ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಉದಾಸೀನವೇ ವಿದ್ಯಾರ್ಥಿ ಜೀವನಕ್ಕೆ ಮಹಾ ಶತ್ರು : ಕೋಡಿರಂಗಪ್ಪ ಅಭಿಮತ

ಅಂಕಗಳೊಂದಿಗೆ ವೈಚಾರಿಕತೆಯನ್ನು ಬೆಳೆಸಿಕೊಳ್ಳಿ.ಒಳ್ಳೆಯ ಸ್ನೇಹಿತರೊಂದಿಗೆ ಬೆಳೆದು,ಸಾಧಕರ ಆದರ್ಶಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆಯಬಹುದು. ವಿದ್ಯೆ ಅತಿ ದೊಡ್ಡ ಶಕ್ತಿ ,ಅದನ್ನು ಎಂದಿಗೂ ಕೈಬಿಡಬೇಡಿ ವಿದ್ಯೆಯನ್ನು ಹಿಡಿದುಕೊಂಡರೆ ಜೀವನವೇ ಹೂವಿನ ಹಾಸಿಗೆಯಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಉದಾಸೀನವೇ ವಿದ್ಯಾರ್ಥಿ ಜೀವನಕ್ಕೆ ಮಹಾ ಶತ್ರು

ಕಲಿಯುವ ದಿನಗಳಲ್ಲಿ ಕಲಿಕೆಯ ಬಗೆಗಿನ ಆಸಕ್ತಿ ಬತ್ತದಿರಲಿ. ಉದಾಸೀನತೆ ಎಂದಿಗೂ ಹತ್ತಿರ ಬಾರದಂತೆ ನೋಡಿಕೊಳ್ಳಿ.ಕಾರಣ ಉದಾಸೀನವೇ ಕಲಿಕೆಗೆ ದೊಡ್ಡ ಶತೃವಾಗಿದೆ ಎಂದು ಡಾ.ಕೋಡಿರಂಗಪ್ಪ ತಿಳಿಸಿದರು. -

Ashok Nayak Ashok Nayak Oct 2, 2025 6:50 AM

ಚಿಕ್ಕಬಳ್ಳಾಪುರ: ಕಲಿಯುವ ದಿನಗಳಲ್ಲಿ ಕಲಿಕೆಯ ಬಗೆಗಿನ ಆಸಕ್ತಿ ಬತ್ತದಿರಲಿ. ಉದಾಸೀನತೆ ಎಂದಿಗೂ ಹತ್ತಿರ ಬಾರದಂತೆ ನೋಡಿಕೊಳ್ಳಿ.ಕಾರಣ ಉದಾಸೀನವೇ ಕಲಿಕೆಗೆ ದೊಡ್ಡ ಶತ್ರುವಾಗಿದೆ ಎಂದು ಡಾ.ಕೋಡಿರಂಗಪ್ಪ ತಿಳಿಸಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ದಿ ಗೋಲ್ಡನ್ ಗ್ಲೀಮ್ಸ್ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ನೀವು ಜೀವನದ ಅತ್ಯಂತ ಪ್ರಮುಖ ಹಂತಕ್ಕೆ ಕಾಲಿಟ್ಟಿದ್ದೀರಿ. ಈಗ ಕಲಿಯುವ ದಿನಗಳು ಕಲಿಕೆಯ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಳ್ಳಿ, ಉದಾಸೀನತೆ ಎಂದಿಗೂ ಹತ್ತಿರ ಬಾರದಂತೆ ನೋಡಿಕೊಳ್ಳಿ. ಓದುವುದು ಹವ್ಯಾಸವಾದಲ್ಲಿ ನಿಮ್ಮ ಭವಿಷ್ಯ ಬಂಗಾರದಂತಾಗುತ್ತದೆ. ಯಾರು ನಿರಂತರ ಓದುಗ ರಾಗಿರುತ್ತಾರೋ ಅವರು ಸಾಧಕರಾಗುತ್ತಾರೆ.ಕಲಿಯುವ ಮನೋಭಾವದಿಂದಲೇ ನಿಮ್ಮಲ್ಲಿ ನಾಯಕತ್ವ ಗುಣಗಳು ಮೂಡಿ ಬರುತ್ತವೆ ಎಂದ ಅವರು ಜೀವನದಲ್ಲಿ ಯಶಸ್ಸು ಸಾಧಿಸಲು ಅಪಾರ ಅವಕಾಶಗಳಿವೆ.ಆದರೆ ಅವನ್ನು ಸದುಪಯೋಗಪಡಿಸಿಕೊಳ್ಳಲು ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪ ಅಗತ್ಯ ಎಂದರು.

