ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Russian Army: ರಷ್ಯಾದ ಸೈನ್ಯಕ್ಕೆ ಸೇರದಂತೆ ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

ರಷ್ಯಾದ ಸೈನ್ಯಕ್ಕೆ ಸೇರುವ ಯಾವುದೇ ಕೊಡುಗೆಗಳಿದ್ದರೂ ಅದನ್ನು ಸ್ವೀಕರಿಸಬೇಡಿ ಎಂದು ಕೇಂದ್ರವು ಭಾರತೀಯರಿಗೆ ಎಚ್ಚರಿಕೆ ನೀಡಿದೆ. ಮಾಸ್ಕೋಗೆ ಪ್ರಯಾಣಿಸಿದ್ದ ಹಲವಾರು ಭಾರತೀಯರನ್ನು ಉಕ್ರೇನ್ ಯುದ್ಧದಲ್ಲಿ ಭಾಗಿಯಾಗುವಂತೆ ಮಾಡಲಾಗುತ್ತಿದೆ ಎನ್ನುವ ವರದಿಗಳ ಮಧ್ಯೆ ಈ ಎಚ್ಚರಿಕೆಯನ್ನು ನೀಡಲಾಗಿದೆ.

ರಷ್ಯಾದ ಸೇನೆ ಸೇರುವ ಆಫರ್ ಸ್ವೀಕರಿಸದಿರಿ: ಕೇಂದ್ರ

-

ನವದೆಹಲಿ: ರಷ್ಯಾದ ಸೈನ್ಯಕ್ಕೆ (Russian Army) ಸೇರಲು ಯಾವುದೇ ಕೊಡುಗೆಗಳು ಬಂದರೂ ಅದರಿಂದ ದೂರವಿರಿ ಎಂದು ಭಾರತೀಯರಿಗೆ ಕೇಂದ್ರ ಎಚ್ಚರಿಕೆ (Centre Warns Indians) ನೀಡಿದೆ. ಈ ಕುರಿತು ದೆಹಲಿ (Delhi) ಮತ್ತು ಮಾಸ್ಕೋದಲ್ಲಿರುವ (Moscow) ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಪದ್ಧತಿ ಕೊನೆಯಾಗಬೇಕು, ನಮ್ಮ ಪ್ರಜೆಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯದ (Union Ministry of External Affairs) ಮಾಹಿತಿ ತಿಳಿಸಿದೆ. ಮಾಸ್ಕೋಗೆ ಪ್ರಯಾಣಿಸಿದ್ದ ಹಲವಾರು ಭಾರತೀಯರನ್ನು ಉಕ್ರೇನ್ ನೊಂದಿಗಿನ ಯುದ್ದಕ್ಕಾಗಿ ಕಳುಹಿಸಲಾಗುತ್ತಿದೆ ಎಂಬ ವರದಿಗಳ ಮಧ್ಯೆ ಭಾರತ ತನ್ನ ಪ್ರಜೆಗಳಿಗೆ ಈ ಎಚ್ಚರಿಕೆಯನ್ನು ನೀಡಿದೆ.

ಭಾರತೀಯ ಪ್ರಜೆಗಳನ್ನು ರಷ್ಯಾದ ಸೈನ್ಯಕ್ಕೆ ಸೇರಿಸಿಕೊಳ್ಳಲಾಗಿದೆ ಎನ್ನುವ ವರದಿಗಳು ಬಂದಿವೆ. ಕಳೆದ ಒಂದು ವರ್ಷದಿಂದ ಸರ್ಕಾರವು ಈ ಕುರಿತು ಎಚ್ಚರಿಕೆಯನ್ನು ನೀಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.



ದೆಹಲಿ ಮತ್ತು ಮಾಸ್ಕೋ ಎರಡರಲ್ಲೂ ರಷ್ಯಾದ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಈ ಪದ್ಧತಿಯನ್ನು ಕೊನೆಗೊಳಿಸಬೇಕು ಮತ್ತು ನಮ್ಮ ಪ್ರಜೆಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿರುವುದಾಗಿ ಹೇಳಿದೆ.

ಈಗಾಗಲೇ ಅಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯ ನಾಗರಿಕರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿರುವ ವಿದೇಶಾಂಗ ಸಚಿವಾಲಯ, ಪ್ರಸ್ತುತ ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದಲ್ಲಿ ವಾಸಿಸುತ್ತಿರುವ ಇಬ್ಬರು ಭಾರತೀಯರನ್ನು ನಿರ್ಮಾಣ ಕೆಲಸಕ್ಕಾಗಿ ಕರೆಸಿ ಈಗ ಯುದ್ಧದಲ್ಲಿ ಭಾಗಿಯಾಗುವಂತೆ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: IND vs UAE: ಗೌತಮ್‌ ಗಂಭೀರ್ ಅಲ್ಲ! ತಮ್ಮ ಬೌಲಿಂಗ್‌ ಯಶಸ್ಸಿನ ಶ್ರೇಯ ಈ ದಿಗ್ಗಜನಿಗೆ ಸಲ್ಲಬೇಕೆಂದ ಶಿವಂ ದುಬೆ!

2024ರ ನವೆಂಬರ್‌ನಲ್ಲಿ ರಷ್ಯಾ ವಶಪಡಿಸಿಕೊಂಡ ಸೆಲಿಡೋವ್ ಪಟ್ಟಣದಿಂದ ಕರೆ ಮಾಡಿರುವ ಅವರು, ಕನಿಷ್ಠ 13 ಭಾರತೀಯರು ಇದೇ ರೀತಿಯ ಪರಿಸ್ಥಿತಿಗಳಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದ್ದಾಗಿ ತಿಳಿಸಿದರು.