ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 1350 ಕೋಟಿ ರು. ಅಗತ್ಯ

ಕೊಪ್ಪಳ ಜಿಲ್ಲೆಯ ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟ(Anjanadri Hill)ದ ದೇವಸ್ಥಾನ ಪ್ರದೇಶದ ಸಮಗ್ರ ಅಭಿವೃದ್ಧಿಗೆ 1350 ಕೋಟಿ ರು.ಗಳ ಅಗತ್ಯವಿದ್ದು, ವಿಶೇಷ ಅನುದಾನ ಮಂಜೂರಿಗಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್(Tourism Minister K.J. George) ತಿಳಿಸಿದ್ದಾರೆ.

ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 1350 ಕೋಟಿ ರು. ಅಗತ್ಯ

-

Profile
Ashok Nayak Aug 18, 2026 8:42 AM

ವಿಧಾನಸಭೆ: ಕೊಪ್ಪಳ ಜಿಲ್ಲೆಯ ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟ(Anjanadri Hill)ದ ದೇವಸ್ಥಾನ ಪ್ರದೇಶದ ಸಮಗ್ರ ಅಭಿವೃದ್ಧಿಗೆ 1350 ಕೋಟಿ ರು.ಗಳ ಅಗತ್ಯವಿದ್ದು, ವಿಶೇಷ ಅನುದಾನ ಮಂಜೂರಿಗಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್(Tourism Minister K.J. George) ತಿಳಿಸಿದ್ದಾರೆ.

ಇದನ್ನೂ ಓದಿ: KJ George: ರಾಜೀನಾಮೆಗೆ ಮುಂದಾಗಿದ್ದ ಇಂಧನ ಸಚಿವ? ಸದನದಲ್ಲಿ ಕೆಜೆ ಜಾರ್ಜ್ ಹೇಳಿದ್ದೇನು?‌

ಶಾಸಕ ಜನಾರ್ಧನ ರೆಡ್ಡಿ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೆ.ಜೆ.ಜಾರ್ಜ್, ಅಂಜನಾ ದ್ರಿ ಬೆಟ್ಟದ ದೇವಸ್ಥಾನದ ಪ್ರದೇಶ ಅಭಿವೃದ್ಧಿಗಾಗಿ ರಾಜ್ಯ ಸರಕಾರ 2022-23 ಮತ್ತು 2024-25ರಲ್ಲಿ ತಲಾ 100 ಕೋಟಿ ರು. ಮಂಜೂರು ಮಾಡಿದ್ದು, ಅದರಲ್ಲಿ ಕಾಮಗಾರಿಗಳನ್ನೂ ಕೈಗೊಳ್ಳಲಾಗುತ್ತಿದೆ. ಅದರ ಜತೆಗೆ ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ, ವಾಲ್ಮೀಕಿ ವನ, ಯಾತ್ರಿ ನಿವಾಸ, ಪ್ರಸಾದ ನಿಲಯ, ಪ್ರದಕ್ಷಣಾ ಪಥ, ಬೆಟ್ಟದ ಸುತ್ತಲಿನ ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಮೂಲಸೌಕರ್ಯ ಅಭಿವೃದ್ಧಿಗಾಗಿ 1350 ಕೋಟಿ ರು. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಆ ಅನುದಾನವನ್ನು ವಿಶೇಷ ಅನುದಾನದ ಪ್ಯಾಕೇಜ್ ರೂಪದಲ್ಲಿ ನೀಡುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸ್ಥಳೀಯ ಶಾಸಕರು ಮನವಿ ಮಾಡಿದ್ದು, ಅದರಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.