ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ಮಕ್ಕಳಿಗೆ ಕಣ್ಣಿನ ಪರೀಕ್ಷೆ: ಉಚಿತವಾಗಿ ಕನ್ನಡಕ ವಿತರಣೆ

ಮೊಬೈಲ್ ಮತ್ತು ಟಿವಿ ಸಾಮಾಜಿಕ ಮಾಧ್ಯಮಗಳ ಬಳಕೆಯಿಂದಾಗಿ ಸಣ್ಣ ವಯಸ್ಸಿನ ಮಕ್ಕಳಲ್ಲಿ ಕಣ್ಣಿನ ದೋಷಗಳು ಕಂಡು ಬರುತ್ತಿವೆ.ಕಣ್ಣು ಸೂಕ್ಷ್ಮವಾದ ಅಂಗವಾಗಿದೆ. ಇದಕ್ಕೆ ಒಮ್ಮೆ ಸಮಸ್ಯೆ ಯಾದರೆ ಜೀವನಪರ್ಯಂತ ತೊಂದರೆ ಎದುರಿಸಬೇಕಾಗುತ್ತದೆ. ನಮ್ಮ ಶಾಲೆಯ ಮಕ್ಕಳಿಗೆ ಇರಬಹು ದಾದ ಕಣ್ಣಿನ ತೊಂದರೆಗಳನ್ನು ಪತ್ತೆಹಚ್ಚಿ ಅದಕ್ಕೆ ಪರಿಹಾರೋಪಾಯಗಳನ್ನು ಕಲ್ಪಿಸುವ ಉದ್ದೇಶದಿಂದ ಕಣ್ಣಿನ ಪರೀಕ್ಷೆ ಏರ್ಪಡಿಸಲಾಗಿದೆ

Bagepally News: ಮಕ್ಕಳಿಗೆ ಕಣ್ಣಿನ ಪರೀಕ್ಷೆ: ಉಚಿತವಾಗಿ ಕನ್ನಡಕ ವಿತರಣೆ

ಪಟ್ಟಣದ ನ್ಯೂ ಹಾರಿಜನ್ ಶಾಲಾ ಮಕ್ಕಳಿಗೆ ಶ್ರೀ ಮಧುಸೂಧನ ಸಾಯಿ ಸೈನ್ಸ್ ಮೆಡಿಕಲ್ ಅಂಡ್ ರಿಸರ್ಚ್ ಸೆಂಟರ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ನಡೆಸಿ ಉಚಿತವಾಗಿ ಕನ್ನಡಕ ವಿತರಣೆ ಮಾಡಿದ್ದಾರೆ ಎಂದು ಶಾಲಾ  ವ್ಯವಸ್ಥಾಪಕ ಪೃಥ್ವಿರಾಜ್ ರೆಡ್ಡಿ ತಿಳಿಸಿದರು. -

Ashok Nayak Ashok Nayak Oct 12, 2025 9:53 AM

ಬಾಗೇಪಲ್ಲಿ: ಪಟ್ಟಣದ ನ್ಯೂ ಹಾರಿಜನ್ ಶಾಲಾ ಮಕ್ಕಳಿಗೆ ಶ್ರೀ ಮಧುಸೂಧನ ಸಾಯಿ ಸೈನ್ಸ್ ಮೆಡಿಕಲ್ ಅಂಡ್ ರಿಸರ್ಚ್ ಸೆಂಟರ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ನಡೆಸಿ ಉಚಿತವಾಗಿ ಕನ್ನಡಕ ವಿತರಣೆ ಮಾಡಿದ್ದಾರೆ ಎಂದು ಶಾಲಾ ವ್ಯವಸ್ಥಾಪಕ ಪೃಥ್ವಿರಾಜ್ ರೆಡ್ಡಿ ತಿಳಿಸಿದರು.

