಂಧಿಕರಿಗಾಗಲಿ ಯಾವ ಹಕ್ಕು ಇರುವುದಿಲ್ಲ.

ಕಂದವಾರ ಗ್ರಾಮದಲ್ಲಿ ಮುಚ್ಚಿಹೋಗಿರುವ ಕಲ್ಯಾಣಿಯನ್ನು ಜೆಸಿಬಿ ಸಹಾಯದಿಂದ ಹೊರತೆಗೆಯವ ಕೆಲಸವನ್ನು ಗ್ರಾಮಸ್ಥರು ಮಂಗಳವಾರ ಮಾಡಿದರು. -

ಚಿಕ್ಕಬಳ್ಳಾಪುರ : ೧೯೦೨ ರಷ್ಟು ಪ್ರಾಚೀನ ಕಲ್ಯಾಣಿಯೊಂದನ್ನು ನಗರಸಭೆ ನಾಮನಿರ್ದೇಶಿತ ಸದಸ್ಯರೊಬ್ಬರು ಇದು ನಮ್ಮ ಆಸ್ತಿ ಎಂಬಂತೆ ದಾಖಲೆ ಸೃಷ್ಟಿಸಿಕೊಂಡಿದ್ದಲ್ಲದೆ ೨೦೧೭ರಲ್ಲಿ ಗ್ರಾಮಸ್ಥರ ಪ್ರತಿರೋಧದ ನಡುವೆಯೂ ತಮ್ಮ ರಾಜಕೀಯ ಶಕ್ತಿ ಬಳಸಿ ಮುಚ್ಚಿಹಾಕಿದ್ದರು.
ಇಂತಹ ಪುರಾತನ ಕಲ್ಯಾಣಿಗೆ ಮರುಜೀವ ನೀಡಲು ಮುಂದಾಗಿರುವ ಕಂದವಾರ ಗ್ರಾಮಸ್ಥರು ಮತ್ತು ಮುತ್ಯಾಲಮ್ಮ ದೇವಾಲಯ ಸಮಿತಿ ಮುಖಂಡರು ಮಂಗಳವಾರ ಜೆಸಿಬಿ ಸಹಾಯದಿಂದ ಮುಚ್ಚಿಹೋಗಿರುವ ಕಲ್ಯಾಣಿಯನ್ನು ಶೋಧಿಸಲು ಮುಂದಾಗಿರುವುದು ಸಾರ್ವಜನಿಕರ ವಲಯದಲ್ಲಿ ಬಾರೀ ಕುತೂಹಲಕ್ಕೆ ಕಾರಣವಾಗಿದೆ.
ಏನಿದು ಕಲ್ಯಾಣಿ ಕಥೆ??
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಗೆ ಒಳಪಡುವ ಕಂದವಾರ ಗ್ರಾಮದ ಸರ್ವೆನಂಬರ್ ೪೨/೨ರಲ್ಲಿ ರುವ ಒಂದು ಕಲ್ಯಾಣಿ, ೪೩/೧ರ ೭ ಗುಂಟೆಯಲ್ಲಿರುವ ಒಂದು ಮಂಟಪ ಮತ್ತು ಛತ್ರ,ಮಾವಿನ ತೋಪು, ೪೩/೩ರಲ್ಲಿ ೮ ಗುಂಟೆಯಲ್ಲಿ ಭೂಮಿ ಇವಿಷ್ಟೂ ಆಸ್ತಿಯನ್ನು ಸಬ್ ರಿಜಿಸ್ಟ್ರಾರ್ ಕಛೇರಿ ಯಲ್ಲಿ ೧೯೦೨ರಲ್ಲಿ ನೋಂದಣಿ ಮಾಡಿಸಿ ಇನ್ನು ಮುಂದೆ ಇದರ ಮೇಲೆ ನಮಗಾಗಲಿ, ನಮ್ಮ ರಕ್ತ ಸಂಬಂಧಿಕರಿಗಾಗಲಿ ಯಾವ ಹಕ್ಕು ಇರುವುದಿಲ್ಲ.ಇದು ಸರಕಾರಿ ಭೂಮಿಯಾಗಿದ್ದು ಇದನ್ನು ಕೇವಲ ಧರ್ಮಕಾರ್ಯಕ್ಕೆ ಮಾತ್ರ ಬಳಿಸಿಕೊಳ್ಳಿ ಎಂದು ಕುಕ್ಕಲ ನರಸಿಂಹಯ್ಯ, ಚಿನ್ನ ನರಸಿಂಹ ಯ್ಯ,ತಿಮ್ಮಯ್ಯ ಎಂಬುವರು ಘೋಷಿಸಿ ಹಕ್ಕು ನಿವೃತ್ತಿ ಪಡೆದಿದ್ದರು.
