ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sadguru Sri Madhusudan Sai: ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಶ್ರಮಕ್ಕೆ ಬಸವರಾಜ ಹೊರಟ್ಟಿ ಶ್ಲಾಘನೆ

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ' ದ 68ನೇ ದಿನವಾದ ಬುಧವಾರ ಸದ್ಗುರು ಶ್ರೀ ಮಧುಸೂದನ ಸಾಯಿ ಆಶೀರ್ವಚನ ನೀಡಿದರು. ಸಾಂಸ್ಕೃತಿಕ ಉತ್ಸವವು ಕೇವಲ ಆಚರಣೆಯಲ್ಲ. ಬದಲಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸುಧಾರಣೆ, ಮೌಲ್ಯಗಳು, ಪ್ರೀತಿ, ಸೇವೆ, ಕರುಣೆ ಹಾಗೂ ಏಕತೆಗಾಗಿ ಎಲ್ಲರನ್ನೂ ಒಟ್ಟುಗೂಡಿಸುವ ಕಾರ್ಯವಾಗಿದೆ ಎಂದು ಹೇಳಿದ್ದಾರೆ.

ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಶ್ರಮಕ್ಕೆ ಬಸವರಾಜ ಹೊರಟ್ಟಿ ಶ್ಲಾಘನೆ

-

Profile Siddalinga Swamy Oct 23, 2025 4:36 PM

ಚಿಕ್ಕಬಳ್ಳಾಪುರ: ಸತ್ಯ ಸಾಯಿ ಸಂಸ್ಥೆಯ ಸಾಧನೆ ನಿಜಕ್ಕೂ ಅದ್ಭುತ. ಇದು ವಿಶ್ವದಲ್ಲೇ ಅತ್ಯುತ್ತಮವಾದ ಸಂಸ್ಥೆಯಾಗಿದೆ. ಈ ಸಾಧನೆಯ ಹಿಂದೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ (Sadguru Sri Madhusudan Sai) ಪರಿಶ್ರಮವಿದೆ. ಇದನ್ನು ನನ್ನ ಹೃದಯದಿಂದ ಹೇಳುತ್ತಿದ್ದೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹೇಳಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ' ದ 68ನೇ ದಿನವಾದ ಬುಧವಾರ ಮಾತನಾಡಿದ ಅವರು, ಇಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವವು ಕೇವಲ ಆಚರಣೆಯಲ್ಲ. ಬದಲಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸುಧಾರಣೆ, ಮೌಲ್ಯಗಳು, ಪ್ರೀತಿ, ಸೇವೆ, ಕರುಣೆ ಹಾಗೂ ಏಕತೆಗಾಗಿ ಎಲ್ಲರನ್ನೂ ಒಟ್ಟುಗೂಡಿಸುವ ಕಾರ್ಯವಾಗಿದೆ ಎಂದು ಹೇಳಿದ್ದಾರೆ.

ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನಿಸ್ವಾರ್ಥ ಪ್ರೀತಿ, ಅವಿಶ್ರಾಂತ ಪ್ರಯತ್ನಗಳು ಹಾಗೂ ಮಾರ್ಗದರ್ಶನದಲ್ಲಿ ಈ ಸಂಸ್ಥೆಯು ನಾಲ್ಕು ಆಧಾರ ಸ್ತಂಭಗಳನ್ನು ಪ್ರತಿನಿಧಿಸುತ್ತಿದೆ. ಶಿಕ್ಷಣ, ಆರೋಗ್ಯ, ಪೌಷ್ಟಿಕಾಂಶ ಮತ್ತು ಅಧ್ಯಾತ್ಮ ಸೇವೆಯನ್ನು ನೀಡುವ ಮೂಲಕ ಮಾದರಿ ರಾಷ್ಟ್ರ ನಿರ್ಮಾಣದ ಪ್ರಯತ್ನ ಸಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಆದ್ಯತೆ ನೀಡಲಾಗುತ್ತಿದೆ. ಶಾಲೆಯಿಂದ ಸ್ನಾತಕೋತ್ತರ ಹಂತದವರೆಗೆ ಮೌಲ್ಯಾಧಾರಿತ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಇಂತಹ ಪವಿತ್ರವಾದ ಸ್ಥಳದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಜಗತ್ತಿನ ಅತ್ಯಂತ ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸದ್ಗುರು ಶ್ರೀ ಮಧುಸೂದನ ಸಾಯಿ ಆಶೀರ್ವಚನ ನೀಡಿ, ಖಾಸಗಿ ಶಾಲೆಗಳಲ್ಲಿ ನೈತಿಕ ತರಗತಿಗಳು ನಡೆಯುವುದೇ ಅಪರೂಪ. ತಮ್ಮ ಮಕ್ಕಳು ಸ್ಪರ್ಧೆಯಲ್ಲಿ ಮುಂದೆ ಬರಲು ಉತ್ತಮ ಅಂಕ, ಉತ್ತಮ ಶ್ರೇಣಿಗಳನ್ನು ಪಡೆಯಲು ಪ್ರತಿ ನಿಮಿಷವನ್ನು ಓದಿನಲ್ಲಿ ಕಳೆಯಲು ಬಯಸುತ್ತಾರೆ. ಶಾಲೆಗಳು ಹೂಡಿಕೆಯ ಲಾಭವನ್ನು ನೀಡುವ ಸಂಸ್ಥೆಗಳಾಗಿ ಬದಲಾಗುತ್ತಿವೆ, ಪೋಷಕರು ಗ್ರಾಹಕರಾಗಿದ್ದಾರೆ. ಶಾಲಾ ಪಠ್ಯಕ್ರಮದಲ್ಲಿ ನೈತಿಕ ತರಗತಿಗಳನ್ನು ಸೇರಿಸುವುದು ಇಂದಿನ ಅಗತ್ಯವಾಗಿದೆ. ನಾವು ಬಹಳ ಬುದ್ಧಿವಂತ ಮನುಷ್ಯರನ್ನು ಸೃಷ್ಟಿಸುತ್ತಿದ್ದೇವೆ. ಆದರೆ ಸಹಾನುಭೂತಿಯಿರುವ ಮನುಷ್ಯರನ್ನು ಸೃಷ್ಟಿಸುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.

