ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Accident: ಗಣೇಶ ವಿಸರ್ಜನೆ ವೀಕ್ಷಿಸಲು ಹೊರಟವರ ಕಾರು ಅಪಘಾತ, ಇಬ್ಬರ ಸಾವು

Chikkaballapura: ಚಿಕ್ಕಬಳ್ಳಾಪುರ ಗೌರಿಬಿದನೂರು ಮಾರ್ಗದ ವಡ್ಡರಬಂಡೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿ ನೀಲಗಿರಿ ಮರಕ್ಕೆ ಡಿಕ್ಕಿಯಾಗಿ ಮರದೊಳಗೆ ತೂರಿಕೊಂಡಿದೆ. ಎಫ್‌ಡಿಎ ಶಶಿ ಹಾಗೂ ಮೆಕ್ಯಾನಿಕ್ ಮುನಿರಾಜು ಎಂಬವರು ಸ್ಥಳದಲ್ಲಿಯೇ ಮೃತಪಟ್ಟರು.

ಗಣೇಶ ವಿಸರ್ಜನೆ ವೀಕ್ಷಿಸಲು ಹೊರಟವರ ಕಾರು ಅಪಘಾತ, ಇಬ್ಬರ ಸಾವು

-

ಹರೀಶ್‌ ಕೇರ ಹರೀಶ್‌ ಕೇರ Sep 15, 2025 7:29 AM

ಚಿಕ್ಕಬಳ್ಳಾಪುರ: ಗೌರಿಬಿದನೂರಿನ ಬೈಪಾಸ್ ಗಣೇಶ ವಿಸರ್ಜನೆ (Ganesha Visarjan) ವೀಕ್ಷಿಸಲು ಹೊರಟ ಇಬ್ಬರು ಕಾರು ಅಪಘಾತದಲ್ಲಿ (Road Accident) ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಡ್ಡರಬಂಡೆ ಗ್ರಾಮದ ಸಮೀಪ ನಡೆದಿದೆ. ಕಾರಿನಲ್ಲಿದ್ದ ಮಂಚೇನಹಳ್ಳಿ ವಾಸಿ ಗೆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎಫ್‌ಡಿಎ ಶಶಿ (42) ಹಾಗೂ ಮಂಚೇನಹಳ್ಳಿ ತಾಲೂಕಿನ ದಂಡಿಗಾನಹಳ್ಳಿಯ ಮೆಕ್ಯಾನಿಕ್ ಮುನಿರಾಜು (28) ಮೃತಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಗೌರಿಬಿದನೂರು ಮಾರ್ಗದ ವಡ್ಡರಬಂಡೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿ ನೀಲಗಿರಿ ಮರಕ್ಕೆ ಡಿಕ್ಕಿಯಾಗಿ ಮರದೊಳಗೆ ತೂರಿಕೊಂಡಿದೆ. ಎಫ್‌ಡಿಎ ಶಶಿ ಹಾಗೂ ಮೆಕ್ಯಾನಿಕ್ ಮುನಿರಾಜು ಸ್ಥಳದಲ್ಲಿಯೇ ಮೃತಪಟ್ಟರು. ಕಾರಿನಲ್ಲಿದ್ದ ಮಂಚೇನಹಳ್ಳಿಯ ಮುಕ್ಕಡಿಪೇಟೆಯ ರಮೇಶ್ (40) ತೀವ್ರವಾಗಿ ಗಾಯಗೊಂಡಿದ್ದು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಶಶಿ ಅವರ ಪತ್ನಿ ನಾಜಿಯಾ ಈ ಬಗ್ಗೆ ಮಂಚೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಗೌರಿಬಿದನೂರು ಬೈಪಾಸ್ ಗಣೇಶನ ಗಂಗಾವೀಲೀನ ಕಾರ್ಯ ನಿನ್ನೆ ವಿಜೃಂಭಣೆಯಿಂದ ನೇರವೇರಿತು. ಮದ್ದೂರು ಗಣೇಶ ವಿಸರ್ಜನೆಯಲ್ಲಿ ನಡೆದ ಗಲಭೆಯ ಪರಿಣಾಮದಿಂದಾಗಿ, ಗೌರಿಬಿದನೂರು ಬೈಪಾಸ್ ಗಣೇಶ ವಿಸರ್ಜನೆಗೆ ಪೊಲೀಸ್ ಇಲಾಖೆಯಿಂದ ಹೈ ಅಲರ್ಟ್ ಘೋಷಿಸಲಾಗಿತ್ತು. ಗೌರಿಬಿದನೂರು ನಗರ ಸುತ್ತಮುತ್ತಲಿನ ಬಾರ್‌ಗಳನ್ನು ಬಂದ್‌ ಮಾಡಲಾಗಿತ್ತು.

ಇದನ್ನೂ ಓದಿ: Chikkaballapura: ಬರೋಬ್ಬರಿ 4 ಲಕ್ಷ ರೂ.ಗೆ ಮಾರಾಟವಾದ ಸಾರ್ವಜನಿಕ ಗಣೇಶೋತ್ಸವದ ಲಡ್ಡು!