Women’s ODI World Cup 2025: ಮಹಿಳಾ ವಿಶ್ವಕಪ್‌ನಲ್ಲಿಯೂ ‘ನೋ ಶೇಕ್ ಹ್ಯಾಂಡ್’ ವಾರ್!
ಈ ವರ್ಷದ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿಯ ನಂತರ, ಭಾರತ ಮತ್ತು ಪಾಕಿಸ್ತಾನ ಐಸಿಸಿ ಮತ್ತು ಎಸಿಸಿ ಟೂರ್ನಿಯಲ್ಲಿ ತನ್ನ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡುತ್ತಿವೆ. ಒಪ್ಪಂದದ ಪ್ರಕಾರ, ಅಂತಹ ವ್ಯವಸ್ಥೆಗಳು 2027 ರವರೆಗೆ ಮುಂದುವರಿಯುತ್ತವೆ. ಪರಿಣಾಮವಾಗಿ, ಪಾಕಿಸ್ತಾನವು ತನ್ನ ಎಲ್ಲಾ ಮಹಿಳಾ ವಿಶ್ವಕಪ್ 2025 ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿದೆ.

-

ನವದೆಹಲಿ: ಈ ಬಾರಿಯ ಪುರುಷರ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ‘ನೋ ಶೇಕ್ ಹ್ಯಾಂಡ್’ ಹೈಡ್ರಾಮಾ(no-handshake stance) ಇದೀಗ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿಯೂ(Women’s ODI World Cup 2025) ಮುಂದುವರಿಯುವ ಸಾಧ್ಯತೆ ಇದೆ. ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಭಾರತ ಮಹಿಳಾ ತಂಡ ತನ್ನ ಎರಡನೇ ಪಂದ್ಯವನ್ನು ಅ.5(ಭಾನುವಾರ) ರಂದು ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಭಾರತೀಯ ಆಟಗಾರ್ತಿಯರೂ ಪಾಕ್ ಆಟಗಾರ್ತಿಯರಿಗೆ ಶೇಕ್‌ಹ್ಯಾಂಡ್ ಮಾಡದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಏಷ್ಯಾಪ್‌ನಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರನ್ನು ಕಣ್ಣೆತ್ತಿಯೂ ನೋಡದೆ, ಮಾತನಾಡಿಸದೆ, ಕೈಕುಲುಕದೆ ಭಾರತೀಯ ಆಟಗಾರರು ಪಹಲ್ಗಾಂ ಉಗ್ರ ದಾಳಿಗೆ ತಮ್ಮದೇ ರೀತಿಯಲ್ಲಿ ತಕ್ಕ ತಿರುಗೇಟು ನೀಡಿದ್ದರು. ಭಾರತೀಯರ ‘ನೋ ಶೇಕ್‌ಹ್ಯಾಂಡ್’ ವಿಚಾರವನ್ನು ಪಾಕ್, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಬಳಿ ಕೊಂಡೊಯ್ದಿದ್ದು, ಆದರೂ ಟೀಂ ಇಂಡಿಯಾ ತನ್ನ ಪ್ರತಿರೋಧವನ್ನು ಟೂರ್ನಿಯುದ್ದಕ್ಕೂ ಮುಂದುವರಿಸಿತ್ತು.
ಮಹಿಳಾ ಆಟಗಾರ್ತಿಯರು ಕೂಡ ಇದೇ ನಿಲುವನ್ನು ಮುಂದುವರಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ನಿರ್ಧಾರದ ಬಗ್ಗೆ ಭಾರತೀಯ ಆಟಗಾರ್ತಿಯರು ಮತ್ತು ತಂಡದ ನಿರ್ವಹಣ ಸಮಿತಿಗೆ ಶೇಕ್‌ಹ್ಯಾಂಡ್ ಮಾಡದಂತೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಇದು ಐಸಿಸಿ ಟೂರ್ನಿಯಾದ ಕಾರಣ ಇದಕ್ಕೆ ಐಸಿಸಿ ಅನುಮತಿ ನೀಡಲಿದೆಯಾ ಎಂದು ಕಾದು ನೋಡಬೇಕು.
ಇದನ್ನೂ ಓದಿ IND vs WI 1st Test: ವಿಂಡೀಸ್ ವಿರುದ್ಧ ಟಾಸ್ ಸೋತ ಭಾರತ; ಪಡಿಕ್ಕಲ್, ಪ್ರಸಿದ್ಧ್‌ಗೆ ಸಿಗದ ಅವಕಾಶ