ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chief Information Commissioner: ರಾಜ್ಯ ಮಾಹಿತಿ ಆಯೋಗದ ನೂತನ ಮುಖ್ಯ ಆಯುಕ್ತೆಯಾಗಿ ಜಿ. ಸತ್ಯವತಿ ನೇಮಕ

Karnataka Information Commission: ದೀರ್ಘಕಾಲದಿಂದ ತೆರವಾಗಿದ್ದ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರ ಸ್ಥಾನಕ್ಕೆ ಅರ್ಹ ಅಧಿಕಾರಿಯ ಆಯ್ಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಯ್ಕೆ ಸಮಿತಿಯು ಇತ್ತೀಚೆಗೆ ಸಭೆ ನಡೆಸಿ ಚರ್ಚಿಸಿತ್ತು. ಸಮಿತಿಯ ಶಿಫಾರಸಿನ ಮೇರೆಗೆ ರಾಜ್ಯಪಾಲರು ಈಗ ನಿವೃತ್ತ ಐಎಎಸ್‌ ಅಧಿಕಾರಿ ಜಿ. ಸತ್ಯವತಿ ಅವರನ್ನು ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಿಸಿ, ಆದೇಶ ಹೊರಡಿಸಿದ್ದಾರೆ.

ರಾಜ್ಯ ಮಾಹಿತಿ ಆಯೋಗದ ನೂತನ ಮುಖ್ಯ ಆಯುಕ್ತೆಯಾಗಿ ಜಿ. ಸತ್ಯವತಿ ನೇಮಕ

ರಾಜ್ಯದ ನೂತನ ಮುಖ್ಯ ಮಾಹಿತಿ ಆಯುಕ್ಷೆ ಜಿ. ಸತ್ಯವತಿ. -

Prabhakara R
Prabhakara R May 2, 2026 6:53 PM

ಬೆಂಗಳೂರು: ರಾಜ್ಯ ಮಾಹಿತಿ ಆಯೋಗದ (Karnataka Information Commission) ನೂತನ ಮುಖ್ಯ ಮಾಹಿತಿ ಆಯುಕ್ತೆಯಾಗಿ ನಿವೃತ್ತ ಐಎಎಸ್ ಅಧಿಕಾರಿ ಜಿ. ಸತ್ಯವತಿ (G Sathyavathi) ಅವರನ್ನು ನೇಮಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ.

ಕಳೆದ ವರ್ಷ ಜೂನ್ 30ರಂದು ನಿವೃತ್ತಿ ಹೊಂದಿದ್ದ ಜಿ. ಸತ್ಯವತಿಯವರನ್ನು ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರನ್ನಾಗಿ ನೇಮಿಸುವಂತೆ ರಾಜ್ಯ ಸರ್ಕಾರವು ಇತ್ತೀಚೆಗೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಶಿಫಾರಸನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.

2004ರ ಬ್ಯಾಚ್​​ನ ಐಎಎಸ್ ಅಧಿಕಾರಿಯಾದ ಜಿ.ಸತ್ಯವತಿಯವರು, ಕೋಲಾರ, ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಜತೆಗೆ ಬಿಎಂಟಿಸಿಯ ಎಂಡಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿ, ಕರ್ನಾಟಕ ಲೋಕಸೇವಾ ಆಯೋಗ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇದೀಗ ಇವರನ್ನು ರಾಜ್ಯದ ನೂತನ ಮುಖ್ಯ ಮಾಹಿತಿ ಆಯುಕ್ತೆಯಾಗಿ ನೇಮಿಸಲಾಗಿದೆ.

ರಾಜ್ಯ ಮಾಹಿತಿ ಆಯೋಗದ ಬಗ್ಗೆ

ಕರ್ನಾಟಕ ರಾಜ್ಯ ಮಾಹಿತಿ ಆಯೋಗವು (KIC) ಮಾಹಿತಿ ಹಕ್ಕು ಕಾಯ್ದೆ, 2005ರ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾಗಿದೆ. ಸಾರ್ವಜನಿಕ ಪ್ರಾಧಿಕಾರಗಳಿಂದ ಮಾಹಿತಿ ಪಡೆಯಲು ವಿಫಲರಾದಾಗ, ನಾಗರಿಕರು ಇಲ್ಲಿ ದೂರು ಅಥವಾ ಮೇಲ್ಮನವಿ ಸಲ್ಲಿಸಬಹುದು. ಆಯೋಗವು ಮುಖ್ಯ ಮಾಹಿತಿ ಆಯುಕ್ತರು ಮತ್ತು 10 ಜನರನ್ನು ಮೀರದ ಮಾಹಿತಿ ಆಯುಕ್ತರನ್ನು ಒಳಗೊಂಡಿರುತ್ತದೆ. ನಾಗರಿಕರಿಂದ ಬರುವ ದೂರುಗಳು ಮತ್ತು ಮೇಲ್ಮನವಿಗಳನ್ನು ವಿಚಾರಣೆ ನಡೆಸುವುದು ಮತ್ತು ದಂಡ ವಿಧಿಸುವ ಅಧಿಕಾರವನ್ನು ಆಯೋಗ ಹೊಂದಿದೆ.

Sringeri Postal Ballot recount: ಶೃಂಗೇರಿ ಕ್ಷೇತ್ರ ಅಂಚೆ ಮತ ಮರು ಎಣಿಕೆಯಲ್ಲೂ ಕಾಂಗ್ರೆಸ್​​ನ ಟಿ.ಡಿ.ರಾಜೇಗೌಡಗೆ ಗೆಲುವು

ಮಾಹಿತಿ ಹಕ್ಕು ಕಾಯಿದೆ-2005 ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರಗಳಿಂದ ಮಾಹಿತಿ ಪಡೆಯುವಲ್ಲಿ ವಿಫಲರಾದವರ ಅರ್ಜಿಗಳ ವಿಚಾರಣೆ, ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸಿದಾಗ ಅಥವಾ ತಪ್ಪು ಮಾಹಿತಿ ನೀಡಿದಾಗ ದೂರುಗಳನ್ನು ಸ್ವೀಕರಿಸುವುದು, ಮಾಹಿತಿ ಹಕ್ಕಿನ ಅಡಿಯಲ್ಲಿ ದೂರುಗಳು ಮತ್ತು ಮೇಲ್ಮನವಿಗಳನ್ನು ಪರಿಹರಿಸುವುದು ಆಯೋಗದ ಕಾರ್ಯವಾಗಿದೆ.