ಅತ್ಯಾಧುನಿಕ ಪ್ರಕೃತಿ-ಆಧಾರಿತ ನಗರ ವಿಹಾರ ತಾಣ ಅನಾವರಣಗೊಳಿಸಿದ ವಂಡರ್‌ಲಾ ಹಾಲಿಡೇಸ್ ಸಂಸ್ಥೆ
ಹೊಸ 'ಟೆರಿಯಾ' ಈ ಹಿಂದಿನ ರೆಸಾರ್ಟ್‌ನ ಸಂಪೂರ್ಣ ವಿಕಸನವಾಗಿದೆ: ಅತಿಥಿಗಳಿಗೆ ಸಿಗುವ ಪ್ರತಿ ಯೊಂದು ಸೌಲಭ್ಯ ಮತ್ತು ಅನುಭವವನ್ನು ತಳಮಟ್ಟದಿಂದಲೇ ಸಂಪೂರ್ಣವಾಗಿ ಹೊಸ ರೂಪದಲ್ಲಿ ಮರುಚಿಂತನೆ ಮಾಡಿ ವಿನ್ಯಾಸಗೊಳಿಸಲಾಗಿದೆ. ಸುಮಾರು ಎಂಟು ತಿಂಗಳ ಕಾಲ ನಡೆದ ಈ ನವೀಕರಣ ಕಾರ್ಯಕ್ಕೆ ಸರಿಸುಮಾರು 18 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ.
-
ಹಳೆಯ ವಂಡರ್‌ಲಾ ರೆಸಾರ್ಟ್ ಅನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, 'ಟೆರಿಯಾ ಬೈ ವಂಡರ್‌ಲಾ' ಈಗ ಅರ್ದನ್ ಲಕ್ಸ್ ವಿನ್ಯಾಸ, ಮೂರು ರೀತಿಯ ಆಕರ್ಷಕ ಕೋಣೆಗಳ ಥೀಮ್‌ಗಳು ಮತ್ತು ವಿವಿಧ ಸಮಾರಂಭಗಳಿಗೆ ಬಳಸಬಹುದಾದ ಇವೆಂಟ್ ಸ್ಪೇಸ್‌ಗಳನ್ನು ಬೆಂಗಳೂರಿನಲ್ಲೇ ಒದಗಿಸುತ್ತಿದೆ
ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ವಹಣಾ ಸಂಸ್ಥೆ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್, ಇಂದು ಬೆಂಗಳೂರಿನ ವಂಡರ್‌ಲಾ ಪಾರ್ಕ್ ಪಕ್ಕದಲ್ಲೇ 'ಟೆರಿಯಾ ಬೈ ವಂಡರ್‌ಲಾ' ಎಂಬ ಹೊಸ ರೆಸಾರ್ಟ್ ಅನ್ನು ಪ್ರಾರಂಭಿಸಿದೆ. ಇದು ಪ್ರಕೃತಿ ಮತ್ತು ಭೂಮಿಯಿಂದ ಪ್ರೇರಿತವಾದ ವಿನ್ಯಾಸವನ್ನು ಹೊಂದಿರುವ ಅತ್ಯಾಧುನಿಕ ಅರ್ಬನ್ ರೆಸಾರ್ಟ್ ಆಗಿದೆ. ಈ ರೆಸಾರ್ಟ್, ಈ ಹಿಂದಿನ 'ವಂಡರ್‌ಲಾ ರೆಸಾರ್ಟ್' ಅನ್ನು ಸಂಪೂರ್ಣವಾಗಿ ಮತ್ತು ವ್ಯವಸ್ಥಿತವಾಗಿ ಹೊಸ ರೂಪಕ್ಕೆ ಬದಲಾಯಿಸಿರುವುದನ್ನು ಸೂಚಿಸುತ್ತದೆ. ಹಿಂದಿನ ರೆಸಾರ್ಟ್ ಕೇವಲ ಅನುಕೂಲ ಕ್ಕಾಗಿ ಮತ್ತು ಕಾರ್ಯಕ್ಷಮತೆಗಾಗಿ ಮಾತ್ರ ಸೀಮಿತವಾಗಿದ್ದು, ಮುಖ್ಯವಾಗಿ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಮಾತ್ರ ಬಳಕೆಯಾಗುತ್ತಿತ್ತು.
