ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KV Prabhakar: ನನ್ನ ಪಾಲಿಗೆ ಒದಗಿ ಬಂದದ್ದನ್ನೆಲ್ಲಾ ಒಪ್ಪಿಕೊಳ್ಳುತ್ತಾ ಹೋದೆ: ಕೆ.ವಿ.ಪ್ರಭಾಕರ್

KV Prabhakar: ಪತ್ರಿಕಾ ವೃತ್ತಿಯೇ ನನ್ನ ಪ್ರಪಂಚ. ಪತ್ರಕರ್ತರೇ ನನ್ನ ಒಡನಾಡಿಗಳು. ತಾಳ್ಮೆ, ಸಹನೆಯ ಪಾಸ್‌ವರ್ಡ್ ಮುಖ್ಯಮಂತ್ರಿ ಸಿದ್ದರಾಮಯ್ಯ. ನಾನು ಇವರಿಂದ ಸಹನೆಯನ್ನು ಕಲಿತೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದರು.

ನನ್ನ ಪಾಲಿಗೆ ಒದಗಿ ಬಂದದ್ದನ್ನೆಲ್ಲಾ ಒಪ್ಪಿಕೊಳ್ಳುತ್ತಾ ಹೋದೆ: ಕೆವಿಪಿ

Profile Siddalinga Swamy Aug 20, 2025 6:03 PM

ಬೆಂಗಳೂರು: ಪತ್ರಕರ್ತನಾಗಿ ಸಮಾಜವನ್ನು ಬಿಡಿ-ಬಿಡಿಯಾಗಿ ನೋಡುತ್ತಿದ್ದ ನಾನು ಸಮಾಜವಾದದ ಆಲದ ಮರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗರಡಿಯಲ್ಲಿ ಇಡಿ ಇಡಿಯಾಗಿ ಗ್ರಹಿಸುವುದನ್ನು ಕಲಿತೆ. ಹೀಗಾಗಿ ಇಲ್ಲಿ ನನಗೆ ಸಲ್ಲುವ ಎಲ್ಲಾ ಸನ್ಮಾನ, ಗೌರವಗಳನ್ನು ನಾನು ಆಲದ ಮರಕ್ಕೇ ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ (KV Prabhakar) ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಾಂಧಿ ಭವನದಲ್ಲಿ ಆಯೋಜಿಸಿದ್ದ ʼಪ್ರಭಾಭಿನಂದನಂʼ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.

KV Prabhakar 1

ಹಿಂದುಳಿದ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ನನಗೆ ಬದುಕಿನ ಆಯ್ಕೆಗಳೇ ಇರಲಿಲ್ಲ. ಹೀಗಾಗಿ ನನ್ನ ಪಾಲಿಗೆ ಒದಗಿ ಬಂದಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾ, ಬಂದದ್ದೆಲ್ಲವನ್ನೂ ಬಂದ ಹಾಗೆಯೇ ಸ್ವೀಕರಿಸುತ್ತಾ ಮುಂದೆ ಸಾಗಿ ಈಗ ನಿಮ್ಮ ಮುಂದೆ ಧನ್ಯತೆಯಿಂದ ನಿಂತಿದ್ದೇನೆ. ನಾನು ಸಾಗಿಬಂದ ಹಾದಿಯನ್ನು ಹಿಂದಿರುಗಿ ನೋಡಿದಾಗ ವೃತ್ತಿಪರತೆ ಮತ್ತು ಕರ್ತವ್ಯ ಪ್ರಜ್ಞೆ ಇಲ್ಲಿಯವರೆಗೂ ನನ್ನನ್ನು ಬೆರಳಿಡಿದು ನಡೆಸಿದೆ ಎಂದು ಭಾವಿಸುತ್ತೇನೆ ಎಂದರು.

