ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ ಸರ್ಕಾರದಿಂದ ಅಬಕಾರಿ ನೀತಿ ಸುಧಾರಣೆ: ಪ್ರೀಮಿಯಂ ಮದ್ಯದ ದರ ಶೇ.. 20 ರವರೆಗೆ ಇಳಿಕೆ; ಸರ್ಕಾರದ ಕ್ರಮಕ್ಕೆ ಐಎಸ್‌ಡಬ್ಲ್ಯೂಎಐ ಸ್ವಾಗತ

ಸರ್ಕಾರದ ಈ ಹೊಸ ನಿರ್ಧಾರವು ಮದ್ಯದ ಉದ್ಯಮದ ಬೆಳವಣಿಗೆಗೆ ಪೂರಕವಾಗುವುದಲ್ಲದೆ, ರಾಜ್ಯಕ್ಕೆ ದೀರ್ಘಾವಧಿಯ ಆದಾಯ ವೃದ್ಧಿ ಹಾಗೂ ಪಾರದರ್ಶಕ ನಿಯಂತ್ರಣ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಕೆಳವು ದಿನಗಳ ಹಿಂದೆ ಸಂಸ್ಥೆಯು ತೆರಿಗೆ ಪರಿಷ್ಕರಣೆ ಕುರಿತು ಮನವಿ ಸಲ್ಲಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಅಬಕಾರಿ ನೀತಿ ಸುಧಾರಣೆ: ಪ್ರೀಮಿಯಂ ಮದ್ಯದ ದರ ಶೇ.. 20 ರವರೆಗೆ ಇಳಿಕೆ

-

Profile
Ashok Nayak May 18, 2026 8:53 PM

ಬೆಂಗಳೂರು: ಕರ್ನಾಟಕ ಸರ್ಕಾರದ ಪ್ರಸ್ತಾವಿತ ಅಬಕಾರಿ ಸುಧಾರಣಾ ಕ್ರಮಗಳು ಹಾಗೂ ಮದ್ಯದ ಮೇಲಿನ ತೆರಿಗೆ ಕಡಿಮೆಗೊಳಿಸಿರುವ ಪ್ರಕ್ರಿಯೆಯನ್ನು ಭಾರತದ ಪ್ರೀಮಿಯಂ ಮದ್ಯದ ಉದ್ಯಮದ ಪ್ರಬಲ ಧ್ವನಿಯಾಗಿರುವ ಇಂಟರ್ ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿ ಯೇಷನ್ ಆಫ್ ಇಂಡಿಯಾ (ಐಎಸ್‌ಡಬ್ಲ್ಯೂಎಐ) ಮುಕ್ತಕಂಠದಿಂದ ಸ್ವಾಗತಿಸಿದೆ. ಸರ್ಕಾರದ ಈ ನಿರ್ಧಾರವು ರಾಜ್ಯದ ಅಬಕಾರಿ ಚೌಕಟ್ಟನ್ನು ಆಧುನೀಕರಿಸುವ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ಇಟ್ಟ ಅತ್ಯಂತ ಪ್ರಗತಿಪರ ಹೆಜ್ಜೆಯಾಗಿದೆ ಎಂದು ಸಂಸ್ಥೆ ಬಣ್ಣಿಸಿದೆ.