ಇದನ್ನೂ ಓದಿ: IPL 2026: ಎಂಎಸ್ ಧೋನಿ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಕೆ ಶ್ರೀಕಾಂತ್!
ಅಲ್ಲಿಂದ ೨೦೧೭ರವರೆಗೆ ಈ ಸ್ವತ್ತು ಸರಕಾರಿ ಸ್ವತ್ತಾಗಿಯೇ ಉಳಿದಿತ್ತು. ಆದರೆ ಚಿನ್ನ ನರಸಿಂಹಯ್ಯ ಅವರ ಮೊಮ್ಮಗ ಕೆ.ಎನ್. ಶ್ರೀನಿವಾಸ್ ಎಂಬುವರು ಈ ಭೂಮಿಯ ಮೇಲೆ ಹಕ್ಕು ಚಲಾಯಿಸಲು ಮುಂದಾದರು. ಅನಧಿಕೃತವಾಗಿ ನಗರಸಭೆಯಿಂದ ಖಾತೆ ಮಾಡಿಸಿಕೊಂಡು ೪೩/೩ರಲ್ಲಿ ೮ ಗುಂಟೆ ಯಲ್ಲಿ ಭೂಮಿಯನ್ನು ರಾಮರಾಜು ಬಿನ್ ನರಸರಾಜು ಎಂಬುವರಿಗೆ ಕ್ರಯ ಮಾಡಿಕೊಟ್ಟಿದ್ದಾರೆ. ಸದರಿ ನರಸರಾಜು ಕೂಡ ನಗರಸಭೆ ಸದಸ್ಯರಾದ ಅವಧಿಯಲ್ಲಿ ಈ ಸ್ವತ್ತಿಗೆ ನಗರಸಭೆಯಲ್ಲಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡು, ಇಲ್ಲಿ ಹತ್ತಾರು ಮನೆಗಳನ್ನು ಕಟ್ಟು ಬಾಡಿಗೆಗೆ ನೀಡಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ಇವರಿಗೂ ಮುನ್ನ ನಗರಸಭೆ ನಾಮನಿರ್ದೇಶಿತ ಸದಸ್ಯರಾಗಿದ್ದ ಕೆ.ಎನ್. ರಂಗಸ್ವಾಮಿ ಮತ್ತು ಇವರ ಸಹೋದರ ಕೆ.ಎನ್.ಶ್ರೀನಿವಾಸ್ ಸೇರಿ ೨೦೧೭ರಲ್ಲಿ ಕಲ್ಯಾಣಿಯನ್ನು ನಗರಸಭೆ ತ್ಯಾಜ್ಯದಿಂದ ಮುಚ್ಚಿದ್ದಾರೆ. ಈ ವೇಳೆ ದೇವಾಲಯ ಸಮಿತಿ ಮತ್ತು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ತಡೆಯಲು ಲಿಖಿತ ದೂರು ನೀಡಿದ್ದರೂ ಯಾವುದೇ ಕ್ರಮ ವಹಿಸದಾದಾಗ ಈ ವಿಚಾರ ಕೋರ್ಟಿನ ಅಂಗಳ ತಲುಪಿತು.

ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಈ ವಿಚಾರ ವಿಚಾರಣೆಗೆ ಬಂದಾಗ,ಈ ಭೂಮಿ ನಮ್ಮದು ಎಂದು ಹಕ್ಕು ಚಲಾಯಿಸಿದ್ದ ಶ್ರೀನಿವಾಸ್, ರಂಗಸ್ವಾಮಿ ಇವರಿಗೆ ಸೋಲಾಯಿತು. ಸರಿಯಾದ ದಾಖಲೆ ಒದಗಿಸುವಲ್ಲಿ ವಿಫಲವಾಗಿದ್ದಾರೆ ಎಂದು ಹೇಳಿದ ನ್ಯಾಯಾಧೀಶರು ಕೇಸ್ ನಂಬರ್ ಒಎಸ್೨೯೬/೨೦೧೭ರಲ್ಲಿ ಈ ಕೇಸನ್ನು ವಜಾಗೊಳಿಸಲಾಯಿತು.
