ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

FHRAI: ಮೂರು ದಿನಗಳ FHRAI 55ನೇ ಸಮಾವೇಶ- ರಾಜನಾಥ ಸಿಂಗ್‌ ಸೇರಿದಂತೆ ಪ್ರಮುಖ ನಾಯಕರು ಭಾಗಿ

ಫ್ಯೂಚರ್‌ ಸ್ಕೇಪ್‌-2047 ಸಮಾವೇಶವು ಸೆಪ್ಟೆಂಬರ್‌ 18ರಿಂದ ಸೆಪ್ಟೆಂಬರ್‌ 20ರ ವರೆಗೆ ಒಟ್ಟು ಮೂರು ದಿನಗಳ ಕಾಲ ʼಹೊಟೇಲ್ ಕಾನ್ರಾಡ್‌ʼನಲ್ಲಿ‌ ಅರ್ಥಪೂರ್ಣವಾಗಿ ನಡೆಯಲಿದೆ. ವಿಶೇಷವಾಗಿ ಬೆಂಗಳೂರನ್ನು ಸಮಾವೇಶದ ಕೇಂದ್ರ ಸ್ಥಳವಾಗಿ ಆಯ್ಕೆಮಾಡಿಕೊಂಡಿರುವುದು ರಾಜ್ಯದ ಹೊಟೇಲ್‌ ಉದ್ಯಮಿಗಳಿಗೆ ಸಂತಸ ತಂದಿದೆ.

ಸಿಲಿಕಾನ್‌ ಸಿಟಿಯಲ್ಲಿ ಮೂರು ದಿನಗಳ FHRAI 55ನೇ ಸಮಾವೇಶ

-

Rakshita Karkera Rakshita Karkera Sep 13, 2025 4:20 PM

ʼದಿ ಫೆಡರೇಷನ್‌ ಆಫ್‌ ಹೊಟೇಲ್ & ರೆಸ್ಟೋರೆಂಟ್ ಅಸೋಸಿಯೇಷನ್ಸ್‌ ಆಫ್‌ ಇಂಡಿಯಾʼ (ಎಫ್‌ಎಚ್‌ಆರ್‌ಎಐ)ದ 55ನೇ ವಾರ್ಷಿಕ ಸಮಾವೇಶವನ್ನು ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷವೂ ಪ್ರಾಂತ್ಯವಾರು ನಡೆಯುವ ಈ ಸಮಾವೇಶವು ಈ ಬಾರಿ ದಕ್ಷಿಣ ಪ್ರಾಂತ್ಯದಲ್ಲಿ ನಡೆಯುತ್ತಿದೆ. ವಿಶೇಷವಾಗಿ ಬೆಂಗಳೂರನ್ನು ಸಮಾವೇಶದ ಕೇಂದ್ರ ಸ್ಥಳವಾಗಿ ಆಯ್ಕೆಮಾಡಿಕೊಂಡಿರುವುದು ರಾಜ್ಯದ ಹೊಟೇಲ್‌ ಉದ್ಯಮಿಗಳಿಗೆ ಸಂತಸ ತಂದಿದೆ. ಫ್ಯೂಚರ್‌ ಸ್ಕೇಪ್‌-2047 ಎಂಬ ಹೆಸರಿನಲ್ಲಿ ಆಯೋಜಿಸಲಾಗಿರುವ ಈ ಸಮಾವೇಶವು ಸೆಪ್ಟೆಂಬರ್‌ 18ರಿಂದ ಸೆಪ್ಟೆಂಬರ್‌ 20ರವರೆಗೆ ಒಟ್ಟು ಮೂರು ದಿನಗಳ ಕಾಲ ʼಹೊಟೇಲ್ ಕಾನ್ರಾಡ್‌ʼನಲ್ಲಿ‌ ಅರ್ಥಪೂರ್ಣವಾಗಿ ನಡೆಯಲಿದೆ.

