ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ; 23 ಡಿವೈಎಸ್‌ಪಿಗಳು, 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

Police transfer: ವರ್ಗಾವಣೆಗೊಂಡ ಅಧಿಕಾರಿಗಳನ್ನು ಸಂಬಂಧಪಟ್ಟ ಘಟಕಾಧಿಕಾರಿಗಳು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸಿಕೊಳ್ಳದೇ ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಬೇಕು ಎಂದು ಪೊಲೀಸ್‌ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ. ಯಾರೆಲ್ಲಾ ವರ್ಗಾವಣೆಯಾಗಿದ್ದಾರೆ ಎಂಬ ವಿವರ ಇಲ್ಲಿದೆ.

23 ಡಿವೈಎಸ್‌ಪಿ, 129 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಸಾಂದರ್ಭಿಕ ಚಿತ್ರ -

Prabhakara R
Prabhakara R Feb 11, 2026 9:58 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ ನಡೆದಿದ್ದು, ಆಡಳಿತಾತ್ಮಕ ಹಿತದೃಷ್ಟಿಯಿಂದ ಬರೋಬ್ಬರಿ 23 ಡಿವೈಎಸ್‌ಪಿಗಳು ಮತ್ತು 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ, ಸ್ಥಳ ನಿಯುಕ್ತಿ ಮಾಡಲಾಗಿದೆ. ಸಂಬಂಧಪಟ್ಟ ಘಟಕಾಧಿಕಾರಿಗಳು, ವರ್ಗಾವಣೆಗೊಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸಿಕೊಳ್ಳದೇ ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಲಬುರಗಿಯ ಪಿಟಿಸಿ ನಾಗೇನಹಳ್ಳಿ ಡಿವೈಎಸ್ಪಿಯಾಗಿದ್ದ ರಾಜಣ್ಣ ಡಿ.ಜಿ ಅವರ ಬೀದರ್ ಉಪ ವಿಭಾಗದ ವರ್ಗಾವಣೆ ಆದೇಶ ರದ್ದುಪಡಿಸಿ, ಅಲ್ಲಿಯೇ ಮುಂದುವರಿಸಲಾಗಿದೆ.

ಇನ್ನು ದೂದ್ ಪೀರ್ ಹುಸೇನ್ ಸಾಬ್ ಮುಲ್ಲಾ ಅವರನ್ನು ಗೋಕಾಕ್ ಉಪ ವಿಭಾಗದಿಂದ ಬೀದರ್ ಉಪ ವಿಭಾಗದ ಡಿವೈಎಸ್‌ಪಿಯಾಗಿ, ಗಿರೀಶ್ ಬಿ ಅವರನ್ನು ಕರ್ನಾಟಕ ಲೋಕಾಯುಕ್ತದಿಂದ ಉತ್ತರ ಕನ್ನಡದ ಭಟ್ಕಳ ಉಪ ವಿಭಾಗದ ಡಿವೈಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಮಹೇಶ್.ಎಂ.ಕೆ ಅವರನ್ನು ಭಟ್ಕಳ ಉಪ ವಿಭಾಗದಿಂದ ಸಿಐಡಿಗೆ, ಯು.ಡಿ ಕೃಷ್ಣಕುಮಾರ್ ಅವರನ್ನು ರಾಜ್ಯ ಗುಪ್ತವಾರ್ತೆಯಿಂದ ಶ್ರೀರಂಗಪಟ್ಟಣ ಉಪ ವಿಭಾಗದ ಡಿವೈಎಸ್‌ಪಿಯಾಗಿ, ಪ್ರಭು ಡಿ.ಟಿ ಅವರನ್ನು ಉಡುಪಿ ಉಪ ವಿಭಾಗದಿಂದ ಕಲಬುರಗಿ ನಗರ ಸಂಚಾರ ಉಪ ವಿಭಾಗದ ಡಿವೈಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಯಾದ ಡಿವೈಎಸ್‌ಪಿಗಳ ಪಟ್ಟಿ ಇಲ್ಲಿದೆ

DYSP transfer list

129 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

ಇನ್ನು ರಾಜ್ಯ ಸರ್ಕಾರದಿಂದ 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಸಿಸಿಬಿಯಲ್ಲಿದ್ದ ಶ್ರೀನಿವಾಸ ಜಿ.ಟಿ ಅವರನ್ನು ಬೆಂಗಳೂರಿನ ಮಾಗಡಿ ಪೊಲೀಸ್ ಠಾಣೆಯ ಪಿಐ ಆಗಿ ವರ್ಗಾವಣೆ ಮಾಡಲಾಗಿದೆ. ಗಂಗಾಧರ ಟಿ.ಎಂ ಅವರನ್ನು ಡಿಸಿಆರ್‌ಇಗೆ, ವಿಜಯಕುಮಾರ್.ಆರ್ ಅವರನ್ನು ಬಿಡದಿ ಪೊಲೀಸ್ ಠಾಣೆಗೆ, ಪ್ರಕಾಶ್.ಆರ್ ಅವರನ್ನು ರಾಜ್ಯ ಗುಪ್ತವಾರ್ತೆಯಲ್ಲಿಯೇ ಮುಂದುವರಿಸಲಾಗಿದೆ.

Age Relaxation: ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿಗೆ 5 ವರ್ಷ ವಯೋಮಿತಿ ಸಡಿಲಿಸಿ ಸರ್ಕಾರ ಆದೇಶ

ಕೃಷ್ಣ.ಎಸ್.ಕೆ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ, ಮಾರುತಿ.ಬಿ ಅವರನ್ನು ಬೆಂಗಳೂರು ನಗರದ ವಿವಿಐಪಿ ಭದ್ರತೆಗೆ, ನಂಜೇಗೌಡ.ಎಸ್ ಅವರನ್ನು ಕಗ್ಗಲೀಪುರ ಪೊಲೀಸ್ ಠಾಣೆಗೆ, ವೆಂಕಟೇಶ್.ಕೆ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಯಾದ ಇನ್ಸ್‌ಪೆಕ್ಟರ್‌ಗಳ ಪಟ್ಟಿ ಇಲ್ಲಿದೆ

PI transfer list