BAN vs HK: ಹಾಂಕಾಂಗ್ ವಿರುದ್ದ ಗೆದ್ದು ಏಷ್ಯಾ ಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಶುಭಾರಂಭ!
ಬೌಲಿಂಗ್ ಹಾಗೂ ಬ್ಯಾಟಿಂಗ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಬಾಂಗ್ಲಾದೇಶ ತಂಡ 2025ರ ಏಷ್ಯಾ ಕಪ್ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ 7 ವಿಕೆಟ್‌ಗಳ ಅಧಿಕಾರಯುತ ಜಯವನ್ನು ಪಡೆದಿದೆ. ಆ ಮೂಲಕ 20 ಓವರ್‌ಗಳ ಮಹತ್ವದ ಟೂರ್ನಿಯಲ್ಲಿ ಲಿಟಾನ್ ದಾಸ್ ನಾಯಕತ್ವದ ಬಾಂಗ್ಲಾದೇಶ ತಂಡ ಶುಭಾರಂಭ ಕಂಡಿದೆ.

ಹಾಂಕಾಂಗ್ ವಿರುದ್ಧ ಬಾಂಗ್ಲಾದೇಶ ತಂಡಕ್ಕೆ ಜಯ. -

ಅಬುಧಾಬಿ: ಲಿಟಾನ್ ದಾಸ್ ( 59) ಅರ್ಧಶತಕ ಹಾಗೂ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್ ದಾಳಿಯ ಸಹಾಯದಿಂದ ಬಾಂಗ್ಲಾದೇಶ ತಂಡ, ಕ್ರಿಕೆಟ್ ಶಿಶು ಹಾಂಕಾಂಗ್ ವಿರುದ್ಧ ಬಿ ಗಂಪಿನ ಎರಡನೇ ಪಂದ್ಯದಲ್ಲಿ (BAN vs HK) 8 ವಿಕೆಟ್‌ಗಳ ಅಧಿಕಾರಯುತ ಗೆಲುವನ್ನು ದಾಖಲಿಸಿದೆ. ಆ ಮೂಲಕ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಬಾಂಗ್ಲಾ (Bangladesh) ಶುಭಾರಂಭ ಕಂಡಿದೆ. ಅಫ್ಘಾನಿಸ್ತಾನ ವಿರುದ್ಧ ಈಗಾಗಲೇ ತನ್ನ ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಹಾಂಕಾಂಗ್, ಇದೀಗ ತನ್ನ ಎರಡನೇ ಹಣಾಹಣಿಯಲ್ಲಿಯೂ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಗುರುವಾರ ಇಲ್ಲಿನ ಶೇಖ್ ಝಯೇದ್ ಕ್ರೀಡಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಹಾಂಕಾಂಗ್ ತಂಡ, ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದ ಹೊರತಾಗಿಯೂ 7 ವಿಕೆಟ್‌ಗಳ ನಷ್ಟಕ್ಕೆ 143 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಬಾಂಗ್ಲಾದೇಶ ತಂಡಕ್ಕೆ 144 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಬಾಂಗ್ಲಾ, ನಾಯಕ ತಮಿಮ್ ಇಕ್ಬಾಲ್ ಅವರ ಸ್ಪೋಟಕ ಅರ್ಧಶತಕದ ಬಲದಿಂದ 17.4 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 144 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಗೆಲುವು ಪಡೆಯಿತು.
Asia Cup 2025: ಕುಲ್ದೀಪ್ ಯಾದವ್‌ಗೆ ಅನ್ಯಾಯವಾಗಿದೆ ಎಂದ ಅಜಯ್ ಜಡೇಜಾ!
