ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೊಚ್ಚ ಹೊಸ ವಿಂಗರ್ ಪ್ಲಸ್‌ ಅನ್ನು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ವಿಂಗರ್ ಪ್ಲಸ್ ಈ ವಿಭಾಗದಲ್ಲಿಯೇ ಶ್ರೇಷ್ಠವಾದ ಫೀಚರ್ ಗಳನ್ನು ಹೊಂದಿದೆ. ಉದಾಹರಣೆಗೆ ರಿಕ್ಲೈ ನಿಂಗ್ ಕ್ಯಾಪ್ಟನ್ ಸೀಟ್ ಗಳು, ಸರಿಹೊಂದಿಸಬಹುದಾದ ಆರ್ಮ್‌ ರೆಸ್ಟ್‌ ಗಳು, ವೈಯಕ್ತಿಕ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್‌ ಗಳು, ಪ್ರತ್ಯೇಕ ಏಸಿ ವೆಂಟ್‌ ಗಳು ಮತ್ತು ಸಾಕಷ್ಟು ಕಾಲಿಡುವ ಜಾಗ ಹೀಗೆ ಸಾಕಷ್ಟು ಸೌಲಭ್ಯಗಳಿವೆ.

ಹೊಚ್ಚ ಹೊಸ ವಿಂಗರ್ ಪ್ಲಸ್‌ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

-

Ashok Nayak Ashok Nayak Sep 3, 2025 12:55 AM

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿ ಆಗಿರುವ ಟಾಟಾ ಮೋಟಾರ್ಸ್, ಇದೀಗ ಹೊಚ್ಚ ಹೊಸ 9 ಆಸನಗಳ ಟಾಟಾ ವಿಂಗರ್ ಪ್ಲಸ್‌ ಅನ್ನು ಬಿಡುಗಡೆ ಮಾಡಿದೆ. ಇದು ಸಿಬ್ಬಂದಿ ಸಾರಿಗೆ ವ್ಯವಸ್ಥೆಗೆ ಮತ್ತು ಬೆಳೆಯುತ್ತಿರುವ ಪ್ರವಾಸೋದ್ಯಮ ವಿಭಾಗ ಕ್ಕಾಗಿಯೇ ವಿನ್ಯಾಸಗೊಳಿಸಲಾದ ಪ್ರೀಮಿಯಂ ಪ್ರಯಾಣಿಕ ವಾಹನ ಉತ್ಪನ್ನವಾಗಿದೆ.

ವಿಂಗರ್ ಪ್ಲಸ್ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಮತ್ತು ಅತ್ಯುತ್ತಮ ಪ್ರಯಾಣದ ಅನುಭವವನ್ನು ನೀಡುತ್ತದೆ. ಜೊತೆಗೆ ವಾಹನ ಮಾಲೀಕರಿಗೆ ಕಡಿಮೆ ಮಾಲೀಕತ್ವ ವೆಚ್ಚ ಹೊಂದ ಲು ನೆರವಾಗಲಿದ್ದು, ಹೆಚ್ಚಿನ ದಕ್ಷತೆ ಮತ್ತು ಲಾಭದಾಯಕತೆಯನ್ನು ಹೊಂದಲು ಸಹಾಯ ಮಾಡುತ್ತದೆ. ಇದರ ಬೆಲೆ Rs. 20.60 ಲಕ್ಷ (ಎಕ್ಸ್- ಶೋರೂಮ್, ನವದೆಹಲಿ) ಆಗಿದ್ದು, ಈ ವಾಹನವು ತನ್ನ ವಿನ್ಯಾಸ, ಫೀಚರ್ ಗಳು ಮತ್ತು ತಂತ್ರಜ್ಞಾನದ ಸಂಯೋಜನೆಯಿಂದ ಈ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ.

ವಿಂಗರ್ ಪ್ಲಸ್ ಈ ವಿಭಾಗದಲ್ಲಿಯೇ ಶ್ರೇಷ್ಠವಾದ ಫೀಚರ್ ಗಳನ್ನು ಹೊಂದಿದೆ. ಉದಾಹರಣೆಗೆ ರಿಕ್ಲೈನಿಂಗ್ ಕ್ಯಾಪ್ಟನ್ ಸೀಟ್ ಗಳು, ಸರಿಹೊಂದಿಸಬಹುದಾದ ಆರ್ಮ್‌ ರೆಸ್ಟ್‌ ಗಳು, ವೈಯಕ್ತಿಕ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್‌ ಗಳು, ಪ್ರತ್ಯೇಕ ಏಸಿ ವೆಂಟ್‌ ಗಳು ಮತ್ತು ಸಾಕಷ್ಟು ಕಾಲಿಡುವ ಜಾಗ ಹೀಗೆ ಸಾಕಷ್ಟು ಸೌಲಭ್ಯಗಳಿವೆ. ವಿಶಾಲವಾದ ಕ್ಯಾಬಿನ್ ಮತ್ತು ದೊಡ್ಡದಾದ ಸಾಮಾನು ಇಡುವ ವಿಭಾಗವು ದೀರ್ಘ ಪ್ರಯಾಣಕ್ಕೆ ಹೆಚ್ಚಿನ ಆರಾಮದಾಯಕತೆ ಒದಗಿಸುತ್ತದೆ.

