Narayana Yaji Column: ಭಾರತದ ಮೇಲೇಕೆ ಅಧಿಕ ಸುಂಕ ?
ಭಾರತ ಮತ್ತು ಅಮೆರಿಕಗಳ ನಡುವಿನ ವ್ಯಾಪಾರದ ಪಾಲುದಾರಿಕೆಯನ್ನು ಒಮ್ಮೆ ಗಮನಿಸೋಣ. ಅಮೆರಿಕದ ಒಟ್ಟೂ ಆಮದಿನಲ್ಲಿ ಸಿಂಹಪಾಲು ಯುರೋಪಿಯನ್ ಯೂನಿಯನ್ ಮತ್ತು ಚೈನಾ ದಿಂದ ಕ್ರಮವಾಗಿ 605.76 ಮತ್ತು 438.95 ಬಿಲಿಯನ್ ಡಾಲರಗಳಷ್ಟಾದರೆ, ಭಾರತದಿಂದ ಕೇವಲ 129.02 ಬಿಲಿಯನ್ ಡಾಲರಗಳಷ್ಟಾಗಿದೆ. ಅದರಲ್ಲಿ ರಪ್ತು 87.4 ಬಿಲಿಯ ಡಾಲರ್ ಆದರೆ ಆಮದು 41.08 ಡಾಲರ ಗಳು.


ನಾರಾಯಣ ಯಾಜಿ
ಈ ಹಿಂದೆ ನಮ್ಮ ದೇಶವು ಪ್ರೋಕ್ರಾನ್ ಅಣು ಪರೀಕ್ಷೆ ಮಾಡಿದಾಗ, ಅಮೆರಿಕವು ಇಂದಿ ಗಿಂತಲೂ ಅಧಿಕ ಆರ್ಥಿಕ ನಿರ್ಬಂಧಗಳನ್ನು ಹೇರಿತ್ತು. ಅಟಲ್ ಬಿಹಾರಿ ವಾಜಪೇಯಿ ಯವರು ಅದನ್ನು ದಿಟ್ಟವಾಗಿ ಎದುರಿಸಿದ್ದರು. ಈಗ ಭಾರತದ ಮೇಲೆ ಶೇ.25 ಸುಂಕ ಹೇರಲಾಗಿದೆ; ಇದರಿಂದ ಕಿರು ಅವಧಿಯಲ್ಲಿ ಸ್ವಲ್ಪ ಬಿಕ್ಕಟ್ಟು ಎದುರಾಗಬಹುದು. ಜಾಣ್ಮೆ ಯಿಂದ ಎದುರಿಸುವುದು ಮುಖ್ಯ ಎನಿಸಿದೆ.
ಕೊನೆಗೂ, ಅಮೆರಿಕವು ಭಾರತದ ವಿರುದ್ಧ ಸುಂಕದ ಬಾಂಬನ್ನು ಹಾಕಿಯೇ ಬಿಟ್ಟಿದೆ. ಇನ್ನು ಮುಂದೆ ಭಾರತವು ಯಾವುದೇ ವಸ್ತುವನ್ನು ಅಮೆರಿಕಕ್ಕೆ ರಫ್ತು ಮಾಡಿದರೆ, ಅದರ ಮೇಲೆ 25% ಸುಂಕ ವಿಧಿಸಲಾಗುವುದು ಮತ್ತು ರಶಿಯಾದಿಂದ ತೈಲ ಮತ್ತು ಮಿಲಿಟರಿ ಉಪರಕರಣಗಳ ಆಮದು ಆಮದು ನಿಲ್ಲಿಸದಿದ್ದರೆ ಇನ್ನಷ್ಟು ದಂಡದ ಎಚ್ಚರಿಕೆ!
ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಇನ್ನಷ್ಟು ಮುಂದೆ ಹೋಗಿ, ರಶಿಯಾದಿಂದ ತೈಲದ ಆಮದನ್ನು ನಿಲ್ಲಿಸದಿದ್ದರೆ ಚೈನಾ, ಭಾರತ ಮತ್ತು ಬ್ರೆಜಿಲ್ ದೇಶಗಳ ಅರ್ಥವ್ಯವಸ್ಥೆಯನ್ನು ಅಪ್ಪಚ್ಚಿ ಮಾಡಿ ಬಿಡುವೆನೆಂದು ಗುಟುರಾಯಿಸಿದ್ದಾನೆ. ಜಗತ್ತಿನ ದೊಡ್ಡ ಸಾಲಗಾರ ಅಮೆರಿಕವನ್ನು ಮತ್ತೆ ಮೊದಲಿನ ಮಹಾನ್ (ಮೆಗಾ) ದೇಶವನ್ನಾಗಿಸಬೇಕೆನ್ನುವ ಕನಸು ಅವರ ನಾಯಕರಲ್ಲಿದ್ದರೆ ಅದನ್ನು ಆಕ್ಷೇಪಿಸಲು ಬರುವುದಿಲ್ಲ. ಆದರೆ ಈ ನಿರ್ಧಾರದ ಹಿಂದೆ ಇರುವುದು ‘ಮೆಗಾ’ ಅಮೆರಿಕ ವನ್ನು ಮಹಾನ್ ದೇಶವನ್ನಾಗಿಸುವದಕ್ಕಿಂತಲೂ, ಉಕ್ರೇನ್ ಯುದ್ಧವನ್ನು ನಿಲ್ಲಿಸಿ ನೋಬಲ್ ಪ್ರಶಸ್ತಿಯ ಮೇಲೆ ಇನ್ನಷ್ಟು ಹಕ್ಕನ್ನು ಚಲಾಯಿಸುವ ಮನೋಭಾವ ಎದ್ದು ಕಾಣುತ್ತದೆ.
ಭಾರತ ಮತ್ತು ಅಮೆರಿಕಗಳ ನಡುವಿನ ವ್ಯಾಪಾರದ ಪಾಲುದಾರಿಕೆಯನ್ನು ಒಮ್ಮೆ ಗಮನಿಸೋಣ. ಅಮೆರಿಕದ ಒಟ್ಟೂ ಆಮದಿನಲ್ಲಿ ಸಿಂಹಪಾಲು ಯುರೋಪಿಯನ್ ಯೂನಿಯನ್ ಮತ್ತು ಚೈನಾ ದಿಂದ ಕ್ರಮವಾಗಿ 605.76 ಮತ್ತು 438.95 ಬಿಲಿಯನ್ ಡಾಲರಗಳಷ್ಟಾದರೆ, ಭಾರತದಿಂದ ಕೇವಲ 129.02 ಬಿಲಿಯನ್ ಡಾಲರಗಳಷ್ಟಾಗಿದೆ. ಅದರಲ್ಲಿ ರಪ್ತು 87.4 ಬಿಲಿಯ ಡಾಲರ್ ಆದರೆ ಆಮದು 41.08 ಡಾಲರಗಳು. ಐಟಿ ವಲಯದ 57 ಬಿಲಿಯ ಡಾಲರ್ ಯಾವುದೇ ಕರ ನಿಬಂಧನೆಗಳಿಗೆ ಒಳಪಟ್ಟಿಲ್ಲ. (ಭಾರತದ ಐಟಿ ಮತ್ತು ಸೇವಾ ವಲಯದ ಜಾಗತಿಕ ಆದಾಯ 200 ಬಿಲಿಯ ಡಾಲರ ಗಳಷ್ಟಿದೆ).
ಇದನ್ನೂ ಓದಿ: Narayana Yaji Column: ಸೀತಾನ್ವೇಷಣೆಗೆ ಹೊರಟಿತು ವಾನರರ ದಂಡು
ಯಾವುದು ಅಧಿಕ ರಫ್ತು?
