ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಶ್ವದಲ್ಲಿಯೇ ಮೊದಲ ಬಾರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ರಹಿತ ಹೃದಯ ಕವಾಟ ಬದಲಿ ಚಿಕಿತ್ಸೆ ನಡೆಸಿದ ಫೋರ್ಟಿಸ್ ಹಾಸ್ಪಿಟಲ್

ಶ್ರೀಮತಿ ರೇಖಾ (ಹೆಸರು ಬದಲಾಯಿಸಲಾಗಿದೆ) ಅವರು ಈ ಹಿಂದೆ ಅಂದರೆ 2013ರಲ್ಲಿ ಬಲವಾದ ಟೆಫ್ಲಾನ್ ಬ್ಯಾಂಡ್‌ ಗಳನ್ನು ಬಳಸಿ ಕವಾಟ ರಿಪೇರಿಗೆ ಒಳಗಾಗಿದ್ದರು, ಈ ಸಂದರ್ಭದಲ್ಲಿ ಕಿರಿದಾ ಗಿದ್ದ ಹೃದಯ ಕವಾಟವನ್ನು ಬಲೂನ್ ಬಳಸಿ ಕೊಂಚ ದೊಡ್ಡದು ಮಾಡಲಾಗಿತ್ತು. ಕಾಲಾನಂತರ, ಆಕೆಯ ಹೃದಯ ಕವಾಟದ ಅಂಗಾಶವು ಮತ್ತೆ ಕ್ಷೀಣಿಸಿತು,

ಮೊದಲ ಬಾರಿಗೆ ಸ್ತ್ರಚಿಕಿತ್ಸೆ ರಹಿತ ಹೃದಯ ಕವಾಟ ಬದಲಿ ಚಿಕಿತ್ಸೆ ಯಶಸ್ವಿ

-

Ashok Nayak Ashok Nayak Oct 16, 2025 9:10 PM

ಬೆಂಗಳೂರು: ಬನ್ನೇರಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯು ಹೃದಯ ಸಮಸ್ಯೆ ಹೊಂದಿದ್ದ 65 ವರ್ಷದ ಮಹಿಳೆಯೊಬ್ಬರಿಗೆ ಶಸ್ತ್ರ ಚಿಕಿತ್ಸೆ ರಹಿತ ಹೃದಯ ಕವಾಟ ಬದಲಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದು, ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿದ ಕೀರ್ತಿಗೆ ಪಾತ್ರವಾಗಿದೆ.

ಈ ಮಹಿಳಾ ರೋಗಿಗೆ ಈ ಹಿಂದೆ ಕವಾಟ ಚಿಕಿತ್ಸೆಗಾಗಿ ಸಪೋರ್ಟ್ ರಿಂಗ್ ಬಳಸಲಾಗಿತ್ತು, ಹಾಗಿದ್ದರೂ ಪದೇ ಪದೇ ಕವಾಟ ವೈಫಲ್ಯ ಎದುರಿಸುತ್ತಿದ್ದ ಅವರಿಗೆ ಓಪನ್ ಹಾರ್ಟ್ ಸರ್ಜರಿ ಮಾಡುವುದು ಬಹಳ ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು. ಹಾಗಾಗಿ ರೋಗಿಗೆ ಸಾಂಪ್ರದಾಯಿಕ ಚಿಕಿತ್ಸೆ ನೀಡುವುದು ಸಾಧ್ಯವಿರಲಿಲ್ಲ.

