ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Long weekend: ನಾಳೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ; ಸತತ 3 ದಿನಗಳ ಲಾಂಗ್ ವೀಕೆಂಡ್!

Public holiday in Karnataka: ರಾಜ್ಯದಾದ್ಯಂತ ನವೆಂಬರ್‌ ಸಾರ್ವಜನಿಕ ರಜೆ ಆದೇಶ ಅನ್ವಯಿಸುತ್ತದೆ. ಇದು ಜಿಲ್ಲಾ-ವಿಶೇಷ ರಜೆಯಲ್ಲ, ಸಾರ್ವತ್ರಿಕ ಸಾರ್ವಜನಿಕ ರಜೆ ಆಗಿರುತ್ತದೆ. ಹೀಗಾಗಿ ಶುಕ್ರವಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ. ಇನ್ನು ಶನಿವಾರ ಬ್ಯಾಂಕ್‌ ರಜೆ ದಿನವಾಗಿದ್ದರಿಂದ ಸರ್ಕಾರಿ ಹಾಗೂ ಹಲವು ಖಾಸಗಿ ಸಂಸ್ಥೆಗಳ ನೌಕರರಿಗೆ ಲಾಂಗ್‌ ವೀಕೆಂಡ್‌ ರಜೆ ಸಿಗಲಿದೆ.

ನಾಳೆ ರಾಜ್ಯಾದ್ಯಂತ ಶಾಲೆಗಳಿಗೆ ರಜೆ; ಸತತ 3 ದಿನಗಳ ಲಾಂಗ್ ವೀಕೆಂಡ್!

-

Prabhakara R
Prabhakara R Nov 26, 2026 6:09 PM

ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ನಾಳೆ (ನ.27) ಶಾಲೆ, ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಇರಲಿದೆ. ಇದರ ಜತೆಗೆ ಬ್ಯಾಂಕ್‌ಗಳಿಗೂ ನಾಳೆ ರಜೆ ಇರಲಿದೆ. ಕನಕ ಜಯಂತಿ (Kanaka Jayanti) ಹಿನ್ನೆಲೆಯಲ್ಲಿ ನಾಳೆ ಕರ್ನಾಟಕದಾದ್ಯಂತ ಸಾರ್ವಜನಿಕ ರಜೆ ಘೋಷಿಸಲಾಗಿದೆ.

ರಾಜ್ಯದಾದ್ಯಂತ ಈ ರಜೆ ಆದೇಶ ಅನ್ವಯಿಸುತ್ತದೆ. ಇದು ಜಿಲ್ಲಾ-ವಿಶೇಷ ರಜೆಯಲ್ಲ, ಸಾರ್ವತ್ರಿಕ ಸಾರ್ವಜನಿಕ ರಜೆ ಆಗಿರುತ್ತದೆ. ಹೀಗಾಗಿ ಶುಕ್ರವಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ.

ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಮತ್ತು ರಾಜ್ಯ ಪಠ್ಯಕ್ರಮ ಅನುಸರಿಸುವ ಖಾಸಗಿ ಶಾಲೆಗಳಿಗೂ ನಾಳೆ ರಜೆ ಇರುತ್ತದೆ. ಇನ್ನು ಸರ್ಕಾರಿ, ಅನುದಾನಿತ, ವಿಶ್ವವಿದ್ಯಾಲಯ ಸಂಯೋಜಿತ ಶಿಕ್ಷಣ ಸಂಸ್ಥೆಗಳಿಗೆ ಸಾಮಾನ್ಯವಾಗಿ ರಜೆ ಇರುತ್ತದೆ. ಆದರೆ CBSE, ICSE, ಅಂತರರಾಷ್ಟ್ರೀಯ ಶಾಲೆಗಳು ತಮ್ಮದೇ ಶೈಕ್ಷಣಿಕ ಕ್ಯಾಲೆಂಡರ್ ಅನುಸರಿಸಬಹುದು. ಇನ್ನು ಶಾಲೆ, ಕಾಲೇಜ್, ಶಿಕ್ಷಣ ಸಂಸ್ಥೆಗಳ ಜೊತೆಗೆ ಸರ್ಕಾರಿ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳಿಗೂ ನಾಳೆ ಬಿಡುವು ಇರಲಿದೆ.

ಕರ್ನಾಟಕ ಸರ್ಕಾರದ 2026ರ ಅಧಿಕೃತ ಸಾರ್ವಜನಿಕ ರಜಾ ಪಟ್ಟಿಯಲ್ಲಿ ಕನಕದಾಸ ಜಯಂತಿ ಹಿನ್ನೆಲೆಯಲ್ಲಿ ನವೆಂಬರ್ 27 ಅನ್ನು ರಜಾ ದಿನವೆಂದು ನಿಗದಿಮಾಡಲಾಗಿದೆ.

3 ದಿನ ಲಾಂಗ್ ವೀಕೆಂಡ್ ರಜೆ!

ಇನ್ನು ನಾಳೆಯಿಂದ 3 ದಿನ ಸತತ ರಜೆಗಳು ಇರಲಿವೆ. ನವೆಂಬರ್ 27 ಶುಕ್ರವಾರ ಕನಕಜಯಂತಿ, ನವೆಂಬರ್ 28ರಂದು 4ನೇ ಶನಿವಾರ ಹಾಗೂ ನವೆಂಬರ್ 29 ಭಾನುವಾರ ಆಗಿರುವುದರಿಂದ ಬ್ಯಾಂಕ್‌ , ಕೆಲ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ 3 ದಿನ ಸತತ ರಜೆ ಸಿಕ್ಕಂತಾಗುತ್ತದೆ.

Madhugiri News: ಸಂವಿಧಾನದಿಂದಲೇ ಪ್ರತಿಯೊಬ್ಬರಿಗೂ ಸಮಾನ ಹಕ್ಕು, ಗೌರವದ ಬದುಕು: ಗೋಟೂರು ಶಿವಪ್ಪ

ನಾಳೆ ಕನಕ ಜಯಂತಿ ಕಾರ್ಯಕ್ರಮ

ಕನಕದಾಸರ ಜನ್ಮಸ್ಥಳವಾದ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಕನಕ ಜಯಂತಿ ಹಿನ್ನೆಲೆ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಮುಖ್ಯಮಂತ್ರಿ ಸೇರಿ ಅಧಿಕಾರಿಗಳು ಭಾಗವಹಿಸುವ ಸಾಧ್ಯತೆ ಇದೆ. ಇನ್ನು ಬೆಂಗಳೂರು ಸೇರಿ ರಾಜ್ಯಾದ್ಯಂತ ಕನಕದಾಸರ ಜನ್ಮದಿನ ಆಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ.