Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ
ಪೆಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಜಿ. ಶಂಕರ್ ರಾಮ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯ ಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಚಲನಚಿತ್ರ ನಿರ್ಮಾಪಕ ಹಾಗೂ ಕೆಪಿಸಿಸಿ ಸದಸ್ಯ ಉಮಾಪತಿ ಶ್ರೀನಿವಾಸ್ ಗೌಡ, ಮತ್ತು ಆನೇಕಲ್ ಕ್ಷೇತ್ರದ ಶಾಸಕ ಬಿ.ಶಿವಣ್ಣ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಮಳಿಗೆಯನ್ನು ಲೋಕಾರ್ಪಣೆ ಮಾಡಿದರು.
-
ಬೆಂಗಳೂರು: ದೇಶದ ಪ್ರಮುಖ ಸ್ಪ್ರಿಂಗ್ ಮ್ಯಾಟ್ರೆಸ್ ಬ್ರ್ಯಾಂಡ್ ಗಳಲ್ಲಿ ಒಂದಾದ ಪೆಪ್ಸ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಸಿಲಿಕಾನ್ ಸಿಟಿಯಲ್ಲಿ ತನ್ನ ವಿಸ್ತರಣೆಯನ್ನು ಮುಂದು ವರಿಸಿದ್ದು, ಶುಕ್ರವಾರ ಬೆಂಗಳೂರು ಚಂದಾಪುರ-ಆನೇಕಲ್ ಮುಖ್ಯರಸ್ತೆಯ ಇಗ್ಗಲೂರು ಬಳಿ ತನ್ನ 91ನೇ ‘ದಿ ಗ್ರೇಟ್ ಸ್ಲೀಪ್ ಸ್ಟೋರ್’ ಅನ್ನು ಅದ್ಧೂರಿಯಾಗಿ ಉದ್ಘಾಟಿಸಿದೆ.
ಪೆಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಜಿ. ಶಂಕರ್ ರಾಮ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯ ಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಚಲನಚಿತ್ರ ನಿರ್ಮಾಪಕ ಹಾಗೂ ಕೆಪಿಸಿಸಿ ಸದಸ್ಯ ಉಮಾಪತಿ ಶ್ರೀನಿವಾಸ್ ಗೌಡ, ಮತ್ತು ಆನೇಕಲ್ ಕ್ಷೇತ್ರದ ಶಾಸಕ ಬಿ.ಶಿವಣ್ಣ(Anekal MLA B. Shivanna) ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಳಿಗೆಯನ್ನು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿ. ಶಂಕರ್ ರಾಮ್ ಅವರು, "ಪೆಪ್ಸ್ ತನ್ನ ವೈಜ್ಞಾನಿಕ ವಿನ್ಯಾಸದ ಸ್ಪ್ರಿಂಗ್ ಮ್ಯಾಟ್ರೆಸ್‌ಗಳಿಗೆ ಚಿರಪರಿಚಿತವಾಗಿದೆ. ಬೆಂಗಳೂರಿನ ಜನರ ಜೀವನಶೈಲಿ ವೇಗವಾಗಿ ಬದಲಾಗುತ್ತಿದ್ದು, ಗುಣಮಟ್ಟದ ನಿದ್ರೆಯ ಅವಶ್ಯಕತೆ ಹೆಚ್ಚಾಗಿದೆ. ಗ್ರಾಹಕರು ನೇರವಾಗಿ ಮ್ಯಾಟ್ರೆಸ್ ಗಳನ್ನು ಪರೀಕ್ಷಿಸಿ, ತಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ಸರಿಯಾದ ಆಯ್ಕೆ ಮಾಡಲು ಈ ಮಳಿಗೆ ಯಲ್ಲಿ ಪರಿಣಿತರ ಮಾರ್ಗದರ್ಶನ ಸಿಗಲಿದೆ," ಎಂದು ತಿಳಿಸಿದರು.
ಮಳಿಗೆಯಲ್ಲಿ ಪೆಪ್ಸ್‌ನ ಪ್ರಸಿದ್ಧ ಸ್ಪ್ರಿಂಗ್ ಮ್ಯಾಟ್ರೆಸ್‌ಗಳು ಮಾತ್ರವಲ್ಲದೆ, ಕಾಯಿರ್ ಮತ್ತು ಫೋಮ್ ಮ್ಯಾಟ್ರೆಸ್‌ಗಳ ದೊಡ್ಡ ಶ್ರೇಣಿಯೇ ಲಭ್ಯವಿದೆ. ಸಾಮಾನ್ಯ ಜನರಿಂದ ಹಿಡಿದು ಐಷಾರಾಮಿ ಹಾಸಿಗೆ ಬಯಸುವವರವರೆಗೆ ಎಲ್ಲರಿಗೂ ಅನುಕೂಲವಾಗುವಂತೆ ₹6,000 ರಿಂದ ₹1.5 ಲಕ್ಷದವರೆಗೆ ವಿವಿಧ ಬೆಲೆಯ ಉತ್ಪನ್ನಗಳಿವೆ.
ಕೇವಲ ವಸ್ತುಗಳನ್ನು ನೋಡುವುದಷ್ಟೇ ಅಲ್ಲದೆ, ಗ್ರಾಹಕರು ಮ್ಯಾಟ್ರೆಸ್‌ಗಳ ಗುಣಮಟ್ಟವನ್ನು ಪ್ರಾಯೋಗಿಕವಾಗಿ ಅನುಭವಿಸಿ ಖರೀದಿಸಲು ಇಲ್ಲಿ ಅವಕಾಶ ನೀಡಲಾಗಿದೆ.
ಬೆಳೆಯುತ್ತಿರುವ ತಾಂತ್ರಿಕ ಹಬ್ ಆಗಿರುವ ಆನೇಕಲ್ ಭಾಗದಲ್ಲಿ ಈ ಮಳಿಗೆಯನ್ನು ತೆರೆದಿರುವುದು ವ್ಯೂಹಾತ್ಮಕವಾಗಿ ಮಹತ್ವದ್ದಾಗಿದೆ. ಈಗಾಗಲೇ ಭಾರತದಾದ್ಯಂತ 5,000ಕ್ಕೂ ಹೆಚ್ಚು ಮಾರಾಟ ಕೇಂದ್ರಗಳನ್ನು ಹೊಂದಿರುವ ಪೆಪ್ಸ್, ಈ ಹೊಸ ಮಳಿಗೆಯ ಮೂಲಕ ತನ್ನ ಮಾರುಕಟ್ಟೆ ನಾಯಕತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.