ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಚಿಕ್ಕಬಳ್ಳಾಪುರ ನಗರಸಭೆಗೆ ಜಿಲ್ಲಾಧಿಕಾರಿಗಳ ದಿಢೀರ್ ಭೇಟಿ : ಅಧ್ಯಕ್ಷರೊಂದಿಗೆ ಸಭೆ

ಚಿಕ್ಕಬಳ್ಳಾಪುರ ನಗರಸಭೆಯ ಜನವಿರೋಧಿ ಕಾರ್ಯನಿರ್ವಹಣೆ, ಕಡತಗಳ ನಾಪತ್ತೆ, ಕಸದಂತೆ ಬಿ-ಖಾತಾ ದಾಖಲಾತಿ ಪತ್ರಗಳನ್ನು ಎಲ್ಲೆಂದರಲ್ಲಿ ಬಿಸಾಕಿರುವುದು,ಸಕಾಲ ಕೌಂಟರ್ ತೆರೆಯದಿರು ವುದು, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಮಾಡದಿರುವುದು ಹೀಗೆ ಇಲ್ಲಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸೇರಿದಂತೆ ನಗರಸಭೆಯ ಆಡಳಿತ ಪಕ್ಷದ ಸದಸ್ಯರು ಸುದ್ದಿಗೋಷ್ಟಿಯನ್ನು ನಡೆಸಿ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಚಿಕ್ಕಬಳ್ಳಾಪುರ ನಗರಸಭೆಗೆ ಜಿಲ್ಲಾಧಿಕಾರಿಗಳ ದಿಢೀರ್ ಭೇಟಿ

ಚಿಕ್ಕಬಳ್ಳಾಪುರ ನಗರಸಭೆಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.

Profile Ashok Nayak Jul 17, 2025 11:31 PM

ನಗರಸಭೆ ಕಾರ್ಯವೈಖರಿ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಭೇಟಿ ದಾಖಲೆಗಳ ಪರಿಶೀಲನೆ

ಚಿಕ್ಕಬಳ್ಳಾಪುರ : ನಗರಸಭೆಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ದಿಢೀರ್ ಭೇಟಿ ನೀಡಿದ್ದು ಈ ವೇಳೆ ಬಿಖಾತಾ ವಿಚಾರ, ಕಡತಗಳ ನಾಪತ್ತೆ, ಸಾರ್ವಜನಿಕರಿಗೆ ಸ್ಪಂಧನೆಯಿಲ್ಲದಿರುವ ಕುರಿತು ಅಧ್ಯಕ್ಷ ಗಜೇಂದ್ರ, ಆಯುಕ್ತರಾದ ಮನ್ಸೂರ್ ಅಲಿ ಅವರಿಂದ ಮಾಹಿತಿ ಪಡೆದುಕೊಂಡರು ಎಂದು ತಿಳಿದು ಬಂದಿದೆ.

ತೀವ್ರ ಕುತೂಹಲ!!
ಚಿಕ್ಕಬಳ್ಳಾಪುರ ನಗರಸಭೆಯ ಜನವಿರೋಧಿ ಕಾರ್ಯನಿರ್ವಹಣೆ, ಕಡತಗಳ ನಾಪತ್ತೆ, ಕಸದಂತೆ ಬಿ-ಖಾತಾ ದಾಖಲಾತಿ ಪತ್ರಗಳನ್ನು ಎಲ್ಲೆಂದರಲ್ಲಿ ಬಿಸಾಕಿರುವುದು,ಸಕಾಲ ಕೌಂಟರ್ ತೆರೆಯದಿರು ವುದು, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಮಾಡದಿರುವುದು ಹೀಗೆ ಇಲ್ಲಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸೇರಿದಂತೆ ನಗರಸಭೆಯ ಆಡಳಿತ ಪಕ್ಷದ ಸದಸ್ಯರು ಸುದ್ದಿಗೋಷ್ಟಿಯನ್ನು ನಡೆಸಿ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.ಇದಕ್ಕೆ ವಿರೋಧ ಪಕ್ಷದ ಸದಸ್ಯರು ಕೂಡ ದನಿಗೂಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Chikkaballapur News: ಬೋಧಕ ಸಿಬ್ಬಂದಿ ಶಿಸ್ತಿನ ರಾಯಭಾರಿಗಳಾಗಬೇಕು: ಡಾ. ಅಮಿತ್ ನಾಥ್
ತಾಕೀತು!!

