ಫಂಡ್ಸ್‌ಇಂಡಿಯಾದಿ ₹20,000 ಕೋಟಿ ಎಯುಎಂ ಸಾಧನೆ, ಭಾರತದ ಮೆಚ್ಚಿನ ವೆಲ್ತ್ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರಂ ಆಗುವ ಗುರಿ
ತಂತ್ರಜ್ಞಾನ ಆಧರಿತ ಅನುಕೂಲ ಹಾಗೂ ವೈಯಕ್ತಿಕ ಮಾರ್ಗದರ್ಶನದ ಜೊತೆಗೆ ಆಳವಾದ ಸಂಶೋ ಧನೆ ಸಾಮರ್ಥ್ಯ ಮತ್ತು ಹೂಡಿಕೆದಾರರ ವಿಶ್ವಾಸವೂ ಜೊತೆಗೆ ಸೇರಿದ್ದು, ಸಂಪೂರ್ಣ ಪ್ರಮಾಣದ ವೆಲ್ತ್ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರಂ ಆಗಿ ಮತ್ತು ಸಮಗ್ರ ವೆಲ್ತ್ ಮ್ಯಾನೇಜ್‌ಮೆಂಟ್ ಸೌಲಭ್ಯವನ್ನು ಬಯಸುವ ಎಲ್ಲ ಹೂಡಿಕೆದಾರರಿಗೂ ಪೂರಕ ತಾಣವಾಗಿ ರೂಪುಗೊಳ್ಳುವುದಕ್ಕೆ ಫಂಡ್ಸ್ ಇಂಡಿಯಾ ಬದ್ಧವಾಗಿದೆ.

-

ಬೆಂಗಳೂರು: ಭಾರತದ ಡಿಜಿಟಲ್ ವೆಲ್ತ್ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರಂಗಳಲ್ಲಿ ಮುಂಚೂಣಿ ಯಲ್ಲಿರುವ ಫಂಡ್ಸ್ ಇಂಡಿಯಾ ಮಹತ್ವದ ಸಾಧನೆ ಮಾಡಿರುವುದಾಗಿ ಘೋಷಿಸಿದ್ದು, ಸಂಸ್ಥೆಯ ನಿರ್ವಹಣೆಯಲ್ಲಿರುವ ಸ್ವತ್ತಿನ ಮೊತ್ತ 2೦,೦೦೦ ಕೋಟಿ ರೂ. ತಲುಪಿದೆ. ಹೂಡಿಕೆದಾರರನ್ನು ಕೇಂದ್ರೀಕರಿಸಿದ ಸೌಲಭ್ಯಗಳನ್ನು ದೊಡ್ಡ ಮಟ್ಟದಲ್ಲಿ ಒದಗಿಸುವ ನಿಟ್ಟಿನಲ್ಲಿ ವಿಶ್ವಾಸಾರ್ಹ ಫಿನ್‌ಟೆಕ್ ಲೀಡರ್ ಆಗಿ ಕಂಪನಿ ಬೆಳೆದಿರುವುದನ್ನು ಈ ಮೈಲಿಗಲ್ಲು ಸೂಚಿಸುತ್ತದೆ.
ರಿಟೇಲ್ ಹೂಡಿಕೆದಾರರು, ಪಾರ್ಟ್ನರ್ ವ್ಯವಸ್ಥೆ ಮತ್ತು ಖಾಸಗಿ ವೆಲ್ತ್ ಕ್ಲೈಂಟ್‌ಗಳ ವಲಯದಲ್ಲಿ ಸುಸ್ಥಿರ ಬೆಳವಣಿಗೆ ಆಗಿರುವುದನ್ನು ಫಂಡ್ಸ್‌ಇಂಡಿಯಾ ಬೆಳವಣಿಗೆಯ ಪ್ರಗತಿಯು ಸೂಚಿಸುತ್ತದೆ. ಈ ಮೂಲಕ ವೆಲ್ತ್ ಮ್ಯಾನೇಜ್‌ಮೆಂಟ್ ವಲಯದಲ್ಲಿ ಇದು ತನ್ನ ಸ್ಥಾನವನ್ನು ಭದ್ರಪಡಿಸಿ ಕೊಂಡಿದೆ.
ತಂತ್ರಜ್ಞಾನ ಆಧರಿತ ಅನುಕೂಲ ಹಾಗೂ ವೈಯಕ್ತಿಕ ಮಾರ್ಗದರ್ಶನದ ಜೊತೆಗೆ ಆಳವಾದ ಸಂಶೋಧನೆ ಸಾಮರ್ಥ್ಯ ಮತ್ತು ಹೂಡಿಕೆದಾರರ ವಿಶ್ವಾಸವೂ ಜೊತೆಗೆ ಸೇರಿದ್ದು, ಸಂಪೂರ್ಣ ಪ್ರಮಾಣದ ವೆಲ್ತ್ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರಂ ಆಗಿ ಮತ್ತು ಸಮಗ್ರ ವೆಲ್ತ್ ಮ್ಯಾನೇಜ್‌ಮೆಂಟ್ ಸೌಲಭ್ಯವನ್ನು ಬಯಸುವ ಎಲ್ಲ ಹೂಡಿಕೆದಾರರಿಗೂ ಪೂರಕ ತಾಣವಾಗಿ ರೂಪುಗೊಳ್ಳುವುದಕ್ಕೆ ಫಂಡ್ಸ್ ಇಂಡಿಯಾ ಬದ್ಧವಾಗಿದೆ.
