ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CET Exam: ಸಿಇಟಿ ಪರೀಕ್ಷೆ; ಚಿಕ್ಕಬಳ್ಳಾಪುರದಲ್ಲೂ ಜನಿವಾರ ತೆಗೆಸಿದ ಸಿಬ್ಬಂದಿ, 12 ದಿನದ ಹಿಂದೆ ಉಪನಯನವಾಗಿದ್ದ ವಿದ್ಯಾರ್ಥಿ

ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ವಿದ್ಯಾರ್ಥಿ ಸುಪ್ರೀತ್ ಎಂಬಾತನ ಜನಿವಾರವನ್ನು ಸಿಬ್ಬಂದಿ ತೆಗೆಸಿದ್ದಾರೆ. ಮೊದಲ ದಿನ ಪರೀಕ್ಷೆಗೆ ಬಂದಾಗ ಜನಿವಾರ ತೆಗೆಸಿ ಕತ್ತರಿಸಿರುವ ಆರೋಪ ಕೇಳಿ ಬಂದಿದ್ದು, ಸಿಬ್ಬಂದಿ ನಡೆಗೆ ಸುಪ್ರೀತ್ ಆಕ್ಷೇಪ ವ್ಯಕ್ತಪಡಿಸಿದ್ದ.

ಸಿಇಟಿ; ಚಿಕ್ಕಬಳ್ಳಾಪುರದಲ್ಲೂ ವಿದ್ಯಾರ್ಥಿಯ ಜನಿವಾರ ತೆಗೆಸಿದ ಸಿಬ್ಬಂದಿ

ಜನಿವಾರ -

ಹರೀಶ್‌ ಕೇರ
ಹರೀಶ್‌ ಕೇರ Apr 25, 2026 12:02 PM

ಚಿಕ್ಕಬಳ್ಳಾಪುರ, ಏ.25: ನಿನ್ನೆ ತಾನೇ ಹಿಂದೆ ಅಷ್ಟೇ ಬೆಂಗಳೂರಿನಲ್ಲಿ (Bengaluru) ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ (Student) ಜನಿವಾರ ತೆಗೆಸಿದ ಪ್ರಕರಣ ನಡೆದಿತ್ತು. ಇದೀಗ ಚಿಕ್ಕಬಳ್ಳಾಪುರದಲ್ಲಿ (Chikkaballapuara) ಕೂಡ CET ಪರೀಕ್ಷೆ (CET Exam) ವೇಳೆ ವಿದ್ಯಾರ್ಥಿಗೆ ಜನಿವಾರ (Sacred thread) ತೆಗೆಸಿದ ಆರೋಪ ಕೇಳಿ ಬಂದಿದೆ.

ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ವಿದ್ಯಾರ್ಥಿ ಸುಪ್ರೀತ್ ಎಂಬಾತನ ಜನಿವಾರವನ್ನು ಸಿಬ್ಬಂದಿ ತೆಗೆಸಿದ್ದಾರೆ. ಮೊದಲ ದಿನ ಪರೀಕ್ಷೆಗೆ ಬಂದಾಗ ಜನಿವಾರ ತೆಗೆಸಿ ಕತ್ತರಿಸಿರುವ ಆರೋಪ ಕೇಳಿ ಬಂದಿದ್ದು, ಸಿಬ್ಬಂದಿ ನಡೆಗೆ ಸುಪ್ರೀತ್ ಆಕ್ಷೇಪ ವ್ಯಕ್ತಪಡಿಸಿದ್ದ. 12 ದಿನಗಳ ಹಿಂದೆಯಷ್ಟೇ ಸುಪ್ರೀತ್‌ಗೆ ಉಪನಯನ ಸಹ ಮಾಡಲಾಗಿತ್ತು. ಜನಿವಾರ ಕತ್ತರಿಸಿ ತೆಗೆದ ಸಿಬ್ಬಂದಿ ವಿರುದ್ಧ ಸುಪ್ರೀತ್ ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಿವಾರ ತೆಗೆಸಿದವರ ಮೇಲೆ ಕ್ರಮ: ಸಚಿವ ದಿನೇಶ್‌ ಗುಂಡೂರಾವ್

