ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂಚಾರ ನಿರ್ವಹಣೆಗೆ (ಟ್ರಾಫಿಕ್ ಮ್ಯಾನೇಜ್ಮೆಂಟ್) ಇರುವೆಗಳ ಮಾರ್ಗದರ್ಶನ ಅಥವಾ ಟ್ರಾಫಿಕ್ ಜಾಮ್ ಸಮಸ್ಯೆಗೆ ಇರುವೆಗಳ ರೂಲ್ಸ್‌!

ಇರುವೆಗಳ ಸ್ವಭಾವ ಹಾಗೂ ವರ್ತನೆಯು ಕೆಲವೊಮ್ಮೆ ಮನುಷ್ಯರಿಗೆ ನಡವಳಿಕೆಯ ಪಾಠವನ್ನು ಹೇಳಿಕೊಡುತ್ತದೆ. ಅಂದಹಾಗೆ, ಆಹಾರ ಅರಸಿ ಹೊರಡುವ ಇರುವೆಗಳ ಸಂಚಾರಕ್ಕೆ ಅಥವಾ ಅವುಗಳ ಸುದೀರ್ಘ ಚಲನೆಗೆ ಅಡ್ಡಿಯಾಗಿರುವುದನ್ನು ನೀವೂ ಎಂದಾದರೂ ಕಂಡಿದ್ದೀರಾ. ಇರುವೆಗಳು ಒಂದರ ಹಿಂದೆ ಒಂದರಂತೆ ಬಹುದೂರ ಕ್ರಮಿಸುವ ಹಾಗೂ ನಮ್ಮಂತೆಯೇ (ಮನುಷ್ಯರಂತೆ) ದ್ವಿಮುಖ ಸಂಚಾರ ವನ್ನೂ ಅನುಸರಿಸುತ್ತವೆ.

ಟ್ರಾಫಿಕ್ ಜಾಮ್ ಸಮಸ್ಯೆಗೆ ಇರುವೆಗಳ ರೂಲ್ಸ್‌!

-

Ashok Nayak Ashok Nayak Oct 10, 2025 12:53 AM

ಹಾಗೆ ಕಲ್ಪಿಸಿಕೊಳ್ಳಿ.. ನಗರದ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಪೊಲೀಸರು ಇಲ್ಲದಿದ್ದರೆ ಅಥವಾ ಸಿಗ್ನಲ್ ಹಾಳಾಗಿದ್ದರೆ ಕೆಲವೇ ಕ್ಷಣಗಳಲ್ಲಿ ಹತ್ತಾರು ವಾಹನಗಳು ಒಮ್ಮೆಲೆ ನುಗ್ಗಿ ಟ್ರಾಫಿಕ್ ಜಾಮ್ (ಸಂಚಾರಿ ದಟ್ಟಣೆ) ಉಂಟಾಗುವುದು ಸಾಮಾನ್ಯ. ಆದರೆ ಆಹಾರ ಹುಡುಕಲು ಒಟ್ಟಿಗೆ ಹೊರಡುವ ನೂರಾರು ಇರುವೆಗಳಿಗೆ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುವುದಿಲ್ಲವೇ? ಇಂತಹದೊಂದು ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ.

ಇರುವೆಗಳ ಸ್ವಭಾವ ಹಾಗೂ ವರ್ತನೆಯು ಕೆಲವೊಮ್ಮೆ ಮನುಷ್ಯರಿಗೆ ನಡವಳಿಕೆಯ ಪಾಠವನ್ನು ಹೇಳಿಕೊಡುತ್ತದೆ. ಅಂದಹಾಗೆ, ಆಹಾರ ಅರಸಿ ಹೊರಡುವ ಇರುವೆಗಳ ಸಂಚಾರಕ್ಕೆ ಅಥವಾ ಅವುಗಳ ಸುದೀರ್ಘ ಚಲನೆಗೆ ಅಡ್ಡಿಯಾಗಿರುವುದನ್ನು ನೀವೂ ಎಂದಾದರೂ ಕಂಡಿದ್ದೀರಾ. ಇರುವೆಗಳು ಒಂದರ ಹಿಂದೆ ಒಂದರಂತೆ ಬಹುದೂರ ಕ್ರಮಿಸುವ ಹಾಗೂ ನಮ್ಮಂತೆಯೇ (ಮನುಷ್ಯರಂತೆ) ದ್ವಿಮುಖ ಸಂಚಾರವನ್ನೂ ಅನುಸರಿಸುತ್ತವೆ. ಆದರೆ ಎಂದಿಗೂ ಮನುಷ್ಯರಂತೆ ದಟ್ಟಣೆಯಲ್ಲಿ ಸಿಲುಕುವುದಿಲ್ಲ, ಬದಲಿಗೆ ಸಂಚಾರ ದಟ್ಟಣೆಯನ್ನು ನಿರ್ವಹಿಸುವಲ್ಲಿ ಇರುವೆಗಳು ನಿಪುಣರು ಎಂಬುದು ಮಾತ್ರ ಸ್ಪಷ್ಟವಾಗಿದೆ. ಇರುವೆಗಳು ದಟ್ಟಣೆಯನ್ನು ಸುಲಭವಾಗಿ ನ್ಯಾವಿಗೇಟ್ ಮಾಡುತ್ತವೆ. ಟ್ರಾಫಿಕ್‌ ಜಾಮ್ ಅಥವಾ ಸಂಚಾರಿ ದಟ್ಟಣೆಯನ್ನು ನಿರ್ವಹಿಸಲು ನಾವು ಇರುವೆಗಳಿಂದ ತಿಳಿಯಬಹುದಾದ ಪಾಠವೇನು? ಇಷ್ಟಕ್ಕೂ ಇದರ ಹಿಂದಿರುವ ವೈಜ್ಞಾನಿಕ ಗುಟ್ಟು ಏನು? ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ..