ಭಾರತ ರಪ್ತುಮಾಡುವುದು ಮುಖ್ಯವಾಗಿ -ರ್ಮಾ ಮತ್ತು ಸಿದ್ಧ ಉಡುಪು, ವಜ್ರಾಭರಣಗಳು, ಸ್ಟೀಲ್ ಇನ್ನಿತರ ವಲಯಗಳಿಂದ ಬರುತ್ತವೆ. ಅಮೆರಿಕದಿಂದ ನಾವು ಆಮದು ಮಾಡುವುದು ಮುಖ್ಯವಾಗಿ ವೈಮಾನಿಕ ಕ್ಷೇತ್ರ, ಔಷಧ ತಯಾರಿಸಲು ಬೇಕಾದ ಉಪಕರಣಗಳು, ರಕ್ಷಣಾ ಸಲಕರಣೆಗಳು, ಎಂಜಿನಿಯರಿಂಗ್ ಮಶಿನರಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳಾಗಿವೆ. ಅದೇ ಚೈನಾದ ವ್ಯವಹಾರ 438.95 ಬಿಲಿಯನ್ ಡಾಲರಿನಷ್ಟಾಗಿದ್ದು, ಒಟ್ಟೂ 295.40 ಬಿಲಿಯನ್ ಕೊರತೆ ಡಾಲರ್ ಅನು ಭವಿಸುತ್ತಿವೆ. ವಾರ್ಷಿಕವಾಗಿ ಅಮೆರಿಕದ 4083.3 ಬಿಲಿಯನ್ ಡಾಲರಿನ ಆಮದಿಗೆ ಹೋಲಿಸಿದರೆ ಭಾರತದ ಪಾಲು 2.1%ದಷ್ಟಿದೆ (ಐಟಿ ವಲಯವನ್ನು ಬಿಟ್ಟು).
ಪರಿಣಾಮ ಕಡಿಮೆ!
ಹಾಗೆ ನೋಡಿದರೆ, ವಾಸ್ತವವಾಗಿ ಭಾರತದ ವ್ಯವಹಾರ ಇನ್ನೂ ಅಂಬೆಗಾಲಿನಲ್ಲಿದೆ. ಹಾಗಾಗಿ ಭಾರತದ ಮೇಲಿನ ಸುಂಕದಿಂದ, ಅಮೆರಿಕದ ಆರ್ಥಿಕ ವ್ಯವಸ್ಥೆಯ ಮೇಲೆ ಆಗುವ ದೀರ್ಘಕಾಲೀನ ಪರಿಣಾಮ ನಗಣ್ಯ. ಆದರೆ ಅಮೆರಿಕ ಭಾರತದ ದೊಡ್ಡ ವ್ಯಾಪಾರ ಪಾಲುದಾರ. ದೇಶದ 824.9 ಬಿಲಿಯನ್ ಡಾಲರ್‌ನಲ್ಲಿ ಅಮೆರಿಕ ಈಗ ಭಾರತದ ಒಟ್ಟಾರೆಯಾದ ವ್ಯಾಪಾರದಲ್ಲಿ ಅಮೆರಿಕದ ಪಾಲು ಐಟಿ ವಲಯಯವನ್ನು ಹಿಡಿದರೆ ಶೇ 14.6 ರಷ್ಟಿದೆ.
ಇದು ಭಾರತದ ಪಾಲಿಗೆ ಬಹುದೊಡ್ಡದು. ಹಾಗಾಗಿ ಭಾರತ ತನ್ನ ಆರ್ಥಿಕತೆಯ ಮೇಲಾಗುವ ಪರಿಣಾಮವನ್ನು ಮರೆಯುವಂತಿಲ್ಲ. ಭಾರತ ಅಮೆರಿಕಕ್ಕೆ ರಪ್ತುಮಾಡುವ ವಸ್ತುಗಳಲ್ಲಿ ಹೆಚ್ಚಿನವು ಸಣ್ಣ ಮತ್ತು ಮದ್ಯಮ ಕೈಗಾರಿಕಾ ವಲಯದ ಸಿದ್ಧ ಉಡುಪು, ಜನರಿಕ್ ಔಷಧ, ಆಭರಣ, ಅಟೋ ಮೊಬೈಲ್ ಬಿಡಿಭಾಗಗಳು. ಸಮಾಧಾನದ ಸಂಗತಿಯೆಂದರೆ ಐಟಿ ವಲಯ ಸೇವಾ ವ್ಯಾಪ್ತಿಯಲ್ಲಿ ಬರುವುದರಿಂದ ಸುಂಕದ ವ್ಯಾಪ್ತಿಗೆ ಬರುವುದಿಲ್ಲ.