ಪಟ್ಟಣದ ನ್ಯೂ ಹಾರಿಜನ್ ಶಾಲಾ ಆವರಣದಲ್ಲಿ ಮಧುಸೂದನ ಸಾಯಿ ಸತ್ಯಸಾಯಿ ಆಸ್ಪತ್ರೆ ಹಾಗೂ ಗಿಫ್ಟ್ ಅಫ್ ಸೈಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ಪರೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದನ್ನೂ ಓದಿ: Bagepally News: ದೇಶದ ಮಾನವ ಸಂಪನ್ಮೂಲ ಹಾಳಾಗಲು ಅಮಲು ಪದಾರ್ಥ ಸೇವನೆ ಕಾರಣ : ಆರಕ್ಷಕ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ

ಮೊಬೈಲ್ ಮತ್ತು ಟಿವಿ ಸಾಮಾಜಿಕ ಮಾಧ್ಯಮಗಳ ಬಳಕೆಯಿಂದಾಗಿ ಸಣ್ಣ ವಯಸ್ಸಿನ ಮಕ್ಕಳಲ್ಲಿ ಕಣ್ಣಿನ ದೋಷಗಳು ಕಂಡು ಬರುತ್ತಿವೆ.ಕಣ್ಣು ಸೂಕ್ಷ್ಮವಾದ ಅಂಗವಾಗಿದೆ. ಇದಕ್ಕೆ ಒಮ್ಮೆ ಸಮಸ್ಯೆ ಯಾದರೆ ಜೀವನಪರ್ಯಂತ ತೊಂದರೆ ಎದುರಿಸಬೇಕಾಗುತ್ತದೆ. ನಮ್ಮ ಶಾಲೆಯ ಮಕ್ಕಳಿಗೆ ಇರಬಹುದಾದ ಕಣ್ಣಿನ ತೊಂದರೆಗಳನ್ನು ಪತ್ತೆಹಚ್ಚಿ ಅದಕ್ಕೆ ಪರಿಹಾರೋಪಾಯಗಳನ್ನು ಕಲ್ಪಿಸುವ ಉದ್ದೇಶದಿಂದ ಕಣ್ಣಿನ ಪರೀಕ್ಷೆ ಏರ್ಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಣ್ಣಿನ ತಪಾಸಣೆ ನಡೆಸಿದ ಶ್ರೀ ಮಧುಸೂಧನ ಸಾಯಿ ಸೈನ್ಸ್ ಮೆಡಿಕಲ್ ಅಂಡ್ ರಿಸರ್ಚ್ ಸೆಂಟರ್ ಸಿಬ್ಬಂದಿ ಕೆಲವು ಮಕ್ಕಳಿಗೆ ಕಣ್ಣಿನ ತೊಂದರೆಯಿರುವುದು ಪತ್ತೆಯಾಯಿತು. ಕೂಡಲೇ ಅವರಿಗೆ ಉಚಿತವಾಗಿ ಗಿಫ್ಟ್ ಸೈಟ್ ವತಿಯಿಂದ ಕನ್ನಡಕ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ನ್ಯೂ ಹಾರಿಜನ್ ಮುಖ್ಯೋಪಾಧ್ಯಾಯ ಶ್ರೀನಿವಾಸ್ ರೆಡ್ಡಿ. ಶ್ರೀ ಮಧುಸೂಧನ ಸಾಯಿ ಸೈನ್ಸ್ ಮೆಡಿಕಲ್ ಅಂಡ್ ರಿಸರ್ಚ್ ಸೆಂಟರ್ ಮಂಜುನಾಥ್ ಹಿರಿಯ ವಕೀಲರಾದ ಸುಧಾ ಕರ್, ಶಿಕ್ಷಕರಾದ  ರಾಮಕೃಷ್ಣ. ದೈಹಿಕ ಶಿಕ್ಷಕ ಕುಮಾರ್ ಅಭಿಷೇಕ್ ಬಿ. ಎ. ಇನ್ನೂ ಮುಂತಾದವರು ಉಪಸ್ಥಿತರಿದ್ದರು.