ಇದನ್ನು ಪ್ರಶ್ನಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ಕೋರ್ಟಿಗೆ ಮೇಲ್ಮನವಿ ಸಲ್ಲಿಸ ಲಾಯಿತು.ಇಲ್ಲೂ ಕೂಡ ಈ ಭೂಮಿಗೆ ನಾವೇ ವಾರಸುದಾರರು ಎಂದು ಸಾಬೀತು ಮಾಡುವಲ್ಲಿ ದೂರುದಾರರು ವಿಫಲರಾದ ಕಾರಣ ೩೧/೦೭/೨೦೨೪ರಲ್ಲಿ ಶ್ರೀನಿವಾಸ್ ಅವರ ಮೇಲ್ಮನವಿಯನ್ನು ವಜಾ ಮಾಡುತ್ತಾರೆ.ಅಲ್ಲಿಂದ ಈವರೆಗೆ ಅವರು ಅಫೀಲು ಸಲ್ಲಿಸಲು ಹೋಗಿಲ್ಲ.ಹೀಗಾಗಿ ನಾವು ಸರಕಾರಿ ಭೂಮಿಯಲ್ಲಿದ್ದ ಕಲ್ಯಾಣಿಯನ್ನು ಶೋಧಿಸಲು ಮುಂದಾಗಿದ್ದೇವೆ ಎನ್ನುವುದು ಗ್ರಾಮಸ್ಥ ರಾಮಸ್ವಾಮಿ ಅವರ ಮಾತಾಗಿದೆ.
ಒಟ್ಟಾರೆ ಕಲ್ಯಾಣಿ ಶೋಧನೆಯ ವಿಚಾರ ಕಂದವಾರ ಗ್ರಾಮಸ್ಥರು ಮುತ್ಯಾಲಮ್ಮ ದೇವಾಲಯ ಸಮಿತಿ ಮತ್ತು ರಾಮರಾಜು ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು ಮುಂದೆ ಈ ವಿಚಾರ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಎಂಬುದನ್ನು ಕಾಲವೇ ಉತ್ತರಿಸಬೇಕು.
ಈ ವೇಳೆ ಕಂದವಾರ ಗ್ರಾಮದ ಮುತ್ಯಾಲಮ್ಮ ದೇವಾಲಯ ಸಮಿತಿಯ ಸದಸ್ಯರು, ಗ್ರಾಮದ ಹಿರಿಯರು ಇದ್ದರು.
*
೪೨/೨ರಲ್ಲಿರುವ ಒಂದು ಕಲ್ಯಾಣಿ, ೪೩/೧ರ ೭ ಗುಂಟೆಯಲ್ಲಿರುವ ಒಂದು ಮಂಟಪ ಮತ್ತು ಛತ್ರ,ಮಾವಿನ ತೋಪು, ೪೩/೩ರಲ್ಲಿ ೮ ಗುಂಟೆಯಲ್ಲಿ ಭೂಮಿ ವಿಚಾರವಾಗಿ ನಮಗೇನೂ ಗೊತ್ತಿಲ್ಲ.ಈ ಭೂಮಿ ಒಡೆತನ ಯರ‍್ಯಾರಿಗೆ ಆಗಿದೆ ಎಂಬುದನ್ನು ದೇವಾಲಯ ಟ್ರಸ್ಟ್ ಸದಸ್ಯರು ಕರೆದು ಮಾತನಾಡಿದೆವು.ಆಗ ಇವರ ಬಾಯಲ್ಲಿ ಇಲ್ಲದೇ ಇರುವ ಮಾತುಗಳೆಲ್ಲಾ ಬಂದವು.ನಿಮ್ಮಕೈಲಿ ಏನಾಗುತ್ತದೋ ಮಾಡಿಕೊಳ್ಳಿ ಹೋಗಿ ಎಂದು ಧರ್ಪದಿಂದ ಮಾಡಿದರು.ಆಮೇಲೆ ನಾನು ಕೆ,ಟಿ,ವೆಂಕಟೇಶ್ ಸೇರಿ ಡಿ.ಸಿ, ಮುಜರಾಯಿ ಇಲಾಕೆ,ಎಸಿಗೆ ತಹಶೀಲ್ದಾರ್ ದೂರು ನೀಡಿ ಸುತ್ತಾಡಿ ಸುತ್ತಾಡಿ ಸುಸ್ತಾಗಿ ಸುಮ್ಮನಾದೆವು.ಆಮೇಲೆ ತಹಶೀಲ್ದಾರ್ ಸ್ಥಳತನಿಖೆ ಮಾಡಲು ಬರುವುದಾಗಿ ಹೇಳಿ ಬರಲೇಯಿಲ್ಲ.ಆಗ ಈ ಜಾಗದ ಮಾಲಿಕರು ಎನ್ನುವವರು ಕೇಸು ಹಾಕಿದರು.ಕೋರ್ಟಿನಲ್ಲಿ ಇವರಿಗೆ ಸೋಲಾಗಿದ್ದು ದೈವಪ್ರೇರಣೆ ಇರಬೇಕು.ಹೀಗಾಗಿ ನಾವು ಧೈರ್ಯವಾಗಿ ಮುಚ್ಚಿರುವ ಕಲ್ಯಾಣಿ ತೆಗೆಸಲು ಮುಂದಾಗಿದ್ದೇವೆ.
