ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ವಕೀಲ ಯಣ್ಣೂರು ಎನ್. ಶ್ರೀನಿವಾಸ್ ನೇಮಕ

ಶಿಡ್ಲಘಟ್ಟ ತಾಲೂಕಿನ ಯಣ್ಣೂರು ಗ್ರಾಮದ ನಿವಾಸಿ ಆಗಿರುವ ವಕೀಲ ಎನ್ ಶ್ರೀನಿವಾಸ್ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ ಸೇವೆಯನ್ನು ಪರಿಗಣಿಸಿ ಇಂಡಿಯನ್ ಯೂಥ್ ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷರು ಹಾಗೂ ಎಐಸಿಸಿ ಸದಸ್ಯರಾದ ರೂಪೇಶ್ ಎಸ್ ಬದೌರಿಯಾ ಅವರು ವಕೀಲ ಎನ್. ಶ್ರೀನಿವಾಸ್ ಅವರನ್ನು ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ಕಾನೂನು ವಿಭಾಗದ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ವಕೀಲ ಯಣ್ಣೂರು ಎನ್. ಶ್ರೀನಿವಾಸ್ ನೇಮಕ

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ಕಾನೂನು ವಿಭಾಗದ ಕಾರ್ಯದರ್ಶಿಯಾಗಿ ವಕೀಲ ಯಣ್ಣೂರು ಎನ್.ಶ್ರೀನಿವಾಸ್ ನೇಮಕಗೊಂಡಿದ್ದಾರೆ.

Ashok Nayak Ashok Nayak Aug 29, 2025 10:41 AM

ಚಿಕ್ಕಬಳ್ಳಾಪುರ : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ಕಾನೂನು ವಿಭಾಗದ ಕಾರ್ಯದರ್ಶಿ ಯಾಗಿ ವಕೀಲ ಯಣ್ಣೂರು ಎನ್.ಶ್ರೀನಿವಾಸ್ ನೇಮಕಗೊಂಡಿದ್ದಾರೆ.

ಶಿಡ್ಲಘಟ್ಟ ತಾಲೂಕಿನ ಯಣ್ಣೂರು ಗ್ರಾಮದ ನಿವಾಸಿ ಆಗಿರುವ ವಕೀಲ ಎನ್ ಶ್ರೀನಿವಾಸ್ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ ಸೇವೆಯನ್ನು ಪರಿಗಣಿಸಿ ಇಂಡಿಯನ್ ಯೂಥ್ ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷರು ಹಾಗೂ ಎಐಸಿಸಿ ಸದಸ್ಯರಾದ ರೂಪೇಶ್ ಎಸ್ ಬದೌರಿಯಾ ಅವರು ವಕೀಲ ಎನ್. ಶ್ರೀನಿವಾಸ್ ಅವರನ್ನು ಕರ್ನಾಟಕ ಯುವ ಕಾಂಗ್ರೆಸ್ ಸಮಿತಿ ಯ ಕಾನೂನು ವಿಭಾಗದ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Chikkanayakanahalli News: 31 ರಂದು ಪ್ರತಿಭಾ ಪುರಸ್ಕಾರ

ಆದೇಶದಲ್ಲಿ ತಮಗೆ ನೀಡಿರುವ ಈ ಹುದ್ದೆಯನ್ನು ಜವಾಬ್ದಾರಿಯಿಂದ ನಿಭಾಯಿಸುವುದು ಅಲ್ಲದೆ ತಳಮಟ್ಟದಿಂದ ಪಕ್ಷ ಕಟ್ಟುವ ಕೆಲಸವನ್ನು ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ.

ಈ ವೇಳೆ ಮಾತನಾಡಿದ ವಕೀಲ ಶ್ರೀನಿವಾಸ್ ಕೆ.ಪಿ.ವೈ.ಸಿ ಘಟಕವು ಕಾನೂನು ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ನೀಡಿರುವುದು ಸಂತೋಷ ತಂದಿದೆ.ನನಗೆ ವಹಿಸಿರುವ ಜವಾಬ್ದಾರಿಯನ್ನು ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕರ್ತರ ಸಲಹೆ ಸೂಚನೆ ಗಳನ್ನು ಆಲಿಸಿ ಯುವ ವಕೀಲರನ್ನು  ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಎನ್. ಶ್ರೀನಿವಾಸ್ ತಿಳಿಸಿದ್ದಾರೆ.