ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಚಿವ ಸ್ಥಾನ ವಂಚಿತರಿಗೆ ಶೀಘ್ರ ನಿಗಮ ಮಂಡಳಿ

ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ರಾಗಿ ನೇಮಕಗೊಂಡು ಎರಡೂವರೆ ವರ್ಷ ಪೂರೈಸಿ ರುವ ಅಧ್ಯಕ್ಷರನ್ನು ಕೈಬಿಟ್ಟು ಹೊಸಬರಿಗೆ ಸ್ಥಾನ ನೀಡಲು ತೀರ್ಮಾನಿಸಲಾಗಿದ್ದು, ಸುಮಾರು 70ಕ್ಕೂ ಹೆಚ್ಚು ನಿಗಮಗಳಿಗೆ ಹೊಸ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಆದ್ದರಿಂದ ಎರಡೂವರೆ ವರ್ಷ ಪೂರೈಸಿರುವ ಅಧ್ಯಕ್ಷರುಗಳಿಗೆ ರಾಜೀ ನಾಮೆ ನೀಡುವಂತೆ ಸಂದೇಶ ನೀಡಲಾಗು ತ್ತಿದೆ ಎನ್ನಲಾಗಿದೆ.

ಸಚಿವ ಸ್ಥಾನ ವಂಚಿತರಿಗೆ ಶೀಘ್ರ ನಿಗಮ ಮಂಡಳಿ

-

Profile
Ashok Nayak Sep 2, 2026 9:10 AM

20 ಆಯಕಟ್ಟಿನ ಸ್ಥಾನಗಳಿಗೆ ಪ್ರಭಾವಿ ಶಾಸಕರ ನೇಮಕ, ಉಳಿದಂತೆ ಕಾರ್ಯಕರ್ತರಿಗೆ ಅವಕಾಶ

ಬೆಂಗಳೂರು: ಸಂಪುಟ ವಿಸ್ತರಣೆಯ ಪ್ರಹಸನದ ಬಳಿಕ ಇದೀಗ ನಿಗಮ ಮಂಡಳಿ ಅಧ್ಯಕ್ಷ- ಉಪಾ ಧ್ಯಕ್ಷರ ನೇಮ ಕಕ್ಕೆ ಸಂಬಂಧಿಸಿದಂತೆ ಚರ್ಚೆಗಳು ಶುರುವಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವಾರದಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ನಡೆಯಲಿದೆ ಎನ್ನಲಾಗಿದೆ.

ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ರಾಗಿ ನೇಮಕಗೊಂಡು ಎರಡೂವರೆ ವರ್ಷ ಪೂರೈಸಿ ರುವ ಅಧ್ಯಕ್ಷರನ್ನು ಕೈಬಿಟ್ಟು ಹೊಸಬರಿಗೆ ಸ್ಥಾನ ನೀಡಲು ತೀರ್ಮಾನಿಸಲಾಗಿದ್ದು, ಸುಮಾರು 70ಕ್ಕೂ ಹೆಚ್ಚು ನಿಗಮಗಳಿಗೆ ಹೊಸ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಆದ್ದರಿಂದ ಎರಡೂವರೆ ವರ್ಷ ಪೂರೈಸಿರುವ ಅಧ್ಯಕ್ಷರುಗಳಿಗೆ ರಾಜೀ ನಾಮೆ ನೀಡುವಂತೆ ಸಂದೇಶ ನೀಡಲಾಗುತ್ತಿದೆ ಎನ್ನಲಾಗಿದೆ. ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರು ಆಯಕಟ್ಟಿನ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನದ ಮೇಲೇ ಕಟ್ಟಿದ್ದಾರೆ. ಆದ್ದರಿಂದ ಕೆಲ ಶಾಸಕರು ಪಕ್ಷದ ಹೈಕಮಾಂಡ್ ಬಳಿಕ ನಿಗಮ ಮಂಡಳಿಗೆ ಅವಕಾಶ ನೀಡುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ವಂಚಿತರಿಗೆ ಅವಕಾಶ ಕಲ್ಪಿಸಲು ಡಿಕೆಶಿ, ಸಿದ್ದು ಹಾಗೂ ಬಿ.ಕೆ.ಹರಿಪ್ರಸಾದ್ ಸಹ ಒಲವು ತೋರಿರು ವುದರಿಂದ ರಾಜ್ಯದಲ್ಲಿ ಪ್ರಮುಖ 20 ನಿಗಮಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನುಳಿದ ನಿಗಮಗಳನ್ನು ಕಾರ್ಯಕರ್ತರಿಗೆ ನೀಡುವ ಮೂಲಕ ಬಾಕಿಯಿರುವ ಒಂದು ವರ್ಷ ಎಂಟು ತಿಂಗಳ ಅವಧಿಗೆ ಅಧಿಕಾರ ನೀಡುವ ಆಲೋಚನೆಯಲ್ಲಿ ಪಕ್ಷದ ನಾಯಕರಿದ್ದಾರೆ.

