ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

DK Suresh: ಕೇಂದ್ರಕ್ಕೆ ಆದಾಯ ತೆರಿಗೆ ಕಟ್ಟುವ ಬದಲು ರೈತರಿಗೆ ಪ್ರೋತ್ಸಾಹಧನ ಹಂಚಿಕೆ: ಡಿ.ಕೆ. ಸುರೇಶ್

DK Suresh: ಮಾರುಕಟ್ಟೆಯ ಬಗ್ಗೆ ತಿಳಿದುಕೊಂಡು ಹೊಸ ನಿಯಮಗಳನ್ನು ಮಾಡಿ ಬಮುಲ್ 70 ಕೋಟಿ ರೂ. ಲಾಭ ಗಳಿಸಿದೆ. ಕಳೆದ ವರ್ಷ ಕೆಎಂಎಫ್ 180 ಕೋಟಿ ಲಾಭ ಗಳಿಸಿದೆ. ಆದರೆ 60- 70 ಕೋಟಿ ಆದಾಯ ತೆರಿಗೆಯನ್ನು ಕೇಂದ್ರಕ್ಕೆ ಕಟ್ಟಿದೆ. ಇದು ಯಾರ ಹಣ? ಬೆವರು ಸುರಿಸಿ ದುಡಿದ ನಮ್ಮ ರೈತರ ಹಣ. ಆಗ ನಾನು ಅಧಿಕಾರಿಗಳಿಗೆ ಹೇಳಿದೆ.‌ ನಿಮಗೆ ಯಾರಿಗೂ ಲೆಕ್ಕಾಚಾರ ಗೊತ್ತಿಲ್ಲ ಎಂದು ಹೇಳಿದ್ದೇ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ಬಮುಲ್ ನಷ್ಟದಿಂದ ಲಾಭಕ್ಕೆ: ಡಿ.ಕೆ. ಸುರೇಶ್

ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ (ಸಂಗ್ರಹ ಚಿತ್ರ). -

Profile
Siddalinga Swamy Apr 8, 2026 10:07 PM

ಬೆಂಗಳೂರು, ಏ.8: ಕೇಂದ್ರ ಸರ್ಕಾರಕ್ಕೆ ಆದಾಯ ತೆರಿಗೆ ಕಟ್ಟುವ ಬದಲು ಅದನ್ನು ರೈತರಿಗೆ ಹಂಚಲಾಗುತ್ತಿದೆ. ಅಧಿಕಾರಿಗಳು ಆದಾಯ ತೆರಿಗೆ ಕಟ್ಟಬೇಕು ಎಂದರು. ನಾನು ಲಾಭ ತೋರಿಸಿದರೆ ಮಾತ್ರ ಅಲ್ಲವೇ ತೆರಿಗೆ ಕಟ್ಟಬೇಕು. ನಮ್ಮ ರೈತರ ಹಣ ರೈತರಿಗೆ ಮರಳಿ ಹೋಗಬೇಕು ಎಂದು 60 ಕೋಟಿ ಹಣವನ್ನು ಮರಳಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ (DK Suresh) ಹೇಳಿದರು. ಬೆಂಗಳೂರಿನ ಡಾ. ಬಾಬು ಜಗಜೀವನ್ ರಾಮ್ ಭವನದಲ್ಲಿ ಬುಧವಾರ ನಡೆದ ಬಮೂಲ್ ಒಕ್ಕೂಟ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ವಿಶೇಷ ಪ್ರೋತ್ಸಾಹ ಧನದ ಚೆಕ್‌ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾನು ಲಾಭ ತೋರಿಸಿಲ್ಲ. 1,28,400 ರೈತರಿಗೆ 1 ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ನೀಡುತ್ತಿದ್ದೇನೆ. 2025ರ ಏಪ್ರಿಲ್ 1 ರಿಂದ 2026 ಮಾರ್ಚ್ 31 ರವರೆಗೆ ಲೆಕ್ಕಾಚಾರ ಹಾಕಿ ಪ್ರೋತ್ಸಾಹ ಧನ ನೀಡಲಾಗಿದೆ. ಆನೇಕಲ್, ಬೆಂಗಳೂರು ದಕ್ಷಿಣ, ಕನಕಪುರಕ್ಕೆ ಮೊದಲು ನೀಡಲಾಗಿದೆ ಏಕೆಂದರೆ ಇವರು ಎಲ್ಲಾ ದತ್ತಾಂಶಗಳನ್ನು ಮೊದಲಿಗೆ ಸಲ್ಲಿಕೆ ಮಾಡಿದ್ದರು.‌ ಯಾರಿಗೂ ಮೋಸವಾಗದಂತೆ ಪ್ರತಿಯೊಬ್ಬರಿಗೂ ಹಣ ತಲುಪಿಸಬೇಕು. ಇದಕ್ಕೆ ರೈತರೇ ಜವಾಬ್ದಾರರು ಎಂದರು.

