ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಜಿಎಸ್‌ಟಿ ಇಳಿಕೆ ಆರ್ಥಿಕತೆಯಲ್ಲಿ ಕ್ರಾಂತಿಕಾರಿ ಹೆಜ್ಜೆ : ಮಾರ್ಕೆಟ್ ಮೋಹನ್

ಜನಸಾಮಾನ್ಯರ ಬದುಕಿಗೆ ನೆಮ್ಮದಿ ತರುವ ನಿಟ್ಟಿನಲ್ಲಿ, ಹಣದುಬ್ಬರ ನಿಯಂತ್ರಿಸುವ ದೃಷ್ಟಿಯಲ್ಲಿ ಜಿ ಎಸ್ ಟಿ ಸ್ಲಾಬ್ ಬದಲಾವಣೆ ಅಭೂತಪೂರ್ವ ಪರಿವರ್ತನೆ ಆಗಿದೆ ಎಂದು ಅವರು ಮದ್ಯಮ ವರ್ಗ ಮತ್ತು ಬಡವರ್ಗದವರ ಬದುಕಿಗೆ ನೆರವು ನೀಡುವ ನಿಟ್ಟಿನಲ್ಲಿ, ದಿನಬಳಕೆಯ ವಸ್ತುಗಳ ತೆರಿಗೆ ದರವನ್ನು ತಗ್ಗಿಸುವ ನಿಟ್ಟಿನಲ್ಲಿ ಇದೊಂದು ಶ್ಲಾಘನಾರ್ಹ ಆರ್ಥಿಕ ಸುಧಾರಣಾ ಕ್ರಮ

ಜಿಎಸ್‌ಟಿ ಇಳಿಕೆ ಆರ್ಥಿಕತೆಯಲ್ಲಿ ಕ್ರಾಂತಿಕಾರಿ ಹೆಜ್ಜೆ

-

Ashok Nayak Ashok Nayak Sep 8, 2025 12:05 AM

ಗೌರಿಬಿದನೂರು: ಜಿಎಸ್ಟಿ ತೆರಿಗೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡುವ ಮೂಲಕ ಆರ್ಥಿಕ ಸುಧಾರಣೆಯ ಹೊಸ ದಿಕ್ಕಿಗೆ ಭಾರತ ಹೆಜ್ಜೆ ಹಾಕುವಂತೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಜೀ, ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಕೋಟ್ಯಾಂತರ ಭಾರತೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ನಗರ ಬಿಜೆಪಿ ಅಧ್ಯಕ್ಷ ಮಾರ್ಕೆಟ್ ಮೋಹನ್ ಅಭಿಪ್ರಾಯ ಪಟ್ಟರು.

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಸಾಮಾನ್ಯರ ಬದುಕಿಗೆ ನೆಮ್ಮದಿ ತರುವ ನಿಟ್ಟಿನಲ್ಲಿ, ಹಣದುಬ್ಬರ ನಿಯಂತ್ರಿಸುವ ದೃಷ್ಟಿಯಲ್ಲಿ ಜಿ ಎಸ್ ಟಿ ಸ್ಲಾಬ್ ಬದಲಾವಣೆ ಅಭೂತಪೂರ್ವ ಪರಿವರ್ತನೆ ಆಗಿದೆ ಎಂದು ಅವರು ಮದ್ಯಮ ವರ್ಗ ಮತ್ತು ಬಡವರ್ಗದವರ ಬದುಕಿಗೆ ನೆರವು ನೀಡುವ ನಿಟ್ಟಿನಲ್ಲಿ, ದಿನಬಳಕೆಯ ವಸ್ತುಗಳ ತೆರಿಗೆ ದರವನ್ನು ತಗ್ಗಿಸುವ ನಿಟ್ಟಿನಲ್ಲಿ ಇದೊಂದು ಶ್ಲಾಘನಾರ್ಹ ಆರ್ಥಿಕ ಸುಧಾರಣಾ ಕ್ರಮ ಎಂದು ಅವರು ವಿಶ್ಲೇಷಣೆ ಮಾಡಿದರು.