ಅಫ್ಘಾನಿಸ್ತಾನ ವಿರುದ್ದ ಕೇವಲ 57 ರನ್‌ಗಳಿಗೆ ಆಲ್‌ಔಟ್ ಆಗಿದ್ದ ಹಾಂಕಾಂಗ್ ತಂಡ, ಬಾಂಗ್ಲಾದೇಶ ವಿರುದ್ಧ ತನ್ನ ಬ್ಯಾಟಿಂಗ್ ಪ್ರದರ್ಶನದಲ್ಲಿ ಸುಧಾರಿಸಿಕೊಂಡಿತು. ಜೀಸನ್ ಅಲಿ 34 ರನ್, ನಿಝಾಕರ್ ಖಾನ್ 42 ರನ್ ಹಾಗೂ ಹಾಸೀಮ್ ಮುರ್ತಾಝಾ 28 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಹಾಂಕಾಂಗ್ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದ್ದರು. ಬಾಂಗ್ಲಾ ಪರ ಟಾಸ್ಕಿನ್ ಅಹ್ಮದ್, ತಂಝಿಮ್ ಹಸನ್ ಅಹ್ಮದ್ ಹಾಗೂ ರಿಷದ್ ಹೊಸೈನ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.
Composed chase! Bangladesh sealed victory by 7 wickets. ✅ Bangladesh 🆚 Hong Kong, China | Match 3 | Asia Cup 2025
— Bangladesh Cricket (@BCBtigers) September 11, 2025
11 September 2025 | 8:30 PM | Sheikh Zayed Stadium, Abu Dhabi#Bangladesh #TheTigers #BCB #Cricket #AsiaCup #Cricket #TigersForever #AsiaCup2025 pic.twitter.com/jzyd6GuClT
ಲಿಟಾನ್ ದಾಸ್ ಇಕ್ಬಾಲ್ ಸ್ಪೋಟಕ ಅರ್ಧಶತಕ
ಗುರಿ ಹಿಂಬಾಲಿಸಿದ ಬಾಂಗ್ಲಾದೇಶ ತಂಡದ ಚೇಸಿಂಗ್‌ನಲ್ಲಿ ನಾಯಕ ತಮಿಮ್ ಇಕ್ಬಾಲ್ ಅವರ ಇನಿಂಗ್ಸ್ ಎಲ್ಲರ ಗಮನವನ್ನು ಸೆಳೆಯಿತು. ಆರಂಭಿಕ ಬ್ಯಾಟ್ಸ್‌ಮನ್ ಪರ್ವೇಝ್ ಹುಸೇನ್ (19) ಹಾಗೂ ತಂಝಿಮ್ ಹಸನ್ ತಮಿಮ್ (14) ಅವರು ಉತ್ತಮ ಆರಂಭ ಪಡೆದ ಹೊರತಾಗಿಯೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಿದ ನಾಯಕ ಲಿಟಾನ್ ದಾಸ್, ಹಾಂಕಾಂಗ್ ಬೌಲರ್‌ಗಳಿಗೆ ಬೆವರಿಳಿಸಿದರು. ಅವರು ಆಡಿದ ಕೇವಲ 39 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 59 ರನ್ ಗಳಿಸಿ ಬಾಂಗ್ಲಾದೇಶ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.
Classy and composed – a treat to watch at the crease. 👏 pic.twitter.com/HzLMouD0hH
— Bangladesh Cricket (@BCBtigers) September 11, 2025
ಇನ್ನು ಲಿಟಾನ್ ದಾಸ್‌ಗೆ ಮೂರನೇ ವಿಕೆಟ್‌ಗೆ ಸಾಥ್ ನೀಡಿದ್ದ ತೌಹಿದ್ ಹೃದಾಯ್ 35 ಎಸೆತಗಳಲ್ಲಿ 36 ರನ್‌ಗಳನ್ನು ಕಲೆ ಹಾಕಿದ್ದರು. ಇವರು ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟ್ ಮಾಡಿ ಲಿಟಾನ್ ದಾಸ್ ಜೊತೆಗೆ ಮೂರನೇ ವಿಕೆಟ್‌ಗೆ 95 ರನ್‌ಗಳ ಜೊತೆಯಾಟವನ್ನು ಆಡಿದರು. ಹಾಂಕಾಂಗ್ ಪರ ಆಯುಷ್ ಶುಕ್ಲಾ ಒಂದು ವಿಕೆಟ್ ಕಿತ್ತರೆ, ಆತಿಖ್ ಇಕ್ಬಾಲ್ ಎರಡು ವಿಕೆಟ್‌ಗಳನ್ನು ಪಡದರು.