ಮಾರುಕಟ್ಟೆಯ ಬಗ್ಗೆ ತಿಳಿದುಕೊಂಡು ಹೊಸ ನಿಯಮಗಳನ್ನು ಮಾಡಿ ಬಮುಲ್ 70 ಕೋಟಿ ರೂ. ಲಾಭ ಗಳಿಸಿದೆ. ಕಳೆದ ವರ್ಷ ಕೆಎಂಎಫ್ 180 ಕೋಟಿ ಲಾಭ ಗಳಿಸಿದೆ. ಆದರೆ 60- 70 ಕೋಟಿ ಆದಾಯ ತೆರಿಗೆಯನ್ನು ಕೇಂದ್ರಕ್ಕೆ ಕಟ್ಟಿದೆ. ಇದು ಯಾರ ಹಣ? ಬೆವರು ಸುರಿಸಿ ದುಡಿದ ನಮ್ಮ ರೈತರ ಹಣ. ಆಗ ನಾನು ಅಧಿಕಾರಿಗಳಿಗೆ ಹೇಳಿದೆ.‌ ನಿಮಗೆ ಯಾರಿಗೂ ಲೆಕ್ಕಾಚಾರ ಗೊತ್ತಿಲ್ಲ ಎಂದು ಹೇಳಿದ್ದೇ ಎಂದರು.

ಹಾವುಗಳಿಗಿಂತ ಇಲಿ ಹೆಗ್ಗಣ, ಇರುವೆಗಳು ಹೆಚ್ಚಿವೆ

ಬಮುಲ್ ಈ ಹಿಂದೆ ಹೇಗೆ ಕಾರ್ಯನಿರ್ವಹಣೆ ಮಾಡುತ್ತಾ ಇತ್ತು ಎನ್ನುವ ವ್ಯಾಖ್ಯಾನ ಬೇಡ. ಮುಂದಿನ ಪ್ರಗತಿಯ ಬಗ್ಗೆ ಮಾತ್ರ ಚಿಂತನೆ ಬೇಕು. ರೈತರ ಉದ್ದಾರದ ಬಗ್ಗೆ ಆಲೋಚನೆ ಮಾಡಬೇಕು. ನನ್ನ ನಂಬಿದ ನಾಯಕರ ನಂಬಿಕೆ ಉಳಿಯಬೇಕು ಎಂದರು‌.