ಬೆಂಗಳೂರು : ರಾಜ್ಯದ ಹಲವಡೆ ಸಿಇಟಿ ಪರೀಕ್ಷಾ ವೇಳೆ ವಿದ್ಯಾರ್ಥಿಗಳಿಂದ ಸಿಬ್ಬಂದಿಗಳು ಜನಿವಾರ ತೆಗಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಪಾನಿಧಿ ಕಾಲೇಜಿನಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ಬಂದಿದೆ. ಸಿಇಟಿ ಪರೀಕ್ಷೆಗೆ ಬಂದಾಗ ವಿದ್ಯಾರ್ಥಿಯ ಜನಿವಾರ ತೆಗೆಸಿದ ಮಾಹಿತಿ ಬಂದಿದ್ದು ಪೊಲೀಸರು ಈಗಾಗಲೇ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

Janivara Row: ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣದ ವಿಚಾರಣೆಗೆ ತನಿಖಾ ತಂಡ ರಚನೆ

ಕೃಪಾನಿಧಿ ಕಾಲೇಜಿನಲ್ಲಿ ಕೆಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ನಡೆದ ಘಟನೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಪಾರದರ್ಶಕವಾಗಿ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಕಿವಿ ಓಲೆ, ಬಳೆ, ಹಿಜಾಬ್ ಅಥವಾ ಜನಿವಾರ ತೆಗೆಸುವುದು, ಹಾಗೂ ಉದ್ದನೆಯ ತೋಳಿಗೆ ಕತ್ತರಿ ಹಾಕುವ ಮೂಲಕ ಅವರ ಮನೋಸ್ಥೈರ್ಯ ಕುಗ್ಗಿಸುವ ಅಮಾನವೀಯ ನಡೆ ಅಕ್ಷಮ್ಯ ಮತ್ತು ಖಂಡನೀಯ.

ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚುವ ತಾಣಗಳಾಗಬೇಕೇ ಹೊರತು, ಅವರ ಆತ್ಮಗೌರವಕ್ಕೆ ಧಕ್ಕೆ ತರುವ ಸ್ಥಳಗಳಲ್ಲ. ಮತ್ತೆಂದೂ ನಮ್ಮ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಅತ್ಯಂತ ಗಂಭೀರ ಕ್ರಮ ವಹಿಸಲಿದೆ. ಈ ಘಟನೆಯಿಂದ ವಿದ್ಯಾರ್ಥಿಯು ಧೃತಿಗೆಡಬಾರದು ಎಂದು ವಿನಂತಿಸುತ್ತೇನೆ. ಪರೀಕ್ಷೆ ಮತ್ತು ಬದುಕಿನ ಗೆಲುವಿನ ದಾರಿಯತ್ತ ಶ್ರದ್ಧೆ ಮತ್ತು ನಿಶ್ಚಿಂತೆಯಿಂದ ಸಾಗಿ. ವಿದ್ಯಾರ್ಥಿ ಜೀವನದಲ್ಲಿ ಓದು ಮತ್ತು ನಿರಂತರ ಪರಿಶ್ರಮವೇ ಪೂಜೆ ಹಾಗೂ ತಪಸ್ಸು. ಇಡೀ ಸರ್ಕಾರ ನಿಮ್ಮ ಬೆನ್ನಿಗಿದೆ, ಧೈರ್ಯವಾಗಿ ಪರೀಕ್ಷೆ ಎದುರಿಸಿ ಯಶಸ್ವಿಯಾಗಿ ಎಂದಿದ್ದಾರೆ.

Janivara Row: ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದ ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ವಶಕ್ಕೆ