ಆಗ ಹೊಸತೊಂದು ದಾರಿ ಕಂಡುಕೊಂಡ ವೈದ್ಯರು ಓಪನ್ ಹಾರ್ಟ್ ಸರ್ಜರಿ ಮಾಡುವುದರ ಬದಲಿಗೆ ಟ್ರಾನ್ಸ್‌ ಕ್ಯಾಥೆಟರ್ ಮಿಟ್ರಲ್ ವಾಲ್ವ್ ರಿಪ್ಲೇಸ್‌ಮೆಂಟ್ (ಟಿಎಂವಿಆರ್) ಎಂಬ ಶಸ್ತ್ರ ಚಿಕಿತ್ಸೆ ರಹಿತ ತಂತ್ರವನ್ನು ಬಳಸಿ ಚಿಕಿತ್ಸೆ ನೀಡಿದರು. ಈ ಜೀವರಕ್ಷಕ ವಿಧಾನವು ಹೃದಯ ರೋಗ ಚಿಕಿತ್ಸೆಯಲ್ಲಿ ಭಾರಿ ಮಹತ್ವದ್ದಾಗಿ ಮೂಡಿಬಂದಿದೆ ಮತ್ತು ವಿಶ್ವಾದ್ಯಂತ ಇರುವ ಹೈ-ರಿಸ್ಕ್ ರೋಗಿಗಳಿಗೆ ಹೊಸ ಭರವಸೆಯನ್ನು ಕಲ್ಪಿಸಿದೆ.

ಇದನ್ನೂ ಓದಿ: Bangalore News: ಹಬ್ಬಗಳ ಸಂದರ್ಭದ ಸೊನಾಟಾ ಸಂಗ್ರಹ ತಂದಿದೆ ಹೊಳಪು, ಸೂಕ್ತ ವಿನ್ಯಾಸ

ಶ್ರೀಮತಿ ರೇಖಾ (ಹೆಸರು ಬದಲಾಯಿಸಲಾಗಿದೆ) ಅವರು ಈ ಹಿಂದೆ ಅಂದರೆ 2013ರಲ್ಲಿ ಬಲವಾದ ಟೆಫ್ಲಾನ್ ಬ್ಯಾಂಡ್‌ ಗಳನ್ನು ಬಳಸಿ ಕವಾಟ ರಿಪೇರಿಗೆ ಒಳಗಾಗಿದ್ದರು, ಈ ಸಂದರ್ಭದಲ್ಲಿ ಕಿರಿದಾ ಗಿದ್ದ ಹೃದಯ ಕವಾಟವನ್ನು ಬಲೂನ್ ಬಳಸಿ ಕೊಂಚ ದೊಡ್ಡದು ಮಾಡಲಾಗಿತ್ತು. ಕಾಲಾನಂತರ, ಆಕೆಯ ಹೃದಯ ಕವಾಟದ ಅಂಗಾಶವು ಮತ್ತೆ ಕ್ಷೀಣಿಸಿತು, ಅಂತಿಮವಾಗಿ ಕವಾಟ ವೈಫಲ್ಯಕ್ಕೆ ಕಾರಣವಾಗಿ ಆಕೆಯ ಜೀವಕ್ಕೆ ಭಾರಿ ಅಪಾಯವನ್ನುಂಟು ಮಾಡಿತ್ತು. ಈ ಹಿಂದೆ ಟೆಫ್ಲಾನ್ ಬ್ಯಾಂಡ್ ಬಳಸಿದ್ದರಿಂದ ಈ ಪ್ರಕರಣ ಬಹಳ ಸವಾಲಿನದ್ದಾಗಿತ್ತು.

ಯಾಕೆಂದರೆ ಈ ಟೆಫ್ಲಾನ್ ಬ್ಯಾಂಡ್ ಸಾಂಪ್ರದಾಯಿಕವಾದ ಪೂರ್ಣ-ವೃತ್ತಾಕಾರದ ಆನುಲೋ ಪ್ಲಾಸ್ಟಿ ರಿಂಗ್‌ ಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು, ಅಪೂರ್ಣವಾಗಿತ್ತು ಮತ್ತು ಎಕ್ಸ್- ರೇನಲ್ಲಿ ಸುಲಭವಾಗಿ ಗೋಚರಿಸುತ್ತಿರಲಿಲ್ಲ. ಅಲ್ಲದೇ ಹೊಸ ಕವಾಟಕ್ಕೆ ಕಡಿಮೆ ಆಂಕರಿಂಗ್ ಬೆಂಬಲವನ್ನು ಒದಗಿಸುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಹೊಸ ಕವಾಟ ಸ್ಥಾಪನೆಯ ಸಂಕೀರ್ಣತೆಯನ್ನು ಗಣನೀಯವಾಗಿ ಹೆಚ್ಚಿಸಿತ್ತು. ಆದರೆ ಆಸ್ಪತ್ರೆಯ ತಜ್ಞ ವೈದ್ಯರು ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಟೆಫ್ಲಾನ್ ಆನುಲೋಪ್ಲಾಸ್ಟಿಯ ವೈಫಲ್ಯದ ಕಾರಣಖ್ಕೆ ಟ್ರಾನ್ಸ್‌ ಕ್ಯಾಥೆಟರ್ ಮಿಟ್ರಲ್ ವಾಲ್ವ್ ರಿಪ್ಲೇಸ್‌ಮೆಂಟ್ (ಟಿಎಂವಿಆರ್) ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು.