ಬಮುಲ್ ಬಗ್ಗೆ ಇನ್ನೂ ತಿಳಿದುಕೊಳ್ಳುತ್ತಲೇ ಇದ್ದೇನೆ. ಹಾವು ಬುಸುಗುಡುತ್ತಾ ಓಡಾಡಿದರೆ ಎಚ್ಚರಿಕೆ ವಹಿಸಬಹುದು. ಆದರೆ ಇಲ್ಲಿ ಇಲಿ, ಹೆಗ್ಗಣಗಳು ಸೇರಿಕೊಂಡಿವೆ. ಜತೆಗೆ ಇರುವೆಗಳ ಗೂಡೇ ಇದೆ. ಒಂದೊಂದು ಇರುವೆಯನ್ನು ಪೈಸೆಗೆ ಹೋಲಿಸಿದರೂ ಕೋಟಿ ಲೆಕ್ಕಾಚಾರ. ಆದರೂ ಮುಖಂಡರುಗಳು ಇನ್ನೂ ಇದೆ ಎನ್ನುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಬಮುಲ್ ನಷ್ಟದಿಂದ ಲಾಭಕ್ಕೆ

ಸರ್ಕಾರ ಹಾಲಿನ ಬೆಲೆಯನ್ನು 4 ರೂಪಾಯಿ ಹೆಚ್ಚಳ ಮಾಡಿತು ಆದರೆ ಈ ಹಣವನ್ನು ನೇರ ರೈತರಿಗೆ ನೀಡಬೇಕು ಎಂದು ತಿಳಿಸಿತು. ಈ ಸಂದರ್ಭದಲ್ಲಿ 14 ಹಾಲು ಒಕ್ಕೂಟಗಳಿಂದ 1.5 ಕೋಟಿ ಲೀಟರ್ ಹಾಲನ್ನು ನಾವು ಸಂಗ್ರಹ ಮಾಡುತ್ತಿದ್ದೆವು. ಬಮುಲ್ 18 ಲಕ್ಷ ಲೀ. ಹಾಲು ಸಂಗ್ರಹ ಮಾಡುತ್ತಿತ್ತು. ನೇರ ಹಾಲಿನ ಮಾರಾಟ 9-10 ಲಕ್ಷ ಲೀಟರ್ ಮಾತ್ರ. ಮಿಕ್ಕ 8 ಲಕ್ಷ ಲೀಟರ್ ಹಾಲಿಗೆ 4 ರೂಪಾಯಿಯನ್ನು ಒಕ್ಕೂಟವೇ ಪಾವತಿ ಮಾಡಬೇಕಾಗಿತ್ತು. ಇದರಿಂದ ತಿಂಗಳಿಗೆ 10 ಕೋಟಿ ರೂ. ನಷ್ಟ ಅಂದಾಜು ಮಾಡಲಾಗಿತ್ತು. ಆಗ ನಿರ್ದೇಶಕರು ಹಣ ಕಡಿತದ ಬಗ್ಗೆ ಹೇಳಿದರು. ನಾನು ಯಥಾಸ್ಥಿತಿ ಮುಂದುವರೆಯುಲಿ ಎಂದು ಮನವಿ ಮಾಡಿದೆ. ನಂತರ ಎಲ್ಲಾ ವಿಭಾಗಗಳ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ. ಕಳೆದ ಡಿಸೆಂಬರ್‌ನಲ್ಲಿ 3 ಕೋಟಿ ರೂ. ಲಾಭ ಮಾಡಿದೆವು. ನಂತರ ಕ್ರಮೇಣ ತಿಂಗಳಿಗೆ 10 ಕೋಟಿ ರೂ.ಗೆ ತಲುಪಿದೆವು ಎಂದರು.

6 ಸಾವಿರ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡಿದರೆ, ಒಂದೊಂದು ಕೇಂದ್ರದಿಂದ 200 ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾದರೆ, 20 ಲಕ್ಷ ಹಾಲು ಉತ್ಪಾದನೆ ಕಷ್ಟವೇನಲ್ಲ. ಮಂಡ್ಯದಿಂದ 75 ಸಾವಿರ, ಶಿವಮೊಗ್ಗ ವಿಭಾಗದಿಂದ 50 ಸಾವಿರ, ಖಾಸಗಿಯವರಿಂದ ವಾರಕ್ಕೆ 1.5 ಲಕ್ಷ ಲೀಟರ್ ಹಾಲು ಪಡೆಯಲಾಗುತ್ತಿದೆ. ಅದರ ಬದಲು ನಮ್ಮ ರೈತರೇ ಹೆಚ್ಚು ಹಾಲು ನೀಡುವಂತಾಗಬೇಕು. ಕನಕಪುರವೊಂದರಲ್ಲೇ 12 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಬಮುಲ್‌ನಿಂದ ಜಾನುವಾರು ವಿಮೆ