ಈ ಬೆಳವಣಿಗೆಯ ಬಗ್ಗೆ ಮಾತನಾಡಿದ ಫಂಡ್ಸ್‌ಇಂಡಿಯಾ ಗ್ರೂಪ್ ಸಿಇಒ ಅಕ್ಷಯ್ ಸಪ್ರು, “ಇದು ಹೆಮ್ಮೆಯ ಮೈಲಿಗಲ್ಲು. ಭಾರತವನ್ನು ಹೂಡಿಕೆದಾರರ ಆದ್ಯತೆಯ ತಾಣವಾಗಿಸುವ ನಮ್ಮ ಉದ್ದೇಶಕ್ಕೆ ಇದು ಪೂರಕವಾಗಿದೆ. ನಮ್ಮ ಗ್ರಾಹಕರು, ಹೂಡಿಕೆದಾರರು ಮತ್ತು ಪಾಲುದಾರರ ವಿಶ್ವಾಸವು ಭಾರತದ ಎಲ್ಲೆಡೆ ವಿಶ್ವದರ್ಜೆಯ ಡಿಜಿಟಲ್ ವೆಲ್ತ್ ಮ್ಯಾನೇಜ್ಮೆಂಟ್ ಸೌಲಭ್ಯಗಳನ್ನು ಒದಗಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಉತ್ತಮ ಸಾಂಸ್ಥಿಕ ಬೆಂಬಲ ಮತ್ತು ತಂತ್ರಜ್ಞಾನಕ್ಕೆ ಮಾನವ ಸ್ಪರ್ಶವನ್ನು ನೀಡುವ ಸ್ಪಷ್ಟ ಗುರಿಯೊಂದಿಗೆ, ನಮ್ಮ ಡಿಜಿಟಲ್ ಪ್ರಥಮ ಮಾದರಿಯನ್ನು ಇನ್ನಷ್ಟು ವೃದ್ಧಿಸಲು ಮತ್ತು ಸಮಗ್ರ ಸಂಪತ್ತಿನ ಕಾರ್ಯತಂತ್ರಗಳನ್ನು ಒದಗಿಸಲು ನಾವು ಮುನ್ನಡೆ ಯುತ್ತಿದ್ದೇವೆ” ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಭಾರತದ ಎಲ್ಲೆಡೆ ಫಂಡ್ಸ್‌ಇಂಡಿಯಾ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಗುರಿ ಹಾಕಿಕೊಂಡಿದೆ ಮತ್ತು ಎನ್‌ಆರ್‌ಐಗಳಿಗೆ ಸೇವೆ ಸಲ್ಲಿಸಲು ಅಂತಾರಾಷ್ಟ್ರೀಯವಾಗಿ ವಿಸ್ತರಣೆಗೆ ಸಿದ್ಧವಾಗುತ್ತಿದೆ. ಮ್ಯೂಚುವಲ್ ಫಂಡ್‌ಗಳು ಮತ್ತು ಸುಧಾರಿತ ವೆಲ್ತ್ ಸೊಲ್ಯೂಶನ್‌ಗಳಲ್ಲಿ ಡಿಜಿಟಲ್ ಹಾಗೂ ಫಿಸಿಕಲ್ ಆಗಿ ಹೂಡಿಕೆ ಮಾಡುವಿಕೆಯನ್ನು ಸರಳಗೊಳಿಸುವ ಗುರಿಯನ್ನು ಕಂಪನಿ ಹೊಂದಿದೆ. ಭಾರತದ ಹಣಕಾಸಿನ ಬೆಳವಣಿಗೆಯನ್ನು ಮುನ್ನಡೆಸುವ ಗುರಿಯೊಂದಿಗೆ ಭಾರತದ ಆದ್ಯತೆಯ ವೆಲ್ತ್ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರಂ ಆಗುವತ್ತ ಮುನ್ನಡೆದಿದೆ.
ಪ್ರಮುಖ ಜಾಗತಿಕ ಹೂಡಿಕೆ ಸಂಸ್ಥೆ ವೆಸ್ಟ್‌ಬ್ರಿಡ್ಜ್ ಕ್ಯಾಪಿಟಲ್‌ನಿಂದ ಬೆಂಬಲಿತ ಫಂಡ್ಸ್‌ಇಂಡಿಯಾ ತನ್ನ ಡಿಜಿಟಲ್ ಪ್ರಥಮ ಎಂಬ ಮಾದರಿಯನ್ನು ಬೆಂಬಲಿಸಲು ಮತ್ತು ಸಮಗ್ರ ವೆಲ್ತ್ ಮ್ಯಾನೇಜ್ ಮೆಂಟ್ ಸೊಲ್ಯೂಶನ್‌ಗಳನ್ನು ಇನ್ನಷ್ಟು ವಿಸ್ತರಿಸಲು ಎದುರು ನೋಡುತ್ತಿದೆ.