ಇದನ್ನೂ ಓದಿ: Ranjith H Ashwath Column: ಎಲ್ಲದಕ್ಕೂ ಸಿಬಿಐ ತನಿಖೆಯೊಂದೇ ಪರಿಹಾರವೇ ?

ಮೋನೊಕಾಕ್ ಚಾಸಿಸ್‌ ನಲ್ಲಿ ನಿರ್ಮಿತವಾದ ಈ ವಾಹನವು ಅತ್ಯುತ್ತಮ ಸುರಕ್ಷತೆ ಮತ್ತು ಸ್ಥಿರತೆ ಯನ್ನು ನೀಡುತ್ತದೆ. ಜೊತೆಗೆ ಕಾರಿನಂತಹ ಸವಾರಿ ಗುಣಮಟ್ಟ ಮತ್ತು ನಿರ್ವಹಣಾ ಸಾಮರ್ಥ್ಯ ಒದಗಿಸುತ್ತಿದ್ದು, ಸುಲಭವಾಗಿ ಚಾಲನೆ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ಚಾಲಕರಿಗೆ ಆಯಾಸವನ್ನು ಕಡಿಮೆ ಮಾಡುತ್ತದೆ.

ಹೊಸ ವಿಂಗರ್ ಪ್ಲಸ್‌ ಬಿಡುಗಡೆ ಮಾಡಿ ಮಾತನಾಡಿದ ಟಾಟಾ ಮೋಟಾರ್ಸ್ ನ ಕಮರ್ಷಿಯಲ್ ಪ್ಯಾಸೆಂಜರ್ ವೆಹಿಕಲ್ ಬಿಸಿನೆಸ್ ವಿಭಾಗದ ಮುಖ್ಯಸ್ಥ ಮತ್ತು ಉಪಾಧ್ಯಕ್ಷರಾದ ಶ್ರೀ ಆನಂದ್ ಎಸ್ ಅವರು , “ವಿಂಗರ್ ಪ್ಲಸ್ ಅನ್ನು ಪ್ರಯಾಣಿಕರಿಗೆ ಪ್ರೀಮಿಯಂ ಅನುಭವವನ್ನು ಒದಗಿಸಲು ಮತ್ತು ವಾಹನ ಮಾಲೀಕರಿಗೆ ಅತ್ಯುತ್ತಮ ಲಾಭ ಒದಗಿಸಲು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಆರಾಮದಾಯಕ ಸವಾರಿ ಸಾಮರ್ಥ್ಯ, ವಿಭಾಗ ಶ್ರೇಷ್ಠ ಫೀಚರ್ ಗಳು ಮತ್ತು ವಿಭಾಗದಲ್ಲಿ ಮುಂಚೂಣಿಯಲ್ಲಿರುವ ದಕ್ಷತೆ ಹೊಂದಿದ್ದು, ಆ ಮೂಲಕ ಕಡಿಮೆ ಮಾಲೀಕತ್ವ ವೆಚ್ಚ ಹೊಂದಲು ನೆರವಾಗುತ್ತದೆ ಮತ್ತು ಹೆಚ್ಚು ಲಾಭದಾಯಕತೆಯನ್ನು ಒದಗಿಸಲು ಇದನ್ನು ವಿನ್ಯಾಸಗೊಳಿಸ ಲಾಗಿದೆ. ನಗರಗಳಲ್ಲಿ ಸಿಬ್ಬಂದಿ ಸಾರಿಗೆ ವ್ಯವಸ್ಥೆಯಿಂದ ಹಿಡಿದು ದೇಶಾದ್ಯಂತ ಹೆಚ್ಚುತ್ತಿರುವ ಪ್ರವಾಸೋದ್ಯಮದ ಬೇಡಿಕೆಯವರೆಗೆ ಭಾರತದ ಪ್ರಯಾಣಿಕ ಸಾರಿಗೆ ವಿಭಾಗವು ವೇಗವಾಗಿ ಬೆಳೆಯುತ್ತಿದೆ.