ಟ್ರಾನ್ಸ್‌ ಕ್ಯಾಥೆಟರ್ ಮಿಟ್ರಲ್ ವಾಲ್ವ್ ರಿಪ್ಲೇಸ್‌ ಮೆಂಟ್ (ಟಿಎಂವಿಆರ್) ಎಂಬುದು ಕಡಿಮೆ ಆಕ್ರಮಣಕಾರಿ ವಿಧಾನವಾಗಿದ್ದು, ಈ ವಿಧಾನದಲ್ಲಿ ತೊಡೆ ಸಂದಿನಲ್ಲಿ ರಕ್ತವನ್ನು ಹೃದಯಕ್ಕೆ ಸಾಗಿಸುವ ರಕ್ತನಾಳದ ಮೂಲಕ ಬದಲಿ ಕವಾಟವನ್ನು ಹೃದಯಕ್ಕೆ ತಲುಪಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ವಿಫಲಗೊಂಡ ಬಯೋಪ್ರಾಸ್ಥೆಟಿಕ್ ಮಿಟ್ರಲ್ ಕವಾಟಗಳಿಗೆ ಅಥವಾ ಸ್ಟ್ಯಾಂಡರ್ಡ್ ಆನುಲೋಪ್ಲಾಸ್ಟಿ ರಿಂಗ್‌ ಗಳಿಗೆ ಬಳಸಲಾಗುತ್ತದೆ.

ವಿಶೇಷವಾಗಿ ಇದು ಹೈ- ರಿಸ್ಕ್ ಹೊಂದಿರುವ ರೋಗಿಗಳಿಗೆ ಓಪನ್ -ಹಾರ್ಟ್ ಶಸ್ತ್ರಚಿಕಿತ್ಸೆಗೆ ಬದಲಿಗೆ ಬಳಸಬಹುದಾದ ಸುರಕ್ಷಿತ ಪರ್ಯಾಯ ಚಿಕಿತ್ಸೆಯಾಗಿದೆ. ಆದರೆ, ಇದನ್ನು ಟೆಫ್ಲಾನ್ ಬ್ಯಾಂಡ್ ಆನುಲೋಪ್ಲಾಸ್ಟಿಯ ವೈಫಲ್ಯದ ಸಂದರ್ಭದಲ್ಲಿ ಪ್ರಯತ್ನಿಸಲಾಗಿರಲಿಲ್ಲ. ಹಾಗಾಗಿ ಅದು ಅಪೂರ್ಣವಾಗಿತ್ತು, ಎಕ್ಸ್- ರೇನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ ಮತ್ತು ಹೊಸ ಕವಾಟಕ್ಕೆ ಸೀಮಿತ ಆಂಕರಿಂಗ್ ಬೆಂಬಲವನ್ನು ಮಾತ್ರ ಒದಗಿಸುತ್ತಿತ್ತು. ಹಾಗಾಗಿ ಟಿಎಂವಿಆರ್ ವಿಧಾನವನ್ನು ಬಹಳ ಸವಾಲಿನದ್ದಾಗಿತ್ತು.