ಭಾರತವು ಸ್ವಾತಂತ್ರ್ಯ ಗಳಿಸಿ ಬರೋಬ್ಬರಿ 75 ವರ್ಷಗಳಾಗಿದ್ದು, 2047ಕ್ಕೆ ನೂರು ವರ್ಷಗಳನ್ನು ಪೂರೈಸಲಿದೆ. ಹೀಗಾಗಿ ಈ ನಡುವಿನ 25 ವರ್ಷಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ʼಅಮೃತಕಾಲʼ ಎಂದು ಕರೆದಿದ್ದು, ಕೇಂದ್ರ ಸರಕಾರವು ಈ ಅವಧಿಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಎಫ್‌ಎಚ್‌ಆರ್‌ಐ ಕೂಡ ಮುಂದಿನ 25 ವರ್ಷಗಳಲ್ಲಿ ಭಾರತದ ಆತಿಥ್ಯ ಕ್ಷೇತ್ರ ಹೇಗಿರಬೇಕು ಎನ್ನುವ ಕುರಿತು ಹತ್ತಾರು ಕಲ್ಪನೆಗಳನ್ನು ಇರಿಸಿಕೊಂಡಿದ್ದು, “ಫ್ಯೂಚರ್‌ ಸ್ಕೇಪ್‌-2047” ಎಂಬ ಹೆಸರಿನಲ್ಲಿ ಈ ಸಮಾವೇಶವನ್ನು ಆಯೋಜಿಸಿದೆ. ಅಲ್ಲದೆ, ʼಹೊಸ ಭಾರತಕ್ಕಾಗಿ ಆತಿಥ್ಯವನ್ನು ಮರು ವ್ಯಾಖ್ಯಾನಿಸುವುದುʼ ಎಂಬ ವಿಷಯವನ್ನು ಧ್ಯೇಯವಾಕ್ಯವಾಗಿಸಿಕೊಂಡು ಈ ಸಮಾವೇಶವನ್ನು ನಡೆಸಲಿದೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.18ರಂದು ಈ ಸಮಾವೇಶವನ್ನು ಉದ್ಘಾಟಿಸಲಿದ್ದು,ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌, ನಾಗರಿಕ ವಿಮಾನಯಾನ ಸಚಿವ ಕೆ.ರಾಮ್‌ಮೋಹನ್‌ ನಾಯ್ಡು ಹಾಗೂ ವಿವಿಧ ಕೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಫ್‌ಎಚ್‌ಆರ್‌ಎಐನ ಸದಸ್ಯರು ಕೂಡ ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ. ಬೆಂಗಳೂರಿನ ಕಾನ್ರಾಡ್ ಹೊಟೇಲ್ ಮುಖ್ಯ ಸಮಾವೇಶದ ಸ್ಥಳವಾಗಿದ್ದು, ಆಗಮಿಸುವ ಅತಿಥಿ ಗಣ್ಯರು ಮತ್ತು ಪ್ರತಿನಿಧಿಗಳ ವಾಸ್ತವ್ಯಕ್ಕಾಗಿ ಬೆಂಗಳೂರಿನ ತಾಜ್ ಎಂ.ಜಿ.ರಸ್ತೆ, ರಾಡಿಸನ್ ಬೆಂಗಳೂರು ಸಿಟಿ ಸೆಂಟರ್, ದಿ ಪಾರ್ಕ್ ಹೊಟೇಲ್, ದಿ ಚಾನ್ಸರಿ, ದಿ ಚಾನ್ಸರಿ ಪೆವಿಲಿಯನ್, ರಾಯಲ್ ಆರ್ಕಿಡ್ ಸೆಂಟ್ರಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.

55666

ಏನಿದು FHRAI?

