Raksha Bandhan Celebration: ಪ್ರಜ್ವಲ್ ವಿದ್ಯಾನಿಕೇತನ್ ಶಾಲೆಯಲ್ಲಿ ರಕ್ಷಾ ಬಂಧನ ಹಬ್ವದ ಸಂಭ್ರಮ
ಸಂಸ್ಥಾಪಕಿ ಹಾಗೂ ಯೋಗ ಮತ್ತು ಅಂತಃಪ್ರಜ್ಞೆ ಗುರು ಶ್ರೀಮತಿ ಅಂಬಿಕಾ ಸಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಜ್ವಲ್ ವಿದ್ಯಾನಿಕೇತನ್ ಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ಸಹೋದರ-ಸಹೋದರಿಯರ ನಡುವಿನ ಪವಿತ್ರ ಬಾಂಧವ್ಯ ಸಾರುವ ರಕ್ಷಾ ಬಂಧನದ ಮಹತ್ವವನ್ನು ಮಕ್ಕಳಿಗೆ ತಿಳಿಸಲಾಯಿತು.
-
ಬೆಂಗಳೂರು: ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ (ರಿ.) ವತಿಯಿಂದ ಪಟ್ಟಂದೂರು ಅಗ್ರಹಾರದ ಪ್ರಜ್ವಲ್ ವಿದ್ಯಾನಿಕೇತನ್ ಶಾಲೆಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥಾಪಕಿ ಹಾಗೂ ಯೋಗ ಮತ್ತು ಅಂತಃಪ್ರಜ್ಞೆ ಗುರು ಶ್ರೀಮತಿ ಅಂಬಿಕಾ ಸಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಜ್ವಲ್ ವಿದ್ಯಾನಿಕೇತನ್ ಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಹೋದರ-ಸಹೋದರಿಯರ ನಡುವಿನ ಪವಿತ್ರ ಬಾಂಧವ್ಯ ವನ್ನು ಸಾರುವ ರಕ್ಷಾ ಬಂಧನದ ಮಹತ್ವವನ್ನು ಮಕ್ಕಳಿಗೆ ತಿಳಿಸಲಾಯಿತು.
ಇದನ್ನೂ ಓದಿ: Raksha Bandhan 2026: ರಾಖಿಯ ನೂಲಿನಲ್ಲಿ ಪ್ರೀತಿ, ನಂಬಿಕೆ: ಸಹೋದರ–ಸಹೋದರಿಯ ಪವಿತ್ರ ಬಂಧದ ಹಬ್ಬ ರಕ್ಷಾ ಬಂಧನ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಶ್ರೀಯುತ ಎಂ. ಮುನಿಯಪ್ಪ, ಶಾಲಾ ಮುಖ್ಯಸ್ಥರುಗಳಾದ ಶ್ರೀಮತಿ ಹೇಮಾವತಿ ಎಂ, ಶ್ರೀಮತಿ ಶಾಂಭವಿ ವೈ.ವಿ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಿವಕುಮಾರಿ ಅವರು ಉಪಸ್ಥಿತರಿದ್ದರು.
ಮಕ್ಕಳು ಪರಸ್ಪರ ರಾಖಿ ಕಟ್ಟಿ, ಸಿಹಿ ಹಂಚಿ, ಸಹೋದರತ್ವದ ಪ್ರತಿಜ್ಞೆ ಮಾಡಿದರು.
ಈ ಸಂದರ್ಭ ದಲ್ಲಿ ಭಾರತೀಯ ಸಂಸ್ಕೃತಿ, ಮೌಲ್ಯಗಳು ಮತ್ತು ಪರಸ್ಪರ ರಕ್ಷಣೆಯ ಭಾವನೆ ಕುರಿತು ಅಂಬಿಕಾ ಸಿ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಶಿಕ್ಷಕ ವರ್ಗದವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.