ಅತ್ಯುತ್ತಮ ಯೋಜನೆ ಮತ್ತು ವಿವರವಾದ ಇಮೇಜಿಂಗ್ ನಂತರ, ಇಂಟರ್‌ ವೆನ್ಶನಲ್ ಕಾರ್ಡಿ ಯಾಲಜಿ ತಂಡವು ನಿಖರವಾಗಿ ಹೃದಯ ಕವಾಟ ಬದಲಿ ಚಿಕಿತ್ಸೆಯನ್ನು ನಡೆಸಿತು. ಸುಧಾರಿತ ಇಮೇಜಿಂಗ್ ಬಳಸಿ ವಿಧಾನವನ್ನು ಮ್ಯಾಪಿಂಗ್ ಮಾಡಿ, ತಂಡವು ಹೊಸ ಕವಾಟವನ್ನು ಒಂದು ರಕ್ತನಾಳದ ಮೂಲಕ ಸಮರ್ಪಕವಾದ ಸ್ಥಾನಕ್ಕೆ ತಲುಪಿಸಿತು. ಈ ಹೈ- ರಿಸ್ಕ್ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಇಂಟರ್‌ವೆನ್ಶನಲ್ ಕಾರ್ಡಿಯಾಲಜಿಯ ಅಡಿಷನಲ್ ಡೈರೆಕ್ಟರ್ ಡಾ. ಶ್ರೀನಿವಾಸ ಪ್ರಸಾದ್ ಬಿ.ವಿ ಮುಂದಾಳತ್ವದಲ್ಲಿ, ಇಂಟರ್ನಲ್ ಮೆಡಿಸಿನ್ ತಜ್ಞರು, ಅರಿವಳಿಕೆ ತಜ್ಞರು ಮತ್ತು ಫೋರ್ಟಿಸ್ ಬನ್ನೇರುಘಟ್ಟ ರಸ್ತೆಯ ಸುಧಾರಿತ ಇಮೇಜಿಂಗ್ ತಜ್ಞರ ಸಹಾಯದಲ್ಲಿ ತಜ್ಞರ ಆರೈಕೆಯಡಿಯಲ್ಲಿ ನಡೆಸಲಾಯಿತು.

ತಂಡವು ಮೆರಿಲ್ ಮೈವಾಲ್ ಎಂಬ ಭಾರತದಲ್ಲಿ ತಯಾರಾದ ಹೊಸ ಹೃದಯ ಕವಾಟವನ್ನು ಬಳಸಿದ್ದು, ಇದನ್ನು ಓಪನ್- ಹಾರ್ಟ್ ಶಸ್ತ್ರಚಿಕಿತ್ಸೆಯಿಲ್ಲದೆ ಸ್ಥಾಪಿಸಬಹುದಾಗಿದೆ. ಈ ಕಡಿಮೆ ಆಕ್ರಮಣಕಾರಿ ವಿಧಾನವು ವೈದ್ಯರಿಗೆ ಕವಾಟವನ್ನು ಒಂದು ಸಣ್ಣ ಟ್ಯೂಬ್ ಮೂಲಕ ಸೇರಿಸಲು ಮತ್ತು ಹೆಚ್ಚಿನ ನಿಖರತೆಯೊಂದಿಗೆ ಸಮರ್ಪಕ ಸ್ಥಾನಕ್ಕೆ ತರಲು ಅನುವು ಮಾಡಿಕೊಟ್ಟಿತು. ತಜ್ಞ ವೈದ್ಯರ ತಂಡವು ಈ ಚಿಕಿತ್ಸಾ ವಿಧಾನವನ್ನು ಸಮರ್ಪಕವಾಗಿ ನಡೆಸಲು ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್‌ ಗಳು ಮತ್ತು ರಿಯಲ್- ಟೈಮ್ ಟ್ರಾಕಿಂಗ್‌ ನಂತಹ ಸುಧಾರಿತ ಇಮೇಜಿಂಗ್ ಉಪಕರಣ ಗಳನ್ನು ಬಳಸಿ, ಹಾನಿಗೊಳಗಾದ ಮಿಟ್ರಲ್ ಕವಾಟದ ಸುತ್ತಲಿನ ಪ್ರದೇಶವನ್ನು ನಿಖರವಾಗಿ ಮ್ಯಾಪ್ ಮಾಡಿದರು.