ಹೊಸ 'ಟೆರಿಯಾ' ಈ ಹಿಂದಿನ ರೆಸಾರ್ಟ್‌ನ ಸಂಪೂರ್ಣ ವಿಕಸನವಾಗಿದೆ: ಅತಿಥಿಗಳಿಗೆ ಸಿಗುವ ಪ್ರತಿಯೊಂದು ಸೌಲಭ್ಯ ಮತ್ತು ಅನುಭವವನ್ನು ತಳಮಟ್ಟದಿಂದಲೇ ಸಂಪೂರ್ಣವಾಗಿ ಹೊಸ ರೂಪದಲ್ಲಿ ಮರುಚಿಂತನೆ ಮಾಡಿ ವಿನ್ಯಾಸಗೊಳಿಸಲಾಗಿದೆ. ಸುಮಾರು ಎಂಟು ತಿಂಗಳ ಕಾಲ ನಡೆದ ಈ ನವೀಕರಣ ಕಾರ್ಯಕ್ಕೆ ಸರಿಸುಮಾರು 18 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಈ ಮೂಲಕ 'ಟೆರಿಯಾ' ಈಗ ಬೆಂಗಳೂರಿನ ಜನರ ಗುಣಮಟ್ಟದ ಮತ್ತು ಸುಲಭವಾಗಿ ಲಭ್ಯ ವಾಗುವಂತಹ 'ಸ್ಟೇಕೇಷನ್' ಬೇಡಿಕೆಯನ್ನು ಪೂರೈಸುವ ಒಂದು ಪ್ರೀಮಿಯಂ ಮತ್ತು ಐಷಾರಾಮಿ ನಗರ ರೆಸಾರ್ಟ್ ಆಗಿ ಹೊರಹೊಮ್ಮಿದೆ.
ಇದನ್ನೂ ಓದಿ: Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ
ಒಂದು ನೋಟದಲ್ಲಿ ಟೆರಿಯಾ ಬೈ ವಂಡರ್‌ಲಾ' ರೆಸಾರ್ಟ್‌ನ ಪ್ರಮುಖ ಮುಖ್ಯಾಂಶಗಳು
● ಬೊಟಾನಿಕ್ ಚಿಕ್, ಅರ್ಬನ್ ಪಾಪ್, ಮತ್ತು ಕೋಸ್ಟಲ್ ಮಾಡರ್ನ್ ಎಂಬ ಮೂರು ವಿಭಿನ್ನ ವಿನ್ಯಾಸಗಳಲ್ಲಿ 84 ಕೊಠಡಿಗಳನ್ನು ಮರುವಿನ್ಯಾಸಗೊಳಿಸಲಾಗಿದೆ. ಪ್ರತಿ ಮಹಡಿಯು ತನ್ನದೇ ಆದ ವಿಶಿಷ್ಟ ದೃಶ್ಯ ವೈಭವ ಮತ್ತು ವಿನ್ಯಾಸದ ಗುರುತನ್ನು ಹೊಂದಿದೆ
● ನವೀಕೃತಗೊಂಡ 'ವುಡ್ಸ್' ಒಂದು ದಿನವಿಡೀ ತೆರೆದಿರುವ ಮಲ್ಟಿ-ಕ್ಯುಸಿನ್ ರೆಸ್ಟೋರೆಂಟ್ ಆಗಿದೆ. ಇದು ಮೆಡಿಟರೇನಿಯನ್ ಶೈಲಿಯ ಕಮಾನುಗಳು, ಲೈವ್ ಕಿಚನ್ ಕೌಂಟರ್, ಯುರೋಪಿಯನ್ ಪೀಠೋಪಕರಣಗಳು ಮತ್ತು ಬಿದಿರಿನ ಆಕರ್ಷಕ ಬೆಳಕಿನ ವ್ಯವಸ್ಥೆಯನ್ನು ಹೊಂದಿದೆ; ಇದರ ಜೊತೆಗೆ ಈಜುಕೊಳದ ಪಕ್ಕದಲ್ಲೇ ವಿಶ್ರಾಂತಿ ನೀಡುವ 'ಬಾರ್ ಬೈ ದಿ ಪೂಲ್' ಸೌಲಭ್ಯವೂ ಇದೆ
