ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್2 ನಲ್ಲಿ ಮಿಟ್ಟಿ ಕೆಫೆಯ ಹೊಸ ಶಾಖೆ ಪ್ರಾರಂಭ
ವಿಶೇಷ ಚೇತನರಿಗೆ ಅವಕಾಶಗಳು ಸಿಗುತ್ತವೆಯಾದರೂ ಅತಿ ಕಡಿಮೆ. ಹೀಗಾಗಿ ವಿಶೇಷ ಚೇತನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಈ ಕೆಫೆ ಪ್ರಾರಂಭಿಸಿದ್ದು, ಇಲ್ಲಿ ಕಾರ್ಯ ನಿರ್ವಹಿಸುವ ಅಡುಗೆ ತಯಾರಿಕರಿಂದ ಹಿಡಿದು, ಕ್ಲೀನಿಂಗ್, ಕ್ಯಾಶಿಯರ್ ಸಹ ವಿಶೇಷ ಚೇತನರೇ ಆಗಿರುತ್ತಾರೆ. ಈಗಾಗಲೇ ಟರ್ಮಿನಲ್ ೧ರಲ್ಲಿ ಮಿಟ್ಟಿ ಕೆಫೆ ತೆರೆದಿದ್ದು, ಸಾಕಷ್ಟು ವಿಶೇಷಚೇತನರು ಕೆಲಸ ಪಡೆದಿದ್ದಾರೆ.

-

ಬೆಂಗಳೂರು: ವಿಶೇಷ ಚೇತನರಿಗಾಗಿ ಉದ್ಯೋಗ ಅವಕಾಶ ಸೃಷ್ಟಿಸುತ್ತಿರುವ ಮಿಟ್ಟಿ ಕೆಫೆ ಇದೀಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2ನಲ್ಲಿ ನೂತನ ಶಾಖೆ ತೆರೆದಿದೆ.
ನೂತನ ಶಾಖೆ ಉದ್ಘಾಟಿಸಿ ಮಾತನಾಡಿದ ಬಿಐಎಎಲ್‌ನ ಎಂಡಿ ಮತ್ತು ಸಿಇಒ ಹರಿ ಮರಾರ್, ವಿಶೇಷ ಚೇತನರಿಗೆ ಅವಕಾಶಗಳು ಸಿಗುತ್ತವೆಯಾದರೂ ಅತಿ ಕಡಿಮೆ. ಹೀಗಾಗಿ ವಿಶೇಷ ಚೇತನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಈ ಕೆಫೆ ಪ್ರಾರಂಭಿಸಿದ್ದು, ಇಲ್ಲಿ ಕಾರ್ಯ ನಿರ್ವಹಿಸುವ ಅಡುಗೆ ತಯಾರಿಕರಿಂದ ಹಿಡಿದು, ಕ್ಲೀನಿಂಗ್, ಕ್ಯಾಶಿಯರ್ ಸಹ ವಿಶೇಷ ಚೇತನರೇ ಆಗಿರುತ್ತಾರೆ. ಈಗಾಗಲೇ ಟರ್ಮಿನಲ್ ೧ರಲ್ಲಿ ಮಿಟ್ಟಿ ಕೆಫೆ ತೆರೆದಿದ್ದು, ಸಾಕಷ್ಟು ವಿಶೇಷಚೇತನರು ಕೆಲಸ ಪಡೆದಿದ್ದಾರೆ. ಇದೀಗ ಈ ಕೆಫೆಯ ಮತ್ತೊಂದು ಶಾಖೆಯನ್ನು ಟರ್ಮಿನಲ್‌೨ನಲ್ಲಿ ತೆರೆದಿದ್ದಾರೆ. ಇದಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವತಿಯಿಂದ ಸಂಪೂರ್ಣ ಸಹಕಾರ ವಿದೆ. ಈ ನೂತನ ಕೆಫೆಯನ್ನು ಬಜಾಬ್ ಫಿನ್‌ಸರ್ವ್ ಹಾಗೂ ಝೆಸ್ಕೇಲರ್ ಸಂಸ್ಥೆಗಳು ಸಹಯೋಗ ದಲ್ಲಿ ತಮ್ಮ ಸಿಎಸ್‌ಆರ್ ಅಡಿಯಲ್ಲಿ ಸಹಕಾರದೊಂದಿಗೆ ತೆರೆಯಲಾಗಿದೆ.