ಇದನ್ನೂ ಓದಿ: Chinthamani News: ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ

ಬಡ, ಮಧ್ಯಮ ವರ್ಗ ಅಷ್ಟೇ ಅಲ್ಲ ರೈತಾಪಿ ವರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದ ಕೇಂದ್ರ ಸರಕಾರ ಭಾರಿ ಕೊಡುಗೆ ಕೊಟ್ಟಿದೆ, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ಬಳಸುವ ವಾಹನಗಳ ಮೇಲಿನ ತೆರಿಗೆಯನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸುವ ಕ್ರಮ ಕಾರು, ದ್ವಿಚಕ್ರ ಕೊಳ್ಳುವ ಬಡವರ ಕನಸನ್ನು ನನಸಾಗಿಸುತ್ತದೆ, ಶ್ಯಾಂಪೂ, ಫೇಸ್ ಪೌಡರ್ ಸೇರಿದಂತೆ, ಭಾರತೀಯ ಬ್ರೆಡ್, ಪಿಜ್ಜಾ, ರೊಟ್ಟಿ, ಪನ್ನೀರ್, ಕೆಲವು ಧಾನ್ಯಗಳ ಮೇಲಿನ ಜಿಎಸ್ಟಿ ಇಳಿಕೆ ಅತ್ಯುತ್ತಮ ಕ್ರಮ ಆಗಿದೆ ಎಂದರು.

ರೈತರು ಬಳಸುವ ಟ್ರಾಕ್ಟರ್ ಸೇರಿ ಕೃಷಿ ಯಂತ್ರೋಪಕರಣದ ವಿಚಾರದಲ್ಲಂತೂ ದೊಡ್ಡ ಮಟ್ಟ ದಲ್ಲಿ ತೆರಿಗೆ ಕಡಿತ ಆಗಿ ಸ್ಲಾಬ್ ಬದಲಾವಣೆ ಆಗಿದೆ ಇದರಿಂದ ಕೃಷಿಯಲ್ಲಿ ಇನ್ನಷ್ಟು ಉತ್ಪಾದನೆ ಸಾಧ್ಯ ರೈತರ ಬದುಕಲ್ಲಿ ಉಳಿತಾಯ ಮತ್ತು ನೆಮ್ಮದಿ ಮೂಡುವಂತಾಗಿದೆ ಎಂದ ಅವರು ಔಷಧ ಮತ್ತು ವಿಮೆ ವಲಯದಲ್ಲಂತೂ ಭಾರಿ ಸುಧಾರಣೆ ಮಾಡಿ, ಆರೋಗ್ಯ ಕ್ಷೇತ್ರದ ವ್ಯವಸ್ಥೆಯ ದಿಕ್ಕನ್ನೇ ಕೇಂದ್ರ ಸರ್ಕಾರ ಬದಲಿಸಿದೆ.ಜೀವರಕ್ಷಕ ಔಷಧಿ ಸೇರಿ, ಇನ್ನಿತರೆ ಔಷಧಿಗಳ ತೆರಿಗೆಯನ್ನು ಶೇಕಡಾ ೫ ರ ಸ್ಲಾಬ್ ವ್ಯಾಪ್ತಿಗೆ ತಂದು ಮಹತ್ವದ ಬದಲಾವಣೆ ಮಾಡಲಾಗಿದೆ. ಜೀವವಿಮೆ. ಆರೋಗ್ಯ ವಿಮೆಯ ಮೇಲಿನ ತೆರಿಗೆ ಕಡಿತವೂ ಜನಪರ ಕ್ರಮವಾಗಿದ್ದು, ಇದಕ್ಕಾಗಿ ಕೇಂದ್ರ ಸರಕಾರವನ್ನು ಸಮಸ್ತ ಜನತೆಯ ಪರವಾಗಿ ಅಭಿನಂದಿಸುತ್ತಿದ್ದೇನೆ ಎಂದು ನಗರ ಬಿಜೆಪಿ ಅಧ್ಯಕ್ಷ ಮಾರ್ಕೆಟ್ ಮೋಹನ್ ತಿಳಿಸಿದರು.