ಹನಿವೆಲ್ ಗ್ರೋತ್ ಸಿಂಪೋಸಿಯಂ 2025ರಲ್ಲಿ ದೇಶಾದ್ಯಂತ ನಡೆಯಲಿರುವ ತನ್ನ ವಿನೂತನ ಇನ್ನೋವೇಷನ್ ರೋಡ್‌ಶೋಗೆ ಚಾಲನೆ ನೀಡಿದ ಹನಿವೆಲ್
ಲೈವ್, ಸಂವಾದ ಪ್ರದರ್ಶನಗಳ ಮೂಲಕ ಹನಿವೆಲ್ ನ ತಂತ್ರಜ್ಞಾನಗಳು ವಿಭಿನ್ನ ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ಸುರಕ್ಷತೆ, ದಕ್ಷತೆ ಮತ್ತು ಸುಸ್ಥಿರತೆಯನ್ನು ಹೇಗೆ ಸುಧಾರಿಸುತ್ತವೆ ಎಂಬುದನ್ನು ಪ್ರದರ್ಶಿಸ ಲಾಗುತ್ತದೆ. ಪ್ರತೀ ನಗರದಲ್ಲಿಯೂ ಸ್ಥಳೀಯ ಮಾರುಕಟ್ಟೆ ಆದ್ಯತೆಗಳಿಗೆ ಅನುಗುಣವಾಗಿ ಕಸ್ಟಮೈಸ್ಡ್ ಅನುಭವಗಳನ್ನು ಒದಗಿಸಲಾಗುತ್ತದೆ.
                                -
                                
                                Ashok Nayak
                            
                                Nov 3, 2025 10:37 PM
                            ಅತ್ಯಂತ ಪ್ರಮುಖ ಕಂಪನಿ ಆಗಿರುವ ಹನಿವೆಲ್ ಸಂಸ್ಥೆಯು ಬೆಂಗಳೂರಿನಲ್ಲಿ ಅಕ್ಟೋಬರ್ 31ರಂದು ನಡೆದ ಹನಿವೆಲ್ ಗ್ರೋತ್ ಸಿಂಪೋಸಿಯಂ 2025 ಕಾರ್ಯಕ್ರಮದಲ್ಲಿ ದೇಶಾದ್ಯಂತ ನಡೆಯಲಿರುವ ತನ್ನ ಬಿಲ್ಡಿಂಗ್ ಆಟೋಮೇಷನ್ ಎಕ್ಸ್ ಪ್ರೆಸ್ ರೋಡ್‌ಶೋಗೆ ಚಾಲನೆ ನೀಡಿದೆ.
ಆಟೋಮೇಷನ್ ಮೆಗಾಟ್ರೆಂಡ್ ನ ಭಾಗವಾಗಿ ನಡೆಯುವ ಈ ಅಭಿಯಾನವು ದೇಶದಾದ್ಯಂತ ನಡೆಯುವ ಸಂಚಾರಿ ಎಕ್ಸ್ ಪೀರಿಯನ್ಸ್ ಅಭಿಯಾನವಾಗಿದ್ದು, ಈ ಅಭಿಯಾನದಲ್ಲಿ ಹನಿವೆಲ್ ನ ಹೊಸ ಅವಿಷ್ಕಾರಗಳಾದ ಫೈರ್ ಡಿಟೆಕ್ಷನ್ ಮತ್ತು ಅಲಾರ್ಮ್ ಸಿಸ್ಟಮ್, ಎಸ್ ಟಿ ಕ್ಯೂ ಸಿ ಸರ್ಟಿ ಫೈಡ್ ವೀಡಿಯೋ ಸರ್ವೈಲೆನ್ಸ್, ಆಕ್ಸೆಸ್ ಸೊಲ್ಯೂಷನ್ಸ್, ಬಿಲ್ಡಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಮತ್ತು ಎಲೆಕ್ಟ್ರಿಕಲ್ ಪ್ರೊಡಕ್ಟ್ ಗಳನ್ನು ಪ್ರದರ್ಶಿಸಲಾಗುತ್ತದೆ.