FHRAI 55ನೇ ವಾರ್ಷಿಕ ಸಮಾವೇಶವು ಭಾರತದ ಆತಿಥ್ಯ ವಲಯದ ಪ್ರಮುಖ ಮತ್ತು ಮಹತ್ವದ ಕಾರ್ಯಕ್ರಮವಾಗಿದೆ. ಪ್ರತಿ ವರ್ಷವೂ ದಕ್ಷಿಣ, ಉತ್ತರ, ಪೂರ್ವ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗುತ್ತದೆ. ಈ ಬಾರಿ ಸಮಾವೇಶದ ನೇತೃತ್ವ ದಕ್ಷಿಣ ಪ್ರಾಂತ್ಯಕ್ಕೆ ಒಲಿದು ಬಂದಿದ್ದು, ವಿಶೇಷವಾಗಿ ಬೆಂಗಳೂರಿಗೆ ಅವಕಾಶ ದೊರೆತಿದೆ. ಕರ್ನಾಟಕ ರಾಜ್ಯದ ಹೊಟೇಲ್‌ ಉದ್ಯಮಿಗಳ ನಾಯಕತ್ವ ಮತ್ತು ದೂರದೃಷ್ಟಿಯಲ್ಲಿ ಈ ಸಮಾವೇಶವನ್ನು ರೂಪಿಸಲಾಗಿದೆ. ಈ ಸಮಾವೇಶದಲ್ಲಿ ಸರಕಾರ ಮತ್ತು ಉದ್ಯಮದ ಉನ್ನತ ಮಟ್ಟದ ಪ್ರತಿಷ್ಠಿತ ಗಣ್ಯರು ಈ ಪಾಲ್ಗೊಳ್ಳುತ್ತಾರೆ. ಸಮಾವೇಶದಲ್ಲಿ ನಿರ್ಣಾಯಕ ನೀತಿ, ಉದ್ಯಮದ ಸಮಸ್ಯೆಗಳು ಮತ್ತು ಜಾರಿಗೆ ತರಬಹುದಾದ ಸುಧಾರಣೆಗಳ ಕುರಿತು ಗಂಭೀರ ಚರ್ಚೆಗಳನ್ನು ನಡೆಸಲಾಗುತ್ತದೆ. ಇದರಿಂದಾಗಿ ಉದ್ಯಮ ಕ್ಷೇತ್ರದಲ್ಲಿ ಬದಲಾವಣೆಯ ನೀರು ಹರಿಯುತ್ತದೆ. ಜಗತ್ತಿನಾದ್ಯಂತ ಪ್ರಭಾವಿ ಮತ್ತು ಪ್ರಸಿದ್ಧ ಉದ್ಯಮಿಗಳು ಈ ಸಮಾವೇಶದಲ್ಲಿ ನೇರವಾಗಿ ಭಾಗಿಯಾಗಿ ಎದುರಿಸಬೇಕಾದ ಸವಾಲುಗಳು ಮತ್ತು ಅದಕ್ಕೆ ಪರಿಹಾರಗಳನ್ನು ಸೂಚಿಸುತ್ತಾರೆ. ಹೊಟೇಲ್‌ ಉದ್ಯಮಕ್ಕೆ ಸಂಬಂಧಫಟ್ಟ ನುರಿತರು ಈ ಸಮಾವೇಶಕ್ಕೆ ಸಾಥ್‌ ಕೊಡುತ್ತಾರೆ. ಉದ್ಯಮದಲ್ಲಿ ತರಬಹುದಾದ ಹತ್ತು ಹಲವು ಸುಧಾರಣೆಗಳು, ತಂತ್ರಜ್ಞಾನದ ಅಳವಡಿಕೆ, ವಿದೇಶಿ ಹೊಟೇಲ್‌ ಗಳ ನವೀನ ವಿನ್ಯಾಸ ಮತ್ತು ಸ್ಥಳೀಯಮಟ್ಟದಲ್ಲಿ ಅದರ ಜಾರಿಗೊಳಿಸುವಿಕೆ ಹೀಗೆ ಎಲ್ಲದರ ಬಗ್ಗೆಯೂ ವಿಚಾರ ವಿನಿಮಯಗಳು ನಡೆಯುತ್ತವೆ. ಬೆಂಗಳೂರಿನ ಪ್ರಮುಖ ಹೊಟೇಲ್‌ ಗಳಲ್ಲಿ ಮೂರು ದಿನಗಳ ಅರ್ಥಪೂರ್ಣ ಸಮಾವೇಶ ನಡೆಯಲಿದೆ. ಚರ್ಚೆಯ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ.

