ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Self Harming: ಕಬ್ಬನ್‌ ಪಾರ್ಕ್‌ನಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಗುರುವಾರದಿಂದಲೇ ಕಾಣೆಯಾಗಿದ್ದ ಕಬ್ಬನ್ ಪೇಟೆ ಸುರೇಶ್, ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಹೆಚ್​ಎಸ್ಆರ್ ಪೊಲೀಸ್ ಠಾಣೆಗೆ ಆತನ ಕುಟುಂಬಸ್ಥರು ದೂರು ನೀಡಿದ್ದರು. ಇಂದು ಬೆಳಗ್ಗೆ ಪಾರ್ಕ್‌ನ ಮರೊಂದಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಕಬ್ಬನ್‌ ಪಾರ್ಕ್‌ನಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮೃತ ಸುರೇಶ್ -

ಹರೀಶ್‌ ಕೇರ
ಹರೀಶ್‌ ಕೇರ Apr 3, 2026 12:16 PM

ಬೆಂಗಳೂರು, ಏ.03: ನಗರದ ಕಬ್ಬನ್ ಪಾರ್ಕ್​ನಲ್ಲಿ (Cubbon park) ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ (Self harming) ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಪಶ್ಚಿಮ ಬಂಗಾಳ ಮೂಲದ ಸುರೇಶ್ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂದು ತಿಳಿದು ಬಂದಿಲ್ಲ. ಸದ್ಯಕ್ಕೆ ಕಬ್ಬನ್ ಪಾರ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಗುರುವಾರದಿಂದಲೇ ಕಾಣೆಯಾಗಿದ್ದ ಕಬ್ಬನ್ ಪೇಟೆ ಸುರೇಶ್, ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಹೆಚ್​ಎಸ್ಆರ್ ಪೊಲೀಸ್ ಠಾಣೆಗೆ ಆತನ ಕುಟುಂಬಸ್ಥರು ದೂರು ನೀಡಿದ್ದರು. ಇಂದು ಬೆಳಗ್ಗೆ ಪಾರ್ಕ್‌ನ ಮರೊಂದಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಕಬ್ಬನ್ ಪಾರ್ಕ್​ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತನ ಜೇಬಿನಲ್ಲಿ ಐಡಿ ಕಾರ್ಡ್​ ಲಭಿಸಿದ್ದು, ಆತ ಬೆಂಗಳೂರಿನ ಎಸ್​ಪಿ ರೋಡ್​ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಐಡಿ ಕಾರ್ಡ್​ ಹೊರತುಪಡಿಸಿ ಮೃತನ ಬಳಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಡೆತ್​ನೋಟ್ ಲಭಿಸಿಲ್ಲವೆಂದು ಪೊಲೀಸರು ಹೇಳಿದ್ದಾರೆ. ನಂತರ ಆತನ ಕುಟುಂಬಕ್ಕೆ ಮಾಹಿತಿ ತಿಳಿಸಿದ ಅಧಿಕಾರಿಗಳು, ಘಟನೆ ಸಂಬಂಧ ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

ಟಯರ್‌ಗೆ ಗಾಳಿ ತುಂಬಿಸುವಾಗ ಸ್ಫೋಟ, ವ್ಯಕ್ತಿ ಸ್ಥಳದಲ್ಲೇ ಸಾವು: ಉತ್ತರ ಪ್ರದೇಶದಲ್ಲಿ ನಡೀತು ಬೆಚ್ಚಿಬೀಳಿಸುವ ದುರ್ಘಟನೆ

ವರದಕ್ಷಿಣೆ ಕಿರುಕುಳ, ನವವಿವಾಹಿತೆ ಆತ್ಮಹತ್ಯೆ

ಹೈದರಾಬಾದ್: ಪತಿಯ ವರದಕ್ಷಿಣೆ (Dowry) ಕಿರುಕುಳಕ್ಕೆ ಬೇಸತ್ತು ನವವಿವಾಹಿತ ಸಾಫ್ಟ್‌ವೇರ್ ಎಂಜಿನಿಯರ್ ನೇಣಿಗೆ ಶರಣಾದ ಘಟನೆ ಹೈದರಾಬಾದ್‌ನ (Hyderabad) ಮಿಯಾಪುರ್‌ನ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಟೆಕ್ಕಿಯನ್ನು ಇಶಿತಾ ಯಾದವ್ (26) ಎಂದು ಗುರುತಿಸಲಾಗಿದೆ. ಬುಧವಾರ (ಏ.1) ಸಂಜೆ ತನ್ನ ಅಪಾರ್ಟ್‌ಮೆಂಟ್‌ನ ಹಾಲ್‌ನಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು.

ಈ ಬಗ್ಗೆ ಆಕೆಯ ಪತಿ ನೀರಜ್ ಭನ್ಸಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಇಶಿತಾ ಮತ್ತು ನೀರಜ್ 2020 ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದರು. ಇಶಿತಾ ಬಿಹಾರದವರಾಗಿದ್ದರೆ, ನೀರಜ್ ಮಧ್ಯಪ್ರದೇಶದವನಾಗಿದ್ದ. ಇಬ್ಬರೂ ಸುಮಾರು ಐದು ವರ್ಷಗಳ ಕಾಲ ಸಂಬಂಧ ಹೊಂದಿದ್ದರು. ಈ ವರ್ಷ ಫೆ.20 ರಂದು ಪಾಟ್ನಾದಲ್ಲಿ ಅವರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ ಟೆಕ್ಕಿ ದಂಪತಿ ಹೈದರಾಬಾದ್‌ನಲ್ಲಿ ವಾಸವಾಗಿದ್ದರು.

ನೀರಜ್ ಹೆಚ್ಚುವರಿ ವರದಕ್ಷಿಣೆಗಾಗಿ ಇಶಿತಾಗೆ ಕಿರುಕುಳ ಮತ್ತು ಒತ್ತಡ ಹೇರಲು ಪ್ರಾರಂಭಿಸಿದ್ದ. ಇತ್ತೀಚೆಗೆ ಆರಂಭಿಸಿದ ಸ್ಟಾರ್ಟ್-ಅಪ್ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡಬೇಕೆಂದು ನಮ್ಮ ಕುಟುಂಬಕ್ಕೆ ಒತ್ತಾಯಿಸಿದ್ದ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ಇಶಿತಾ ಪೋಷಕರು ಸಲ್ಲಿಸಿದ ದೂರಿನ ಆಧಾರದ ಮೇಲೆ ಮಿಯಾಪುರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.