ಸರ್ಕಾರದ ಈ ಹೊಸ ನಿರ್ಧಾರವು ಮದ್ಯದ ಉದ್ಯಮದ ಬೆಳವಣಿಗೆಗೆ ಪೂರಕವಾಗುವುದಲ್ಲದೆ, ರಾಜ್ಯಕ್ಕೆ ದೀರ್ಘಾವಧಿಯ ಆದಾಯ ವೃದ್ಧಿ ಹಾಗೂ ಪಾರದರ್ಶಕ ನಿಯಂತ್ರಣ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಕೆಳವು ದಿನಗಳ ಹಿಂದೆ ಸಂಸ್ಥೆಯು ತೆರಿಗೆ ಪರಿಷ್ಕರಣೆ ಕುರಿತು ಮನವಿ ಸಲ್ಲಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರು ಕಡಿಮೆ ಕುಡಿಯಿರಿ, ಆದರೆ ಉತ್ತಮ ಗುಣಮಟ್ಟದ್ದನ್ನೇ ಕುಡಿಯಿರಿ ಎಂಬ ಪ್ರವೃತ್ತಿಗೆ ಮೊರೆಹೋಗುತ್ತಿದ್ದಾರೆ. ಉತ್ತಮ ಗುಣಮಟ್ಟದ ಪ್ರೀಮಿಯಂ ಉತ್ಪನ್ನಗಳ ಬಳಕೆಯು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಹಾಗೂ ಸರ್ಕಾರದ ಕೋಶೀಯ ಆದಾಯದ ದೃಷ್ಟಿಯಿಂದ ಧನಾತ್ಮಕವಾಗಿದೆ. ಪ್ರಸ್ತುತ ಜಾರಿಗೆ ತರಲಾಗಿರುವ ತೆರಿಗೆ ತರ್ಕಬದ್ಧ ಗೊಳಿಸುವಿಕೆ ಮತ್ತು ಮದ್ಯದ ದರ ಸ್ಲ್ಯಾಬ್‌ಗಳನ್ನು 16 ರಿಂದ 8 ಕ್ಕೆ ಇಳಿಸಿರುವುದು ಅತ್ಯಂತ ಸೂಕ್ತ ನಿರ್ಧಾರವಾಗಿದೆ. ಇದರಿಂದಾಗಿ ಪ್ರೀಮಿಯಂ ಮದ್ಯದ ಎಂಆರ್‌ಪಿ ದರದಲ್ಲಿ ಶೇ. 10 ರಿಂದ ಶೇ. 20 ರಷ್ಟು ಕಡಿತ ಉಂಟಾಗಲಿದ್ದು, ನೆರೆಹೊರೆಯ ರಾಜ್ಯಗಳ ದರಕ್ಕೆ ಹತ್ತಿರವಾಗಲಿದೆ.

ಇದನ್ನೂ ಓದಿ: Liquor price hike: ರಾಜ್ಯದಲ್ಲಿ ನೂತನ ಅಬಕಾರಿ ಸುಂಕ ನೀತಿ ಜಾರಿ; ಕೆಲ ಬ್ರ್ಯಾಂಡ್‌ಗಳ ಮದ್ಯದ ದರ ಭಾರಿ ಹೆಚ್ಚಳ!

"ಮುಂದಿನ ದಿನಗಳಲ್ಲಿ ನೆರೆರಾಜ್ಯಗಳೊಂದಿಗಿನ ಮದ್ಯದ ಬೆಲೆ ವ್ಯತ್ಯಾಸವು ಮತ್ತಷ್ಟು ಕಡಿಮೆ ಯಾಗುವ ನಿರೀಕ್ಷೆಯಿದೆ. ಈ ತೆರಿಗೆ ಪರಿಷ್ಕರಣೆಯಿಂದಾಗಿ ಪ್ರೀಮಿಯಂ ಮತ್ತು ಮಿಡ್ ಪ್ರೀಮಿಯಂ ವಿಭಾಗದ ಗ್ರಾಹಕರಿಗೆ ನೇರ ದರ ಕಡಿತದ ಲಾಭ ಸಿಗಲಿದೆ," ಎಂದು ಸಂಸ್ಥೆ ತಿಳಿಸಿದೆ.

