ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2026ರಲ್ಲಿ ಅಮೆಜಾನ್‌ ಆಶ್ರಯ್ ಕೇಂದ್ರಗಳ ಸಂಖ್ಯೆ 250ಕ್ಕೆ ಹೆಚ್ಚಳ

ಆಶ್ರಯ್ ಎಂಬುದು ಅಮೆಜಾನ್ ಜಾಲದ ಹೊರಗಿರುವ ಚಾಲಕರು ಸೇರಿದಂತೆ ಎಲ್ಲಾ ಡೆಲಿವರಿ ಚಾಲಕರಿಗಾಗಿ ಮೀಸಲಾದ ವಿಶ್ರಾಂತಿ ಕೇಂದ್ರಗಳ ಜಾಲವಾಗಿದೆ. ಈ ಕೇಂದ್ರ ಗಳಲ್ಲಿ ಹವಾ ನಿಯಂತ್ರಿತ ಆಸನಗಳು, ಕುಡಿಯುವ ನೀರು, ಎಲೆಕ್ಟ್ರೋಲೈಟ್‌ ಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ ಗಳು, ಸ್ವಚ್ಛ ಶೌಚಾಲಯಗಳು, ಪ್ರಥಮ ಚಿಕಿತ್ಸಾ ಕಿಟ್‌ ಗಳು ಮತ್ತು ಆರಾಮ ದಾಯಕ ವಿಶ್ರಾಂತಿ ಸ್ಥಳಗಳನ್ನು ಒದಗಿಸಲಾಗುತ್ತಿದೆ.

2026ರಲ್ಲಿ ಅಮೆಜಾನ್‌ ಆಶ್ರಯ್ ಕೇಂದ್ರಗಳ ಸಂಖ್ಯೆ 250ಕ್ಕೆ ಹೆಚ್ಚಳ

-

Profile
Ashok Nayak May 11, 2026 12:08 PM

ಮೇ ತಿಂಗಳ ಅಂತ್ಯದ ವೇಳೆಗೆ 50 ಹೊಸ ಆಶ್ರಯ್ ಕೇಂದ್ರಗಳನ್ನು ಪ್ರಾರಂಭಿಸಲಿರುವ ಅಮೆಜಾನ್.

2025ರಲ್ಲಿ ಅಮೆಜಾನ್ ಆಶ್ರಯ್ ಕೇಂದ್ರಗಳಿಗೆ ವಿವಿಧ ಕಂಪನಿಗಳ ಡೆಲಿವರಿ ಚಾಲಕರು ಒಂದು ದಶಲಕ್ಷಕ್ಕೂ ಹೆಚ್ಚು ಸಲ ಭೇಟಿ ನೀಡಿದ್ದಾರೆ.

ಬೆಂಗಳೂರು: ಅಮೆಜಾನ್ ಇಂಡಿಯಾ ಸಂಸ್ಥೆಯು ತನ್ನ ಆಶ್ರಯ್ ಕೇಂದ್ರಗಳ ಜಾಲವನ್ನು 2026ರ ಅಂತ್ಯದ ವೇಳೆಗೆ 250 ಕೇಂದ್ರಗಳಿಗೆ ವಿಸ್ತರಿಸುವ ಯೋಜನೆಯನ್ನು ಇಂದು ಪ್ರಕಟಿಸಿದೆ. ಬೆಂಗಳೂರು, ದೆಹಲಿ ಎನ್‌ಸಿಆರ್, ಮುಂಬೈ, ಚೆನ್ನೈ ಮತ್ತು ದೇಶದಾದ್ಯಂತ ಇರುವ ಇತರ ನಗರಗಳಲ್ಲಿ ಪ್ರಸ್ತುತ ಇರುವ 100 ಕೇಂದ್ರಗಳ ಜಾಲವನ್ನು ವಿಸ್ತರಣೆ ಮಾಡಲಾಗುತ್ತಿದೆ. ಈ ಯೋಜನೆಯ ಭಾಗವಾಗಿ, ಕಂಪನಿಯು ಮೇ ತಿಂಗಳ ಅಂತ್ಯದ ವೇಳೆಗೆ 50 ಹೊಸ ಕೇಂದ್ರಗಳನ್ನು ಪ್ರಾರಂಭಿಸಲು ಯೋಜಿಸಿದೆ.

ಆಶ್ರಯ್ ಎಂಬುದು ಅಮೆಜಾನ್ ಜಾಲದ ಹೊರಗಿರುವ ಚಾಲಕರು ಸೇರಿದಂತೆ ಎಲ್ಲಾ ಡೆಲಿವರಿ ಚಾಲಕರಿಗಾಗಿ ಮೀಸಲಾದ ವಿಶ್ರಾಂತಿ ಕೇಂದ್ರಗಳ ಜಾಲವಾಗಿದೆ. ಈ ಕೇಂದ್ರ ಗಳಲ್ಲಿ ಹವಾನಿಯಂತ್ರಿತ ಆಸನಗಳು, ಕುಡಿಯುವ ನೀರು, ಎಲೆಕ್ಟ್ರೋಲೈಟ್‌ ಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ ಗಳು, ಸ್ವಚ್ಛ ಶೌಚಾಲಯಗಳು, ಪ್ರಥಮ ಚಿಕಿತ್ಸಾ ಕಿಟ್‌ ಗಳು ಮತ್ತು ಆರಾಮದಾಯಕ ವಿಶ್ರಾಂತಿ ಸ್ಥಳಗಳನ್ನು ಒದಗಿಸಲಾಗುತ್ತಿದೆ.

