ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Private Bus fare hike: ಡೀಸೆಲ್‌ ದರ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್;‌ ಖಾಸಗಿ ಬಸ್‌ಗಳ ಟಿಕೆಟ್‌ ದರ ಭಾರಿ ಹೆಚ್ಚಳ!

Private bus ticket price Hike in Karnataka: ಪೆಟ್ರೋಲ್​-ಡೀಸೆಲ್​, ಅಗತ್ಯ ವಸ್ತುಗಳು ಸೇರಿ ವಿವಿಧ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದೀಗ ಬಸ್​ ಟಿಕೆಟ್​ ದರ ಕೂಡ ಹೆಚ್ಚಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಆರ್ಥಿಕ ಹೊರೆಯಾಗಿದೆ. ಖಾಸಗಿ ಬಸ್‌ ಮಾಲೀಕರು ಎಷ್ಟು ದರ ಹೆಚ್ಚಿಸಲು ನಿರ್ಧರಿಸಿದ್ದಾರೆ?, ಟಿಕೆಟ್‌ ದರ ಎಷ್ಟು ಏರಿಕೆಯಾಗಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಡೀಸೆಲ್‌ ದರ ಏರಿಕೆ; ರಾಜ್ಯದ ಖಾಸಗಿ ಬಸ್‌ಗಳ ಟಿಕೆಟ್‌ ದರ ಭಾರಿ ಹೆಚ್ಚಳ!

ಸಾಂದರ್ಭಿಕ ಚಿತ್ರ -

Prabhakara R
Prabhakara R May 15, 2026 4:15 PM

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡಲಾಗಿದೆ. ಇದರ ಬೆನ್ನಲ್ಲೇ ರಾಜ್ಯದ ಪ್ರಯಾಣಿಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್‌ ತಗುಲಿದ್ದು, ಖಾಸಗಿ ಬಸ್‌ ಟಿಕೆಟ್‌ ದರಗಳು (Private Bus fare hike) ಕೂಡ ದಿಢೀರ್‌ ಏರಿಕೆಯಾಗಿವೆ. ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿದೆ.

ಪೆಟ್ರೋಲ್​-ಡೀಸೆಲ್​, ಅಗತ್ಯ ವಸ್ತುಗಳು ಸೇರಿ ವಿವಿಧ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದೀಗ ಬಸ್​ ಟಿಕೆಟ್​ ದರ ಕೂಡ ಹೆಚ್ಚಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಹೊರೆಯಾಗಿದೆ. ಲಕ್ಷಾಂತರ ನಗರ ನಿವಾಸಿಗಳು ದೂರದ ಊರುಗಳಿಗೆ ಹೋಗಲು ಖಾಸಗಿ ಬಸ್ ಮೊರೆ ಹೋಗುತ್ತಾರೆ. ಈ ಪ್ರಯಾಣಿಕರಿಗೆ ಇದೀಗ ಟಿಕೆಟ್ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಶೇ. 20 ರಿಂದ 30 ರಷ್ಟು ಹೆಚ್ಚಳ!

ಪೆಟ್ರೋಲ್-ಡೀಸೆಲ್​ ಬೆಲೆ 3 ರೂಪಾಯಿ ಏರಿಕೆಯಾಗುತ್ತಿದ್ದಂತೆ ಖಾಸಗಿ ಬಸ್​ ಮಾಲೀಕರು ಸಭೆ ನಡೆಸಿದ್ದು, ಟಿಕೆಟ್ ದರವನ್ನು ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಶೇ. 20 ರಿಂದ 30 ರಷ್ಟು ದರ ಏರಿಕೆಗೆ ಖಾಸಗಿ ಬಸ್ ಮಾಲೀಕರು ಮುಂದಾಗಿದ್ದು, ಟಿಕೆಟ್ ಭಾರೀ ಹೆಚ್ಚಳವಾಗಲಿದೆ.

ಪ್ರಮುಖ ಮಾರ್ಗಗಳ ಪರಿಷ್ಕೃತ ದರ ಪಟ್ಟಿ (Non-AC Sleeper):

  • ಬೆಂಗಳೂರು - ಬೆಳಗಾವಿ: 1000 ರಿಂದ 1200 ರೂ.ಗೆ ಏರಿಕೆ
  • ಬೆಂಗಳೂರು - ಮಂಗಳೂರು: 900ರಿಂದ 1150 ರೂ.ಗೆ ಏರಿಕೆ
  • ಬೆಂಗಳೂರು - ಮಡಿಕೇರಿ: 700 ರಿಂದ ₹900ಕ್ಕೆ ಏರಿಕೆ
  • ಬೆಂಗಳೂರು - ಹುಬ್ಬಳ್ಳಿ: 900ರಿಂದ 1050ಕ್ಕೆ ಏರಿಕೆ
  • ಬೆಂಗಳೂರು - ಕಲಬುರ್ಗಿ: 1200 ರಿಂದ 1400ಕ್ಕೆ ಏರಿಕೆ
  • ಬೆಂಗಳೂರು - ಬಳ್ಳಾರಿ: 800ರಿಂದ 950ಕ್ಕೆ

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ; ಬೆಂಗಳೂರಿನಲ್ಲಿ ಎಷ್ಟಿದೆ ಇಂದಿನ ಬೆಲೆ?

ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಸ್‌ಗಳನ್ನು ನಡೆಸುವುದು ಕಷ್ಟವಾಗಿದೆ. ಹೀಗಾಗಿ ದರ ಹೆಚ್ಚಳ ಅನಿವಾರ್ಯ. ಸರ್ಕಾರವು ವಾಹನಗಳ ರಸ್ತೆ ತೆರಿಗೆಯನ್ನು ಕಡಿತಗೊಳಿಸಿದರೆ ನಾವು ದರ ಇಳಿಸಲು ಸಿದ್ಧರಿದ್ದೇವೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ತಿಳಿಸಿದ್ದಾರೆ.