ಬೆಲೆ ನಿಗದಿಯಲ್ಲಿ ಸರ್ಕಾರ ಮುಕ್ತ ಸ್ವಾತಂತ್ರ್ಯ ನೀಡಿರುವುದನ್ನು ಐಎಸ್‌ಡಬ್ಲ್ಯೂಎಐ ಮುಕ್ತ ಕಂಠದಿಂದ ಶ್ಲಾಘಿಸಿದೆ. ಈ ಪ್ರಕ್ರಿಯೆಯು ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಹೆಚ್ಚಿಸುವುದಲ್ಲದೆ, ಬೆಲೆ ನಿರ್ಧಾರದಲ್ಲಿ ಗ್ರಾಹಕರ ಆಯ್ಕೆಯೇ ಪ್ರಮುಖ ಪಾತ್ರ ವಹಿಸುವಂತೆ ಮಾಡುತ್ತದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಇಂತಹ ಸುಧಾರಣೆಗಳು ಉದ್ಯಮದ ಸಂಪೂರ್ಣ ಮೌಲ್ಯ ಸರಪಳಿಯಲ್ಲಿರುವ ಎಲ್ಲಾ ಪಾಲುದಾರರಿಗೆ ಹೆಚ್ಚು ಪರಿಣಾಮಕಾರಿ ಮತ್ತು ಲಾಭದಾಯಕ ಕಾರ್ಯನಿರ್ವಹಣಾ ವಾತಾವರಣವನ್ನು ಸೃಷ್ಟಿಸಲಿವೆ ಎಂದು ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕ ಸರ್ಕಾರದ ಈ ಪ್ರಸ್ತಾವಿತ ಅಬಕಾರಿ ಸುಧಾರಣೆಯು ಭವಿಷ್ಯದ ಮುನ್ನೋಟ ಹೊಂದಿರುವ ಅತ್ಯುತ್ತಮ ಧನಾತ್ಮಕ ನೀತಿಯಾಗಿದೆ. ಇದು ಜವಾಬ್ದಾರಿ ಯುತ ಪ್ರೀಮಿಯಂ ಮದ್ಯದ ಮಾರುಕಟ್ಟೆ ಬೆಳವಣಿಗೆಗೆ ಪೂರಕವಾಗಲಿದ್ದು, ನಿಯಂತ್ರಕ ಸ್ಪಷ್ಟತೆಯನ್ನು ತರಲಿದೆ ಮತ್ತು ರಾಜ್ಯದ ಆದಾಯ ನಿರಂತರವಾಗಿ ವೃದ್ಧಿಸಲು ಮಹತ್ತರ ಕೊಡುಗೆ ನೀಡಲಿದೆ ಎಂದು ಐಎಸ್‌ಡಬ್ಲ್ಯೂಎಐ ಹೇಳಿದೆ.

ಬದಲಾಗಲಿರುವ ಪ್ರಮುಖ ಬ್ರ್ಯಾಂಡ್‌ ಗಳ ಮದ್ಯದ ಪ್ರಾಯೋಗಿಕ ದರಪಟ್ಟಿ ಈ ಕೆಳಗಿನಂತಿದೆ:

ಮೆಕ್‌ಡೊವೆಲ್ಸ್ ನಂ.1 ಬ್ರಾಂಡಿ (180 ಎಂಎಲ್): ₹185 ರಿಂದ ₹175 ಕ್ಕೆ ಇಳಿಕೆ

ಮೆಕ್‌ಡೊವೆಲ್ಸ್ ನಂ.1 ವಿಸ್ಕಿ (180 ಎಂಎಲ್): ₹235 ರಿಂದ ₹215 ಕ್ಕೆ ಇಳಿಕೆ

ಓಕ್ಸ್ಮಿತ್ ಗೋಲ್ಡ್ (180 ಎಂಎಲ್): ₹435 ರಿಂದ ₹345 ಕ್ಕೆ ಇಳಿಕೆ

ಸಿಗ್ನೇಚರ್ ವಿಸ್ಕಿ (180 ಎಂಎಲ್): ₹444 ರಿಂದ ₹350 ಕ್ಕೆ ಇಳಿಕೆ

ಟೀಚರ್ಸ್ 50 (180 ಎಂಎಲ್): ₹835 ರಿಂದ ₹710 ಕ್ಕೆ ಇಳಿಕೆ

ಓಕ್ಸ್ಮಿತ್ ಗೋಲ್ಡ್ (750 ಎಂಎಲ್): ₹1,810 ರಿಂದ ₹1,420 ಕ್ಕೆ ಇಳಿಕೆ

ಟೀಚರ್ಸ್ 50 (750 ಎಂಎಲ್): ₹3,345 ರಿಂದ ₹2,820 ಕ್ಕೆ ಇಳಿಕೆ

ಜಾನಿ ವಾಕರ್ ಬ್ಲ್ಯಾಕ್ ಲೇಬಲ್ (750 ಎಂಎಲ್): ₹5,190 ರಿಂದ ₹4,005 ಕ್ಕೆ ಇಳಿಕೆ

ಜಾನಿ ವಾಕರ್ ಬ್ಲೂ ಲೇಬಲ್ (750 ಎಂಎಲ್): ₹17,390 ರಿಂದ ₹15,500 ಕ್ಕೆ ಇಳಿಕೆ