ಈ ವೇಳೆ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿರುವ ಜಿಲ್ಲಾಧಿಕಾರಿಗಳು ಕಡತಗಳ ಸರಿಯಾದ ನಿರ್ವಹಣೆ ಮಾಡಬೇಕು.ಇದನ್ನು ರಿಜಿಸ್ಟರ್ ಬುಕ್‌ನಲ್ಲಿ ಕ್ರಮವಾಗಿ ನಮೂದು ಮಾಡಬೇಕು. ವಾರ್ಡ್ವಾರು ಮಾಹಿತಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಾರ್ವ ಜನಿಜಕರು ನೀಡುವ ದಾಖಲೆ ಪತ್ರಗಳು ಕಳುವಾಗುವುದು,ಕಸದಂತೆ ಎಲ್ಲೆಂದರಲ್ಲಿ ಬಿಸಾಡುವುದು ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು ಎಂಬುದು ಪ್ರತ್ಯಕ್ಷದರ್ಶಿಗಳ ಹೇಳಿಕೆಯಾಗಿದೆ.

ದೂರುಗಳು?
ಈ ವೇಳೆ ಮಾಧ್ಯಮದ ಜತೆಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಇ.ಸಿ. ಹಳೆಯದು ಕೊಡಬೇಕಿತ್ತು. ಬಿ.ಖಾತಾ ಹಿಂಬರಹದ ಪ್ರತಿಯ ಸಮಸ್ಯೆ,ಅರ್ಜಿಗಳನ್ನು ಕೊಟ್ಟಂತಹವರಿಗೆ ನಮ್ಮ ಅರ್ಜಿಗಳು ದೊರೆಯುತ್ತಿಲ್ಲ, ಎಲ್ಲೆಂದರಲ್ಲಿ ಬಿಸಾಡಿದ್ದಾರೆ,ಹೀಗೆ ನಾನಾ ದೂರುಗಳು ಬಂದಿದ್ದವು.ಈ ಬಗ್ಗೆ ಪರಿಶೀಲನೆ ನಡೆಸಿ ಸರಿಪಡಿಸಿಕೊಳ್ಳಲು ನಗರಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.

ಒಟ್ಟು ೯೮೧೭ ಖಾತೆ ಸಿದ್ದ!!!

