ರಸ್ತೆ ಅಪಘಾತಕ್ಕೆ ಮಗ ಬಲಿ; ಸುದ್ದಿ ತಿಳಿದು ಹೃದಯಾಘಾತದಿಂದ ತಾಯಿ ಸಾವು
Road Accident: ಅಪಘಾತದಲ್ಲಿ ಮೃತಪಟ್ಟ ಮಗನ ಸಾವಿನ ಸುದ್ದಿ ತಿಳಿದು ತಾಯಿ ಕೂಡ ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ಬೀದರ್ ತಾಲೂಕಿನ ಘೋಡಂಪಳ್ಳಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀಕಾಂತ್ ಜೋಶಿ ಅಲಿಯಾಸ್ ಕಾಂತರಾಜು (45) ಮತ್ತು ತಾಯಿ ಶಾರದಾಬಾಯಿ (86) ಮೃತರು.

ಸಾಂದರ್ಭಿಕ ಚಿತ್ರ.

ಬೀದರ್: ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಅಪಘಾತದಲ್ಲಿ ಮೃತಪಟ್ಟ ಮಗನ ಸಾವಿನ ಸುದ್ದಿ ತಿಳಿದು ತಾಯಿ ಕೂಡ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬೀದರ್ ತಾಲೂಕಿನ ಘೋಡಂಪಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮೀಕಾಂತ್ ಜೋಶಿ ಅಲಿಯಾಸ್ ಕಾಂತರಾಜು (45) ಮತ್ತು ತಾಯಿ ಶಾರದಾಬಾಯಿ (86) ಮೃತರು. ಚಾಲಕನ ನಿಯಂತ್ರಣ ತಪ್ಪಿ ಪ್ರಯಾಣಿಕರ ಸಮೇತ ಗೂಡ್ಸ್ ವಾಹನ ಬಾವಿಗೆ ಬಿದ್ದು 7 ಜನರ ಪೈಕಿ ಇಬ್ಬರು ಮೃತಪಟ್ಟಿದ್ದರು (Bidar News). ಮೃತಪಟ್ಟ ಇಬ್ಬರ ಪೈಕಿ ಲಕ್ಷ್ಮೀಕಾಂತ್ ಕೂಡ ಒಬ್ಬರು. ಮೃತಪಟ್ಟ ಇನ್ನೊಬ್ಬರನ್ನು ರವಿ (18) ಎಂದು ಗುರುತಿಸಲಾಗಿದೆ.
ಲಕ್ಷ್ಮೀಕಾಂತ್ ಸಾವಿನ ಸುದ್ದಿ ತಿಳಿದು ತಾಯಿ ಶಾರದಾಬಾಯಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅತ್ತ ಅಪಘಾತದಲ್ಲಿ ಮಗ ಬಲಿಯಾದರೆ, ಇತ್ತ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ: Road Accident: ಕಾರು ಮರಕ್ಕೆ ಡಿಕ್ಕಿ, ಗರ್ಭಿಣಿ ರುಂಡ ಕತ್ತರಿಸಿ ಸಾವು
ಕ್ಲಾಸಿನಲ್ಲೇ ವಿದ್ಯಾರ್ಥಿ ಸಾವು
ಹುಬ್ಬಳ್ಳಿ: ರಾಜ್ಯದಲ್ಲಿ ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಇದೀಗ ಹುಬ್ಬಳ್ಳಿಯಲ್ಲಿ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ತರಗತಿಯಲ್ಲಿ ಕುಳಿತಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬ ಕುಸಿದುಬಿದ್ದು ಹೃದಯಸ್ತಂಭನದಿಂದ ಮೃತಪಟ್ಟಿದ್ದ. ಹುಬ್ಬಳ್ಳಿಯಲ್ಲಿ ಜೆಜಿ ಕಾಮರ್ಸ್ ಕಾಲೇಜಿನಲ್ಲಿ ರಾಹುಲ್ (17) ಎಂಬ ವಿದ್ಯಾರ್ಥಿ ಬುಧವಾರ ತರಗತಿಯಲ್ಲಿ ಕುಳಿತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದು, ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದ.
ರಾಜ್ಯದಲ್ಲಿ ಹೀಗೆ ಹಠಾತ್ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಬುಧವಾರ ಹಾವೇರಿಯಲ್ಲಿ ಇಬ್ಬರು, ಹಾಸನ, ಹುಬ್ಬಳ್ಳಿ, ಚಾಮರಾಜನಗರ, ಬೆಂಗಳೂರು ಹೊರವಲಯದ ಹೊಸಕೋಟೆಯಲ್ಲಿ ತಲಾ ಒಬ್ಬರು ಸೇರಿ 6 ಮಂದಿ ಮೃತಪಟ್ಟಿದ್ದರು. ಹಾಸನದ ಮುಟ್ಟನಹಳ್ಳಿಯಲ್ಲಿ ಮನೆ ಮುಂದೆ ಕುಳಿತಿದ್ದ ರೈತ ಸಣ್ಣಪ್ಪ ಕುಳಿತಲ್ಲೇ ಹೃದಯಾಘಾತದಿಂದ ಅಸುನೀಗಿದ್ದರು. ಹಾವೇರಿಯ ಹಾನಗಲ್‌ನ ಅಕ್ಕಿಆಲೂರಿನ ನಿಂಗಪ್ಪ ಆಸ್ಪತ್ರೆಗೆ ಹೋಗುವಾಗ ನಿಧನ ಹೊಂದಿದ್ದರು. ಹಾವೇರಿಯ ಗೀತಾ ಹೊಸಕೋಟೆ ಕೋನಪ್ಪ ಹೃದಯಾಘಾತಕ್ಕೊಳಗಾಗಿ ತಪಾಸಣೆಗೆ ಆಸ್ಪತ್ರೆಗೆ ಬಂದಾಗ ಕುಸಿದು ಸಾವನ್ನಪ್ಪಿದ್ದರು.