Yelahanka MLA S R Vishwanath: ಆ.12 ರಂದು ವಿಧುರಾಶ್ವತ್ಥಕ್ಕೆ ತಿರಂಗಾ ಯಾತ್ರೆ: ಯಲಹಂಕ ಶಾಸಕ ಎಸ್ಆರ್.ವಿಶ್ವನಾಥ್
ಕಾಂಗ್ರೆಸ್ ಸರ್ಕಾರ ಭಾರತೀಯ ಜನತಾ ಪಾರ್ಟಿಯ ಮುಖಂಡರ ಮೇಲೆ ರಾಜಕೀಯ ದ್ವೇಷವನ್ನು ಸಾಧಿಸುತ್ತಿದೆ ಎಂದ ಅವರು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ ಕೆ.ಸುಧಾಕರ್ ವಿರುದ್ದ ಎಫೈಆರ್ ದಾಖಲಿಸುವ ಮೂಲಕ ಬಿಜೆಪಿ ಪಕ್ಷದ ಮುಖಂಡರ ಮೇಲೆ ಮೊಕದ್ದಮೆ ದಾಖಲಿಸುವುದನ್ನು ಮುಂದು ವರಿಸಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದ ಅವರು ಇದರ ವಿರುದ್ದ ಪಕ್ಷ ಪ್ರತಿಭಟನೆ ನಡೆಸಲಿದೆ


ಗೌರಿಬಿದನೂರು: ಹರ್ ಘರ್ ತಿರಂಗಾ ಯಾತ್ರೆಯನ್ನು ಆ-12 ಮಂಗಳವಾರ, ರಾಜಧಾನಿ ಬೆಂಗಳೂರಿನಿಂದ ತಾಲೂಕಿನ ವಿಧುರಾಶ್ವತ್ಥಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಯಲಹಂಕ ಕ್ಷೇತ್ರದ ಶಾಸಕ ಎಸ್ಆರ್.ವಿಶ್ವನಾಥ್ (Yelahanka MLA S R Vishwanath)ತಿಳಿಸಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದೀಜೀ ರವರು "ಮನ್ ಕೀ ಬಾತ್" ಕಾರ್ಯಕ್ರಮದಲ್ಲಿ ನೀಡಿದ ಸೂಚನೆಯಂತೆ ಹರ್ ಘರ್ ತಿರಂಗಾ ಯಾತ್ರೆಯನ್ನು ಏರ್ಪಡಿಸ ಲಾಗಿದ್ದು,ಯಾತ್ರೆಯಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಇನ್ನಿತರರು ಭಾಗವಹಿದಲಿದ್ದು,ಹರ್ ಘರ್ ತಿರಂಗಾ ಯಾತ್ರೆ ಬೆಂಗಳೂರಿನ ಹೆಬ್ಬಾಳದಿಂದ ಪ್ರಾರಂಭವಾಗಿ ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದ ವೀರ ಭೂಮಿ ವಿಧುರಾಶ್ವತ್ಥ ತಲುಪಲಿದ್ದು,ವಿಧುರಾಶ್ವತ್ಥದಲ್ಲಿ ಸಾರ್ವಜನಿಕರ ಸಾಮಾರಂಭವನ್ನು ಏರ್ಪಡಿಸಲಾಗಿದ್ದೆ ಎಂದು ತಿಳಿಸಿದ ಅವರು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಪ್ರತಿಯೊಂದು ಮನೆಯ ಮೇಲೂ ರಾಷ್ಟ್ರ ಧ್ವಜವನ್ನು ಹಾರಿಸಿ ಗೌರವ ಸಲ್ಲಿಸಬೇಕೆಂದು ತಿಳಿಸಿದ ಅವರು ತಿರಂಗ ಯಾತ್ರೆಯಲ್ಲಿ ಸಾರ್ವ ಜನಿಕರು, ಪಕ್ಷದ ಕಾರ್ಯಕರ್ತರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಿರಂಗ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಕೈವಾರದಲ್ಲಿ ಹುಣ್ಣಿಮೆ ಪೂಜೆ ರಥೋತ್ಸವ
ಕಾಂಗ್ರೆಸ್ ಸರ್ಕಾರ ಭಾರತೀಯ ಜನತಾ ಪಾರ್ಟಿಯ ಮುಖಂಡರ ಮೇಲೆ ರಾಜಕೀಯ ದ್ವೇಷವನ್ನು ಸಾಧಿಸುತ್ತಿದೆ ಎಂದ ಅವರು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ ಕೆ.ಸುಧಾಕರ್ ವಿರುದ್ದ ಎಫೈಆರ್ ದಾಖಲಿಸುವ ಮೂಲಕ ಬಿಜೆಪಿ ಪಕ್ಷದ ಮುಖಂಡರ ಮೇಲೆ ಮೊಕದ್ದಮೆ ದಾಖಲಿಸುವುದನ್ನು ಮುಂದುವರಿಸಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದ ಅವರು ಇದರ ವಿರುದ್ದ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು,ಮಾಜಿ ಶಾಸಕ ರಾಜಣ್ಣ,ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರೇಗೌಡ,ಮುಖಂಡರಾದ ಎನ್ಎಮ್. ರವಿನಾರಾಯಣರೆಡ್ಡಿ, ಡಾ ಶಶಿಧರ್, ಬಾಗೇಪಲ್ಲಿ ಮುನಿರಾಜು, ರಾಮಲಿಂಗಪ್ಪ, ಎಚ್ಎಸ್. ಮುರುಳೀಧರ್, ರಂಗನಾಥ್, ಮಾರ್ಕೆಟ್ ಮೋಹನ್,ರಮೇಶ್ ರಾವ್,ಮಧು ಸೂರ್ಯನಾರಾಯಣ್ ರೆಡ್ಡಿ, ಕೋಡ್ಲೀರಪ್ಪ, ಹರೀಶ್, ಮುದ್ದುವೀರಪ್ಪ, ಮಾರುತಿ, ಆನಂದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.