ಇದನ್ನೂ ಓದಿ: EPL: Amazon.in ನಲ್ಲಿ ಮಾ.6ರಿಂದ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಆರಂಭ

ವಿಶೇಷವಾಗಿ ಬೇಸಿಗೆಯ ಗರಿಷ್ಠ ತಾಪಮಾನದ ಅವಧಿಯಲ್ಲಿ ಡೆಲಿವರಿ ಚಾಲಕರು ತಮ್ಮ ಪ್ರಯಾಣದ ಹಾದಿಯಲ್ಲಿ ವಿಶ್ರಾಂತಿ ಪಡೆಯಲು ಮತ್ತು ಚೈತನ್ಯ ತುಂಬಿಕೊಳ್ಳಲು ಈ ಕೇಂದ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ಭಾರತದ 16 ನಗರಗಳಲ್ಲಿ ಇರುವ ಹಾಲಿ 100 ಕೇಂದ್ರಗಳಿಗೆ 2025ರಲ್ಲಿ ವಿವಿಧ ಕಂಪನಿಗಳ ಡೆಲಿವರಿ ಚಾಲಕರು ಒಂದು ದಶಲಕ್ಷಕ್ಕೂ ಹೆಚ್ಚು ಸಲ ಭೇಟಿ ನೀಡಿದ್ದು ದಾಖಲಾಗಿದೆ.

ಅಮೆಜಾನ್ ಇಂಡಿಯಾ ಸಂಚಾರಿ ಆಶ್ರಯ್ ಘಟಕಗಳನ್ನೂ ಸಹ ಪರಿಚಯಿಸಿದೆ. ಇವು ಹವಾನಿಯಂತ್ರಿತ ವ್ಯಾನ್‌ ಗಳಾಗಿದ್ದು, ಹೆಚ್ಚು ಸಂಚಾರವಿರುವ ಡೆಲಿವರಿ ಮಾರ್ಗಗಳಲ್ಲಿ ಇವುಗಳನ್ನು ನಿಲ್ಲಿಸಲಾಗುತ್ತದೆ. ಇದರಿಂದ ಡೆಲಿವರಿ ಚಾಲಕರು ಸ್ಥಿರವಾದ ಕೇಂದ್ರಗಳನ್ನು ಹುಡುಕಿಕೊಂಡು ಹೋಗುವ ಅಗತ್ಯವಿಲ್ಲದೇ, ಇರುವ ಕಡೆಯೇ ವಿಶ್ರಾಂತಿ ಮತ್ತು ನೀರು ಕುಡಿಯುವ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಸಂಚಾರಿ ಘಟಕಗಳಲ್ಲಿ ಹವಾ ನಿಯಂತ್ರಿತ ಆಸನಗಳು, ಕುಡಿಯುವ ನೀರು, ಎಲೆಕ್ಟ್ರೋಲೈಟ್‌ ಗಳು, ವೈ-ಫೈ ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ ಗಳಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ.

ಈ ಕುರಿತು ಅಮೆಜಾನ್ ಇಂಡಿಯಾದ ಕಾರ್ಯಾಚರಣೆ ವಿಭಾಗದ ನಿರ್ದೇಶಕರಾದ ಸಲೀಂ ಆರ್ ಮೆಮನ್ ಮಾತನಾಡಿ, "ನಮ್ಮ ಕಾರ್ಯಾಚರಣೆ ಜಾಲದಾದ್ಯಂತ ಇರುವ ಡೆಲಿವರಿ ಚಾಲಕರ ಆರೋಗ್ಯ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ. ಆಶ್ರಯ್ ಕೇಂದ್ರಗಳನ್ನು ಪ್ರತಿಯೊಬ್ಬ ಡೆಲಿವರಿ ಚಾಲಕರು, ಅವರು ಅಮೆಜಾನ್ ಪರವಾಗಿ ಕೆಲಸ ಮಾಡಲಿ ಅಥವಾ ಮಾಡದಿರಲಿ, ಕೆಲಸದ ಅವಧಿಯಲ್ಲಿ ವಿಶ್ರಾಂತಿ ಪಡೆಯಲು ಸ್ವಚ್ಛವಾದ ಮತ್ತು ತಂಪಾದ ಸ್ಥಳವನ್ನು ಹೊಂದುವ ಅರ್ಹತೆ ಹೊಂದಿದ್ದಾರೆ ಎಂಬ ಒಂದು ಸರಳ ಆಶಯದಿಂದ ಸ್ಥಾಪಿಸಲಾಗಿದೆ.