ಈ ಕುರಿತು ಮಾತನಾಡಿದ ಬೆಂಗಳೂರು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಇಂಟರ್‌ವೆನ್ಶನಲ್ ಕಾರ್ಡಿಯಾಲಜಿಯ ಅಡಿಷನಲ್ ಡೈರೆಕ್ಟರ್ ಡಾ. ಶ್ರೀನಿವಾಸ ಪ್ರಸಾದ್ ಬಿ.ವಿ ಅವರು, “ರೋಗಿಯು ಬಹಳ ಸಂಕೀರ್ಣ ವೈದ್ಯಕೀಯ ಇತಿಹಾಸವನ್ನು ಹೊಂದಿದ್ದರು. ಅವರಿಗೆ ಬಹು ಶಸ್ತ್ರಚಿಕಿತ್ಸೆಗಳು ಆಗಿದ್ದವು, ಪೆರಿಯೊಪರೇಟಿವ್ ಸ್ಟ್ರೋಕ್‌ ನಿಂದ ಆಗಿರುವ ಹಲವು ಸಮಸ್ಯೆಗಳಿದ್ದವು ಮತ್ತು ಎದೆ ಭಾಗದಲ್ಲಿ ನೋವಿನಿಂದ ಕೂಡಿರುವ ಗಂಟಿನಂತಹ ಮಾರ್ಕ್ ಇತ್ತು. ಆಕೆಯ ಸಮಸ್ಯೆ ಮತ್ತು ಇತಿಹಾಸ ಗಮನಿಸಿದಾಗ ಅವರಿಗೆ ರಿಡೂ ಓಪನ್-ಹಾರ್ಟ್ ಶಸ್ತ್ರಚಿಕಿತ್ಸೆ ಮಾಡುವುದು ಅತ್ಯಂತ ಹೈ-ರಿಸ್ಕ್ ಆಗಿತ್ತು. ಈ ವಿಧಾನವಿಲ್ಲದಿದ್ದರೆ, ರೋಗಿಯು ಪದೇ ಪದೇ ಹೃದಯ ವೈಫಲ್ಯದ ಆಸ್ಪತ್ರೆಗೆ ದಾಖಲಾಗಬೇಕಿತ್ತು, ದೀರ್ಘಕಾಲದವರೆಗೆ ಆಸ್ಪತ್ರೆ ವಾಸ್ತವ್ಯ ಮಾಡಬೇಕಿತ್ತು ಮತ್ತು ಶೀಘ್ರವೇ ಮರಣ ಹೊಂದುವ ಅಪಾಯವೂ ಬಹಳ ಇತ್ತು. ‘ಟೆಫ್ಲಾನ್ ಆನುಲೋಪ್ಲಾಸ್ಟಿಯ ವೈಫಲ್ಯ ಆಗಿದ್ದ ಸಂದರ್ಭದಲ್ಲಿ ಮೊದಲ ಟಿಎಂವಿಆರ್’ ವಿಧಾನವನ್ನು ಯಶಸ್ವಿಯಾಗಿ ನಡೆಸಿರುವುದು, ಈ ಹಿಂದೆ ರಿಡೂ ಇಂಟರ್‌ ವೆನ್ಶನ್‌ ಗೆ ಸೂಕ್ತವಲ್ಲ ಎಂದು ಪರಿಗಣಿಸಲ್ಪಟ್ಟ ರೋಗಿಗಳೂ ಈಗ ಈ ಕಡಿಮೆ ಆಕ್ರಮಣಕಾರಿ, ಸುರಕ್ಷಿತ ಪರ್ಯಾಯ ಚಿಕಿತ್ಸೆಯ ಪ್ರಯೋಜನ ಪಡೆಯಬಹುದು ಎಂಬುದನ್ನು ತೋರಿಸುತ್ತದೆ. ನಾವು ಎಚ್ಚರಿಕೆಯ ಯೋಜನೆ, ಸುಧಾರಿತ ತಂತ್ರಜ್ಞಾನ ಮತ್ತು ನಿಖರ ಕಾರ್ಯಗತಗೊಳಿಕೆಯನ್ನು ಒಟ್ಟುಗೂಡಿಸಿ ಈ ಯಶಸ್ವಿ ಫಲಿತಾಂಶವನ್ನು ಪಡೆದಿದ್ದೇವೆ” ಎಂದು ಹೇಳಿದರು.