ನಾನು ಕನ್ನಡಪ್ರಭ ಬಿಟ್ಟು 2013ರಲ್ಲಿ ಮುಖ್ಯಮಂತ್ರಿಗಳ ನೆರಳಿಗೆ ಬಂದೆ. ಪತ್ರಿಕಾ ವೃತ್ತಿಯ ಸಾಧ್ಯತೆಗಳನ್ನೆಲ್ಲಾ ಇಲ್ಲಿ ಪ್ರಯೋಗಿಸುತ್ತಾ ಹೋದೆ. ಆದರೆ, ಪತ್ರಿಕಾ ಕಚೇರಿಯಲ್ಲಿ ಇದ್ದ ಸಮಯದ ಮಿತಿ ಇಲ್ಲದೆ ಇಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇತ್ತು. ಈ ಸಂದರ್ಭದಲ್ಲಿ ಇಡೀ ರಾಜ್ಯದ ಪತ್ರಕರ್ತ ಸಮುದಾಯ ನನ್ನ ಸಹಕಾರ ನೀಡಿದ್ದಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

ನಾನು ಮುಖ್ಯಮಂತ್ರಿಗಳ ಮಾಧ್ಯಮ‌ ಸಂಯೋಜಕ ಆಗಿದ್ದ ಸಂದರ್ಭದಲ್ಲಿ, ಮಾಧ್ಯಮ‌ ಸಲಹೆಗಾರರಾಗಿದ್ದ ದಿನೇಶ್ ಅಮೀನ್ ಮಟ್ಟು ಅವರು ಕೆಲಸ ಕಲಿಯಲು ಕೊಟ್ಟ ಅವಕಾಶ, ನೀಡಿದ ಪ್ರೋತ್ಸಾಹ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಈ ಆತ್ಮವಿಶ್ವಾಸ ಒಂದು ಸಂಗತಿಯನ್ನು ಹಲವು ಕೋನಗಳಿಂದ ಅರ್ಥ ಮಾಡಿಕೊಳ್ಳುವುದನ್ನು ಕಲಿಸಿತು. ಬಿಡುವಿಲ್ಲದ ಪ್ರಯಾಣ, ನಿದ್ದೆ ಇಲ್ಲದ ರಾತ್ರಿಗಳು, ಮನೆ-ಮಕ್ಕಳಿಗೆ ಸಮಯ ಕೊಡಲು ಸಾಧ್ಯವಿಲ್ಲದಾದಾಗ, ರಾಜಕಾರಣ/ಒಳ ರಾಜಕಾರಣ ಕೆಲವೊಮ್ಮೆ ನನ್ನ ಆತ್ಮವಿಶ್ವಾಸವನ್ನು ಅಲ್ಲಾಡಿಸಿ ಪತ್ರಿಕೆ ಕೆಲಸ ಬಿಟ್ಟು ತಪ್ಪು ಮಾಡಿದ್ನಾ ಅಂತಲೂ ಅನ್ನಿಸಿದ್ದಿದೆ. ಇಂಥಾ ಘಳಿಗೆಗಳಲ್ಲಿ ಮುಖ್ಯಮಂತ್ರಿಗಳೇ ದಿನಕ್ಕೆ 16-18 ಗಂಟೆ ಕೆಲಸ ಮಾಡುವಾಗ ಅದರ ಮುಂದೆ ನನ್ನದೇನು ಎಂದುಕೊಂಡು ಮತ್ತೆ ಚಾರ್ಜ್ ಆಗುತ್ತಿದ್ದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Karnataka Assembly Session: ಪುನರ್ವಸತಿ ಕಾರ್ಯಕರ್ತರ ಗೌರವಧನ 1,000 ರೂ. ಹೆಚ್ಚಳ: ಲಕ್ಷ್ಮಿ ಹೆಬ್ಬಾಳ್ಕರ್‌

ಹಿರಿಯ ಲೇಖಕ, ಪತ್ರಕರ್ತ ಜಿ.ಎನ್. ಮೋಹನ್ ಕಾರ್ಯ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರನ್ನೂ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೆ.ಯು.ಡಬ್ಲ್ಯೂ.ಜೆ. ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.