13313

ಹೊಟೇಲ್‌ ಕಾನ್ರಾಡ್‌ ನಲ್ಲಿ ಸಮಾವೇಶ

ಸೆಪ್ಟೆಂಬರ್‌ 18ರಿಂದ ಮೂರು ದಿನಗಳ ಕಾಲ ಅಂದರೆ ಸೆಪ್ಟೆಂಬರ್‌ 20ನೇ ತಾರೀಖಿನವರೆಗೂ ನಡೆಯಲಿರುವ ಎಫ್‌ ಎಚ್‌ ಆರ್‌ ಎ ಐ ನ ಸಮಾವೇಶವು ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್‌ ಹೊಟೇಲ್‌ ಕಾನ್ರಾಡ್‌ ನಲ್ಲಿ ಆಯೋಜನೆಗೊಂಡಿದೆ. ಸಮಾವೇಶಕ್ಕೆ ಆಗಮಿಸಲಿರುವ ಎಲ್ಲ ಅತಿಥಿ ಮತ್ತು ಗಣ್ಯರಿಗೂ ಕಾನ್ರಾಡ್‌ ನಲ್ಲಿ ಊಟ, ವಸತಿ ಮತ್ತು ಆತಿಥ್ಯವನ್ನು ಏರ್ಪಾಡು ಮಾಡಲಾಗಿದೆ. ಮಹತ್ವದ ಕಾರ್ಯಕ್ರಮಗಳು, ಚರ್ಚೆಗಳು ಅಲ್ಲಿನ ಬೇರೆ ಬೇರೆ ವೇದಿಕೆಗಳಲ್ಲಿ ನಡೆಯುತ್ತವೆ.

ಸಮಿತಿಯು ಈ ಬಾರಿಯ ಸಮಾವೇಶಕ್ಕಾಗಿ ಕಾನ್ರಾಡ್‌ ಹೊಟೇಲ್‌ ಅನ್ನು ಆಯ್ಕೆ ಮಾಡಿಕೊಂಡಿರುವುದು ಎಲ್ಲ ರೀತಿಯಿಂದಲೂ ಒಳ್ಳೆಯದು. ಕಾನ್ರಾಡ್‌ ಐಷಾರಾಮಿ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಕಳೆದಷ್ಟು ವರ್ಷಗಳಿಂದ ಅತಿಥಿಗಳ ವಿಶ್ವಾಸವನ್ನು ಉಳಿಸಿಕೊಂಡು ಬಂದಿದೆ. FHRAI ಸಮಾವೇಶವು ಅಲ್ಲಿಯೇ ನಡೆಯುತ್ತಿರುವುದರಿಂದ ಭಾಗವಹಿಸುವ ಎಲ್ಲರೂ ಸಹಜವಾಗಿ ಸಂತಸಗೊಳ್ಳುತ್ತಾರೆ. ಕಾನ್ರಾಡ್‌ ನ ವಾತಾವರಣವು ಹಿತವಾದ ಅನುಭವವನ್ನು ನೀಡಲಿದೆ. ಶಾಂತವಾದ ಹಲಸೂರು ಕೆರೆಯ ಪಕ್ಕದಲ್ಲಿ ಈ ಹೊಟೇಲ್‌ ಇರುವುದರಿಂದ ಕಾನ್ರಾಡ್‌ ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ನಗರ ಜೀವನದ ಜಂಜಾಟ ಮತ್ತು ಟ್ರಾಫಿಕ್‌ ಕಿರಿಕಿರಿಗಳ ನಡುವೆಯೂ ಹೊಟೇಲ್‌ ನ ವಾಸ್ತವ್ಯ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ನವೀನ ವಿನ್ಯಾಸ ಮತ್ತು ವಿಶ್ವದರ್ಜೆಯ ಉಪಕರಣಗಳನ್ನು ಬಳಸಿಕೊಂಡು ಈ ಹೊಟೇಲ್‌ ಅನ್ನು ಆಗಾಗ್ಗೆ ಮರು ನಿರ್ಮಾಣ ಮಾಡಲಾಗುತ್ತದೆ. ಹಾಗಾಗಿ ಕಾನ್ರಾಡ್‌ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ವಿಶಾಲವಾದ ಕೊಠಡಿಗಳು ಮತ್ತು ಸೂಟ್‌ಗಳನ್ನು ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದೆ. ಹೊಟೇಲ್‌ ನ ಒಳಾಂಗಣವು ಪ್ರಾಕೃತಿಕ ಬೆಳಕಿನಿಂದ ಶೋಭಿಸುತ್ತದೆ. ಕಾನ್ರಾಡ್‌ ನಲ್ಲಿ ಬಳಕೆಯಾಗಿರುವ ತಂತ್ರಜ್ಞಾನವು ಯಾವ ವಿದೇಶಿ ಹೊಟೇಲ್‌ ಗಳಿಗೂ ಕಮ್ಮಿಯಿಲ್ಲ ಎನ್ನಬಹುದು. ಇನ್ನು ಇಲ್ಲಿನ ರೆಸ್ಟೋರೆಂಟ್‌ ನಲ್ಲಿ ನೂರಾರು ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ದಶಕಗಳ ಕಾಲ ಅನುಭವಗಳಿಸಿರುವ ಬಾಣಸಿಗರು(ಅಡುಗೆ ಭಟ್ಟರು) ಇಲ್ಲಿ ರುಚಿಕಟ್ಟಾದ ಅಡುಗೆಯನ್ನು ತಯಾರಿಸುತ್ತಾರೆ. ಅತಿಥಿಗಳಿಗೆ ಬೇಕಾದ ಖಾದ್ಯಗಳನ್ನು ಮಾಡಿಕೊಡುತ್ತಾರೆ. ಅಲ್ಲಿನ ಪ್ರತಿಯೊಬ್ಬ ಸಿಬ್ಬಂದಿಯೂ ಪರಿಣತಿ ಗಳಿಸಿದ್ದಾರೆ.

ಸಮಾವೇಶದಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗೆ ಖಾಸಗಿ ಕೂಟವನ್ನು ಆಯೋಜಿಸಲಾಗಿರುತ್ತದೆ. ಸಂಜೆ ಡಿನ್ನರ್‌ ಪಾರ್ಟಿ ಇರಲಿದೆ. ಹೊಟೇಲ್ ಪ್ರಶಸ್ತಿ ವಿಜೇತ ಸ್ಪಾ, ಅನಂತ ಪೂಲ್ ಗಳ ಬಳಿ ವಿಶ್ರಾಂತಿ ಸಮಯವನ್ನು ಕಳೆಯಬಹುದು. ಬೆಂಗಳೂರಿನ ಹೃದಯ ಭಾಗದಲ್ಲಿರುವ ಮತ್ತು ನಾಲ್ಕು ವಲಯಗಳಿಂದಲೂ ಹತ್ತಿರವಾಗುವ ಹೊಟೇಲ್‌ ಕಾನ್ರಾಡ್‌ ನಲ್ಲಿ ಈ ಬಾರಿಯ ಸಮಾವೇಶ ನಡೆಯುತ್ತಿರುವುದು ಇಲ್ಲಿನ ಉದ್ಯಮಿಗಳಿಗೆ ಖುಷಿತಂದಿದೆ.

1213

ಸಮಾವೇಶದಲ್ಲಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ?

