ಬೀಸ್ಪೋಕ್ ಎಐ ಏರ್ ಕಂಡಿಷನರ್ ಗಳ ಮೇಲೆ “ಗೋ ಸೇವ್ ಟುಡೇ” ಆಫರ್ ಘೋಷಿಸಿದ ಸ್ಯಾಮ್‌ಸಂಗ್
ಗೋ ಸೇವ್ ಆಫರ್ ಮೂರು ವಿಷಯಗಳ ಆಧಾರದಲ್ಲಿ ರೂಪುಗೊಂಡಿದ್ದು, ಜಿ.ಎಸ್.ಟಿ ಕಡಿತದ ಲಾಭ, ವಿಸ್ತೃತ ವಾರಂಟಿ ಪ್ರಯೋಜನಗಳು ಮತ್ತು ಇಂಧನ ಉಳಿತಾಯದ ಲಾಭ ಒದಗಿಸಲಿದೆ. ಬೀಸ್ಪೋಕ್ ಎಐ ಏರ್ ಕಂಡಿಷನರ್ ಖರೀದಿಸುವವರಿಗೆ ಉಚಿತ ಇನ್ ಸ್ಟಾಲೇಷನ್, ಆಕರ್ಷಕ ಕ್ಯಾಶ್ ಬ್ಯಾಕ್ ಮತ್ತು ಹಬ್ಬದ ಸೀಸನ್ ನಲ್ಲಿ ವಿಸ್ತೃತ ವಾರಂಟಿ ಪ್ರಯೋಜನಗಳು ಲಭ್ಯ. ಗ್ರಾಹಕರಿಗೆ ಹಬ್ಬದ ಆಫರ್ ನ ಭಾಗವಾಗಿ ಒಟ್ಟು 21,000 ರೂಪಾಯಿಗಳವರೆಗಿನ ಪ್ರಯೋಜನಗಳು ದೊರೆಯಲಿದೆ.

-

ಬೆಂಗಳೂರು, ಭಾರತ- ಸೆಪ್ಟೆಂಬರ್ 30, 2025: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್ ಸಂಗ್ ಈ ಹಬ್ಬದ ಸೀಸನ್ ನಲ್ಲಿ ಬೀಸ್ಪೋಕ್ ಎಐ ಏರ್ ಕಂಡಿಷನರ್ ಗಳ ಮೇಲೆ “ಗೋ ಸೇವ್ ಟುಡೇ” (ಹೋಗಿ ಇವತ್ತು ಉಳಿತಾಯ ಗಳಿಸಿ) ಆಫರ್ ಅನ್ನು ಘೋಷಿಸಿದ್ದು, ಗ್ರಾಹಕರಿಗೆ 21,000 ರೂಪಾಯಿಗಳವರೆಗೆ ಉಳಿತಾಯ ಮಾಡುವ ಅವಕಾಶ ಒದಗಿಸಿದೆ. ಗೋ ಸೇವ್ ಆಫರ್ ಮೂರು ವಿಷಯಗಳ ಆಧಾರದಲ್ಲಿ ರೂಪುಗೊಂಡಿದ್ದು, ಇಂಧನ ಉಳಿತಾಯ, ವಿಸ್ತೃತ ವಾರಂಟಿ ಪ್ರಯೋಜನಗಳು ಮತ್ತು ಜಿ.ಎಸ್.ಟಿ ಕಡಿತದ ಲಾಭವನ್ನು ಗ್ರಾಹಕರಿಗೆ ಒದಗಿಸಲಿದೆ.
“ಗೋ ಸೇವ್ ಟುಡೇ” ಆಫರ್ ನ ಭಾಗವಾಗಿ ಪ್ರೀಮಿಯಂ ಬೀಸ್ಪೋಕ್ ಎಐ ಏರ್ ಕಂಡಿಷನರ್ ಖರೀದಿಸುವ ಗ್ರಾಹಕರಿಗೆ ಎಕ್ಸ್ ಕ್ಲೂಸಿವ್ 5-5-50 ಆಫರ್ ಲಭ್ಯವಿದೆ, ಅದೇನೆಂದರೆ ಸೆಪ್ಟೆಂಬರ್ 22 ರಿಂದ ನವೆಂಬರ್ 10, 2025 ರವರೆಗಿನ 50 ದಿನಗಳ ಅವಧಿಯಲ್ಲಿ ಏಸಿ ಖರೀದಿಸಿದರೆ ಈಗಿನ 5 ವರ್ಷಗಳ ಸಮಗ್ರ ವಾರಂಟಿ ಜೊತೆಗೆ ಹೆಚ್ಚುವರಿಯಾಗಿ 5 ತಿಂಗಳ ಸಮಗ್ರ ವಾರಂಟಿ ದೊರೆಯಲಿದೆ.