ಬೇರೆ ಕಂಪೆನಿಗಳಿಗೆ ವಿಮೆ ನೀಡುವ ಬದಲು ಬಮುಲ್‌ನಿಂದಲೇ ಜಾನುವಾರು ವಿಮೆಯನ್ನು ಈ ವರ್ಷದಿಂದ ನೀಡಲಾಗುವುದು. 60-80 ಸಾವಿರಕ್ಕೆ ಒಂದು ದರ, 1 ಲಕ್ಷದ ಮೇಲೆ ಇನ್ನೊಂದು ದರ ಹೀಗೆ ಚರ್ಚೆ ಮಾಡಿ ನಿಗದಿ ಮಾಡಲಾಗುವುದು. ರೈತರು ಒಳ್ಳೆಯ ಬ್ರೀಡ್ ಹಸುಗಳನ್ನು ಸಾಕಿ 15,20 ಲೀಟರ್ ಗಿಂತ ಹೆಚ್ಚು ಹಾಲು ಪಡೆದರೆ ಲಾಭ ಕಾಣಬಹುದು ಎಂದು ನಾವು ಈ ವಿಚಾರವಾಗಿ ಮಾರ್ಗದರ್ಶನ ನೀಡುತ್ತಿದ್ದೇವೆ ಎಂದರು.‌

IPL 2026 Tickets: ಶಾಸಕರು ಐಪಿಎಲ್ ಉಚಿತ ಟಿಕೆಟ್ ಕೇಳುವುದು ತಪ್ಪು: ಡಿ.ಕೆ. ಸುರೇಶ್ ಅಸಮಾಧಾನ

ಕಳೆದ 20-25 ವರ್ಷಗಳಿಂದ ಕೆಎಂಎಫ್, ಬಮುಲ್‌ಗೆ ಯಾರು ನಿರ್ದೇಶಕರಾಗಬೇಕು, ಅಧ್ಯಕ್ಷರಾಗಬೇಕು ಎಂದು ಸೂಚಿಸುತ್ತಾ ಬಂದಿದ್ದೆ.‌ ನಮಗಾಗಿ ದುಡಿಯುವ ನಾಯಕರಿಗೆ ಮೀಸಲಾದ ಸ್ಥಾನದಲ್ಲಿ ನಾನು ಕುಳಿತುಕೊಳ್ಳುವುದು ಸರಿಯಲ್ಲ ಎಂದು ಭಾವಿಸಿದ್ದೆ. ಆದರೆ ಶಾಸಕರಾದ ರವಿ, ಬಾಲಕೃಷ್ಣ, ಶರತ್ ಬಚ್ಚೇಗೌಡ, ಸೋಮಶೇಖರ್ ಅವರು ಸೇರಿದಂತೆ ಅನೇಕ ಮುಖಂಡರು ನನಗೆ ಒತ್ತಾಯ ಮಾಡಿದರು. ಕನಕಪುರದಿಂದ ಬಮುಲ್ ಚುನಾವಣೆಗೆ ನಿಂತು ಕಳೆದ 9 ತಿಂಗಳಿನಿಂದ ನಿಮ್ಮ ಸೇವೆ ಮಾಡುತ್ತಿದ್ದೇನೆ. ಒಂದಷ್ಟು ಕಾಲ ವಿಶ್ರಾಂತಿಯಿಂದ ಇರಬೇಕು ಎಂದು ಬಯಸಿದ್ದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.