ಪರಿಣಾಮಗಳು
ಅಮೆರಿಕದ ನಿತ್ಯಬಳಕೆಯ ವಸ್ತುಗಳಲ್ಲಿ ಭಾರತವು ಪ್ರಮುಖ ವ್ಯಾಪಾರ ಪಾಲುದಾರರಾಗಿದ್ದು, ಎಲೆಕ್ಟ್ರಾನಿಕ್ಸ್, ವಾಹನಗಳು, ಕಬ್ಬಿಣ, ರಾಸಾಯನಿಕಗಳು, ಚಿನ್ನ, ಮತ್ತು ಸಿದ್ಧ ಉಡುಪುಗಳು ತುಟ್ಟಿ ಯಾಗಲಿವೆ. ಫಾರ್ಮಾ ವಲಯವನ್ನು ಗಮನಿಸುವುದಾದರೆ ಅಲ್ಲಿನ ಒಟ್ಟೂ ಬೇಡಿಕೆಯ 40%ಷ್ಟು ಭಾರತವನ್ನೇ ಅವಲಂಬಿಸಿದೆ. ಈಗಾಗಲೇ ಯೇಲೇ ವಿಶ್ವವಿದ್ಯಾಲಯ, ತನ್ನ ವರದಿಯಲ್ಲಿ ಟ್ರಂಪ್ ಕೈಗೊಂಡ ಈ ಕ್ರಮದಿಂದಾಗಿ ಅಮೆರಿಕದ ನಿತ್ಯ ಬಳಕೆಯ ವಸ್ತುಗಳು ತುಟ್ಟಿಯಾಗಿ, ಕೇವಲ ಆರೋಗ್ಯ ವೆಚ್ಚವೊಂದರಲ್ಲಿಯೇ ಅಲ್ಲಿನ ಬಡ ಮದ್ಯಮವರ್ಗ ವಾರ್ಷಿಕವಾಗಿ ಸುಮಾರು 2400 ಡಾಲರ್ ಹೆಚ್ಚಿನ ಹೊರೆಯನ್ನು ಮತ್ತು ಮೇಲ್ ಮಧ್ಯಮ ವರ್ಗದ ವೆಚ್ಚ 5000 ಡಾಲರಿನಷ್ಟು ಆಗಬಹುದು, ಇದು ಅಮೆರಿಕದ ಅರ್ಥವ್ಯವಸ್ಥೆಗೆ ತಿರುಗುಬಾಣವಾಗಿ ಪರಿಣಮಿಸಬಹುದೆಂದೂ ಎಚ್ಚರಿಕೆಯನ್ನು ನೀಡಿರುವುದು ಭಾರತಕ್ಕಿರುವ ಬೆಳ್ಳಿರೇಖೆ. ಸಿದ್ಧ ಉಡುಪುಗಳ ತುಟಾಗ್ರತೆ ಶೇ 19 ರಷ್ಟು ಹೆಚ್ಚಾಗಿ ಬದುಕನ್ನು ಇನ್ನಷ್ಟು ಹೈರಾಣಾಗಿಸಬಹುದು.