ಈವರೆಗೆ ಬಿ ಖಾತಾ ಆಂದೋಲನ ಪ್ರಾರಂಭವಾದಾಗಿನಿAದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ೭೬೯೭ ಎ-ಖಾತಾ ಮಾಡಲಾಗಿದೆ,೨೧೨೦ ಬಿ ಖಾತಾ ಮಾಡಲಾಗಿದ್ದು ಒಟ್ಟು ೯೮೧೭ ಖಾತೆಗಳನ್ನು ನಗರಾ ಡಳಿತ ಮಾಡಿದೆ.ಈ ಪೈಕಿ ೯೦೨ ಬಿಖಾತೆ, ೭೭೪ ಎ ಖಾತೆ ವಿತರಣೆ ಮಾಡಲಾಗಿದೆ. ನಗರಸಭೆ ಕಮಿಷ ನರ್ ಅವರು ಎಲ್ಲಾ ಸರಿಯಿದೆ ಎಂದು ಅಪ್ರೂವಲ್ ಮಾಡಿದ್ದರೆ ಅಲ್ಲಿಗೆ ಅದು ಖಾತಾ ಆಗಿದೆ ಎಂದು ಅರ್ಥ.ಆನಂತರ ಅರ್ಜಿದಾರರು ಇ.ಆಸ್ತಿ ತಂತ್ರಾಂಶದ ವೆಬ್‌ಸೈಟ್‌ಗೆ ಹೋಗಿ ಅಪ್ರೂವ್ದ್ ಪ್ರತಿಯನ್ನು ಅವರಿದ್ದಲ್ಲಿಯೇ ಆನ್‌ ಲೈನ್ ಮೂಲಕ ಪಡೆಯಬಹುದು.ಯಾರನ್ನೂ ಕಾಯುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಖಾತಾ ಸಮಸ್ಯೆ ಪರಿಹಾರ ??
ಬಿಖಾತಾ, ಅಥವಾ ಎ ಖಾತಾ ಮಾಡಲು ಬೇಕಾದ ದಾಖಲಾತಿಗಳ ಬಗ್ಗೆ ಸಾರ್ವಜನಿಕರಿಗೆ ಜಿಲ್ಲಾಡಳಿತ, ನಗರಾಡಳಿತ ಸಾಕಷ್ಟು ಪ್ರಚಾರ ಮಾಡಿತ್ತು. ಇದರ ಹೊರತಾಗಿಯೂ ನಗರವಾಸಿಗಳು ಇ.ಸಿ. ಸಲ್ಲಿಸುವಾಗ ಸೇಲ್ ಡೀಡ್ ಮಾಡಿಸಿರುವ ದಿನಾಂಕದಿಂದ ಹಿಂದಿನದನ್ನು ಕೊಡಬೇಕಿತ್ತು. ಆದರೆ ಬಹಳಷ್ಟು ಮಂದಿ ಸೇಲ್ ಡೀಡ್ ನೋಂದಣಿ ಆದ ನಂತರದ್ದು ಕೊಟ್ಟಿದ್ದಾರೆ. 2024ರ ಮಾರ್ಚ್ ಒಳಗೆ ಅರ್ಜಿ ಸಲ್ಲಿಸಿದವರು ಡಬಲ್ ಟ್ಯಾಕ್ಸ್ ಕಟ್ಟಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇ.ಸಿ ಸಮಸ್ಯೆ ತಿಳಿಸಿ ಅವರ ಖಾತೆ ಮಾಡುವ ಕಾಲಕ್ಕೆ ೨೦೨೫ರ ಏಪ್ರಿಲ್ ಆಗಿದ್ದು ಹೊಸ ಆರ್ಥಿಕ ವರ್ಷದ ತೆರಿಗೆಯನ್ನು ಕೂಡ ಪಾವತಿ ಮಾಡಬೇಕಿರುವುದರಿಂದ ಖಾತೆ ಮಾಡಲು ಆಗಿರಲಿಲ್ಲ.ಹೀಗಾಗಿ ಕಂದಾಯ ಮತ್ತು ಇಸಿಯನ್ನು ಯಾರು ನಗರಸಭೆ ಸೂಚಿಸಿದ ನಿಯಮಾವಳಿಯಂತೆ ಸಲ್ಲಿಸಿದ್ದಾರೋ ಅವರೆಲ್ಲರಿಗೂ ಎ ಮತ್ತು ಬಿ-ಖಾತೆ ಮಾಡಿಕೊಡಲಾಗಿದೆ.ಇ.ಸಿ ಮತ್ತು ಟ್ಯಾಕ್ಸ್ ತುಂಬಿದವರಿಗೆ ಖಾತೆ ಮಾಡಿ, ಖುದ್ಧಾಗಿ ಅವರ ಮನೆ ಬಾಗಿಲಿಗೆ ತಲುಪಿಸಿ, ಒಂದುವೇಳೆ ಯಾರು ಈ ನಿಯಮ ಪಾಲಿಸಿಲ್ಲವೋ ಅಂತಹವರ ಅರ್ಜಿಯನ್ನು ಕ್ಯಾನ್ಸ್ಲ್ ಮಾಡಿ ಅವರಿಗೆ ಹಿಂಬರಹ ನೀಡಿ ಎಂದು ಸೂಚಿಸಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಭೌತಿಕ ಅರ್ಜಿ ಸ್ವೀಕಾರ ಮಾಡಬಾರದು ?
ಜು.೧೧ರ ಜಿಲ್ಲಾಧಿಕಾರಿಗಳ ಸಭೆಯ ತೀರ್ಮಾನದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಬಿಖಾತಾ ಅಂದೋಲನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಖಾತೆ ಕೋರಿ ಬರುವ ಅರ್ಜಿಗಳನ್ನು ಸಕಾಲದಲ್ಲಿ ಮಾತ್ರ ಸ್ವೀಕರಿಸಬೇಕು. ಆನ್‌ ಲೈನ್ನಲ್ಲಿ ಅರ್ಜಿ ಸ್ವೀಕರಿಸಿ ಖಾತೆ ಮಾಡಲು ಬೇಕಾದ ಎಲ್ಲಾ ಪತ್ರವ್ಯವಹಾರವನ್ನು ಕೂಡ ಆನ್‌ ಲೈನ್ನಲ್ಲಿಯೇ ಮಾಡಬೇಕು ಎಂದು ತಾಕೀತು ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ಮಾಧ್ಯದವರಿಗೆ ತಿಳಿಸಿದ ಅವರು ಬಿಖಾತೆ ಮಾಡಲು ಸರಕಾರ ನಿಗಧಿಪಡಿಸಿರುವ ಗಡುವು ಆಗಸ್ಟ್ಗೆ ಕೊನೆಯಾಗಲಿರುವುದರಿಂದ ಸಾರ್ವಜನಿಕರು ಖಾತೆ ಮಾಡಿಸಿಕೊಳ್ಳಬೇಕಾದ ಎಲ್ಲಾ ನಿಯಮಾವಳಿಗಳನ್ನು ಪೂರೈಸಿ ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ಈ ವೇಳೆ ನಗಸಭೆ ಅಧ್ಯಕ್ಷ ಗಜೇಂದ್ರ, ಆಯುಕ್ತ ಮನ್ಸೂರ್ ಅಲಿ, ಕಚೇರಿ ಸಿಬ್ಬಂದಿ ಇದ್ದರು.