-ಕೆ.ಎನ್.ಅಶೋಕ್ ಕುಮಾರ್ ಕಂದವಾರ ಮೂಲಸ್ಥ,ಮುತ್ಯಾಲಮ್ಮ ದೇವಾಲಯ ಸಮಿತಿ ಖಜಾಂಚಿ.
ಮುತ್ಯಾಲಮ್ಮ ದೇವಾಲಯದ ಹೆಸರಿನಲ್ಲಿ ಈ ಭೂಮಿಯ ಪಹಣಿಯಿದೆ.೧೯೦೨ರಲ್ಲಿಯೇ ಈ ಭೂಮಿಯನ್ನು ಧರ್ಮದ ಕಾರ್ಯಕ್ಕಾಗಿ ಬಳಸಬೇಕು.ಇದರ ಮೇಲೆ ಯಾರಿಗೂ ಹಕ್ಕು ಇಲ್ಲ ಎಂದು ಹೇಳಿದ್ದಾರೆ.ಈ ಆಸ್ತಿಯನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಿರುವವರ ಜತೆ ಕೈ ಜೋಡಿಸಿರುವ ನಂದಿ ರಾಜಸ್ವ ನಿರೀಕ್ಷಕ ಸುಪ್ರಿತ್ ಅವರು ತಹಶೀಲ್ದಾರ್ ಅವರಿಗೆ ತಪ್ಪು ಮಾಹಿತಿ ನೀಡಿ ೨೦೨೪ರಲ್ಲಿ ಸರಕಾರಿ ಭೂಮಿ ಎಂದು ಕೋರ್ಟಿನ ತೀರ್ಪು ಇದ್ದರೂ ಕೂಡ ಇದನ್ನು ಮುಚ್ಚಿಟ್ಟು ತಹಶೀಲ್ದಾರ್ ಅನಿಲ್ ಅವರಿಗೆ ತಪ್ಪು ಮಾಹಿತಿ ನೀಡಿ ಭೂಮಿ ರಾಮರಾಜು ಅವರಿಗೆ ಸೇರಿದೆ ಎಂದು ಸಹಿ ಮಾಡಿಸುತ್ತಾರೆ.ಆಗ ನಾವು ತಹಶೀಲ್ದಾರ್ ಅವರಿಗೆ ಈ ಭೂಮಿ ಸರಕಾರಕ್ಕೆ ಸೇರಿದೆ. ಇದನ್ನು ಉಳಿಸಿಕೊಳ್ಳಲು ಮುಂದಾಗುತ್ತೀರೋ ಇಲ್ಲವೇ ನಾವೇ ಪಿಐಎಲ್ ಹಾಕಬೇಕೋ ಎಂದು ಪತ್ರ ಬರೆದಿದ್ದೇವೆ.ನಾವು ಸುಳ್ಳು ಹೇಳಿದ್ದರೆ ನಮ್ಮ ಮೇಲೆ ದೂರು ದಾಖಲಿಸಲಿ ಎಂದು ಸವಾಲು ಹಾಕಿದರು.
-ರಾಮಸ್ವಾಮಿ.ಕಂದವಾರ ಗ್ರಾಮದ ನಿವಾಸಿ.ನಿವೃತ್ತ ನೌಕರ.