ಮಾನಸಿಕ ಆರೋಗ್ಯ ಕಳವಳಕ್ಕೆ ಮಾದಕ ವಸ್ತುಗಳ ಬಳಕೆ ಕಾರಣ: ಎಂಪವರ್
ಬೆಂಗಳೂರಿನಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಕಳವಳಗಳು ವೇಗದ ನಗರ ಜೀವನ ಶೈಲಿಯ ಒತ್ತಡಗಳನ್ನು ಪ್ರತಿಬಿಂಬಿಸುತ್ತಿವೆ. ಆತಂಕ ಮತ್ತು ಭಯ ಮತ್ತು ಆತಂಕದ(ಪ್ಯಾನಿಕ್) ಅಸ್ವಸ್ಥತೆಗಳು ಪ್ರಚಲಿತದಲ್ಲಿವೆ, ಇವು ಹೆಚ್ಚಾಗಿ ಶೈಕ್ಷಣಿಕ, ವೃತ್ತಿ ಮತ್ತು ಸಾಮಾಜಿಕ ಒತ್ತಡಗಳಿಂದ ಪ್ರಚೋದಿಸಲ್ಪಡು ತ್ತವೆ. ಮಾನಸಿಕ ಖಿನ್ನತೆಯು ಸಹ ಸಾಮಾನ್ಯವಾಗಿದೆ.

-

ಬೆಂಗಳೂರು: ಆದಿತ್ಯ ಬಿರ್ಲಾ ಎಜುಕೇಶನ್ ಟ್ರಸ್ಟ್‌ನ ಉಪಕ್ರಮವಾದ ಎಂಪವರ್‌ನ ಹೊಸ ಒಳನೋಟ ಅಥವಾ ಸಂಶೋಧನೆಯ ಪ್ರಕಾರ, ಭಾರತದಲ್ಲಿ ಯುವಜನರ ಮಾನಸಿಕ ಆರೋಗ್ಯವು ಹೆಚ್ಚಿನ ಒತ್ತಡ ಅನುಭವಿಸುತ್ತಿದೆ. 2022 ಮತ್ತು 2025ರ ನಡುವೆ, ಎಂಪವರ್ ತನ್ನ ಬೆಂಗಳೂರು ಮೂಲದ ಕೇಂದ್ರಗಳು, ಸಹಾಯವಾಣಿಗಳು ಮತ್ತು ಕ್ಯಾಂಪಸ್ ಜಾಗೃತಿ ಚಟುವಟಿಕೆಗಳ(ಔಟ್ ರೀಚ್) ಕಾರ್ಯಕ್ರಮಗಳ ಮೂಲಕ 18–25 ವರ್ಷ ವಯಸ್ಸಿನ 15,400ಕ್ಕಿಂತ ಹೆಚ್ಚಿನ ಯುವಕ ರೊಂದಿಗೆ ತೊಡಗಿಸಿಕೊಂಡಿದೆ. ಅಲ್ಲದೆ ಅದು, ತನ್ನ ಕೇಂದ್ರಗಳು, ಸಹಾಯವಾಣಿಗಳು ಮತ್ತು ಕ್ಯಾಂಪಸ್ ಉಪಕ್ರಮಗಳ ಮೂಲಕ ದೇಶಾದ್ಯಂತ 5,27,000ಕ್ಕಿಂತ ಹೆಚ್ಚಿನ ಯುವಜನರನ್ನು ತಲುಪಿದೆ.
ಬೆಂಗಳೂರಿನಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಕಳವಳಗಳು ವೇಗದ ನಗರ ಜೀವನ ಶೈಲಿಯ ಒತ್ತಡಗಳನ್ನು ಪ್ರತಿಬಿಂಬಿಸುತ್ತಿವೆ. ಆತಂಕ ಮತ್ತು ಭಯ ಮತ್ತು ಆತಂಕದ(ಪ್ಯಾನಿಕ್) ಅಸ್ವಸ್ಥತೆಗಳು ಪ್ರಚಲಿತದಲ್ಲಿವೆ, ಇವು ಹೆಚ್ಚಾಗಿ ಶೈಕ್ಷಣಿಕ, ವೃತ್ತಿ ಮತ್ತು ಸಾಮಾಜಿಕ ಒತ್ತಡಗಳಿಂದ ಪ್ರಚೋದಿಸಲ್ಪಡುತ್ತವೆ. ಮಾನಸಿಕ ಖಿನ್ನತೆಯು ಸಹ ಸಾಮಾನ್ಯವಾಗಿದೆ. ವಿಶೇಷವಾಗಿ ವಿದ್ಯಾರ್ಥಿ ಗಳು ಮತ್ತು ಯುವ ವೃತ್ತಿಪರರಲ್ಲಿ ಇದೇ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಸಂಬಂಧಗಳಲ್ಲಿ ಒಡಕುಗಳು, ವಿಚ್ಛೇದನಗಳು ಮತ್ತು ಅಸ್ಪಷ್ಟ ಸ್ನೇಹಗಳು ಸೇರಿದಂತೆ, ಯುವ ವಯಸ್ಕರಲ್ಲಿ ಇದು ವ್ಯಾಪಕವಾಗುತ್ತಿದೆ. ಹೆಚ್ಚುವರಿಯಾಗಿ, ಇದರ ನೇರ ಪರಿಣಾಮ ಎಂಬಂತೆ, ಹದಿಹರೆಯದವರು, ಯುವಕರು ಮತ್ತು ಮಧ್ಯವಯಸ್ಕ ಜನರಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ, ಒತ್ತಡದ ಅವಧಿಯಲ್ಲಿ ಪುರುಷರಲ್ಲಿ ಈ ದುರಾಭ್ಯಾಸಗಳು ಸ್ವಲ್ಪ ಹೆಚ್ಚಿನ ಪರಿಣಾಮ ಬೀರುತ್ತಿವೆ.
ಇದನ್ನೂ ಓದಿ: Bangalore News: ಹಬ್ಬಗಳ ಸಂದರ್ಭದ ಸೊನಾಟಾ ಸಂಗ್ರಹ ತಂದಿದೆ ಹೊಳಪು, ಸೂಕ್ತ ವಿನ್ಯಾಸ
ದಿನೇದಿನೆ ಬೆಳೆಯುತ್ತಿರುವ ಈ ಗುರುತರ ಸವಾಲಿಗೆ ಸ್ಪಂದಿಸಲು, ಎಂಪವರ್ 12 ರಾಜ್ಯಗಳ 50 ಕಾಲೇಜುಗಳಲ್ಲಿ ರಾಷ್ಟ್ರವ್ಯಾಪಿ ಅಭಿಯಾನ ಆಯೋಜಿಸಿತ್ತು. ವಿದ್ಯಾರ್ಥಿಗಳು ತಮ್ಮ ಮಾನಸಿಕ ಆರೋಗ್ಯವನ್ನು ಮುಕ್ತವಾಗಿ ಚರ್ಚಿಸಲು ಮತ್ತು ಪರಿಹರಿಸಲು ಸುರಕ್ಷಿತ ಸ್ಥಳಗಳನ್ನು ಸೃಷ್ಟಿಸಿತು. ಬೆಂಗಳೂರಿನ ಕೆ.ಆರ್. ಪುರಂನಲ್ಲಿ ನಡೆದ "ಆರ್ಟ್ ಆಫ್ ಲೆಟ್ಟಿಂಗ್ ಗೋ" ಬಲೂನ್ ಚಟುವಟಿಕೆ ಯಂತಹ ಸಾಂಕೇತಿಕ ವ್ಯಾಯಾಮಗಳು ಈ ಚಟುವಟಿಕೆಗಳಲ್ಲಿ ಸೇರಿವೆ. ಅಲ್ಲಿ ವಿದ್ಯಾರ್ಥಿಗಳು ತಮ್ಮ ಚಿಂತೆಗಳನ್ನು ಹೊತ್ತ ಬಲೂನ್‌ಗಳನ್ನು ಹಾರಿಸಿದರು. ಜೊತೆಗೆ ಸಹಪಾಠಿಗಳ ನೇತೃತ್ವದ ಕಾರ್ಯಾಗಾರಗಳು ಮತ್ತು ಸಂವಾದ, ಅಭಿವ್ಯಕ್ತಿ ಮತ್ತು ಮಾನಸಿಕ ಸಮಸ್ಯೆಗಳನ್ನು ಗುಣಪಡಿಸಲು ಅಗತ್ಯವಾದ ಪ್ರೋತ್ಸಾಹಕ ಸಂವಾದಾತ್ಮಕ ಕಲಾಪಗಳು ಅದರಲ್ಲಿ ಸೇರಿದ್ದವು.
