Gauribidanur News: ತಹಸೀಲ್ದಾರ್ ಕೆ.ಎಂ.ಅರವಿಂದ್ ಅಂಗನವಾಡಿಗಳಿಗೆ ಅನಿರೀಕ್ಷಿತ ಭೇಟಿ ಪರಿಶೀಲನೆ
ಅಂಗನವಾಡಿ ಕಾರ್ಯಕರ್ತರ ಜೊತೆ ಮಾತನಾಡುತ್ತಾ ಅಂಗನವಾಡಿ ಕೇಂದ್ರವನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಬೇಕು.ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸಬಾರದು, ಪೊಟ್ಟಣ ಗಳಲ್ಲಿ ಸರಬರಾಜು ಆಗುವ ಆಹಾರ ಪದಾರ್ಥಗಳ ಮೇಲೆ ಮುದ್ರಿತವಾಗಿರುವ ಉತ್ಪಾದನಾ ದಿನಾಂಕ ಮತ್ತು ಬಳಕೆಯ ದಿನಾಂಕವನ್ನು ಪರಿಶೀಲಿಸಿ ಬಳಕೆ ಮಾಡಬೇಕು,

ತಾಲೂಕಿನ ಮೇಳ್ಯ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿದ ತಹಶೀಲ್ದಾರ್ ಕೆ.ಎಂ.ಅರವಿಂದ ಅಂಗನವಾಡಿ ಕೇಂದ್ರದ ಸ್ವಚ್ಛತೆ, ಆಹಾರ, ಪದಾರ್ಥಗಳ ಪೊಟ್ಟಣಗಳನ್ನು ಪರಿಶೀಲಿಸಿದರು. -

ಗೌರಿಬಿದನೂರು: ತಾಲೂಕಿನ ಮೇಳ್ಯ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿದ ತಹಸೀಲ್ದಾರ್ ಕೆ.ಎಂ.ಅರವಿಂದ ಅಂಗನವಾಡಿ ಕೇಂದ್ರದ ಸ್ವಚ್ಛತೆ, ಆಹಾರ, ಪದಾರ್ಥಗಳ ಪೊಟ್ಟಣಗಳನ್ನು ಪರಿಶೀಲಿಸಿದರು.
ಅಂಗನವಾಡಿ ಕಾರ್ಯಕರ್ತರ ಜೊತೆ ಮಾತನಾಡುತ್ತಾ ಅಂಗನವಾಡಿ ಕೇಂದ್ರವನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಬೇಕು.ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸಬಾರದು, ಪೊಟ್ಟಣ ಗಳಲ್ಲಿ ಸರಬರಾಜು ಆಗುವ ಆಹಾರ ಪದಾರ್ಥಗಳ ಮೇಲೆ ಮುದ್ರಿತವಾಗಿರುವ ಉತ್ಪಾದನಾ ದಿನಾಂಕ ಮತ್ತು ಬಳಕೆಯ ದಿನಾಂಕವನ್ನು ಪರಿಶೀಲಿಸಿ ಬಳಕೆ ಮಾಡಬೇಕು,
ಇದನ್ನೂ ಓದಿ: Chikkaballapur News: ಛಾಯಾಗ್ರಾಹಕರ ಅಕಾಡೆಮಿ ಸ್ಥಾಪಿಸುವಂತೆ ಸರಕಾರಕ್ಕೆ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಆಗ್ರಹ
ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು,ಅವಧಿ ಮೀರಿದ ಪದಾರ್ಥಗಳ ಬಳಕೆ ಮತ್ತು ಕಳಪೆ ಗುಣಮಟ್ಟದ ಅಹಾರ ಪದಾರ್ಥಗಳನ್ನು ಬಳಸುವು ದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಂಭವವಿದೆ ಎಂದು ತಿಳಿ ಹೇಳಿದರು.
ನಂತರ ಅವರು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪರಿಶೀಲಿಸಿ, ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿಲ್ಲದಿರುವುದನ್ನು ಗಮನಿಸಿದ ತಹಶೀ ಲ್ದಾರ್ ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಬೇಕೆಂದು ಸೂಚನೆ ನೀಡಿದ್ದಲ್ಲದೆ ಉತ್ತಮ ಪಡಿಸಿಕೊಳ್ಳಲು ತೆಗೆದುಕೊಂಡಿರುವ ಕ್ರಮಗಳ ಮತ್ತು ಅವುಗಳಿಂದ ಸುಧಾರಣೆಗೊಂಡಿರುವ ಮಾಹಿತಿಯನ್ನು ಪಡೆದುಕೊಂಡರು. ಬಳಿಕ ಶಾಲಾ ಆವರಣ ಮತ್ತು ವಿದ್ಯಾರ್ಥಿಗಳ ಶೌಚಾಲಯದ ಸ್ವಚ್ಛತೆಯನ್ನು ಪರಿಶೀಲಿಸಿದರು.