ನಾವು ನಮ್ಮಷ್ಟಕ್ಕೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಮಗೆ ಎಲ್ಲರ ಬೆಂಬಲ ಬೇಕು. ಸರ್ಕಾರ, ಸಮಾಜ, ಸಂಸ್ಥೆ - ಈ ಮೂರು ಒಟ್ಟಾಗಿ ಸಾಗಿದಾಗ ಮಾತ್ರ ಏನು ಬೇಕಾದರೂ ಸಾಧಿಸಲು ಸಾಧ್ಯವಾಗುತ್ತದೆ. ಸಂಸ್ಥೆಗಳನ್ನು ನಡೆಸಲು ಸರ್ಕಾರದ ನೀತಿಗಳು, ಮಾರ್ಗದರ್ಶನಗಳು, ಪರವಾನಿಗೆಗಳು ಬೇಕಾಗುತ್ತವೆ. ಬಾಗಲಕೋಟೆಯಲ್ಲಿ ಸತ್ಯ ಸಾಯಿ ಶಾಲೆಯನ್ನು ಆರಂಭಿಸುವ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ಅವರು ನೆರವಾಗಿದ್ದನ್ನು ಸ್ಮರಿಸಿದರು.

ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ಶಿಕ್ಷಣ ವ್ಯವಸ್ಥೆಯಲ್ಲಿ ಪೋಷಕರು ಸಕ್ರಿಯ ಪಾತ್ರ ವಹಿಸಬೇಕು: ಸದ್ಗುರು ಶ್ರೀ ಮಧುಸೂದನ ಸಾ

ಬೊಲಿವಿಯಾ ದೇಶದಲ್ಲಿ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುತ್ತಿರುವ ಪೆಟ್ರಿಸಿಯಾ ಮರಿಯಾ ಜಿಲ್ವೆಟಿ ಒರಿಯಾಸ್ (Patricia Maria Zilveti Orias) ಅವರಿಗೆ ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಬೊಲಿವಿಯಾದ ಪ್ರತಿನಿಧಿಗಳಾದ ಮರಿಯಾ ಎಲೆನಾ ರಿಯೋಸ್ (Maria Elena Rios), ಸುಸಾನಾ ಪ್ಯಾಚೆಕೊ (Susana Pacheco), ಪೆರು ದೇಶದ ಪ್ರತಿನಿಧಿ ಜಾರ್ಜ್ ವಾಝ್ಕ್ವಿಜ್ (Jorge Vazquez) ತಮ್ಮ ದೇಶದ ಕಲೆ, ಸಂಸ್ಕೃತಿ, ಸಂಗೀತ, ಖಾದ್ಯಗಳು, ಜನಪ್ರಿಯ ಪ್ರವಾಸಿ ತಾಣಗಳು, ಪ್ರಸಿದ್ಧ ಕ್ಷೇತ್ರ ಹಾಗೂ ಅಧ್ಯಾತ್ಮಿಕ ಬದಲಾವಣೆಯ ಅನುಭವವನ್ನು ಹಂಚಿಕೊಂಡರು.