ಇದನ್ನೂ ಓದಿ: Chikkaballapur News: ಸ್ವಚ್ಛತಾ ಹೀ ಸೇವಾ ಅಭಿಯಾನದಲ್ಲಿ ೫೩೧೮ ಬ್ಲಾಕ್ ಸ್ಪಾಟ್ ಗಳ ಸ್ವಚ್ಛತೆ: ಜಿಲ್ಲೆಯಾದ್ಯಂತ ಅಭಿಯಾನ ಯಶಸ್ವಿ

ಅಂಕಗಳೊಂದಿಗೆ ವೈಚಾರಿಕತೆಯನ್ನು ಬೆಳೆಸಿಕೊಳ್ಳಿ. ಒಳ್ಳೆಯ ಸ್ನೇಹಿತರೊಂದಿಗೆ ಬೆಳೆದು, ಸಾಧಕರ ಆದರ್ಶಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆಯಬಹುದು. ವಿದ್ಯೆ ಅತಿ ದೊಡ್ಡ ಶಕ್ತಿ ,ಅದನ್ನು ಎಂದಿಗೂ ಕೈಬಿಡಬೇಡಿ ವಿದ್ಯೆಯನ್ನು ಹಿಡಿದುಕೊಂಡರೆ ಜೀವನವೇ ಹೂವಿನ ಹಾಸಿಗೆಯಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸಿ.ಎಂ. ಮುನಿಕೃಷ್ಣ ಮಾತನಾಡಿ ಇಂದಿನ ವಿದ್ಯಾರ್ಥಿ ಗಳು ಸಣ್ಣಸಣ್ಣ ಸಮಸ್ಯೆಗಳ ಎದುರಿಸಲಾಗದೆ ನಿರಾಶೆಗೆ ಒಳಗಾಗಿ ಜೀವನದ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ತಪ್ಪು ಕೆಲಸ ಮಾಡುತ್ತಿದ್ದಾರೆ. ಎಷ್ಟೇ ದೊಡ್ಡ ಸಮಸ್ಯೆಯಾದರೂ ಕಾಲಕ್ರಮೇಣ ಸರಿಯಾಗುತ್ತದೆ.ತಾಳ್ಮೆ ಮತ್ತು ಧೈರ್ಯದಿಂದ ಬದುಕನ್ನು ಎದುರಿಸಬೇಕು. ದುಡಿಕಿನ ನಿರ್ಧಾರಗಳು ಜೀವನವನ್ನು ಕತ್ತಲೆಯತ್ತ ಎಳೆದುಕೊಂಡು ಹೋಗುತ್ತವೆ. ವಿದ್ಯಾರ್ಥಿಗಳು ಈ ಸತ್ಯವನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಓದುವ ದಿನಗಳಲ್ಲಿ ಕೇವಲ ಅಧ್ಯಯನದತ್ತ ಗಮನ ಹರಿಸಿ ಸಮಯಪ್ರಜ್ಞೆ ಅತ್ಯಂತ ಮುಖ್ಯ. ಕಾಲೇಜಿನಲ್ಲಿ ಕಲಿಯುವ ಪ್ರತಿಯೊಂದು ಕ್ಷಣವನ್ನು ಅರ್ಥಪೂರ್ಣವಾಗಿಸಿಕೊಳ್ಳಿ. ಯಾರು ಹೆಚ್ಚು ಸಮಯ ಓದಿಗೆ ಮೀಸಲಿಡುತ್ತೀರೋ ಅಷ್ಟೇ ಸುಲಭವಾಗಿ ವಿದ್ಯೆ ಅಂಟುತ್ತದೆ. ಕಲಿಕೆಯ ಈ ಅವಧಿ ಮರುಕಳಿಸುವುದಿಲ್ಲ,ಆದ್ದರಿಂದ ವ್ಯರ್ಥ ಮಾಡಬಾರದು. ಇಂದು ಶಿಕ್ಷಣ ಪಡೆಯಲು ಅನೇಕ ಅವಕಾಶಗಳು ಲಭ್ಯವಿದ್ದರೂ, ಸಮಯ ವ್ಯರ್ಥ ಮಾಡಿದರೆ ಆ ಅವಕಾಶವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಪೋಷಕರ ಶ್ರಮವನ್ನು ನೆನಪಿಸುತ್ತಾ ಮಾತನಾಡಿದ ಅವರು  ಪೋಷಕರು ತಮ್ಮ ಮಕ್ಕಳ ವಿದ್ಯಾ ಭ್ಯಾಸಕ್ಕಾಗಿ ಸಾಲಸೋಲ ಮಾಡಿಕೊಂಡು ಬಡತನವನ್ನೂ ಸಹಿಸುತ್ತಾರೆ. ಅವರ ತ್ಯಾಗ ವನ್ನು ಗೌರವಿಸುವುದು ನಿಮ್ಮ ಧರ್ಮ.ನೀವು ದೃಢ ಸಂಕಲ್ಪ ಮತ್ತು ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು.‘ನಾನು ಚೆನ್ನಾಗಿ ಓದಿ ಸಾಧಿಸಬೇಕು’ ಎಂಬ ನಂಬಿಕೆಯಿAದ ಬದುಕನ್ನು ರೂಪಿಸಿಕೊಳ್ಳಿ. ಅದೇ ನಿಮ್ಮ ಬಾಳಿನ ನಿಜವಾದ ಗುರಿ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.