ಈ ಕೇಂದ್ರಗಳನ್ನು 250ಕ್ಕೆ ವಿಸ್ತರಿಸುವುದು ಮತ್ತು ಸಂಚಾರಿ ಘಟಕಗಳ ಮೂಲಕ ಈ ಸೌಲಭ್ಯಗಳನ್ನು ಸುಲಭವಾಗಿ ಅವರಿಗೆ ತಲುಪಿಸುವುದು ನಮ್ಮ ಆದ್ಯತೆಯಾಗಿದೆ. ನಮ್ಮ ಕಾರ್ಯಾಚರಣೆ ಜಾಲದಾದ್ಯಂತ ಅಸೋಸಿಯೇಟ್‌ ಗಳ ಸುರಕ್ಷತೆ, ಆರೋಗ್ಯ ಮತ್ತು ಯೋಗಕ್ಷೇಮವನ್ನು ಬಲಪಡಿಸಲು ನಾವು ಹೂಡಿಕೆ ಮಾಡುತ್ತಿರುವ 2,800 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಯೋಜನೆಯ ಭಾಗವಾಗಿ ಈ ಯೋಜನೆ ಮೂಡಿ ಬಂದಿದೆ" ಎಂದು ತಿಳಿಸಿದರು.

ಕಾರ್ಯಾಚರಣೆ ಜಾಲದಾದ್ಯಂತ ಡೆಲಿವರಿ ಚಾಲಕರುಗಳಿಗೆ ಬೆಂಬಲ

ಹೊಸ ಆಶ್ರಯ್ ಕೇಂದ್ರಗಳನ್ನು ಸ್ಥಾಪಿಸಲು ಅಮೆಜಾನ್ ಸಂಸ್ಥೆಯು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ ಪಿ ಸಿ ಎಲ್), ಉದ್ಯಾಸ ಫೌಂಡೇಶನ್ ಮತ್ತು ರೂರಲ್ ಎಜುಕೇಶನ್ ಅಂಡ್ ಡೆವಲಪ್ಮೆಂಟ್ (ರೀಡ್) ಇಂಡಿಯಾದಂತಹ ಬಾಹ್ಯ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ. ಸುರಕ್ಷತೆ, ಯೋಗಕ್ಷೇಮ ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಡೆಲಿವರಿ ಚಾಲಕರನ್ನು ಬೆಂಬಲಿಸುವ ಅಮೆ ಜಾನ್‌ ನ ವಿಶಾಲ ಪ್ರಯತ್ನಗಳ ಭಾಗವಾಗಿ ಈ ಯೋಜನೆ ರೂಪಿಸಲಾಗಿದೆ. ಈ ಕೇಂದ್ರಗಳ ಹೊರತಾಗಿ, ಅಮೆಜಾನ್ ತನ್ನ ಫುಲ್‌ ಫಿಲ್‌ ಮೆಂಟ್ ಕೇಂದ್ರಗಳು, ವಿಂಗಡಣಾ ಕೇಂದ್ರಗಳು ಮತ್ತು ಡೆಲಿವರಿ ಸ್ಟೇಷನ್‌ ಗಳ ಒಳಗೆ ಡೆಲಿವರಿ ಚಾಲಕರ ಯೋಗಕ್ಷೇಮಕ್ಕಾಗಿ ವಿಶ್ರಾಂತಿ ಪ್ರದೇಶಗಳು, ವಿರಾಮ ವಲಯಗಳು ಮತ್ತು ಕೆಫೆಟೇರಿಯಾಗಳಂತಹ ಸೌಲಭ್ಯಗಳನ್ನು ಸ್ಥಾಪಿಸಿದೆ.

ಈ ಪ್ರಯತ್ನಗಳು ಇತ್ತೀಚೆಗೆ ಘೋಷಿಸಲಾದ 2,800 ಕೋಟಿ ರೂಪಾಯಿಗಳಿಗೂ ಅಧಿಕ ಹೂಡಿಕೆಯ ಭಾಗವಾಗಿವೆ. ಇದು ದೇಶಾದ್ಯಂತ ತನ್ನ ಕಾರ್ಯಾಚರಣೆ ಜಾಲವನ್ನು ಬಲ ಪಡಿಸುವುದರ ಜೊತೆಗೆ, ಅಸೋಸಿಯೇಟ್‌ ಗಳ ಸುರಕ್ಷತೆ, ಆರೋಗ್ಯ ಮತ್ತು ಆರ್ಥಿಕ ಯೋಗ ಕ್ಷೇಮದ ಕ್ರಮಗಳನ್ನು ಮತ್ತಷ್ಟು ಸುಧಾರಿಸುವ ಗುರಿಯನ್ನು ಹೊಂದಿದೆ.