ಇದನ್ನೂ ಓದಿ: DCM DKS: ರಾಜ್ಯಕ್ಕೆ ಡಿಕೆಶಿ ಸೇವೆ ಸಿಗಲಿ; ಪರೋಕ್ಷವಾಗಿ ಸಿಎಂ ಆಗಲಿ ಎಂದು ಹರಸಿದ ಪುತ್ತಿಗೆ ಶ್ರೀ

ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನಿಗಮ -ಮಂಡಳಿಗಳಿಗೆ ಅಧ್ಯಕ್ಷರು ಮತ್ತು ನಿರ್ದೇಶಕರ ನೇಮಕ ಮಾಡಲು ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಆದರೀಗ ಮುಖ್ಯ ಮಂತ್ರಿಯಾದ ಬಳಿಕ ಈ ಪ್ರಕ್ರಿಯೆ ನಡೆಸದಿದ್ದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ನಿಗಮ ಮಂಡಳಿಗಳಿಗೆ ಶೀಘ್ರ ನೇಮಕ ಮಾಡುವಂತೆ ಪಕ್ಷದ ಹೈಕಮಾಂಡ್ ಬಳಿ ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಸಮಿತಿ ರಚಿಸಿ, ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನಗಳನ್ನು ಕಾರ್ಯಕರ್ತರಿಗೆ ನೀಡುವ ಸಂಬಂಧ ಪಟ್ಟಿ ಯೊಂದನ್ನು ಸಿದ್ಧಪಡಿಸ ಲಾಗಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಈ ಪಟ್ಟಿಯತ್ತ ನಾಯಕರು ಗಮನ ಹರಿಸಿರಲಿಲ್ಲ. ಆದ್ದರಿಂದ ಬಾಕಿಯಿರುವ ಅವಧಿಗಾದರೂ ನೇಮಕ ಮಾಡು ವುದು ಸೂಕ್ತ ಎನ್ನುವ ಮಾತುಗಳು ಕೇಳಿ ಬಂದಿರುವುದರಿಂದ ಪಕ್ಷದ ಹೈಕಮಾಂಡ್ ಸಹ ಸಮ್ಮತಿಸಿದೆ ಎನ್ನಲಾಗಿದೆ.

ಯಾಕೆ ಈ ಹೆಜ್ಜೆ ?

ನಗರ ಹಾಗೂ ಗ್ರಾಮೀಣ ಭಾಗದ ಚುನಾವಣೆಗಳು ಸಮೀಪಿಸುತ್ತಿವೆ

ಈಗ ನೇಮಿಸದಿದ್ದರೆ, ಕಾರ್ಯಕರ್ತರು ಕೆಲಸ ಮಾಡದಿರಬಹುದು

ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಡಿಕೆ ನೇಮಕಕ್ಕೆ ಯತ್ನಿಸಿದ್ದರೂ ಆಗಿರಲಿಲ್ಲ

ಈಗ ಸಿಎಂ ಆದ ಮೇಲೂ ಮಾಡದಿದ್ದರೆ ಕೆಟ್ಟ ಸಂದೇಶ ರವಾನೆ ಆತಂಕ

ನಿಗಮ ಮಂಡಳಿಗೆ ಶೀಘ್ರ ನೇಮಕ ಮಾಡಲು ಹೈಕಮಾಂಡ್‌ಗೆ ಒತ್ತಡ

ಕಾಂಗ್ರೆಸ್ ವರಿಷ್ಠರಿಂದ ಶೀಘ್ರವೇ ನೇಮಕಾತಿಗೆ ಅನುಮತಿ ಸಾಧ್ಯತೆ