ಸ್ಯಾಮ್ ಸಂಗ್ ತನ್ನ ಬೀಸ್ಪೋಕ್ ಎಐ ಏರ್ ಕಂಡಿಷನರ್ ಖರೀದಿಸುವ ಗ್ರಾಹಕರಿಗೆ 3,800 ರೂಪಾಯಿಗಳವರೆಗಿನ ಜಿ.ಎಸ್.ಟಿ ಕಡಿತ ಲಾಭ, 1,500 ರೂಪಾಯಿ ಮೌಲ್ಯದ ಉಚಿತ ಇನ್ ಸ್ಟಾಲೇಷನ್ ಸೌಲಭ್ಯ ಮತ್ತು 4,000 ರೂಪಾಯಿಗಳವರೆಗಿನ ಬ್ಯಾಂಕ್ ಕ್ಯಾಶ್ ಬ್ಯಾಕ್ ಒದಗಿಸುತ್ತಿದೆ. ಹಾಗಾಗಿ ಕುಟುಂಬಗಳು ಸ್ಮಾರ್ಟ್ ಮತ್ತು ಇಂಧನ ಸಮರ್ಥ ಬೀಸ್ಪೋಕ್ ಎಐ ಏಸಿಗಳನ್ನು ಮನೆಗೆ ತೆಗೆದುಕೊಂಡುಹೋಗಲು ಇದು ಸೂಕ್ತ ಸಮಯವಾಗಿದೆ.
ಇದನ್ನೂ ಓದಿ: Bangalore News: ಐಬಿಎಸ್ ಬ್ಯುಸಿನೆಸ್ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಬೀಸ್ಪೋಕ್ ಎಐ ಏಸಿ ಖರೀದಿಸುವ ಗ್ರಾಹಕರಿಗೆ 5 ವರ್ಷಗಳ ಸಮಗ್ರ ವಾರಂಟಿ ಜೊತೆಗೆ 12,000 ರೂಪಾಯಿ ಮೌಲ್ಯದ ಹೆಚ್ಚುವರಿ 5 ತಿಂಗಳ ವಾರಂಟಿ ಲಭ್ಯವಿದೆ. ಜಿ.ಎಸ್.ಟಿ ದರ ಕಡಿತದ ಪ್ರಯೋ ಜನಗಳನ್ನು ಒದಗಿಸುವ ಮೂಲಕ ಸ್ಯಾಮ್ ಸಂಗ್ ಬೀಸ್ಪೋಕ್ ಎಐ ಏರ್ ಕಂಡಿಷನರ್ ಗಳ ಖರೀದಿ ಈಗ ಹಿಂದೆಂದಿಗಿಂತಲೂ ಸುಲಭವಾಗಲಿದೆ.
ಈ ಕುರಿತು ಮಾತನಾಡಿದ ಸ್ಯಾಮ್ ಸಂಗ್ ಇಂಡಿಯಾದ ಡಿಜಿಟಲ್ ಅಪ್ಲೈಯನ್ಸಸ್ ವಿಭಾಗದ ಉಪಾಧ್ಯಕ್ಷ ಘುಫ್ರಾನ್ ಅಲಮ್ ಅವರು, “ಗೋ ಸೇವ್ ಟುಡೇ ಆಫರ್ ಗಳ ಮೂಲಕ ನಮ್ಮ ಗ್ರಾಹಕರ ಜೊತೆಗೆ ಹಬ್ಬದ ಸಂಭ್ರಮವನ್ನು ಆಚರಿಸಲು ನಾವು ಉತ್ಸುಕರಾಗಿದ್ದೇವೆ. ಈ ಆಫರ್ ಮೂಲಕ ನಮ್ಮ ಸುಧಾರಿತ ತಂತ್ರಜ್ಞಾನವನ್ನು ಎಂದಿಗಿಂತಲೂ ಸುಲಭವಾಗಿ ಲಭ್ಯವಾಗಿಸು ತ್ತಿದ್ದೇವೆ.
ನಮ್ಮ 5-5-50 ಆಫರ್ ಒಂದು ವಿಶಿಷ್ಟ ಕೊಡುಗೆಯಾಗಿದ್ದು, ಜಿ.ಎಸ್.ಟಿ ಕಡಿತ, ವಿಸ್ತೃತ ವಾರಂಟಿ, ಉಚಿತ ಇನ್ ಸ್ಟಾಲೇಷನ್ ಸೌಲಭ್ಯ ಮತ್ತು ಬ್ಯಾಂಕ್ ಕ್ಯಾಶ್ ಬ್ಯಾಕ್ ಮೂಲಕ ಕುಟುಂಬಗಳು ಬೀಸ್ಪೋಕ್ ಎಐ ಏರ್ ಕಂಡಿಷನರ್ ಗಳನ್ನು ಖರೀದಿಸುವುದನ್ನು ಸುಲಭವಾಗಿಸುತ್ತದೆ. ನಮ್ಮ ಬೀಸ್ಪೋಕ್ ಎಐ ಏರ್ ಕಂಡಿಷನರ್ ಶ್ರೇಣಿಯು ದೈನಂದಿನ ಜೀವನವನ್ನು ಸುಗಮಗೊಳಿಸುತ್ತದೆ ಮತ್ತು ಈ ಆಫರ್ ಗಳು ಸ್ಮಾರ್ಟ್, ಇಂಧನ ಸಮರ್ಥ ಕೂಲಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಲಾಭದಾಯಕವಾಗಿಸುತ್ತವೆ” ಎಂದು ಹೇಳಿದರು.