Temp 2

ವಿಂಗರ್ ಪ್ಲಸ್ ಈ ಅಗತ್ಯವನ್ನು ಪೂರೈಸಲು ನಿರ್ಮಿತವಾಗಿದ್ದು, ವಾಣಿಜ್ಯ ಪ್ರಯಾಣಿಕ ವಾಹನ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ” ಎಂದು ಹೇಳಿದರು.

ಹೊಸ ವಿಂಗರ್ ಪ್ಲಸ್‌ ಇಂಧನ ದಕ್ಷ 2.2L Dicor ಡೀಸೆಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 100 ಎಚ್ ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಪ್ರೀಮಿ ಯಂ ವ್ಯಾನ್ ಟಾಟಾ ಮೋಟಾರ್ಸ್‌ ನ ಸಂಪರ್ಕಿತ ವಾಹನ ವೇದಿಕೆ ಆಗಿರುವ ಫ್ಲೀಟ್ ಎಡ್ಜ್ ಅನ್ನು ಹೊಂದಿದ್ದು, ಇದು ವಾಹನ ಟ್ರ್ಯಾಕಿಂಗ್, ಡಯಾಗ್ನೋಸ್ಟಿಕ್ಸ್ ಮತ್ತು ಫ್ಲೀಟ್ ಆಪ್ಟಿಮೈಸೇಶನ್‌ ಗೆ ಸಹಾಯ ಮಾಡುತ್ತದೆ. ಇದರಿಂದ ವಾಹನ ನಿರ್ವಹಣೆ ಮಾಡಲು ನೆರವಾಗುತ್ತದೆ.

9 ಆಸನಗಳಿಂದ ಹಿಡಿದು 55 ಆಸನಗಳವರೆಗಿನ ವಿವಿಧ ಕಾನ್ಫಿಗರೇಶನ್‌ ಗಳಲ್ಲಿ ಮತ್ತು ವಿವಿಧ ಪವರ್ ಟ್ರೇನ್ ಗಳಲ್ಲಿ ಈ ವಾಹನ ಲಭ್ಯವಿದೆ. ಈ ವಾಣಿಜ್ಯ ಪ್ರಯಾಣಿಕ ವಾಹನ ಸಂಗ್ರಹದೊಂದಿಗೆ ಟಾಟಾ ಮೋಟಾರ್ಸ್ ಎಲ್ಲಾ ಸಾಮೂಹಿಕ ಸಾರಿಗೆ ವಿಭಾಗವನ್ನೂ ಪೂರೈಸಲಿದೆ. ಈ ಶ್ರೇಣಿಯು ಟಾಟಾ ಮೋಟಾರ್ಸ್‌ ನ ಸಮಗ್ರ ವಾಹನ ಜೀವನಚಕ್ರ ನಿರ್ವಹಣೆಯ ಯೋಜನೆಯಾದ ಸಂಪೂರ್ಣ ಸೇವಾ 2.0 ಅನ್ನು ಹೊಂದಿದ್ದು, ಈ ಮೂಲಕ ಖಾತರಿಯಾದ ಟರ್ನ್‌ಅರೌಂಡ್ ಸಮಯ, ವಾರ್ಷಿಕ ನಿರ್ವಹಣೆ ಒಪ್ಪಂದಗಳು (ಎಎಮ್‌ಸಿ), ಒರಿಜಿನಲ್ ಬಿಡಿಭಾಗಗಳ ಲಭ್ಯತೆ ಮತ್ತು ಬ್ರೇಕ್‌ ಡೌನ್ ಅಸಿಸ್ಟೆನ್ಸ್ ಅನ್ನು ನೀಡಲಾಗುತ್ತದೆ.

ಭಾರತದಾದ್ಯಂತ 4,500ಕ್ಕೂ ಹೆಚ್ಚು ಮಾರಾಟ ಮತ್ತು ಸೇವಾ ಸಂಪರ್ಕ ಕೇಂದ್ರಗಳ ಜಾಲವನ್ನು ಹೊಂದಿ ರುವ ಕಂಪನಿಯು ವಿಶ್ವಾಸಾರ್ಹ, ದಕ್ಷ ಮತ್ತು ಭವಿಷ್ಯಕ್ಕೆ ಸಿದ್ಧವಾದ ಸಾರಿಗೆ ಉತ್ಪನ್ನಗಳನ್ನು ಒದಗಿಸುವುದನ್ನು ಮುಂದುವರಿಸುತ್ತದೆ.