ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೋದರ ಸಂಬಂಧಿ ಜತೆಯೇ ಪತ್ನಿಗೆ ಅನೈತಿಕ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನೆರಿಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತ್ನಿಯ ಕೃತ್ಯಕ್ಕೆ ಬೇಸತ್ತು ಪತಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ವಿಷಯ ತಿಳಿದ ಕುಟುಂಬಸ್ಥರು ಮಗನ ಸಾವಿಗೆ ಕಾರಣವಾದ ಆತನ ಪತ್ನಿ ಹಾಗೂ ಪ್ರಿಯಕರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಸಹೋದರನ ಜತೆಯೇ ಪತ್ನಿಗೆ ಅನೈತಿಕ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ

-

Prabhakara R
Prabhakara R Oct 19, 2026 4:32 PM

ಬೆಂಗಳೂರು: ಸೋದರ ಸಂಬಂಧಿ ಜತೆಯೇ ಪತ್ನಿ ಅನೈತಿಕ ಸಂಬಂಧ ಹೊಂದಿ, ಎರಡನೇ ಮಗುವಿಗೆ ತಾಯಿಯಾಗುತ್ತಿರುವುದನ್ನು ತಿಳಿದು ಮನನೊಂದ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ (Bengaluru) ಹೊರವಲಯದ ಆನೇಕಲ್‌ ತಾಲೂಕಿನಲ್ಲಿ ನಡೆದಿದೆ.

ಪತ್ನಿಯ ಕೃತ್ಯಕ್ಕೆ ಬೇಸತ್ತು ಪತಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದು, ಮುನಿಕೃಷ್ಣ (35) ಮೃತರು ಎಂದು ಗುರುತಿಸಲಾಗಿದೆ. ಆನೇಕಲ್ ತಾಲೂಕಿನ ನೆರಿಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮುನಿಕೃಷ್ಣ 10 ವರ್ಷಗಳ ಹಿಂದೆ ನಯನ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ 6 ವರ್ಷದ ಒಬ್ಬ ಗಂಡು ಮಗ ಇದ್ದಾನೆ. ಪ್ರಸ್ತುತ ನಯನ ಎರಡನೇ ಬಾರಿ ಗರ್ಭಿಣಿಯಾಗಿದ್ದರು. ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ನಡೆಯುತ್ತಿರುವ ನಡುವೆ ಇವರ ಸಂಸಾರದಲ್ಲಿ ಮುನಿಕೃಷ್ಣನ ಸಂಬಂಧಿ ಕುಮಾರ ಎಂಬಾತ ಎಂಟ್ರಿಕೊಟ್ಟಿದ್ದ.

ಕುಮಾರ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಈತ ನಯನಾಳನ್ನು ಕೆಲಸಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದ. ಸಂಬಂಧದಲ್ಲಿ ತಮ್ಮನಾಗಿದ್ದರಿಂದ ಯಾರು ಪ್ರಶ್ನೆ ಮಾಡಿರಲಿಲ್ಲ. ಆದರೆ ಕಳೆದೆರಡು ವರ್ಷದಿಂದ ಮುನಿಕೃಷ್ಣನ ಪತ್ನಿ ನಯನ ಜತೆ ಕುಮಾರ ಲವ್ವಿಡವ್ವಿ ನಡೆಸುತ್ತಿದ್ದ. ಮುನಿಕೃಷ್ಣ ಆಟೋ ತೆಗೆದುಕೊಂಡು ಹೋಗುತ್ತಿದ್ದಂತೆ ಕುಮಾರ ಮನೆಗೆ ಬರುತ್ತಿದ್ದ.

ಕೆಲ ದಿನಗಳ ಹಿಂದೆ ಮುನಿಕೃಷ್ಣನಿಗೆ ವಾಟ್ಸ್ಆ್ಯಪ್ ಮೆಸೇಜ್ ಮಾಡಿದ್ದ ಕುಮಾರ, ಇಬ್ಬರು ಜತೆಗಿರುವ ಫೋಟೋ, ಅಸಭ್ಯ ವಿಡಿಯೋಗಳನ್ನು ಕಳಿಸಿದ್ದ. ಜತೆಗೆ ಇಬ್ಬರು ವಾಟ್ಸ್ಆ್ಯಪ್ ಚಾಟ್ ಮಾಡಿಕೊಂಡಿರೋದನ್ನು ಕಳುಹಿಸಿದ್ದ. ಅಲ್ಲದೇ ನಯನಾಳ ಹೊಟ್ಟೆಯಲ್ಲಿರುವುದು ತನ್ನ ಮಗು ಎಂದು ಮೆಸೇಜ್ ಮಾಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಮುನಿಕೃಷ್ಣ ಹಾಗೂ ನಯನ ನಡುವೆ ಗಲಾಟೆಯಾಗಿತ್ತು. ಬಳಿಕ ನಯನ ತವರು ಮನೆ ಸೇರಿದ್ದಳು.

ಇಷ್ಟಕ್ಕೆ ಸುಮ್ಮನಾಗದ ಕುಮಾರ, ಪದೇ ಪದೇ ಮುನಿಕೃಷ್ಣನನ್ನು ಹೀಯಾಳಿಸುವುದು, ರಸ್ತೆಯಲ್ಲಿ ಓಡಾಡುವಾಗ ಅವಮಾನಿಸುವುದು ಮಾಡುತ್ತಿದ್ದ. ಇಷ್ಟಾದರೂ ಗ್ರಾಮದಲ್ಲಾಗಲಿ, ಕುಟುಂಬದವರಿಗಾಗಲಿ, ಕುಮಾರ ಹಾಗೂ ನಯನಾ ಬಗ್ಗೆ ವಿಷಯ ಗೊತ್ತಿರಲಿಲ್ಲ. ಇದರಿಂದ ತೀವ್ರವಾಗಿ ಬೇಸತ್ತಿದ್ದ ಮುನಿಕೃಷ್ಣ, ಆತ್ಮಹತ್ಯೆಗೆ ಒಂದು ದಿನ ಮೊದಲು ತನ್ನ ಸಹೋದರನಿಗೆ ಕರೆ ಮಾಡಿ ವಿಷಯವನ್ನು ಹೇಳಿದ್ದ. ಮಾರನೆ ದಿನ ನೇಣಿಗೆ ಕೊರಳೊಡ್ದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Bengaluru Murder: ಬೆಂಗಳೂರಿನಲ್ಲಿ ಬಾಡಿಗೆ ಹಣ ಕೇಳಿದ್ದಕ್ಕೆ ವಕೀಲನನ್ನು ಗುಂಡಿಕ್ಕಿ ಕೊಂದ ಬಾಡಿಗೆದಾರರು!

ವಿಷಯ ತಿಳಿದ ಕುಟುಂಬಸ್ಥರು ಮಗನ ಸಾವಿಗೆ ಕಾರಣವಾದ ನಯನ ಹಾಗೂ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.