● ಎಲ್ಲಾ ಹವಾಮಾನಕ್ಕೂ ಒಗ್ಗುವ ಜಲಕ್ರೀಡೆಗಳು: ಇಲ್ಲಿ ತಾಪಮಾನ ನಿಯಂತ್ರಿತ (ಬಿಸಿ ಮತ್ತು ತಣ್ಣನೆಯ ನೀರು) ಈಜುಕೊಳವಿದೆ. ಅದರೊಂದಿಗೆ 'ಕೆರಿಬಿಯನ್ ವರ್ಲ್' ಎಂಬ ಈ ರೆಸಾರ್ಟ್‌ಗೆ ಮಾತ್ರ ಸೀಮಿತವಾದ ವಿಶೇಷ ವಾಟರ್ ರೈಡ್ ಸೌಲಭ್ಯವೂ ಇದೆ
● ಮದುವೆ ಸಮಾರಂಭಗಳು, ಕಾರ್ಪೊರೇಟ್ ಆಫ್‌ಸೈಟ್‌ಗಳು (ಕಚೇರಿ ಸಭೆಗಳು), ಮೈಸ್ (MICE - ಬೃಹತ್ ಸಮಾವೇಶಗಳು) ಮತ್ತು ಸಾಮಾಜಿಕ ಸಮಾರಂಭಗಳಿಗಾಗಿ ವಿನ್ಯಾಸಗೊಳಿಸಲಾದ ಬಹುಮುಖಿ ಬ್ಯಾಂಕ್ವೆಟ್ ಸಭಾಂಗಣಗಳು ಮತ್ತು ಈವೆಂಟ್ ಮೂಲಸೌಕರ್ಯಗಳು ಇಲ್ಲಿವೆ
● ಬೆಂಗಳೂರಿನ ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಕೇವಲ 300 ಮೀಟರ್‌ಗಳಷ್ಟು ನಡಿಗೆಯ ದೂರದಲ್ಲಿದೆ. ಇದು ಪ್ರವಾಸಿಗರಿಗೆ ಪಾರ್ಕ್‌ನಲ್ಲಿ ಆಟವಾಡಿ, ಸುಲಭವಾಗಿ ರೆಸಾರ್ಟ್‌ಗೆ ಬಂದು ಉಳಿದುಕೊಳ್ಳುವ ಸೌಲಭ್ಯವನ್ನು ಒದಗಿಸುತ್ತದೆ
● ಪರಿಸರ ಸ್ನೇಹಿ ಜೀವನಶೈಲಿಯನ್ನು ಇಲ್ಲಿನ ಪ್ರತಿಯೊಂದು ಹಂತದಲ್ಲೂ ಅಳವಡಿಸಲಾಗಿದೆ - ಗೋಡೆಗಳಿಗೆ ಮಾರ್ಪಡಿಸಿದ ಜೇಡಿಮಣ್ಣಿನ ಪ್ಯಾನಲಿಂಗ್, ಲಾವಾ ಕಲ್ಲಿನ ಮೇಲ್ಮೈಗಳು, ಪರಿಸರ ಸ್ನೇಹಿ ವಾಲ್‌ಪೇಪರ್‌ಗಳು ಮತ್ತು ಈಶಾನ್ಯ ಭಾರತದ ಕುಶಲಕರ್ಮಿಗಳು ಕೈಯಿಂದ ತಯಾರಿಸಿದ ಬಿದಿರಿನ ದೀಪಗಳನ್ನು ಬಳಸಲಾಗಿದೆ
ವಿನ್ಯಾಸದ ತತ್ವ: ಅರ್ಥನ್ ಲಕ್ಸ್