ಹನಿವೆಲ್ ಬಿಲ್ಡಿಂಗ್ ಆಟೊಮೇಷನ್ ಎಕ್ಸ್‌ಪ್ರೆಸ್ ರೋಡ್‌ಶೋ ಅನ್ನು ಹನಿವೆಲ್ ಇಂಡಿಯಾದ ಅಧ್ಯಕ್ಷ ಆಶಿಶ್ ಮೋದಿ, ಹನಿವೆಲ್ ಬಿಲ್ಡಿಂಗ್ ಆಟೊಮೇಷನ್‌ನ ಅಧ್ಯಕ್ಷ ಮತ್ತು ಸಿಇಒ ಬಿಲಾಲ್ ಹಮ್ಮೌದ್, ಹನಿವೆಲ್ ಕನೆಕ್ಟೆಡ್ ಎಂಟರ್‌ಪ್ರೈಸ್‌ನ ಸಿಇಒ ಮತ್ತು ಅಧ್ಯಕ್ಷ ಸುರೇಶ್ ವೆಂಕಟ ರಾಯಲು, ಹನಿವೆಲ್ ಬಿಲ್ಡಿಂಗ್ ಆಟೊಮೇಷನ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಶೈಲೆನ್ ಚೌಹಾಣ್ ಮತ್ತು ಹನಿವೆಲ್ ಇಂಡಿಯಾದ ಭಾರತ, ಆಸಿಯಾನ್ ಮತ್ತು ಪರ‍್ವ ಏಷ್ಯಾದ ಬಿಲ್ಡಿಂಗ್ ಆಟೊ ಮೇಷನ್‌ನ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಅತುಲ್ ಪೈ ಅವರು ಇಂದು ಅಧಿಕೃತವಾಗಿ ಉದ್ಘಾಟಿಸಿದರು.
ಹನಿವೆಲ್ ಗ್ರೋತ್ ಸಿಂಪೋಸಿಯಂ ಕಾರ್ಯಕ್ರಮದಲ್ಲಿ ಉದ್ಯಮಗಳ ನಾಯಕರು ಮತ್ತು ತಂತ್ರಜ್ಞಾನ ಪರಿಣತರು ಹಾಗೂ ಹನಿವೆಲ್ ಸಂಸ್ಥೆಯ ಹಿರಿಯ ನಾಯಕತ್ವ ಭಾಗವಹಿಸಿ ಭಾರತದಲ್ಲಿನ ಹೊಸ ಆವಿಷ್ಕಾರ ಮತ್ತು ಬೆಳವಣಿಗೆಯ ಸಾಧ್ಯತೆಗಳ ಕುರಿತು ಸಂವಾದ ನಡೆಸಿತು. ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಟ್ರಾನ್ಸ್ ಫಾರ್ಮೇಷನ್, ಸುಸ್ಥಿರತೆ ಮತ್ತು ಆಟೋಮೇಷನ್ ಗಳ ಕುರಿತಾದ ಚರ್ಚೆಗಳು, ಕೋ- ಇನ್ನೋವೇಷನ್ ವಿಷಯ ಕುರಿತ ಸಹಯೋಗದ ಗೋಷ್ಠಿಗಳು ನಡೆದುವು. ಅಂತಿಮವಾಗಿ ತಂತ್ರಜ್ಞಾನ ಹಾಗೂ ಅಭಿವೃದ್ಧಿಯ ಸಾಧನೆಗಳನ್ನು ಸಂಭ್ರಮಿಸಲಾಯಿತು.
ಈ ರೋಡ್ ಶೋದಲ್ಲಿ ಹನಿವೆಲ್ ನ ಬಿಲ್ಡಿಂಗ್ ಸೊಲ್ಯೂಷನ್ ಗಳ ಪ್ರದರ್ಶನ ಮಾಡಲಾಗುವುದು ಮತ್ತು ಆ ಮೂಲಕ ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುವುದು. ಈ ಅಭಿಯಾನವು ಮಹಾನಗರ ಗಳ ಹೊರತಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಬೇರೆ ಸಣ್ಣ ನಗರಗಳಲ್ಲಿನ ಗ್ರಾಹಕರನ್ನು ಬ್ರಾಂಡ್ ಜೊತೆ ತೊಡಗಿಸುವಂತೆ ಮಾಡಲಿದೆ. ವೇಗದ ನಿರ್ಧಾರ ತೆಗೆದುಕೊಳ್ಳುವಿಕೆ ಸಾಧ್ಯ ಮಾಡಲಿದೆ ಮತ್ತು ಬ್ರ್ಯಾಂಡ್ ಅನ್ನು ಹೆಚ್ಚು ಜನರಿಗೆ ತಲುಪಿಸಲಿದೆ.
