SAP ಲ್ಯಾಬ್ಸ್ ಇಂಡಿಯಾ ಎಸ್ ಎ ಪಿ ರನ್ ಬೆಂಗಳೂರು 2025ರ ಎರಡನೇ ಆವೃತ್ತಿಯಲ್ಲಿ 9000 ರನ್ನರ್ ಗಳ ಮ್ಯಾರಥಾನ್ ಓಟ
SAP ಲ್ಯಾಬ್ಸ್ ಇಂಡಿಯಾ ಇಂದು ತನ್ನ ಸಮುದಾಯ-ಪ್ರೇರಿತ ಮ್ಯಾರಥಾನ್ ಎಸ್ ಎ ಪಿ ರನ್ ಬೆಂಗಳೂರು 2025ರ ಎರಡನೇ ಆವೃತ್ತಿಯನ್ನು ಆಯೋಜಿಸಿದ್ದು ಇದು ಫಿಟ್ನೆಸ್, ಒಗ್ಗಟ್ಟು ಮತ್ತು ಪಾರಿಸರಿಕ ಜವಾಬ್ದಾರಿಯ ಸಂಭ್ರಮಾಚರಣೆಯಲ್ಲಿ ಬೆಂಗಳೂರಿನಾದ್ಯಂತ ೯,೦೦೦ ರನ್ನರ್ ಗಳನ್ನು ಒಗ್ಗೂಡಿಸಿತು


ಬೆಂಗಳೂರು: SAP ಲ್ಯಾಬ್ಸ್ ಇಂಡಿಯಾ ಇಂದು ತನ್ನ ಸಮುದಾಯ-ಪ್ರೇರಿತ ಮ್ಯಾರಥಾನ್ ಎಸ್ ಎ ಪಿ ರನ್ ಬೆಂಗಳೂರು 2025ರ ಎರಡನೇ ಆವೃತ್ತಿಯನ್ನು ಆಯೋಜಿಸಿದ್ದು ಇದು ಫಿಟ್ನೆಸ್, ಒಗ್ಗಟ್ಟು ಮತ್ತು ಪಾರಿಸರಿಕ ಜವಾಬ್ದಾರಿಯ ಸಂಭ್ರಮಾಚರಣೆಯಲ್ಲಿ ಬೆಂಗಳೂರಿನಾದ್ಯಂತ ೯,೦೦೦ ರನ್ನರ್ ಗಳನ್ನು ಒಗ್ಗೂಡಿಸಿತು. ಬೆಂಗಳೂರಿನ SAP ಲ್ಯಾಬ್ಸ್ ಇಂಡಿಯಾ ಇನ್ನೊವೇಷನ್ ಪಾರ್ಕ್ ಕ್ಯಾಂಪಸ್ ಉದ್ಘಾಟನೆಯ ಹಿನ್ನೆಲೆ¬ಯಲ್ಲಿ ನಡೆದ ಈ ಕಾರ್ಯಕ್ರಮವು ಉದ್ಯೋಗಿಗಳ ಸ್ವಾಸ್ಥ್ಯ, ಸುಸ್ಥಿರತೆ ಮತ್ತು ಅರ್ಥಪೂರ್ಣ ಸಮುದಾಯ ಸಕ್ರಿಯತೆಗೆ ಕಂಪನಿಯ ಮುಂದುವರಿದ ಆದ್ಯತೆಯನ್ನು ಬಿಂಬಿಸಿದೆ.
ವೈಟ್ ಫೀಲ್ಡ್ ನ ಕರ್ನಾಟಕ ಟ್ರೇಡ್ ಪ್ರೊಮೋಷನ್ ಆರ್ಗನೈಸೇಷನ್ (ಕೆಟಿಪಿಒ)ನಿಂದ ಪ್ರಾರಂಭ ವಾದ ಈ ಕಾರ್ಯಕ್ರಮದಲ್ಲಿ 3ಕೆ, 5ಕೆ ಮತ್ತು 10ಕೆ ರೇಸ್ ವಿಭಾಗಗಳಿದ್ದು ಎಲ್ಲ ವಯಸ್ಸಿನ ಹಾಗೂ ಫಿಟ್ನೆಸ್ ಮಟ್ಟಗಳ ರನ್ನರ್ ಗಳನ್ನು ಸ್ವಾಗತಿಸಿತು.
ಇದನ್ನೂ ಓದಿ:Narayana Yaji Column: ಭಾರತದ ಮೇಲೇಕೆ ಅಧಿಕ ಸುಂಕ ?
SAP ಲ್ಯಾಬ್ಸ್ ಇಂಡಿಯಾ ವಿಶೇಷ ಮಕ್ಕಳ ಓಟವನ್ನೂ ಆಯೋಜಿಸಿತ್ತು, ಇದರಲ್ಲಿ ಕ್ರೈಸ್ಟಲ್ ಹೌಸ್ ಮತ್ತು ಬಸವನನಗರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.
ಮಾಜಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ ಜಾಂಟಿ ರೋಡ್ಸ್ ಮುಖ್ಯ ಅತಿಥಿಯಾಗಿ ಹಿಂದಿರುಗಿದ್ದು ಫಿಟ್ನೆಸ್ ಮತ್ತು ಸಕ್ರಿಯ ಜೀವನಕ್ಕೆ ಈ ಕಾರ್ಯಕ್ರಮದ ಆದ್ಯತೆಯನ್ನು ಮರು ದೃಢೀಕರಿಸಿದರು. ಅವರ ಉಪಸ್ಥಿತಿ ಹಾಗೂ ಆರ್.ಜೆ. ಪೃಥ್ವಿ ಅವರ ಸಕ್ರಿಯ ವೀಕ್ಷಕ ವಿವರಣೆಯು ಇಡೀ ಕಾರ್ಯಕ್ರಮ ದಾದ್ಯಂತ ಉನ್ನತ ಮಟ್ಟದ ಶಕ್ತಿ ಮತ್ತು ಉತ್ತೇಜನ ಕಾಪಾಡಿಕೊಳ್ಳಲು ನೆರವಾಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ SAP ಲ್ಯಾಬ್ಸ್ ಇಂಡಿಯಾ ಎಂ.ಡಿ. ಮತ್ತು ನಾಸ್ಕಾಂ ಅಧ್ಯಕ್ಷೆ ಸಿಂಧು ಗಂಗಾಧರನ್, “ಇದು SAP ರನ್ ನ ಎರಡನೇ ಕಾರ್ಯಕ್ರಮವಾಗಿದೆ ಮತ್ತು ಇದು ಸಾಂಸ್ಕೃತಿಕ ಸ್ವಾಸ್ಥ್ಯವನ್ನು ಪೋಷಿಸುವ ಮತ್ತು ಎಲ್ಲರನ್ನೂ ಒಳಗೊಳ್ಳುವ ನಮ್ಮ ಮುಂದುವರಿದ ಬದ್ಧತೆಯನ್ನು ಬಿಂಬಿಸುತ್ತದೆ. SAPನಲ್ಲಿ ನಾವು ಸದಾ ಆರೋಗ್ಯ ಮೊದಲು ಎಂದು ನಂಬುತ್ತೇವೆ ಮತ್ತು ನಾವು ನಮ್ಮ ಕಾರ್ಯಕ್ರಮಗಳು, ಕ್ಯಾಂಪಸ್ ಉಪಕ್ರಮಗಳು ಮತ್ತು ಉದ್ಯೋಗಿ ಸಕ್ರಿಯತೆಯ ಮೂಲಕ ನಾವು ಜೀವಿಸುವ ಮೌಲ್ಯವಾಗಿದೆ. SAP ರನ್ ನಂತಹ ಕಾರ್ಯಕ್ರಮಗಳು ನಮಗೆ ಈ ನಂಬಿಕೆಯನ್ನು ಗೋಡೆಗಳ ಆಚೆಗೂ ವಿಸ್ತರಿಸಿ ಸಮುದಾಯಕ್ಕೆ ತಲುಪಲು ನಮಗೆ ಅವಕಾಶ ನೀಡಿವೆ. ಈ ವರ್ಷ ನಗರದ ಮೂಲೆ ಮೂಲೆಗಳಿಂದ ಅಪಾರ ಭಾಗವಹಿಸುವಿಕೆ ಮೂಲಕ ಶಕ್ತಿ ದುಪ್ಪಟ್ಟಾಗಿರುವುದನ್ನು ಕಾಣುವುದು ನಿಜಕ್ಕೂ ಹೃದಯ ತುಂಬಿದೆ. ಜನರನ್ನು ಒಟ್ಟಿಗೆ ತರುವ, ಸಮುದಾಯದ ಸ್ಫೂರ್ತಿಯನ್ನು ಸಂಭ್ರಮಿಸುವ ಮತ್ತು ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ಭವಿಷ್ಯವನ್ನು ರೂಪಿಸಲು ಕ್ರಮ ಕೈಗೊಳ್ಳಲು ವೇದಿಕೆ ನಿರ್ಮಿಸಲು ಹೆಮ್ಮೆ ಪಡುತ್ತೇವೆ” ಎಂದರು.
ಹಸಿರು ಬೆಂಗಳೂರಿನತ್ತ ತನ್ನ ಬದ್ಧತೆಯ ಭಾಗವಾಗಿ SAP ಲ್ಯಾಬ್ಸ್ ಇಂಡಿಯಾ ಭಾಗವಹಿಸಿದ ಎಲ್ಲರಿಗೂ ಸಸಿಗಳನ್ನು ವಿತರಿಸಿ ಅವರನ್ನು ಸಸಿ ನೆಡಲು ಮತ್ತು ನಗರ ಜೀವ ವೈವಿಧ್ಯತೆಯನ್ನು ಸುಧಾರಿಸಲು ಮತ್ತು ನಗರದ ಹಸಿರು ವ್ಯಾಪ್ತಿ ಹೆಚ್ಚಿಸಲು ಅವುಗಳನ್ನು ಪೋಷಿಸಲು ಉತ್ತೇಜಿಸುತ್ತದೆ.
ಈ ಕಾರ್ಯಕ್ರಮಕ್ಕೆ ಮಣಿಪಾಲ್ ಹಾಸ್ಪಿಟಲ್ ಹೆಲ್ತ್ ಪಾಲುದಾರರಾಗಿ, ಐಸಿಐಸಿಐ ಬ್ಯಾಂಕ್, ಎಚ್.ಡಿ.ಎಫ್.ಸಿ. ಬ್ಯಾಂಕ್ ಮತ್ತು ಎಚ್.ಡಿ.ಎಫ್.ಸಿ. ಲೈಫ್ ಇನ್ಷೂರೆನ್ಸ್ ಬ್ಯಾಂಕಿಂಗ್ ಮತ್ತು ವಿಮಾ ಪಾಲುದಾರರಾಗಿ, ಡುರೊಫ್ಲೆಕ್ಸ್ ರಸ್ಟ್ ಅಂಡ್ ರಿಕವರಿ ಪಾಲುದಾರರಾಗಿ ಮತ್ತು ಪ್ರೊ-ಎಫ್.ಎಕ್ಸ್. ಟೆಕ್ ಎಕ್ಸ್ಪೀರಿಯೆನ್ಸ್ ಇನ್ನೊವೇಷನ್ ಪಾಲುದಾರರಾಗಿದ್ದರು.