ಭಾರತೀಯ ಹೊಟೇಲ್‌ ಮತ್ತು ರೆಸ್ಟೋರೆಂಟ್‌ ಸಂಘಗಳ ಒಕ್ಕೂಟ ಆಯೋಜಿಸುತ್ತಿರುವ 55ನೇ ವಾರ್ಷಿಕ ಸಮಾವೇಶವು ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಪ್ರತಿಷ್ಠಿತ ಹೊಟೇಲ್‌ ಕಾಮ್ರಾಡ್‌ ನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಹೊಟೇಲ್‌ ಉದ್ಯಮಕ್ಕೆ ಸಂಬಂಧಿಸಿದ ಹತ್ತು ಹಲವು ವಿಷಯಗಳ ಮೇಲೆ ಗಂಭೀರ ಚರ್ಚೆಗಳು ನಡೆಯುತ್ತವೆ. ಉದ್ಯಮದಲ್ಲಿ ತರಬೇಕಾದ ಸುಧಾರಣೆಗಳನ್ನು ಪ್ರಸ್ತಾಪಿಸಿ ಸರಕಾರದ ಗಮನಸೆಳೆಯುವ ಕಾರ್ಯವನ್ನು ಸಮಾವೇಶದಲ್ಲಿ ಭಾಗವಹಿಸುವ ಪರಿಣಿತ ಉದ್ಯಮಿಗಳು ಮಾಡಲಿದ್ದಾರೆ. ಸಾವಿರಾರು ಉದ್ಯಮಿಗಳನ್ನು ಒಂದೆಡೆ ಸೇರಿಸಿ ಆಯೋಜಿಸುತ್ತಿರುವ ಈ ಸಮಾವೇಶದಲ್ಲಿ ಭಾರತ ಸರಕಾರದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್‌ ಸಿಂಗ್‌ ಭಾಗವಹಿಸಲಿದ್ದಾರೆ. ಭಾರತ ಸರಕಾರದ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಗಜೇಂದ್ರ ಸಿಂಗ್‌ ಶೆಖಾವತ್‌, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್‌, ಕರ್ನಾಟಕ ಪ್ರವಾಸೋದ್ಯಮ ಸಚಿವರಾದ ಶ್ರೀ ಎಚ್.ಕೆ ಪಾಟೀಲ್‌, ಬೃಹತ್‌ ಕೈಗಾರಿಕಾ ಸಚಿವರಾದ ಶ್ರೀ ಎಂ.ಬಿ ಪಾಟೀಲ್‌, ಭಾರತ ಸರಕಾರದ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ರಾಮಮೋಹನ್‌ ನಾಯ್ಡು ಕಿಂಜರಾಪು, ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಶ್ರೀ ಎ. ರೇವಂತ್‌ ರೆಡ್ಡಿ, ಭಾರತ ಸರಕಾರದ ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕರಾದ ಶ್ರೀ ಸುಮನ್‌ ಬಿಳ್ಳ ಸೇರಿದಂತೆ ದೇಶ ವಿದೇಶಗಳಿಂದ ದಿಗ್ಗಜ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಎಫ್‌ ಎಚ್‌ ಆರ್‌ ಎ ಐ ಅಧ್ಯಕ್ಷರಾದ ಶ್ರೀ ಕೆ ಶ್ಯಾಮರಾಜು, ಎಫ್‌ ಎಚ್‌ ಆರ್‌ ಎ ಐ ಸಮಾವೇಶ ಆಯೋಜನೆಯ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ ರವಿ ಅವರ ನೇತೃತ್ವದಲ್ಲಿ ಮೂರು ದಿನಗಳ ಸಮಾವೇಶ ಜರುಗಲಿದೆ.

ಕಾರ್ಯಕ್ರಮ ವೇಳಾಪಟ್ಟಿ

ದಿನ 1 | ಗುರುವಾರ, 18 ಸೆಪ್ಟೆಂಬರ್‌, 2025

ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ
ನೋಂದಣಿ ಪ್ರಕ್ರಿಯೆ
ಉದ್ಘಾಟನೆ ಕಾರ್ಯಕ್ರಮ
ಸಾಂಸ್ಕೃತಿಕ ರಸಸಂಜೆ & ರಾತ್ರಿ ಭೋಜನ

ಊಟದ ವ್ಯವಸ್ಥೆ: ಮೈಸೂರ್‌ ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿ. ಮತ್ತು ಕರ್ನಾಟಕ ಸೋಪ್ಸ್‌ ಅಂಡ್ ಡಿಟರ್ಜೆಂಟ್‌ ಲಿ.

ದಿನ 2 | ಶುಕ್ರವಾರ, 19 ಸೆಪ್ಟೆಂಬರ್‌, 2025

ಬೆಳಗ್ಗೆ 10-10:30 ಗಂಟೆ – ಕರ್ನಾಟಕ ಸರಕಾರದ ಪ್ರಸ್ತುತಿ

ಬೆಳಗ್ಗೆ 11:00 ಗಂಟೆ – ಮುಖ್ಯ ಭಾಷಣ (On the theme of ‘Futurescape2047- Redefining Hospitality for a New India) The Brand is a Belief (Building Iconic Indian Hospitality Brands That Travel the World)