ಕಾಲೇಜಿನ ಬೆಳವಣಿಗೆ ಕುರಿತು ಮಾತನಾಡಿದ ಅವರು, ನಾವು ಕಾಲೇಜು ಆರಂಭಿಸಿದಾಗ ಕೇವಲ ೩೬ ವಿದ್ಯಾರ್ಥಿಗಳಷ್ಟೇ ಇದ್ದರು. ಇಂದು ಸಂಖ್ಯೆ ಹೆಚ್ಚಿದ್ದು ಇದು ಸುಲಭವಾಗಿ ಸಾಧ್ಯವಾಗಿಲ್ಲ.ಇದರ ಹಿಂದೆ ಆಡಳಿತ ಮಂಡಳಿಯ ಶ್ರಮ,ನಿಷ್ಠೆ ಮತ್ತು ಸೇವಾ ಮನೋಭಾವವಿದೆ.  ವಿದ್ಯಾರ್ಥಿಗಳ ಉಜ್ವಲ ಭವಿಷ್ಯವೇ ನಮ್ಮ ಧ್ಯೇಯ. ಉತ್ತಮ ಶಿಕ್ಷಣ ನೀಡಿ ಅವರನ್ನು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳನ್ನಾಗಿ ರೂಪಿಸುವುದು ನಮ್ಮ ಬದ್ಧತೆ ಎಂದು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಭವ್ಯಗೊಳಿಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಉಪಸ್ಥಿತರ ಮನಗೆದ್ದಿತು. ಅತಿಥಿಗಳ ಪ್ರೇರಣಾ ದಾಯಕ ಸಂದೇಶಗಳು ಕಾರ್ಯಕ್ರಮಕ್ಕೆ ಹೊಸ ಹೊಳಪು ನೀಡಿದವು.