National Organ Donation: ರಾಷ್ಟ್ರೀಯ ಅಂಗಾಂಗ ದಾನ 2025: ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜು, ಮಾದರಿ ಆಸ್ಪತ್ರೆಯಲ್ಲಿ ಜಾಗೃತಿ ಹೆಜ್ಜೆ
ಪ್ರತಿವರ್ಷ ಭಾರತದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನರು ಅಗತ್ಯ ಅಂಗಾಂಗ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಒಬ್ಬ ದಾನಿಯಿಂದ 8 ಜನರ ಜೀವ ಉಳಿಸಲು ಸಾಧ್ಯವಿದೆ. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿ ಗಳು ಹಾಗೂ ಸಿಬ್ಬಂದಿಗಳು ಅಂಗಾಂಗ ದಾನದ ಶಪಥ ಮಾಡಿದರು. “ಅಂಗಾಂಗ ದಾನವೇ ನಿಜವಾದ ಜೀವದಾನ” ಎಂಬ ಸಂದೇಶದಿಂದ ದಿನದ ಕಾರ್ಯಕ್ರಮ ಸಮಾಪ್ತಿಯಾಯಿತು.

ಬೆಂಗಳೂರು: ರಾಜಾಜಿ ನಗರದ ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜು ಮತ್ತು ಮಾದರಿ ಆಸ್ಪತ್ರೆ ಯಲ್ಲಿಂದು “ರಾಷ್ಟ್ರೀಯ ಅಂಗಾಂಗ ದಾನ 2025” ಅಭಿಯಾನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.
ವೈದ್ಯಕೀಯ ವಿದ್ಯಾರ್ಥಿಗಳಿಂದ ಜಾಗೃತಿ ನಡಿಗೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾ ಯಿತು. “ನೀನು ಹೋದ ಮೇಲೆ ನಿನ್ನ ಜೀವ ಇನ್ನು ಕೆಲವರಲ್ಲಿ ಮುಂದುವರಿಯಲಿ” ಎಂಬ ಘೋಷಣೆಗಳು ಮತ್ತು ಅರಿವು ಮೂಡಿಸುವ ಫಲಕಗಳೊಂದಿಗೆ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿ ಆಸ್ಪತ್ರೆಯ ಆವರಣದಲ್ಲಿ ಜಾಥ ನಡೆಸಿದರು.
ನಂತರ, ವೈದ್ಯಕೀಯ ವಿದ್ಯಾರ್ಥಿಗಳು ನಾಟಕದ ಮೂಲಕ ಅಂಗಾಂಗ ದಾನದ ಮಾನವೀಯ ಮುಖ, ಅವಶ್ಯಕತೆ ಮತ್ತು ಸಮಾಜದಲ್ಲಿ ಅದರ ಬದಲಾವಣೆಯ ಶಕ್ತಿ ಕುರಿತು ಪ್ರಭಾವಶಾಲಿ ನಾಟಕವನ್ನು ಪ್ರದರ್ಶಿಸಿದರು.
ಇದನ್ನೂ ಓದಿ: Vishwavani Editorial: ಇದು ತುಘಲಕ್ ದರ್ಬಾರು
ಆಸ್ಪತ್ರೆಗೆ ಆಗಮಿಸಿದ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಅಂಗಾಂಗ ದಾನದ ಅರಿವು ಮೂಡಿಸಲಾಯಿತು. ವೈದ್ಯರು ಹಾಗೂ ವಿದ್ಯಾರ್ಥಿಗಳು ಅವರನ್ನು ಭೇಟಿ ನೀಡಿ, ಈ ದಾನದ ಸರಳ ಪ್ರಕ್ರಿಯೆ, ಪವಿತ್ರತೆ ಮತ್ತು ಅವಶ್ಯಕತೆಯನ್ನು ವಿವರಿಸಿದರು.
ಪ್ರತಿವರ್ಷ ಭಾರತದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನರು ಅಗತ್ಯ ಅಂಗಾಂಗ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಒಬ್ಬ ದಾನಿಯಿಂದ 8 ಜನರ ಜೀವ ಉಳಿಸಲು ಸಾಧ್ಯವಿದೆ. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿ ಗಳು ಹಾಗೂ ಸಿಬ್ಬಂದಿಗಳು ಅಂಗಾಂಗ ದಾನದ ಶಪಥ ಮಾಡಿದರು. “ಅಂಗಾಂಗ ದಾನವೇ ನಿಜವಾದ ಜೀವದಾನ” ಎಂಬ ಸಂದೇಶದಿಂದ ದಿನದ ಕಾರ್ಯಕ್ರಮ ಸಮಾಪ್ತಿಯಾಯಿತು.
ಕಾರ್ಯಕ್ರಮದಲ್ಲಿ ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸೀಮಾ ಎಸ್.ಆರ್, ವಿಧಿವಿಜ್ಞಾನ ಔಷಧ ಮತ್ತು ವಿಷಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿನಯ್ ಶೆಟ್ಟಿ, ಶಸ್ತ್ರ ಚಿಕಿತ್ಸಕ ಡಾ. ಅರುಣ್ ಕುಮಾರ್, ಡಾ. ಗಿರೀಶ್, ಡಾ. ಮಲ್ಲಿಕಾರ್ಜುನ ಅಡಿಬಟ್ಟಿ , ಡಾ. ಅಲಗಿರಿ, ಡಾ. ಕಮಲಾ, ಡಾ. ಶ್ಯಾಮಲಾ, ಡಾ. ಚಿತ್ರಾ, ಡಾ. ಅರ್ಚನಾ ,ಡಾ. ಮ್ಯಾಥ್ಯೂಸ್, ಡಾ. ರಕ್ಷಿತ್, ಡಾ. ರಾಮೇಶ್, ಡಾ. ರಕ್ಷಿತ್ , ಡಾ. ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.