ಮಧ್ಯಾಹ್ನ 12:00 ಗಂಟೆ- ಚಹಾ ವಿರಾಮ

ಮಧ್ಯಾಹ್ನ 12:15 ಗಂಟೆ- ಪಾರ್ಟ್ನರ್ ಸೆಷನ್‌ 1

ಮಧ್ಯಾಹ್ನ 12:30 ಗಂಟೆ – ಪಾರ್ಟ್ನರ್ ಸೆಷನ್‌ 2

ಮಧ್ಯಾಹ್ನ 12:45 ಗಂಟೆ- The God Route (Rebranding India’s Spirtiual Tourism for the Mindful Traveller)
ಮಧ್ಯಾಹ್ನ 1:45 ಗಂಟೆ- ಭೋಜನ
ಮಧ್ಯಾಹ್ನ 2:45 ಗಂಟೆ- ಪಾರ್ಟ್ನರ್ ಸೆಷನ್‌ 3
ಮಧ್ಯಾಹ್ನ 3:00 ಗಂಟೆ – Bharat Unboxed(Cracking the Tier 2&3 Code for Hospitality Expansion)
ಸಂಜೆ 4:00 ಗಂಟೆ – ಚಹಾ ವಿರಾಮ
ಸಂಜೆ 4:15 ಗಂಟೆ – ಪಾರ್ಟ್ನರ್ ಸೆಷನ್‌ 4
ಸಂಜೆ 4:30 ಗಂಟೆ – From RevPAR to RevPAX (Redefining Revenue Management Across Every Guest Touchpoint)
ಸಂಜೆ 5:30 ಗಂಟೆ- ಸಮಾರೋಪ ಕಾರ್ಯಕ್ರಮ
ರಾತ್ರಿ 7:30 ಗಂಟೆ – ಊಟ & ಮನರಂಜನೆ
ಸ್ಥಳ: ರಾಯಲ್‌ ಆರ್ಕಿಡ್‌
ಊಟದ ವ್ಯವಸ್ಥೆ: ರಾಯಲ್‌ ಆರ್ಕಿಡ್‌ ಗ್ರೂಪ್

ದಿನ 3 | ಶನಿವಾರ, 20 ಸೆಪ್ಟೆಂಬರ್‌, 2025
ಬೆಳಗ್ಗೆ 10:00 ಗಂಟೆ- ಕರ್ನಾಟಕ ಸರಕಾರದ ಪ್ರಸ್ತುತಿ
ಬೆಳಗ್ಗೆ 10:15 ಗಂಟೆ- Celebrity Spotlight
ಬೆಳಗ್ಗೆ 10:45 ಗಂಟೆ- From Footprint to Fingerprint (Engineering Sustainable Hospitality That’s Personal, Profitable & Planet-Friendly)
ಬೆಳಗ್ಗೆ 11:45 ಗಂಟೆ- ಚಹಾ ವಿರಾಮ
ಮಧ್ಯಾಹ್ನ 12:00 ಗಂಟೆ- ಪಾರ್ಟ್ನರ್ ಸೆಷನ್‌ 5
ಮಧ್ಯಾಹ್ನ 12:15 ಗಂಟೆ- ಪಾರ್ಟ್ನರ್ ಸೆಷನ್‌ 6
ಮಧ್ಯಾಹ್ನ 12:00 ಗಂಟೆ- Beyond Contactless (Designing the Invisible Teach Experience)
ಮಧ್ಯಾಹ್ನ 1:30 ಗಂಟೆ – ಭೋಜನ
ಮಧ್ಯಾಹ್ನ 2:30 ಗಂಟೆ - ಪಾರ್ಟ್ನರ್ ಸೆಷನ್‌ 7
ಮಧ್ಯಾಹ್ನ 2:45 ಗಂಟೆ – The Gastronomic OS (Reprogramming Food in Hotels for Identity, Impact & Innovation)
ಮಧ್ಯಾಹ್ನ 3:45 ಗಂಟೆ- ಚಹಾ ವಿರಾಮ
ಸಂಜೆ 4:00 ಗಂಟೆ – Privacy Is the New Luxury (Cybersecurity & Data Integrity in a Hyper-Connected Hospitality World)
ಸಂಜೆ 5:00 ಗಂಟೆ- ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ
ಸಂಜೆ 6:00 ಗಂಟೆ – ಕಾರ್ಯಕ್ರಮ ಮುಕ್ತಾಯ
ರಾತ್ರಿ 7:30 ಗಂಟೆ – ವಿಶೇಷ ಊಟ
ಸ್ಥಳ: Chamara Vajra Marakata