ರೋಗಿಯು ಮತ್ತು ಆಕೆಯ ಕುಟುಂಬವು ಈ ಅತ್ಯುತ್ಕೃಷ್ಟ ವೈದ್ಯಕೀಯ ಸೇವೆಗೆ ಆಸ್ಪತ್ರೆಗೆ ಮತ್ತು ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಮಾತನಾಡಿ, “ಈ ವಿಧಾನವನ್ನು ಸಾಂಪ್ರದಾಯಿಕ ರಿಡೂ ವಿಧಾನದ ಅಪಾಯಗಳಿಲ್ಲದೆ ಸುರಕ್ಷಿತವಾಗಿ ನಡೆಸಬಹುದು ಎಂದು ತಿಳಿದಾಗ, ಅದು ನಮಗೆ ಭರವಸೆಯನ್ನು ನೀಡಿತು. ಆಕೆಯು ಸುಗಮವಾಗಿ ಚೇತರಿಸಿಕೊಂಡು ಮತ್ತೆ ಹಿಂದಿನಂತೆ ಬಲವನ್ನು ಮರಳಿ ಪಡೆಯುದಿರುವುದನ್ನು ನೋಡಿ ದೊಡ್ಡ ಸಮಾಧಾನ ಸಿಕ್ಕಿದೆ. ಅದಕ್ಕೆ ಫೋರ್ಟಿಸ್ ಆಸ್ಪತ್ರೆ ಬನ್ನೇರುಘಟ್ಟ ರಸ್ತೆಯ ತಂಡಕ್ಕೆ ಅವರ ತಜ್ಞತೆ, ನಿಖರತೆ ಮತ್ತು ಕಾಳಜಿಯ ಆರೈಕೆಗಾಗಿ ನಾವು ಕೃತಜ್ಞರಾಗಿದ್ದೇವೆ” ಎಂದು ಹೇಳಿದರು.

ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಡಾ. ತೇಜಸ್ವಿನಿ ಪಾರ್ಥಸಾರಥಿ ಅವರು, “ಫೋರ್ಟಿಸ್‌ ಆಸ್ಪತ್ರೆಯಲ್ಲಿ ನಾವು ಸುಧಾರಿತ, ರೋಗಿ ಮತ್ತು ರೋಗಿಗಳ ಕುಟುಂಬ ಸ್ನೇಹಿ ಹೃದಯ ಚಿಕಿತ್ಸಾ ಪರಿಹಾರಗಳನ್ನು ನೀಡಲು ಬದ್ಧರಾಗಿದ್ದೇವೆ. ವಿಶ್ವದಲ್ಲಿ ಇದೇ ಮೊದಲ ಬಾರಿಗೆ ನಡೆಸಿರುವ ಹೃದಯ ಚಿಕಿತ್ಸೆಯು ಅದಕ್ಕೆ ಸಾಕ್ಷಿಯಾಗಿದೆ. ಎಚ್ಚರಿಕೆಯ ಯೋಜನೆ ಮತ್ತು ತಂಡದ ಕೆಲಸದಿಂದ ಸಂಕೀರ್ಣ ಹೃದಯ ಸಮಸ್ಯೆ ಇರುವ ರೋಗಿಗಳಿಗೂ ಉತ್ತಮ ಫಲಿತಾಂಶಗಳನ್ನು ನೀಡಬಹುದು ಎಂಬುದನ್ನು ಈ ಪ್ರಕರಣವು ತೋರಿಸುತ್ತದೆ. ಸುರಕ್ಷಿತ ಆಯ್ಕೆಯನ್ನು ಒದಗಿಸುವ ಮೂಲಕ, ನಾವು ಹೃದಯ ಚಿಕಿತ್ಸೆಯಲ್ಲಿ ಹೊಸ ಮಾನದಂಡಗಳನ್ನು ಹಾಕಿಕೊಡುವುದನ್ನು ಮುಂದುವರೆಸುತ್ತೇವೆ, ರೋಗಿಗಳಿಗೆ ಕಡಿಮೆ ಆಘಾತ ಮತ್ತು ಬೇಗ ಚೇತರಿಕೆಗೆ ಅನುವು ಮಾಡಿಕೊಡುವ ಉತ್ತಮ ಚಿಕಿತ್ಸೆಯನ್ನು ಒದಗಿಸುತ್ತೇವೆ” ಎಂದು ಹೇಳಿದರು.