ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chinthamani News: ಬನಹಳ್ಳಿ ಗ್ರಾಮಾಭಿವೃದ್ದಿ ಟ್ರಸ್ಟ್ ನಿಂದ 90 ಹಸುಗಳಿಗೆ ವಿಮಾ ಹಣ ಪಾವತಿ: ಮಂಜುನಾಥ

ಶ್ರೀ ಬನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ವತಿಯಿಂದ  ಟ್ರಸ್ಟ್ ಅಧ್ಯಕ್ಷ ಬಿ ಎನ್ ನಾರಾಯಣ ಸ್ವಾಮಿ, ಕಾರ್ಯದರ್ಶಿ ಮತ್ತು  ಕೈವಾರ ಹಾಲು ಉತ್ಪಾದಕರ ಸಹಕಾರ  ಸಂಘದ ಉಪಾಧ್ಯಕ್ಷರು ಬಿ ಜಿ ಮಂಜು ನಾಥ್ ರವರಿಂದ ಹಸುಗಳಿಗೆ ತಗುಲುವ ವಿಮಯ ಮೊತ್ತವನ್ನು ಉತ್ಪಾದಕರ ಪರವಾಗಿ ಟ್ರಸ್ಟ್ ವತಿ ಯಿಂದ ಒಂದು ಹಸುಗೆ ೯೫೮ ರೂಪಾಯಿಯಂತೆ ೯೦ ಹಸುಗಳಿಗೆ ಉಚಿತವಾಗಿ ನೀಡಿದರು.

ಬನಹಳ್ಳಿ ಗ್ರಾಮಾಭಿವೃದ್ದಿ ಟ್ರಸ್ಟ್ ನಿಂದ 90 ಹಸುಗಳಿಗೆ ವಿಮಾ ಹಣ ಪಾವತಿ

-

Ashok Nayak Ashok Nayak Sep 15, 2025 11:30 PM

ಚಿಂತಾಮಣಿ: ಶ್ರೀ ಬನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ಸಂಘದಿಂದ ಉಚಿತವಾಗಿ 90 ಹಸುಗಳಿಗೆ ವಿಮೆಯನ್ನು ಮಾಡಿಸಿ ಕೊಡುತ್ತೇನೆ ಎಂದು ಹಿಂದೆ ಹೇಳಿದ್ದ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ಕೈವಾರ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಹಾಗೂ ಬನಹಳ್ಳಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಕಾರ್ಯದರ್ಶಿ ಬಿ.ಜಿ.ಮಂಜುನಾಥ ತಿಳಿಸಿದರು.

ಅವರು ಸೋಮವಾರ ನಡೆದ ಕೈವಾರ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೪- ೨೦೨೫ ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಜಿಲ್ಲೆ ಯಲ್ಲಿ ಅತಿ ಹೆಚ್ಚು ಸಬ್ಸಿಡಿ ಬರುವ ಸಂಘ ಅಂದ್ರೆ ನಮ್ಮ ಕೈವಾರ ಹಾಲು ಉತ್ಪಾದಕರ ಸಹಕಾರ ಸಂಘವಾಗಿರುವುದು ನಮಗೆ ಸಂತಸವಾಗಿದೆ ಇದೇ ರೀತಿ ಪಾದಕರು ಗುಣಮಟ್ಟದ ಹಾಲು ಪೂರೈಸಿ ಸಂಘದ ಅಭಿವೃದ್ದಿಗೆ ಸಹಕರಿಸಿ ಎಂದರು.

ಇದೆ ವೇಳೆ ಶ್ರೀ ಬನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಟ್ರಸ್ಟ್ ಅಧ್ಯಕ್ಷ ಬಿ ಎನ್ ನಾರಾಯಣ ಸ್ವಾಮಿ, ಕಾರ್ಯದರ್ಶಿ ಮತ್ತು  ಕೈವಾರ ಹಾಲು ಉತ್ಪಾದಕರ ಸಹಕಾರ  ಸಂಘದ ಉಪಾಧ್ಯಕ್ಷರು ಬಿ ಜಿ ಮಂಜುನಾಥ್ ರವರಿಂದ ಹಸುಗಳಿಗೆ ತಗುಲುವ ವಿಮಯ ಮೊತ್ತವನ್ನು ಉತ್ಪಾದಕರ ಪರವಾಗಿ ಟ್ರಸ್ಟ್ ವತಿಯಿಂದ ಒಂದು ಹಸುಗೆ ೯೫೮ ರೂಪಾಯಿಯಂತೆ ೯೦ ಹಸುಗಳಿಗೆ ಉಚಿತವಾಗಿ ನೀಡಿದರು.

ಇದನ್ನೂ ಓದಿ: Chitradurga News: ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ, ಪ್ರಜಾಪ್ರಭುತ್ವದ ಅರಿವು ಅಗತ್ಯ

ಸಂಘದ ಉಪಾಧ್ಯಕ್ಷ ಬಿ.ಜಿ.ಮಂಜುನಾಥ್  ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು. ಸಭೆಯಲ್ಲಿ ಸಂಘದ ಅಭಿವೃದ್ದಿ ಕುರಿತಂತೆ ಹಲವಾರು ಸುಧೀರ್ಘವಾಗಿ ಚರ್ಚಿಸಲಾಯಿತು.

ಮಾಜಿ ನಿರ್ದೇಶಕ ಊಲವಾಡಿ ಅಶ್ವಥ್ ನಾರಾಯಣ್, ಶಾಖಾ ಉಪವ್ಯವಸ್ಥಾಪಕ ಡಿ.ಎಂ.ಮಹೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಜಂಟಿ ನಿರ್ದೇಶಕರು ನಂದಿನಿ ವೀರ್ಯಾಣು ಕೇಂದ್ರ ಹೆಸರಘಟ್ಟದ ಡಾ ಎಲ್ ರಾಘವೇಂದ್ರ, ಚಿಂತಾಮಣಿ ಉಪ ವ್ಯವಸ್ಥಾಪಕರಾದ ಡಾ ಡಿ ಎಂ ಮಹೇಶ್,ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ವಿಸ್ತರಣಾಧಿಕಾರಿಗಳು ಗುಲಾಬ್ ಜಾನ್, ಕೈವಾರ ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾದ ರಾಜೇಶ್ ಎಸ್, ಮಾಜಿ ಕಾರ್ಯದರ್ಶಿ ಎ ಕೃಷ್ಣಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಕೆ ಎಸ್ ಸಂಘದ ನಿರ್ದೇಶಕರುಗಳಾದ ತಮ್ಮೇಗೌಡ, ಪುಟ್ಟರಾಜ, ಬಿ ಎನ್ ನಾರಾಯಣ ಸ್ವಾಮಿ, ಶಿವಾನಂದ, ರವೀಂದ್ರ ಬಿ ಎಂ, ಬಿ ನಂಜುಂಡ ಗೌಡ, ಜಿ ವಿಶ್ವನಾಥ್, ವೆಂಕಟಸ್ವಾಮಿ, ಗಾಯತ್ರಿ,ಮುನಿರತ್ನಮ್ಮ, ಹಾಲು ಪರೀಕ್ಷಕರಾದ ಶ್ರೀನಿವಾಸಪ್ಪ, ಸಹಾಯಕರಾದ ವೆಂಕಟೇಶ್ ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.