ಬೀಸ್ಪೋಕ್ ಎಐ ವಿಂಡ್‌ಫ್ರೀ ಏರ್ ಕಂಡಿಷನರ್ ಗಳನ್ನು ಸೌಕರ್ಯ ಮತ್ತು ದಕ್ಷತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದ್ದು, ಇದು ಶಕ್ತಿಯುತ ಕೂಲಿಂಗ್ ಮತ್ತು ಕಡಿಮೆ ವಿದ್ಯುತ್ ಬಳಕೆಯ ಸಾಮರ್ಥ್ಯವನ್ನು ಹೊಂದಿದೆ. ಸ್ಯಾಮ್ ಸಂಗ್ ಬೀಸ್ಪೋಕ್ ಎಐ ಏರ್ ಕಂಡಿಷನರ್ ಗಳಲ್ಲಿ ಎಐ ಎನರ್ಜಿ ಮೋಡ್ ಮೂಲಕ ಗ್ರಾಹಕರು 30% ರವರೆಗೆ ಇಂಧನ ಉಳಿತಾಯ ಮಾಡಬಹುದು. ವಿಂಡ್‌ಫ್ರೀ ಕೂಲಿಂಗ್, ಎಐ ಫಾಸ್ಟ್ & ಕಂಫರ್ಟ್ ಮೋಡ್, 5 -ಸ್ಟೇಜ್ ಕನ್ವರ್ಟಿಬಲ್ ಕೂಲಿಂಗ್ ಮತ್ತು ಕ್ವೈಟ್ ಆಪರೇಷನ್ ನಂತಹ ಫೀಚರ್ ಗಳು ಇದರಲ್ಲಿ ಲಭ್ಯವಿದ್ದು, ಈ ಫೀಚರ್ ಗಳು ಈ ಏಸಿಗಳನ್ನು ಆಧುನಿಕ ಜೀವನಕ್ಕೆ ಸೂಕ್ತವಾಗಿ ರೂಪಿಸಿವೆ.
ದೀರ್ಘ ಬಾಳಿಕೆ ಬರುವ ಕಾಪರ್ ಕಂಡೆನ್ಸರ್, ವೈ-ಫೈ ಮತ್ತು ಸ್ಮಾರ್ಟ್ ಥಿಂಗ್ಸ್ ಆಪ್ ಕಂಟ್ರೋಲ್ ನಂತಹ ಸ್ಮಾರ್ಟ್ ಸೌಕರ್ಯಗಳು, ಗುಪ್ತ ಎಲ್ಇಡಿ ಪ್ಯಾನಲ್ ಡಿಸ್ ಪ್ಲೇ, ಹಲವು ಕೂಲಿಂಗ್ ಮೋಡ್ ಗಳು (ಟರ್ಬೋ, ಸ್ಲೀಪ್, ಡಿಹ್ಯೂಮಿಡಿಫಿಕೇಶನ್ ಇತ್ಯಾದಿ) ಮತ್ತು ಸುಧಾರಿತ ಫಿಲ್ಟರ್ ತಂತ್ರ ಜ್ಞಾನವು (ಫ್ರೀಜ್ ವಾಶ್, ಆಟೋ-ಕ್ಲೀನ್, ಆಂಟಿ-ಬ್ಯಾಕ್ಟೀರಿಯಲ್ ಫಿಲ್ಟರ್) ಏಸಿಗಳ ಕಾರ್ಯಕ್ಷಮತೆ, ಸ್ವಚ್ಛತೆ ಮತ್ತು ಬಳಕೆಯನ್ನು ಉತ್ತಮಗೊಳಿಸುತ್ತವೆ.
ಗ್ರಾಹಕರು ಈ ಹಬ್ಬದ ಆಫರ್ ಗಳನ್ನು ಸ್ಯಾಮ್ ಸಂಗ್ ಅಧಿಕೃತ ಪಾಲುದಾರ ಸ್ಟೋರ್ ಗಳು, Samsung.com ಮತ್ತು ಪ್ರಮುಖ ಇ- ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಪಡೆಯಬಹುದು. ಹಬ್ಬದ ಸಂಭ್ರಮಕ್ಕೆ ಮನೆಯನ್ನು ಸಿದ್ಧಪಡಿಸಲು ಅಥವಾ ಪ್ರೀತಿಪಾತ್ರರಿಗೆ ಅನುಕೂಲತೆಯನ್ನು ಒದಗಿಸಲು ಸ್ಯಾಮ್ ಸಂಗ್ ಬೀಸ್ಪೋಕ್ ಎಐ ಏರ್ ಕಂಡಿಷನರ್ ಅನ್ನು ಖರೀದಿಸಲು ಇದು ಸೂಕ್ತ ಸಮಯವಾಗಿದೆ.