ರಾಷ್ಟ್ರೀಯ ಮಟ್ಟದಲ್ಲಿ ಎದುರಾಗುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸಿದಾಗ, ಈ ತುರ್ತು ಪರಿಸ್ಥಿತಿ ಇನ್ನಷ್ಟು ಸ್ಪಷ್ಟವಾಗುತ್ತದೆ. ಎನ್‌ಸಿಆರ್‌ಬಿ ದತ್ತಾಂಶವು, ಭಾರತದ ಯುವ ಸಮುದಾಯದಲ್ಲಿ ಸಂಭವಿಸುತ್ತಿರುವ ಆತ್ಮಹತ್ಯೆಯು ಸಾವಿಗೆ ಪ್ರಮುಖ ಕಾರಣವಾಗಿ ಉಳಿದಿದೆ ಎಂದು ತೋರಿಸುತ್ತದೆ, 2013 ಮತ್ತು 2023ರ ನಡುವೆ ಆತ್ಮಹತ್ಯೆಯು 65%ರಷ್ಟು ಹೆಚ್ಚಾಗಿದೆ. ಭಾರತದಲ್ಲಿ 250 ದಶಲಕ್ಷಕ್ಕಿಂತಲೂ ಹೆಚ್ಚಿನ ಯುವಕರಿಗೆ ಕಳಂಕ ಮುಕ್ತ, ಸುಲಭವಾಗಿ ಪ್ರವೇಶಿಸ ಬಹುದಾದ ಮತ್ತು ಸಮಗ್ರ ಮಾನಸಿಕ ಆರೋಗ್ಯ ಬೆಂಬಲ ನೀಡುವ ಅಗತ್ಯವನ್ನು ವಿಳಂಬ ಮಾಡಲು ಸಾಧ್ಯವಿಲ್ಲ ಎಂದು ಎನ್‌ಸಿಆರ್‌ಬಿ ವರದಿ ತಿಳಿಸಿದೆ.
ಎಬಿಇಟಿ ಎಂಪವರ್ ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಶ್ರೀಮತಿ ನೀರ್ಜಾ ಬಿರ್ಲಾ ಮಾತನಾಡಿ, "ಭಾರತದ ಯುವಕರು ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ, ಆದರೆ ಅನೇಕರು ಮೌನವಾಗಿ ಹೋರಾಡುತ್ತಿದ್ದಾರೆ, ಇದನ್ನು ಪರಿಹರಿಸುವುದು ಒಂದು ಸಮಾಜವಾಗಿ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಶಾಲೆಗಳಲ್ಲಿ ಆರಂಭಿಕ ಮಧ್ಯಸ್ಥಿಕೆಗಳು, ಶಿಕ್ಷಕರನ್ನು ಸಬಲೀಕರಣ ಗೊಳಿಸುವುದು ಮತ್ತು ಗೆಳೆಯರ ಜಾಲಗಳನ್ನು ಬಲಪಡಿಸುವುದು ಮತ್ತು ಸಮಾಲೋಚನೆ ಬೆಂಬಲದ ಮೂಲಕ ಸಾಧಿಸಲಾದ ಸದೃಢವಾದ, ಮಾನಸಿಕವಾಗಿ ಬಲಿಷ್ಠ ಮತ್ತು ಭಾವನಾತ್ಮಕ ವಾಗಿ ಸಮತೋಲಿತ ಪೀಳಿಗೆಯನ್ನು ಪೋಷಿಸುವುದು ನಮ್ಮ ಸ್ವಸ್ಥ ಯುವ ಭಾರತದ ದೃಷ್ಟಿಕೋನ ವಾಗಿದೆ. ಎಂಪವರ್ ನಲ್ಲಿ, ನಾವು ಶಿಕ್ಷಣ ಸಂಸ್ಥೆಗಳೊಂದಿಗೆ ಆರಂಭಿಕ ಮಧ್ಯಸ್ಥಿಕೆ ಕಾರ್ಯಕ್ರಮ ಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಯುವಜನರು ಕೇಳಿಸಿಕೊಂಡ ಮತ್ತು ಸಬಲೀಕರಣಗೊಂಡಿರುವ ಸುರಕ್ಷಿತ ಸ್ಥಳಗಳನ್ನು ಸೃಷ್ಟಿಸಲು ಸಮುದಾಯಗಳಲ್ಲಿ ಮಾನಸಿಕ ಆರೋಗ್ಯ ಸಾಕ್ಷರತೆಯನ್ನು ಉತ್ತೇಜಿಸುತ್ತಿದ್ದೇವೆ. ಈ ವಿಶ್ವ ಮಾನಸಿಕ ಆರೋಗ್ಯ ದಿನದಂದು, ಜಾಗೃತಿಯಿಂದ ಕ್ರಿಯೆಗೆ ಚಲಿಸುವ ಮತ್ತು ಸಹಾಯವನ್ನು ಸಾಮಾನ್ಯೀಕರಿಸುವ ಸಮಯ ಬಂದಿದೆ" ಎಂದರು.
ಶೈಕ್ಷಣಿಕ ಕ್ಯಾಂಪಸ್‌ಗಳನ್ನು ಮೀರಿ, ಎಂಪವರ್ ತನ್ನ ಉಪಕ್ರಮಗಳನ್ನು ಉದ್ಯೋಗ(ಕೆಲಸ) ಸ್ಥಳಗಳು ಮತ್ತು ಸಮುದಾಯಗಳಿಗೂ ವಿಸ್ತರಿಸುವುದನ್ನು ಮುಂದುವರೆಸಿದೆ. ಕಾರ್ಪೊರೇಟ್ ಮಾನಸಿಕ ಆರೋಗ್ಯ ಪ್ರತಿಜ್ಞೆಯು ಮಾನಸಿಕ ಆರೋಗ್ಯವನ್ನು ಕೆಲಸದ ಸ್ಥಳ ಸಂಸ್ಕೃತಿಯಲ್ಲಿ ಅಳವಡಿಸುವಲ್ಲಿ ರಾಷ್ಟ್ರವ್ಯಾಪಿ ಸಂಘಟನೆಗಳನ್ನು ಒಂದುಗೂಡಿಸಿದೆ, ಆದರೆ ಮಾನವ ಗ್ರಂಥಾ ಲಯ ಉಪಕ್ರಮವು ಹದಿಹರೆಯದವರು ಮತ್ತು ಯುವ ವಯಸ್ಕರಿಗೆ ಆತಂಕ, ಬೆದರಿಕೆ ಮತ್ತು ಹೊಂದಾಣಿಕೆಯ ಜೀವಂತ ಅನುಭವಗಳನ್ನು ಹಂಚಿಕೊಳ್ಳಲು, ಸಹಾನುಭೂತಿಯನ್ನು ಬೆಳೆಸಲು, ಕಳಂಕವನ್ನು ಕಡಿಮೆ ಮಾಡಲು ಮತ್ತು ಪ್ರಾಯೋಗಿಕವಾಗಿ ನಿಭಾಯಿಸುವ ಕಾರ್ಯತಂತ್ರ ಗಳೊಂದಿಗೆ ಗೆಳೆಯರನ್ನು ಸಜ್ಜುಗೊಳಿಸಲು ಅನುವು ಮಾಡಿಕೊಡುತ್ತದೆ.
ತಕ್ಷಣದ, ಗೌಪ್ಯ ಬೆಂಬಲದ ಅಗತ್ಯವಿರುವವರಿಗೆ, ಎಂಪವರ್‌ನ “1on1” ಮಾನಸಿಕ ಆರೋಗ್ಯ ಸಹಾಯವಾಣಿ 1800-120-820050 ನಲ್ಲಿ ದಿನದ 24 ತಾಸು(24/7) ಲಭ್ಯವಿದೆ.