ಇದನ್ನೂ ಓದಿ: ‌Ravi Sajangadde Column: ದೇಶಕ್ಕಾಗಿಯೇ ಬಾಳಿದ ಸಂಘ ದಕ್ಷ ಪ್ರೊಫೆಸರ್

ಇರುವೆಗಳ ಸ್ವಾರ್ಥವಿಲ್ಲದ ವರ್ತನೆ

ನಿಮಗೆ ಆಶ್ಚರ್ಯವಾಗಬಹುದು!, ಇರುವೆಗಳ "ಸ್ವಾರ್ಥವಿಲ್ಲದ ವರ್ತನೆ"ಯು ಅವುಗಳ ಸುಗಮ ಸಂಚಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮತ್ತೊಂದು ವಿಷಯ ಏನೆಂದರೆ ಇರುವೆಗಳು ಮಂದ ದೃಷ್ಟಿಯನ್ನು ಹೊಂದಿರುವುದರಿಂದ, ಎದುರಿಗೆ ಮತ್ತೊಂದು ಇರುವೆ ಅಥವಾ ಇತರೆ ಕೀಟಗಳು ಎದುರಾದರೂ ಕಾಣುವುದಿಲ್ಲ. ಹೀಗಿದ್ದರೂ, ಅವುಗಳು ಪರಸ್ಪರ ಡಿಕ್ಕಿ ಹೊಡೆದುಕೊಳ್ಳದೆ ಜತೆಗೆ ತಮ್ಮ ಮಾರ್ಗಕ್ಕೂ ಅಡ್ಡಿಯಾಗದಂತೆ ಚಲಿಸುತ್ತವೆ. ಮಾತ್ರವಲ್ಲ ಇರುವೆಗಳು ಎಂದಿಗೂ ತಮ್ಮ ವೇಗವನ್ನು ಹೆಚ್ಚಿಸಲು ಅಥವಾ ಮುಂದೆ ಇರುವ ಕೀಟಗಳನ್ನು ಹಿಂದಿಕ್ಕಲು ಪ್ರಯತ್ನಿಸುವು ದಿಲ್ಲ. ಬದಲಿಗೆ ಮುಂದಿರುವ ಇರುವೆಯ ದಾರಿಯನ್ನು ಅನುಸರಿಸಿ, ತಮ್ಮ ಚಲನೆಯ ವೇಗವನ್ನು ಕಾಪಾಡಿಕೊಳ್ಳುತ್ತವೆ. ಇದರಿಂದಾಗಿ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆ ಉಂಟಾಗುವುದಿಲ್ಲ. ನಿರಂತರವಾಗಿ ಚಲಿಸುತ್ತಲೆ ಇರುವ ಇರುವೆಗಳ ಸಹನೆಯಿಂದಾಗಿ, ಟ್ರಾಫಿಕ್‌ ಜಾಮ್‌ನಲ್ಲಿ ಜನರು ಸಿಲುಕುವಂತೆ ಅವುಗಳು ಎಂದಿಗೂ ಸಿಲುಕಿಕೊಳ್ಳುವುದಿಲ್ಲ. ಇರುವೆಗಳು ಕಪ್ಪು-ಮೇಡೋ ಇರುವೆಯಂತೆ ತಮ್ಮ ಚಲನೆಯಲ್ಲಿ ಪರಿಣಾಮಕಾರಿಯಾಗಿ ಸಂಘಟಿಸುತ್ತವೆ. ಜತೆಗೆ ತಮ್ಮ ವೇಗವನ್ನು ಕಾಪಾಡಿಕೊಂಡು ಹೋಗುವುದರೊಂದಿಗೆ ಪ್ಲೇಟೂನಿಂಗ್ ವರ್ತನೆಯನ್ನು ತೋರುತ್ತದೆ.