ಎಫ್‌ ಎಚ್‌ ಆರ್‌ ಎ ಐ ನ 55ನೇ ಸಮಾವೇಶವು ಈ ಬಾರಿ ನಮ್ಮ ಬೆಂಗಳೂರಿನಲ್ಲಿ ನಡೆಯುತ್ತಿದೆ. ಪ್ರತಿ ವರ್ಷವೂ ಪ್ರಾಂತ್ಯವಾರು ನಡೆಯುವ ಈ ಸಮಾವೇಶದ ನೇತೃತ್ವದ ಜವಾಬ್ದಾರಿಯು ಈ ಬಾರಿ ದಕ್ಷಿಣ ಪ್ರಾಂತ್ಯಕ್ಕೆ ಒಲಿದು ಬಂದಿದೆ. ವಿಶೇಷವಾಗಿ ನಮ್ಮ ಬೆಂಗಳೂರಿನಲ್ಲಿ ಈ ವರ್ಷದ ಸಮಾವೇಶವು ನಡೆಯುತ್ತಿರುವುದು ಖುಷಿಯ ವಿಚಾರವಾಗಿದೆ. ಒಕ್ಕೂಟದ ಅಧ್ಯಕ್ಷನಾಗಿ ನಾನು ಸಾಕಷ್ಟು ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ. ಈ ಕುರಿತು ಸರ್ವ ಸದಸ್ಯರುಗಳನ್ನೊಳಗೊಂಡ ಸಭೆಯನ್ನು ನಡೆಸಿದ್ದೇವೆ. ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ. ಸಮಾವೇಶದ ರೂಪುರೇಷೆಗಳ ಬಗ್ಗೆ ಸುದೀರ್ಘ ಮಾತುಕತೆ ನಡೆದಿದೆ. ಮೂರು ದಿನಗಳ ಸಮಾವೇಶವು ಬಹಳ ಅಚ್ಚುಕಟ್ಟಾಗಿ ನಡೆಯುತ್ತದೆ ಎಂಬ ವಿಶ್ವಾಸ ನನಗಿದೆ. ಸಮಾವೇಶದಲ್ಲಿ ಉದ್ಯಮ ಕ್ಷೇತ್ರದ ಸವಾಲುಗಳು ಮತ್ತು ಜಾರಿಗೆ ತರಬೇಕಾದ ಸುಧಾರಣೆಗಳ ಬಗ್ಗೆ ಮಾತನಾಡುತ್ತೇವೆ. ದೇಶ-ವಿದೇಶಗಳಿಂದ ಆಗಮಿಸುತ್ತಿರುವ ಉದ್ಯಮ ಕ್ಷೇತ್ರದ ದಿಗ್ಗಜರು ಸರಕಾರದ ಗಮನಸೆಳೆಯಲಿದ್ದಾರೆ. ಆಸಕ್ತರು ಈ ಸಮಾವೇಶದಲ್ಲಿ ಭಾಗವಹಿಸಬಹುದು. ಎಲ್ಲರೂ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಕೋರುತ್ತೇನೆ.

- ಶ್ರೀ ಕೆ. ಶ್ಯಾಮರಾಜು
ಅಧ್ಯಕ್ಷರು, FHRAI

ಸಮಾವೇಶದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಈ ಲಿಂಕ್‌ ಬಳಸಿ ನೋಂದಣಿ ಮಾಡಿಕೊಳ್ಳಬಹುದು : https://fhraiconvention.com/convention_registration.aspx

ವಿಳಾಸ:

ಹೊಟೇಲ್ ಕಾನ್ರಾಡ್

25/3, ಕೆನ್ಸಿಂಗ್ಟನ್ ರಸ್ತೆ, ಹಲಸೂರು
ಸೋಮೇಶ್ವರಪುರ, ಬೆಂಗಳೂರು
ಕರ್ನಾಟಕ-560008
ದೂರವಾಣಿ ಸಂಖ್ಯೆ: +91 80 2214 4444
ಇಮೇಲ್: BLRKR.Res@ConradHotels.com