ಭಾರತದ ಮುಂದಿರುವ ಸವಾಲುಗಳು
ಪ್ರೊ ಆಕ್ಟಿವ್ ಎನ್ನುವುದು ಯಾವತ್ತಿಗೂ ವ್ಯವಹಾರದಲ್ಲಿನ ಜಾಣ ನಡೆ. ಕೋವಿಡೋತ್ತರ ಮತ್ತು ಟ್ರಂಪ್‌ನ ಎರಡನೆಯ ಅವಧಿಯಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸು ತ್ತಿರುವ ಭಾರತ ವ್ಯಾಪಾರಕ್ಕಾಗಿ ವ್ಯೂಹಾತ್ಮಕ ಪಾಲುದಾರಿಕೆಯನ್ನು ಯುರೋಪ್, ಆಫ್ರಿಕಾ ಮತ್ತು ಬ್ರಿಟನ್‌ಗಳತ್ತ ಲಕ್ಷ್ಯ ಹರಿಸಿದೆ. ಇದರ ಭಾಗವಾಗಿ ಸಂಪೂರ್ಣ ಆರ್ಥಿಕ ಸಹಭಾಗಿತ್ವ ಒಪ್ಪಂದಗಳು, ಮತ್ತು ಮುಕ್ತ ವ್ಯಾಪಾರ ಒಪ್ಪಂದಗಳು ಪರಿಣಾಮಕಾರಿ ಕಾರ್ಯವನ್ನು ನಿರ್ವಹಿಸಲಿವೆ.
ಯುರೋಪಿಯನ್ ಯೂನಿಯನ್
2025 ಕೊನೆಯ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆಯಲ್ಲಿರುವ ಭಾರತ ಯುರೋಪ್ ಮುಕ್ತ ವ್ಯಾಪಾರ ಒಪ್ಪಂದವು ವಸ್ತ್ರ, ಚರ್ಮೋತ್ಪನ್ನ, ಯಂತ್ರೋಪಕರಣ ಮತ್ತು ಔಷಧಿಗಳ ಮೇಲಿನ ಸುಂಕವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಈಗಾಗಲೇ ಯುರೋಪ್ ಭಾರತಕ್ಕೆ ಮೂರನೇ ಅತಿ ದೊಡ್ಡ ವ್ಯಾಪಾರ ಪಾಲುದಾರ. ಬ್ರಿಟನ್ ಭಾರತ ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಬಂದಿದೆ. ಚರ್ಚೆಗಳು ಅಂತಿಮ ಹಂತದಲ್ಲಿವೆ.
ನಾವೇ ಒಂದು ವಿಶ್ವ!
ತಿಯಾನ್ಮೆನ್ ಚೌಕದ ದುರಂತದ ನಂತರ ಪಾಶ್ಚಾತ್ಯ ರಾಷ್ಟ್ರಗಳು ಚೈನಾದ ಮೇಲೆ ನಿರ್ಬಂಧ ಹೇರಿದಾಗ ಅಧ್ಯಕ್ಷ ಡೆಂಗ್ ‘ನಾವು ನೂರಾ ಇಪ್ಪತ್ತು ಕೋಟಿ ಜನಸಂಖ್ಯೆಯುಳ್ಳ ದೇಶ, ನಾವೇ ಒಂದು ವಿಶ್ವ’ ಎಂದಿದ್ದ. ಭಾರತವೂ ಅಷ್ಟೇ, ನಮ್ಮ ಜನಸಂಖ್ಯೆ ಪ್ರಪಂಚದ ಪ್ರಮುಖ ಮಾರುಕಟ್ಟೆ ಗಳಲ್ಲೊಂದಾಗಿದೆ. ವಿಜ್ಞಾನ, ರಕ್ಷಣೆ, ಔದ್ಯಮಿಕ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವುದು ಪಾಶ್ಚಾತ್ಯ ಜಗತ್ತಿನ ಕಿಸಿರಿಗೆ ಕಾರಣ. ಯಾವತ್ತಿದ್ದರೂ ರಶಿಯಾ ನಮ್ಮ ವ್ಯೂಹಾತ್ಮಕ ಪಾಲುದರ ಎನ್ನುವುದನ್ನು ಮರೆಯಕೂಡದು.
