Teachers promotion: 10 ಸಾವಿರಕ್ಕೂ ಹೆಚ್ಚು ಸಹ ಶಿಕ್ಷಕರಿಗೆ ಮುಖ್ಯಶಿಕ್ಷಕರಾಗಿ ಬಡ್ತಿ; ಶಿಕ್ಷಣ ಸಚಿವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧನ್ಯವಾದ
ರಾಜ್ಯದ ಸಾವಿರಾರು ಶಿಕ್ಷಕರಿಗೆ ಬಡ್ತಿ ನೀಡಲು ಕ್ರಮ ಕೈಗೊಂಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಧನ್ಯವಾದ ಸಲ್ಲಿಸಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ. -
ಬೆಂಗಳೂರು: ಸುಮಾರು 10 ಸಾವಿರ ಸಹ ಶಿಕ್ಷಕರಿಗೆ ಮುಖ್ಯಶಿಕ್ಷಕರಾಗಿ ಬಡ್ತಿ (Teachers promotion) ನೀಡಲು ಕ್ರಮ ಕೈಗೊಂಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಮತ್ತು ಪ್ರಧಾನ ಕಾರ್ಯದರ್ಶಿ ಚೇತನ್ ಎಚ್.ಎಸ್. ಅವರು ಧನ್ಯವಾದ ಸಲ್ಲಿಸಿದ್ದಾರೆ.
ಶಿಕ್ಷಣ ಇಲಾಖೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ರಾಜ್ಯಾದ್ಯಂತ ಕಳೆದ ಮೂರು ವರ್ಷಗಳಿಂದ ಬಡ್ತಿ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದವು. ಕನಿಷ್ಠ 10,000 ಸಹಶಿಕ್ಷಕರು ಮುಖ್ಯ ಗುರುಗಳಾಗಿ ಬಡ್ತಿ ಹೊಂದುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗ್ತಾ ಇದ್ದೇವೆ. ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ನಿಯಮಗಳನ್ನು ಅಂತಿಮಗೊಳಿಸಿ, ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿ, ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಇತ್ಯರ್ಥಗೊಳಿಸಿ ಯುಗಾದಿ ಹಬ್ಬದ ದಿನವೂ ಕೂಡ ಕೆಲಸ ನಿರ್ವಹಿಸಿದ ಹಲವಾರು ಜನ ಅಧಿಕಾರಿಗಳ ಆ ಕಾರ್ಯವೈಖರಿಗೆ ರಾಜ್ಯ ಸಂಘ ಅನಂತ ಕೋಟಿ ನಮನಗಳನ್ನು ಸಲ್ಲಿಸುತ್ತದೆ.
ಇಂದು ಅಥವಾ ನಾಳೆ ಎರಡು ಮೂರು ದಿನಗಳಲ್ಲಿ ಸಹ ಶಿಕ್ಷಕ ಹುದ್ದೆಗಳಿಂದ ಮುಖ್ಯ ಗುರುಗಳ ಹುದ್ದೆಗೆ ಬಡ್ತಿ ನೀಡುವ ಆದೇಶಗಳು ಪ್ರಕಟಗೊಳ್ಳಲಿದ್ದು, ರಾಜ್ಯದ ಹಲವಾರು ಸಾವಿರಾರು ನಿವೃತ್ತ ಶಿಕ್ಷಕರಿಗೆ ಬಡ್ತಿ ಭಾಗ್ಯವನ್ನು ಕರುಣಿಸಲಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಹಾಗೂ ಶಿಕ್ಷಣ ಇಲಾಖೆಗೆ ಅತ್ಯಂತ ಮಾನವೀಯತೆ ಮತ್ತು ಅತ್ಯಂತ ಕಳಕಳಿಯನ್ನು ಹೊಂದಿರುವ ಪ್ರಾಮಾಣಿಕ ಅಧಿಕಾರಿಗಳಾಗಿರತಕ್ಕಂತಹ ಶಾಲಾ ಕಾಲೇಜು ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಶ್ಮಿ ಮಹೇಶ್ ಐಎಎಸ್ ಅವರಿಗೆ ಅತ್ಯಂತ ಕ್ರಿಯಾಶೀಲ ಆಯುಕ್ತರಾಗಿರತಕ್ಕಂತಹ ವಿಕಾಸ್ ಸುರಳ್ಳರ್ ಐಎಎಸ್ ಅವರಿಗೆ, ಯುಗಾದಿಯ ದಿನದಂದು ನಮ್ಮೆಲ್ಲರ ಕಳಕಳಿಗೆ ಓಗೊಟ್ಟು ಯುಗಾದಿ ಅಂದು ರಾತ್ರಿ 10:30 ಗಂಟೆಗೆ ಕಡತವನ್ನು ಆಯುಕ್ತರಿಗೆ ಸಲ್ಲಿಸಿದ ಮಾನ್ಯ ನಿರ್ದೇಶಕರಾದ ಅನಿತಾ ನಜಾರೆ ಅವರಿಗೆ ಹಾಗೂ ಎಲ್ಲ ಸಿಬ್ಬಂದಿ ವರ್ಗದವರಿಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಅನಂತ ಕೋಟಿ ನಮನಗಳು ಎಂದು ಸಂಘ ತಿಳಿಸಿದೆ.
ಶಿಕ್ಷಕರ ಬಡ್ತಿ ಕುರಿತು ಶಿಕ್ಷಣ ಇಲಾಖೆಯಿಂದ ಮಹತ್ವದ ಸುತ್ತೋಲೆ
ಬೆಂಗಳೂರು: 2026-27ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ಮುಖ್ಯಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸುತ್ತೋಲೆ ಹೊರಡಿಸಲಾಗಿದೆ.