ವಿಮಾನ ನಿಲ್ದಾಣಗಳು ಎಲ್ಲರನ್ನೂ ಸಬಲೀಕರಣಗೊಳಿಸುವ ಸಾಮರ್ಥ್ಯ ಹೊಂದಿರುವ ಸ್ಥಳವಾಗಿ ಕಾರ್ಯನಿರ್ವಹಿಸಬೇಕು ಎಂದು ಭಾವಿಸುತ್ತೇನೆ. ಟರ್ಮಿನಲ್ 2 ರಲ್ಲಿ ಮಿಟ್ಟಿ ಕೆಫೆಯ ಹೊಸ ಶಾಖೆಯನ್ನು ಪ್ರಾರಂಭಿಸಲು ಅನುವು ಮಾಡಿಕೊಡುವ ಅವಕಾಶ ಸಿಕ್ಕಿದೆ. ವಿಶೇಷಚೇತನ ವ್ಯಕ್ತಿಗಳೂ ಸ್ವಾಭಿಮಾನಿಯಾಗಿ ಜೀವಿಸುವ ಹಕ್ಕು ಹೊಂದಿರುತ್ತಾರೆ, ಅವರಿಗೂ ಉದ್ಯೋಗಾವಕಾಶ ಕಲ್ಪಿಸಿಕೊಡುವ ಉತ್ತಮ ಕೆಲಸವನ್ನು ಮಿಟ್ಟಿ ಕೆಫೆ ಮಾಡುತ್ತಿರುವುದು ಶ್ಲಾಘನೀಯ, ಅವರ ಈ ಹೆಜ್ಜೆಗೆ ನಮ್ಮ ಸಹಕಾರ ಸದಾ ಇರಲಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮಿಟ್ಟಿ ಕೆಫೆಯ ಸಂಸ್ಥಾಪಕಿ ಸಿಇಒ ಅಲೀನಾ ಆಲಮ್ ಅವರು ಮಾತನಾಡಿ, “ರಾಷ್ಟ್ರಪತಿ ಭವನ, ಭಾರತದ ಸುಪ್ರೀಂ ಕೋರ್ಟ್ ಮತ್ತು ಲಕ್ನೋ ವಿಮಾನ ನಿಲ್ದಾಣದಂತಹ ಪ್ರತಿಷ್ಠಿತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಿಟ್ಟಿ ಕೆಫೆ, 11 ದಶಲಕ್ಷಕ್ಕಿಂತ ಹೆಚ್ಚು ಜನರಿಗೆ ಆಹಾರ ಉಣಬಡಿಸು ತ್ತಿದೆ. 6,500 ಕ್ಕೂ ಹೆಚ್ಚು ವಿಶೇಷ ಚೇತನರು ಈ ಮಿಟ್ಟಿ ಕೆಫೆಯಿಂದ ಉದ್ಯೋಗ ಪಡೆದುಕೊಂಡು ತನ್ನ ಜೀವನ ನಡೆಸುತ್ತಿದ್ದಾರೆ. ಈ ಸಂಸ್ಥೆಯು ಭಾರತದ ರಾಷ್ಟ್ರಪತಿಗಳಿಂದ ವಿಶೇಚೇತನರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ, ಫೋರ್ಬ್ಸ್, ವಿಶ್ವಸಂಸ್ಥೆ, ನೀತಿ ಆಯೋಗ, ಯುನೆಸ್ಕೋ ಮತ್ತು ಇತರರಿಂದ ಮಾನ್ಯತೆ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದೆ. ಮುಂದಿನ ದಿನಗಳಲ್ಲಿ ಇಂತಹ ಹಲವು ಕೆಫೆ ತೆರೆಯುವುದು ನಮ್ಮ ಉದ್ದೇಶ ಎಂದು ಹೇಳಿದರು.