ಭಾರತ ಚೀನಾ ವ್ಯಾಪಾರ 136 ಬಿಲಿಯನ್ ತಲುಪಿದೆ. ಭಾರತದ ಔಷಧೋತ್ಪಾದನೆ ಚೀನಾದ ಕಚ್ಚಾವಸ್ತುಗಳ ಮೇಲೆ ಅವಲಂಬಿಸಿದೆ. ಅದೇ ರೀತಿ ರಶಿಯಾ ಮತ್ತು ಭಾರತದ ವ್ಯಾಪಾರ 65 ಬಿಲಿಯನ್ ದಾಟಿದೆ. ಎರಡು ದೇಶಗಳ ನಡುವೆ ರೂಪಾಯಿಯಲ್ಲಿ ವಿನಿಮಯವಾಗುತ್ತಿರುವು ದರಿಂದ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬಹುದು. ಈ ಹಿಂದೆ ಪ್ರೋಕ್ರಾನ್ ಅಣು ಪರೀಕ್ಷೆಯ ನಂತರ ಇದಕ್ಕಿಂತಲೂ ಹೆಚ್ಚಿನ ಆರ್ಥಿಕ ನಿಬಂಧಗಳನ್ನು ಅಮೆರಿಕ ಹೇರಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರು ಅದನ್ನು ದಿಟ್ಟವಾಗಿ ಎದುರಿಸಿದ್ದರು.
ಮುಂಬಾಗಿಲು ಹಾಕಿ ಹಿಂಬಾಗಿ ಲಲ್ಲಿ ವ್ಯವಹರಿಸುವುದು ಅಮೆರಿಕಕ್ಕೆ ಹೊಸತಲ್ಲ. ವಾಣಿಜ್ಯ ವೆಂದರೆ ಸಂತೆಯಲ್ಲಿ ಅಂಗಡಿಯನ್ನು ತೆರೆದಂತೆ. ಅನೇಕರ ಅಂಗಡಿ ಇರುತ್ತದೆ. ಮಾರ್ಕೆಟಿಂಗ್ ತಂತ್ರ ವ್ಯವಹಾರವನ್ನು ಹೆಚ್ಚಿಸುತ್ತದೆ. ಚೀನಾವನ್ನು ನಂಬುವ ಸ್ಥಿತಿಯಲ್ಲಿಲ್ಲ. ಆದರೂ ವ್ಯಾಪಾರ ದಲ್ಲಿ ಲಾಭದ ವಿಷಯ ಬಂದಾಗ ಶತ್ರು ಮಿತ್ರನಾಗಬಹುದು.
ಜಿಡಿಪಿ ಕುಸಿತ?
ಅಮೆರಿಕ ವಿಧಿಸಿದ ಶೇ.25 ಸುಂಕದಿಂದಾಗಿ, ಭಾರತವು ಕಿರು ಅವಧಿಗೆ ಸಮಸ್ಯೆಗಳನ್ನು ಎದುರಿಸ ಬೇಕಾಗಬಹುದು. ನಮ್ಮ ಜಿಡಿಪಿ ಬೆಳವಣಿಗೆ ಶೇ 6.8 ರಿಂದ ಶೇ 6ಕ್ಕೆ ಇಳಿಯಬಹುದೆಂದು ಅಂದಾಜಿಸ ಲಾಗಿದೆ. ಫಾರ್ಮಾ ವಲಯಕ್ಕೆ ಪ್ರತಿಸ್ಪರ್ಧಿಯಾಗಿ ನಮ್ಮಷ್ಟು ಕಡಿಮೆ ದರದಲ್ಲಿ ಉತ್ಪಾದನೆ ಮಾಡುವ ಬೇರೆ ಯಾವ ದೇಶಗಳೂ ಅಮೆರಿಕಕ್ಕೆ ಇಲ್ಲ. ಇನ್ನು ಸಿದ್ಧ ಉಡುಪುಗಳಲ್ಲಿ ಬಾಂಗ್ಲಾ, ವಿಯಟ್ನಾಂ ಮತ್ತು ಶ್ರೀಲಂಕಾ ಅಗ್ಗದ ದೇಶಗಳಾಗಿರುವುದರಿಂದ, ಈ ವಲಯದಲ್ಲಿ ನಮ್ಮ ದೇಶವು ಸಂಕಷ್ಟವನ್ನು ಎದುರಿಸಬೇಕಾಗಬಹುದು.