ಬೆಂಗಳೂರನ್ನು ಗ್ರೇಟರ್ ಮಾಡಲು ಬದ್ಧ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಅಭಿವೃದ್ಧಿಗೆ ಏಳು ಸಾವಿರ ಕೋಟಿ ಅನುದಾನದೊಂದಿಗೆ, ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರವನ್ನಾಗಿ ಮಾಡಲು ಸಾವಿರಾರು ಕೋಟಿ ವ್ಯಯಿಸಲು ಸಿದ್ಧ. ಬೆಂಗಳೂರು ಒಂದು ನಗರವಷ್ಟೆ ಅಲ್ಲ. ಇದು ಅಸಂಖ್ಯಾತ ಕನಸುಗಳ ನೆಲೆಬೀಡು.
-
ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಾನಾ ಕ್ರಮ
ಪಂಚ ನಗರ ಪಾಲಿಕೆಗೆ 7 ಸಾವಿರ ಕೋಟಿ ಅನುದಾನ
ಶೀಘ್ರವೇ ಎದುರಾಗಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ಗಮನ ದಲ್ಲಿಸಿರಿಕೊಂಡು, ಬಜೆಟ್‌ನಲ್ಲಿ ‘ಭರಪೂರ’ವಲ್ಲದಿದ್ದರೂ ‘ಜನಪರ’ ಆಡಳಿತ ಭರವಸೆ ಯೊಂದಿಗೆ ಏಳು ಸಾವಿರ ಕೋಟಿ ರು. ಮೌಲ್ಯದ ಅನುದಾನ ಹಂಚಿಕೆ ಮಾಡಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಅಭಿವೃದ್ಧಿಗೆ ಏಳು ಸಾವಿರ ಕೋಟಿ ಅನುದಾನದೊಂದಿಗೆ, ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರವನ್ನಾಗಿ ಮಾಡಲು ಸಾವಿರಾರು ಕೋಟಿ ವ್ಯಯಿಸಲು ಸಿದ್ಧ. ಬೆಂಗಳೂರು ಒಂದು ನಗರವಷ್ಟೆ ಅಲ್ಲ. ಇದು ಅಸಂಖ್ಯಾತ ಕನಸುಗಳ ನೆಲೆಬೀಡು. ನಾಡಪ್ರಭು ಕೆಂಪೇಗೌಡರ ಆಡಳಿತದಿಂದ ಹಿಡಿದು ಇಂದಿನ ಸ್ಟಾರ್ಟ್‌ಅಪ್ ಕ್ರಾಂತಿಯವರೆಗೆ ಈ ನಗರ ತನ್ನದೇ ಆದ ವೈಶಿಷ್ಟ್ಯತೆ ಗಳನ್ನು ಹೊಂದಿದೆ.
ಬೆಂಗಳೂರು ಅಭಿವೃದ್ಧಿಗೆ ಈ ಹಿಂದೆ 3000 ಕೋಟಿ ರು.ಗಳನ್ನು ನೀಡಲಾಗುತ್ತಿತ್ತು. ಆದರೆ, ಕಳೆದ ಬಜೆಟ್‌ನಲ್ಲಿ ಸರಕಾರ 7000 ಕೋಟಿ ರು.ಗಳಿಗೆ ಹೆಚ್ಚಿಸಿತ್ತು. ಈ ಬಾರಿಯೂ ಜಿಬಿಎ ಅಭಿವೃದ್ಧಿ ದೃಷ್ಟಿಯಿಂದ ನಾವು ಏಳು ಸಾವಿರ ಕೋಟಿ ರು.ಗಳ ಅನುದಾನ ನೀಡುತ್ತಿದ್ದೇವೆ.
ಪ್ರಮುಖವಾಗಿ ಐದು ನಗರ ಪಾಲಿಕೆಗಳಲ್ಲಿ ವಾರ್ಡ್ ರಸ್ತೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ 1255 ಕೋಟಿ ರು. ವೆಚ್ಚ ಮಾಡಲಿದ್ದೇವೆ. 1700 ಕೋಟಿ ವೆಚ್ಚದಲ್ಲಿ ನಗರದ 158 ಕಿ.ಮೀ ಉದ್ದದ ರಸ್ತೆಯನ್ನು ವೈಟ್ ಟಾಪಿಂಗ್ ರಸ್ತೆಗಳನ್ನಾಗಿ ಪರಿವರ್ತಿಸುತ್ತೇವೆ. 1936 ಕೋಟಿ ವೆಚ್ಚದಲ್ಲಿ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳನ್ನು ಅಭಿವೃದ್ಧ ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಘೋಷಿಸಿದರು.
ಇದನ್ನೂ ಓದಿ: Karnataka Budget 2026: ನಗರಾಭಿವೃದ್ಧಿ ಇಲಾಖೆಗೆ ಭರಪೂರ ಅನುದಾನ; ಈ ಬಜೆಟ್‌ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?
ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರ ಮೆಟ್ರೋ ನಿಲ್ದಾಣದವರೆಗೆ ಹೊರ ವರ್ತುಲ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಯೋಜನೆಗೆ 450 ಕೋಟಿ, 273 ಕೋಟಿ ರು.ವೆಚ್ಚದಲ್ಲಿ ರಾಜಕಾಲುವೆಗಳನ್ನು ಮೇಲ್ದರ್ಜೆಗೇರಿಸುವುದರ ಜತೆಗೆ ಕೆರೆಗಳ ಅಭಿವೃದ್ಧಿ ಕಾಮಗಾರಿ ಘೋಷಿಸಲಾಗಿದೆ.
ನಗರ ಪಾಲಿಕೆಗಳ ಸ್ವಂತ ಸಂಪನ್ಮೂಲಗಳಿಂದ ಮುಂದಿನ ಮೂರು ವರ್ಷಗಳಲ್ಲಿ 175 ಜಂಕ್ಷನ್ ಗಳನ್ನು ಸೌಂದರ್ಯೀಕರಣಗೊಳಿಸಿ 500 ಕಿ.ಮೀ ಉದ್ದದ ಪಾದಚಾರಿ ಮಾರ್ಗ ಗಳನ್ನು ಮೇಲ್ದರ್ಜೆಗೇರಿಸಲು ಮತ್ತು 100 ಸ್ಕೈ ವಾಕ್ಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಹಣ ಸಂಗ್ರಹಕ್ಕೆ ಮುನ್ಸಿಪಲ್ ಬಾಂಡ್
ಐದು ನಗರ ಪಾಲಿಕೆಗಳ ಬ್ಯಾಲೆನ್ಸ್ ಶೀಟ್ ಆಧಾರದ ಮೇಲೆ ಮುನಿಸಿಪಲ್ ಬಾಂಡ್‌ಗಳ ಮೂಲಕ ಸಂಪನೂನ ಕ್ರೋಢಿಕರಣಕ್ಕೆ ಇದೇ ಮೊದಲ ಬಾರಿಗೆ ಕ್ರಮ ಕೈಗೊಳ್ಳಲಾಗಿದೆ. 2027ರ ಅಂತ್ಯದೊಳಗೆ ಬೆಂಗಳೂರಿನ ಹೊಸ ಪರಿಷ್ಕೃತ ಮಾಸ್ಟರ್ ಪ್ಲಾನ್ ಜಾರಿಗೊಳಿಸಿ, ಅದರ ಜತೆಗೆ ಸಮಗ್ರ ಮೊಬಿಲಿಟಿ ಯೋಜನೆ ರೂಪಿಸಲಾಗುತ್ತಿದೆ. ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗಿನ 73 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಭಾಗ-1 ನಿರ್ಮಾಣ ಮಾಡುತ್ತಿದ್ದೇವೆ.
ಈ ಯೋಜನೆಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದಿನ ನಾಲ್ಕು ವರ್ಷ ದಲ್ಲಿ ಯೋಜನೆ ಪೂರ್ಣಕ್ಕೆ ಗುರಿಯನ್ನು ಸರಕಾರ ಹೊಂದಿದೆ.
ಮೆಟ್ರೋ ಮಾರ್ಗ ವಿಸ್ತರಣೆ
ಪ್ರಸ್ತುತವಿರುವ 96 ಕಿ.ಮೀಗಳ ಮೆಟ್ರೋ ಜಾಲದಿಂದ 10 ಲಕ್ಷ ಪ್ರಯಾಣಿಕರಿಗೆ ಅನುಕೂಲ ವಾಗುತ್ತಿದೆ. ಹೀಗಾಗಿ ನಮ್ಮ ಸರಕಾರ ಮೆಟ್ರೋ ವಿಸ್ತರಣೆ ಮಾಡಲು ತೀರ್ಮಾನಿಸಿದ್ದು ಪ್ರಸಕ್ತ ಹಣಕಾಸು ವರ್ಷದಲ್ಲಿ 41 ಕಿ.ಮೀ ಉದ್ದದ ಮೆಟ್ರೋ ಜಾಲ ವಿಸ್ತರಣೆ ಮಾಡಲು ತೀರ್ಮಾನಿಸಿದ್ದೇವೆ. ಈ ಮಹತ್ವದ ನಿರ್ಧಾರದಿಂದ ಪ್ರಸ್ತುತ ಸಂಚರಿಸುತ್ತಿರುವ 10 ಲಕ್ಷ ಮೆಟ್ರೋ ಪ್ರಯಾಣಿಕರ ಸಂಖ್ಯೆ 15 ಲಕ್ಷಕ್ಕೆ ಏರಿಕೆಯಾಗಲಿದೆ. ಹೊರ ವರ್ತುಲ ರಸ್ತೆಯ ಮೆಟ್ರೋ ವಯಾಡಕ್ಟ್ ಉದ್ದಕ್ಕೂ 9 ಕಿ.ಮೀ ಉದ್ದದ ಪಾದಚಾರಿ ನಡಿಗೆ ಮಾರ್ಗಗಳನ್ನು ಹೊರ ವರ್ತುಲ ಕಂಪನಿಗಳ ಸಂಘದ ಪ್ರಯೋಜಕತ್ವದಲ್ಲಿ 160 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿದ್ದೇವೆ.