Chinthamani News: ಮಂಗಳಮುಖಿಯರಿಂದ ದರ್ಗಾ ಗಂಧೋತ್ಸವ
ತಾಲ್ಲೂಕಿನ ಹಿಂದೂ ಮುಸ್ಲಿಮರ ಪವಿತ್ರ ಯಾತ್ರಾಸ್ಥಳ ವಾದ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಜಾನ್ ಬಾವಾಜಾನ್ ದರ್ಗಾದ ಉರುಸ್ ನಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಮಂಗಳಮುಖಿ ಯರ ತಂಡ ಮಂಗಳಮುಖಿಯರ ಮುಖ್ಯಸ್ಥೆ ಮುಂಬೈ ಗುಲಾಂ ಮೊಯಿನುದ್ದಿನ್ ಅಮ್ಮಾಜಿ ರವರ ನೇತೃತ್ವದಲ್ಲಿ ದರ್ಗಾ ಗೆ ಆಗಮಿಸಿ ವಿಶೇಷ ಚದರ್ ಹೊದಿಸಿ ಗಂಧರ್ಪಣೆ ಮಾಡಿದರು.

-

ಚಿಂತಾಮಣಿ : ತಾಲ್ಲೂಕಿನ ಹಿಂದೂ ಮುಸ್ಲಿಮರ ಪವಿತ್ರ ಯಾತ್ರಾಸ್ಥಳ ವಾದ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಜಾನ್ ಬಾವಾಜಾನ್ ದರ್ಗಾದ ಉರುಸ್ ನಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಮಂಗಳಮುಖಿಯರ ತಂಡ ಮಂಗಳಮುಖಿಯರ ಮುಖ್ಯಸ್ಥೆ ಮುಂಬೈ ಗುಲಾಂ ಮೊಯಿನುದ್ದಿನ್ ಅಮ್ಮಾಜಿ ರವರ ನೇತೃತ್ವದಲ್ಲಿ ದರ್ಗಾ ಗೆ ಆಗಮಿಸಿ ವಿಶೇಷ ಚದರ್ ಹೊದಿಸಿ ಗಂಧರ್ಪಣೆ ಮಾಡಿದರು.
ಇದನ್ನೂ ಓದಿ: Chinthamani News: ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ
ನಂತರ ಮಂಗಳಮುಖಿಯರಿಂದ ದೇವರ ಹೆಸರಿನಲ್ಲಿ ಹಾಡುಗಳನ್ನು ಹಾಡಿ ಎಲ್ಲರ ಗಮನ ಸೆಳೆದರು.
ನಂತರ ಮಾತನಾಡಿದ ಮುಂಬೈ ಗುಲಾಂ ಮೊಯಿನುದ್ದಿನ್ ಸುಮಾರು ವರ್ಷಗಳಿಂದ ನಾವೆಲ್ಲರೂ ಒಟ್ಟುಗೂಡಿ ಅಮ್ಮಜಾನ್ ಬಾಬಾಜಾನ್ ರವರ ದರ್ಗಾಗೆ ಚಾದರ್ ಅರ್ಪಿಸಿ ಗಂಧ ಅರ್ಪಣೆ ಮಾಡುತ್ತಿದ್ದೇವೆ. ಅವರ ಆಶೀರ್ವಾದ ನಮಗೆ ಸಿಗುತ್ತಿರುವುದರಿಂದ ಪ್ರತಿ ವರ್ಷವೂ ಈ ಪದ್ಧತಿ ನಾವು ಮುಂದುವರಿಸುತ್ತಿದ್ದೇವೆ,
ಜನರಿಗೆ ಉತ್ತಮ ಮತ್ತು ಒಳ್ಳೆ ಮಳೆ ಬೆಳೆದು ಎಲ್ಲರೂ ಸಂತಸದಿಂದ ಇರುವಂತೆ ಪ್ರಾರ್ಥನೆ ಮಾಡುವಾಗ ಹೇಳಿದರು.