‘ಮ್ಯೂಸ್ ಅಂಡ್ ಆರಾ' ಎಂಬ ವಿನ್ಯಾಸ ಸಂಸ್ಥೆಯಿಂದ ರೂಪಿಸಲ್ಪಟ್ಟ 'ಟೆರಿಯಾ', 'ಅರ್ಥನ್ ಲಕ್ಸ್' ಎಂಬ ವಿನ್ಯಾಸದ ತತ್ವವನ್ನು ಹೊಂದಿದೆ. ಇದು ನೈಸರ್ಗಿಕ ವಸ್ತುಗಳು, ಭೂಪ್ರದೇಶದಿಂದ ಪ್ರೇರಿತ ವಾದ ವಿನ್ಯಾಸಗಳು, ಕಣ್ಣಿಗೆ ಹಿತ ಮತ್ತು ಮನಸ್ಸಿಗೆ ಮುದ ನೀಡುವ ಬಣ್ಣಗಳ ಸಂಯೋಜನೆ ಮತ್ತು ನೈಸರ್ಗಿಕ ಆಕಾರಗಳ ಒಂದು ಅತ್ಯಾಧುನಿಕ ಮಿಶ್ರಣವಾಗಿದೆ. ಇಲ್ಲಿ ಪ್ರಕೃತಿಯನ್ನು ನೇರವಾಗಿ ನಕಲು ಮಾಡುವ ಬದಲು, ಬೆಳಕು ಮತ್ತು ವಸ್ತುಗಳ ಮೂಲಕ ಪ್ರಕೃತಿಯ ಅನುಭವವನ್ನು ಒದಗಿಸಲಾಗಿದೆ. ಇದು ಅತಿಥಿಗಳು ರೆಸಾರ್ಟ್‌ನಲ್ಲಿ ಕಳೆಯುವ ಪ್ರತಿ ಕ್ಷಣದಲ್ಲೂ ಒಂದು ಅದ್ಭುತ ಮತ್ತು ಆಪ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ.
ಬಿಡುಗಡೆ ಸಮಾರಂಭದ ಕುರಿತು ಮಾತನಾಡಿದ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅರುಣ್ ಕೆ. ಚಿಟ್ಟಿಲಪ್ಪಿಲ್ಲಿ, “ವಂಡರ್ ಲಾ ಯಾವಾಗಲೂ ಸಂತೋಷವನ್ನು ಸೃಷ್ಟಿಸುವುದರ ಬಗ್ಗೆ ಗಮನಹರಿಸಿದೆ. ಕಳೆದ 25 ವರ್ಷ ಗಳಲ್ಲಿ ಬೆಂಗಳೂರು, ಕೊಚ್ಚಿ, ಹೈದರಾಬಾದ್, ಭುವನೇಶ್ವರ ಮತ್ತು ಚೆನ್ನೈನಲ್ಲಿರುವ ನಮ್ಮ ಪಾರ್ಕ್ ಗಳು 46 ಮಿಲಿಯನ್‌ಗಿಂತಲೂ ಹೆಚ್ಚು ಅತಿಥಿಗಳಿಗೆ ಆ ಸಂತೋಷವನ್ನು ನೀಡಿವೆ. ಕಳೆದ ಕೆಲವು ವರ್ಷಗಳಿಂದ ನಾವು ಇದರ ಮುಂದಿನ ಹಂತವನ್ನು ನಿರ್ಮಿಸುತ್ತಿದ್ದೇವೆ: ಅದೆಂದರೆ ಪಾರ್ಕ್‌ನ ಗೇಟುಗಳ ಆಚೆಗೂ ಆ ಸಂತೋಷವನ್ನು ವಿಸ್ತರಿಸುವಂತಹ ಒಂದು ಆತಿಥ್ಯ ವ್ಯವಸ್ಥೆ. ವಂಡರ್ ಲಾದ 'ದಿ ಐಲ್' ಆ ದಿಕ್ಕಿನಲ್ಲಿ ನಾವು ಇಟ್ಟ ಮೊದಲ ಹೆಜ್ಜೆಯಾಗಿತ್ತು, ಮತ್ತು 'ಟೆರಿಯಾ' ಆ ದೃಷ್ಟಿಕೋನಕ್ಕೆ ಪೂರಕವಾದ ಮುಂದಿನ ಹಂತವಾಗಿದೆ.