ಸರ್ಕಾರಿ ಪ್ರಾಥಮಿಕ ಶಾಲೆಗಳ ಹೆಚ್ಚುವರಿ ಮುಖ್ಯ ಶಿಕ್ಷಕರ/ಶಿಕ್ಷಕರ 2024 25 ನೇ ಸಾಲಿನ ಮರುಹೊಂದಾಣಿಕೆ ಪ್ರಕ್ರಿಯೆ ಮತ್ತು ಮುಖ್ಯ ಶಿಕ್ಷಕರುಗಳ ಸಾಮಾನ್ಯ ವರ್ಗಾವಣಾ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿರುವುದರಿಂದ, ಪ್ರಸ್ತುತ ಲಭವಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ ಶಿಕ್ಷಕರ ಖಾಲಿ ಹುದ್ದೆಗಳಿಗೆ ಎದುರಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಅರ್ಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಕ್ಷಮೆ ಪ್ರಾಧಿಕಾರಿಗಳಾದ ಆಯಾ ಜಿಲ್ಲಾ ಉಪ ನಿರ್ದೇಶಕರು (ಆಡಳಿತ) ರವರುಗಳ ಹಂತದಲ್ಲಿ ನಿಯಮಾನುಸಾರ ರಾಜ್ಯದಾದ್ಯಂತ ಬಡ್ತಿ ನೀಡುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಬೇಕಾಗಿದೆ.
2024-25 ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರು ದಿನಾಂಕ: 11-11-2025 ರಲ್ಲಿ ಸೂಚಿಸಿರುವಂತೆ ದಿನಾಂಕ: 09-04-2026 ರಂದು ಕರ್ತವ್ಯದಿಂದ ಬಿಡುಗಡೆಗೊಂಡು ದಿನಾಂಕ: 10-04-2026 ರಂದು ವರ್ಗಾವಣೆಗೊಂಡ ಹುದ್ದೆಯ ಕರ್ತವ್ಯಕ್ಕೆ ಹಾಜರಾಗಲು ತಿಳಿಸಲಾಗಿರುತ್ತದೆ. ಅದರಂತೆ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಉಲ್ಲೇಖ-1 ರ ಜ್ಯೇಷ್ಠತಾ ನಿಯಮಾನುಸಾರ ದಿನಾಂಕ:01-01-2026 ರಲ್ಲಿದ್ದಂತೆ ಆಯಾ ವೃಂದವಾರು ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ, ಸದರಿ ಪಟ್ಟಿಗೆ ಆಕ್ಷೇಪಣೆ/ ಮನವಿ ಸಲ್ಲಿಸಲು ಕಾಲಾವಕಾಶ ನೀಡಬೇಕಿರುತ್ತದೆ. ಸದರಿ ಆಕ್ಷೇಪಣೆ/ಮನವಿಯಲ್ಲಿನ ಅಂಶಗಳನ್ನು ಬಡ್ತಿ ಪ್ರಾಧಿಕಾರಿಗಳು ನಿಯಮಾನುಸಾರ ಪರಿಶೀಲಿಸಿ ನಿಗದಿತ ಅವಧಿಯೊಳಗೆ ಅಂತಿಮ ಜೇಷ್ಟತಾ ಪ್ರಕಟಿಸಿದ ನಂತರದಲ್ಲಿ ಸದರಿ ಜ್ಯೇಷ್ಠತಾ ಪಟ್ಟಿಗೆ ಅನುಗುಣವಾಗಿ ಬಡ್ತಿಯನ್ನು ನೀಡಬೇಕಾಗುತ್ತದೆ.
ಸದರಿ ಬಡ್ತಿ ಪ್ರಕ್ರಿಯೆಯನ್ನು 2024-25 ನೇ ಸಾಲಿನಲ್ಲಿ ನಡೆಸಲಾದ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೀಡಲಾಗಿರುವ ಜಿಲ್ಲಾವಾರು ಮಂಜೂರಾದ ಹುದ್ದೆಗಳು ಹಾಗೂ ಹೀಗೆ ಮಂಜೂರಾದ ಹುದ್ದೆಗಳು ಬಡ್ತಿ ನೀಡುವ ಸಂದರ್ಭದಲ್ಲಿ ಖಾಲಿ/ ಭರ್ತಿಯಾಗಿರುವ ಬಗ್ಗೆ ಪರಿಶೀಲಿಸಿಕೊಂಡು ಲಭ್ಯವಾಗುವ ಹುದ್ದೆಗಳನ್ನು ಮಾತ್ರ ಬಡ್ತಿಗೆ ಪರಿಗಣಿಸಲು ತಿಳಿಸಿದೆ.
BESCOM: ಪೂರ್ವ ಮುಂಗಾರು ಮಳೆ ಅಬ್ಬರ; ವಿದ್ಯುತ್ ಸುರಕ್ಷತಾ ಕ್ರಮ ಅನುಸರಿಸಲು ಬೆಸ್ಕಾಂ ಮನವಿ
ಪ್ರಸ್ತುತ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಸಂಬಂಧ ಮಾನದಂಡೆಗಳನ್ವಯ ಅರ್ಹ ಶಿಕ್ಷಕರ ಬಡ್ತಿ ಪ್ರಸ್ತಾವನೆಯನ್ನು ಪರಿಶೀಲಿಸಿ ನಿಯಮಾನುಸಾರ ಸೂಚಿಸಲಾದ ನಿಯಮ/ಷರತ್ತುಗಳಂತೆ ಕ್ರಮವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.