ಬಹುತೇಕ ಒಂದೇ ರೀತಿಯ ವೇಗವನ್ನು ಹೊಂದಿರುವ ಗುಂಪೊಂದು ಹೆಚ್ಚಿನ ಸಾಂದ್ರತೆಯಲ್ಲಿಯೂ ಸ್ಥಿರ ವೇಗವನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಸಂಚಾರ ದಟ್ಟಣೆ ಯಲ್ಲಿಯೂ ಮುಕ್ತ ಹಾದಿಗೆ ಸಹಕಾರಿಯಾಗಿದೆ. ಸೇತುವೆ ಮೇಲೆ ಶೇ. 80ರಷ್ಟು ಭರ್ತಿಯಾಗಿದ್ದರೂ ಇರುವೆಗಳ ಚಲನೆಯಲ್ಲಿ ಯಾವುದೇ ನಿಧಾನಗತಿ ಇರುವುದಿಲ್ಲ. ಆದರೆ ವಾಹನಗಳು ಕೇವಲ ಶೇ. 40ರಷ್ಟು ಭರ್ತಿಯಾದರೂ ಸಾಕು ಸಂಚಾರದಲ್ಲಿ ಮಂದಗತಿ ಉಂಟಾಗುತ್ತದೆ.

ಇನ್ನು ಕುತೂಹಲಕಾರಿ ಎಂಬಂತೆ ಕಪ್ಪು ಮೇಡೋ ಇರುವೆಯು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಅದರ ಹಾದಿಯಿಂದ ಅಡೆತಡೆಗಳನ್ನು ತೆರವುಗೊಳಿಸುತ್ತದೆ. ಫಿಡೋಲ್ ಲಾಂಗಿಕಾರ್ನಿಸ್ ಇರುವೆ ಮತ್ತೊಂದು ಪ್ರಭೇದದ ಕೀಟವಾಗಿದ್ದು, ಇದು ಸಹಕಾರಿ ಸಾರಿಗೆಯ ನಡವಳಿಕೆಗೆ ಹೆಸರುವಾಸಿಯಾಗಿದೆ. ಇವುಗಳು ಭೌತಿಕ ಮಾರ್ಗಗಳನ್ನು ರೂಪಿಸಲು ಅಡೆತಡೆ ಗಳನ್ನು ಸಕ್ರಿಯವಾಗಿ ತೆರವುಗೊಳಿಸುತ್ತವೆ. ಆದರೆ ಇದು ಹೆಚ್ಚಾಗಿ ಗೂಡಿನ ಬಳಿ ಕಂಡುಬರುತ್ತವೆ.

ಫಿಡೋಲ್‌ ಲಾಂಗಿಕಾರ್ನಿಸ್‌ ಕೀಟದ ಈ ನಡವಳಿಕೆಯು ಆಹಾರ ಹುಡುಕಾಟಕ್ಕಾಗಿ ಸುಗಮ ಸಂಚಾರವು ಪರಿಣಾಮಕಾರಿಯಾಗಿದೆ. ಇನ್ನು ಇರುವೆಗಳು ಸುಲಭ ಹಾಗೂ ನೇರವಾದ ದಾರಿಯನ್ನೇ ಹುಡುಕಿ ಬಳಸುತ್ತವೆ. ಒಂದು ವೇಳೆ ದಾರಿಯಲ್ಲಿ ಇತರೆ ಕೀಟಗಳು ಅಡ್ಡಿಯಾದರೂ ಪರ್ಯಾಯ ಮಾರ್ಗವನ್ನು ಹುಡುಕಲು ಪ್ರೋತ್ಸಾಹಿಸುತ್ತದೆ. ಹಾದಿಯಲ್ಲಿ ಏನಾದರೂ ಸಮಸ್ಯೆಯಾದರೆ ಘರ್ಷಣೆಯನ್ನು ತಪ್ಪಿಸಲು ತಮ್ಮ ಚಲನೆಯ ವೇಗವನ್ನು ಹೆಚ್ಚಿಸಿಕೊಂಡು ಸರಿದೂಗಿಸುತ್ತದೆ.