'ದಿ ಐಲ್' ಶಾಂತತೆ ಮತ್ತು ಏಕಾಂತತೆ ಯನ್ನು ನೀಡಿದರೆ, 'ಟೆರಿಯಾ' ಚೈತನ್ಯ, ವಿಶಿಷ್ಟ ವಿನ್ಯಾಸ ಮತ್ತು ನಗರದ ಸುಲಭ ಸಂಪರ್ಕವನ್ನು ಒದಗಿಸುತ್ತದೆ. ಈ ಎರಡೂ ರೆಸಾರ್ಟ್‌ಗಳು ಒಟ್ಟಾಗಿ ಅತಿಥಿಗಳಿಗೆ ಪರಿಪೂರ್ಣ ಅನುಭವವನ್ನು ನೀಡುತ್ತವೆ; ಪಾರ್ಕ್‌ಗಾಗಿ ಇಲ್ಲಿಗೆ ಬನ್ನಿ, ರೆಸಾರ್ಟ್‌ಗಾಗಿ ಇಲ್ಲಿ ಉಳಿಯಿರಿ ಮತ್ತು ಆ ಅದ್ಭುತ ಅನುಭವಕ್ಕಾಗಿ ಮತ್ತೆ ಮತ್ತೆ ಮರಳಿ ಬನ್ನಿ. ಒಂದು ಪರಿಪೂರ್ಣ ಸಮಗ್ರ ಮನೋರಂಜನಾ ತಾಣ ಎಂದರೆ ಹೀಗಿರುತ್ತದೆ ಮತ್ತು ಬೆಂಗಳೂರು ಈಗ ಅಂತಹದೊಂದು ತಾಣವನ್ನು ಹೊಂದಿದೆ. ಭಾರತದಲ್ಲಿ ಇಂತಹ ಹೊಸ ಮಾದರಿಯನ್ನು ಪರಿಚಯಿಸುವಲ್ಲಿ ವಂಡರ್‌ಲಾ ಮುಂಚೂಣಿ ಯಲ್ಲಿರುವುದಕ್ಕೆ ನಮಗೆ ಹೆಮ್ಮೆಯಿದೆ” ಎಂದು ಹೇಳಿದರು.
ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಧೀರನ್ ಚೌಧರಿ “ಟೆರಿಯಾ ನವೀಕರಣದ ಮುಖ್ಯ ಉದ್ದೇಶ ಮೂಲಭೂತ ಸೌಕರ್ಯಗಳನ್ನು ಹಾಗೆಯೇ ಕಾಪಾಡಿಕೊಂಡು, ಅತಿಥಿಗಳಿಗೆ ಸಿಗುವ ಅನುಭವವನ್ನು ಗರಿಷ್ಠಗೊಳಿಸುವುದಾಗಿದೆ.
ನಾವು ಹಳೆಯ ಕಟ್ಟಡದ ವಿನ್ಯಾಸ, ಪೈಪ್‌ಲೈನ್ ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಬದಲಿಸದೆ, ಪೂರ್ಣ 18 ಕೋಟಿ ರೂಪಾಯಿ ಹೂಡಿಕೆಯನ್ನು ಕೇವಲ ಅತಿಥಿಗಳ ಕಣ್ಣಿಗೆ ಕಾಣುವ ಬದಲಾವಣೆಗಳ ಮೇಲೆ - ಅಂದರೆ ಕೊಠಡಿಗಳು, ರೆಸ್ಟೋರೆಂಟ್, ರಿಸೆಪ್ಷನ್ ಮತ್ತು ಹೊರಾಂಗಣ ಮನೋರಂಜನಾ ವಲಯ ಗಳ ಮೇಲೆ ಕೇಂದ್ರೀಕರಿಸಿದ್ದೇವೆ. ತಾಪಮಾನ ನಿಯಂತ್ರಿತ ಈಜುಕೊಳ ಮತ್ತು ಸುಧಾರಿತ ಬ್ಯಾಂಕ್ವೆಟ್ ಸೌಲಭ್ಯಗಳೊಂದಿಗೆ, ಟೆರಿಯಾವನ್ನು ಕುಟುಂಬಗಳು, ಕಾರ್ಪೊರೇಟ್ ಸಭೆಗಳು ಮತ್ತು ಸಂಭ್ರಮದ ಆಚರಣೆಗಳಿಗೆ ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ” ಎಂದು ಹೇಳಿದರು.