ಲೈವ್, ಸಂವಾದ ಪ್ರದರ್ಶನಗಳ ಮೂಲಕ ಹನಿವೆಲ್ ನ ತಂತ್ರಜ್ಞಾನಗಳು ವಿಭಿನ್ನ ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ಸುರಕ್ಷತೆ, ದಕ್ಷತೆ ಮತ್ತು ಸುಸ್ಥಿರತೆಯನ್ನು ಹೇಗೆ ಸುಧಾರಿಸುತ್ತವೆ ಎಂಬು ದನ್ನು ಪ್ರದರ್ಶಿಸಲಾಗುತ್ತದೆ. ಪ್ರತೀ ನಗರದಲ್ಲಿಯೂ ಸ್ಥಳೀಯ ಮಾರುಕಟ್ಟೆ ಆದ್ಯತೆಗಳಿಗೆ ಅನುಗುಣವಾಗಿ ಕಸ್ಟಮೈಸ್ಡ್ ಅನುಭವಗಳನ್ನು ಒದಗಿಸಲಾಗುತ್ತದೆ. ಅಭಿಯಾನದ ಪ್ರತೀ ನಿಲುಗಡೆ ಯೂ ಪ್ರಾದೇಶಿಕ ಅಗತ್ಯಗಳಿಗೆ ಹೊಂದಿಕೊಂಡಂತೆ ಗ್ರಾಹಕರಿಗೆ ಅತ್ಯುತ್ತಮ ಮೌಲ್ಯ ಮತ್ತು ಒಳನೋಟವನ್ನು ನೀಡುತ್ತದೆ.
ಬೆಂಗಳೂರಿನಿಂದ ಪ್ರಾರಂಭವಾಗುವ ರೋಡ್ ಶೋ 9,000+ ಕಿ.ಮೀ.ಗಿಂತ ಹೆಚ್ಚು ದೂರವನ್ನು ಕ್ರಮಿಸಲಿದೆ. ಚೆನ್ನೈ, ಹೈದರಾಬಾದ್, ಭುವನೇಶ್ವರ, ಕೋಲ್ಕತ್ತಾ, ಲಖನೌ, ಇಂದೋರ್, ಪುಣೆ, ಮುಂಬೈ, ಸೂರತ್, ವಡೋದರಾ, ಅಹಮದಾಬಾದ್, ಉದಯಪುರ, ಜೈಪುರ ಮತ್ತು ಚಂಡೀಗಢ ದಂತಹ 16 ಪ್ರಮುಖ ನಗರಗಳನ್ನು ದಾಟಿ ಸಾಗಲಿದೆ. ದೆಹಲಿಯಲ್ಲಿ ಈ ಅಭಿಯಾನವು ಕೊನೆ ಗೊಳ್ಳಲಿದೆ.
ಪ್ರತೀ ನಗರಗಳಲ್ಲಿಯೂ ಸ್ಥಳೀಯ ಮಾರುಕಟ್ಟೆ ಆದ್ಯತೆಗಳಿಗೆ ಹೊಂದಿಕೊಂಡಂತೆ ಆನ್-ಸೈಟ್ ಕಸ್ಟಮೈಸ್ಡ್ ಅನುಭವಗಳನ್ನು ಒದಗಿಸಲಾಗುತ್ತದೆ ಮತ್ತು ಪ್ರತೀ ನಿಲುಗಡೆಯಲ್ಲಿಯೂ ಮೌಲ್ಯ ಮತ್ತು ಒಳನೋಟವನ್ನು ನೀಡಲಾಗುತ್ತದೆ.