ಟೆರಿಯಾ ಬೈ ವಂಡರ್‌ಲಾ' ಈಗ ವಂಡರ್‌ಲಾದ ಬೆಂಗಳೂರು ಕ್ಯಾಂಪಸ್‌ನಲ್ಲಿ ಲಭ್ಯವಿರುವ ಎರಡನೇ ವಿಶಿಷ್ಟ ಆತಿಥ್ಯ ಸೇವೆಯಾಗಿ 'ದಿ ಐಲ್' ಜೊತೆ ಸೇರಿಕೊಂಡಿದೆ. 'ದಿ ಐಲ್' ಒಂದು ಪ್ರಶಾಂತ ವಾದ, ನೀರಿನ ನಡುವಿನ ಪ್ರಕೃತಿ ಕೇಂದ್ರಿತ ತಾಣವಾಗಿದ್ದು, ಮುಖ್ಯವಾಗಿ ದಂಪತಿಗಳು ಮತ್ತು ಐಷಾರಾಮಿ ವಿಶ್ರಾಂತಿ ಬಯಸುವ ಪ್ರವಾಸಿಗರಿಗಾಗಿ ರೂಪಿಸಲಾಗಿದೆ. ಆದರೆ, 'ಟೆರಿಯಾ' ಹೆಚ್ಚು ಚೈತನ್ಯದಾಯಕವಾಗಿದ್ದು, ಕುಟುಂಬಗಳು, ಕಾರ್ಪೊರೇಟ್ ಗುಂಪುಗಳು, ಸಾಮಾಜಿಕ ಕಾರ್ಯಕ್ರಮ ಗಳು ಮತ್ತು 'ಸ್ಟೇಕೇಷನ್' ಪ್ರವಾಸಿಗರಿಗಾಗಿ ವಿನ್ಯಾಸಗೊಳಿಸಲಾದ ಬಹುಮುಖಿ ನಗರ ರೆಸಾರ್ಟ್ ಆಗಿದೆ. ಈ ಎರಡೂ ರೆಸಾರ್ಟ್‌ಗಳು ಪರಸ್ಪರ ಪೈಪೋಟಿ ನೀಡದೆ, ಪ್ರವಾಸಿಗರ ವಿವಿಧ ಮನಸ್ಥಿತಿ ಮತ್ತು ಅಗತ್ಯಗಳಿಗೆ ತಕ್ಕಂತೆ ಪೂರಕವಾದ ಆಯ್ಕೆಗಳನ್ನು ಒದಗಿಸುತ್ತವೆ.
ವಂಡರ್‌ಲಾ ಸಂಸ್ಥೆಯು ಅತಿಥಿಗಳಿಗೆ 'ಟೆರಿಯಾ' ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲು ಮುಂಗಡ ವಾಗಿ ಆನ್‌ಲೈನ್ ಪೋರ್ಟಲ್ ಮೂಲಕ ಅಥವಾ ಈ ಕೆಳಕಂಡ ಸಂಖ್ಯೆಗಳನ್ನು (080 350 73993 | +91 99455 00011) ಸಂಪರ್ಕಿಸುವ ಮೂಲಕ ಬುಕ್ ಮಾಡಲು ಪ್ರೋತ್ಸಾಹಿಸುತ್ತದೆ