ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder accused escape: ಜೈಲಿನಿಂದ ಕೊಲೆ ಆರೋಪಿ ಎಸ್ಕೇಪ್‌- ಶಾಕಿಂಗ್‌ ವಿಡಿಯೊ ವೈರಲ್‌

ಅಸ್ಸಾಂನ ಕಾನ್ಪುರದ ಜೈಲಿನಿಂದ ಕೊಲೆ ಆರೋಪಿಯೊಬ್ಬ ತಪ್ಪಿಸಿಕೊಂಡಿದ್ದು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಸುಮಾರು 150 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಯ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸರು ಪರಾರಿಯಾಗಿರುವ ಆರೋಪಿಗಾಗಿ ತೀವ್ರ ಶೋಧ ಮುಂದುವರಿಸಿದ್ದಾರೆ.

ಜೈಲಿನಿಂದ ಕೊಲೆ ಆರೋಪಿ ಎಸ್ಕೇಪ್‌-ಈ ವಿಡಿಯೊ ನೋಡಿ

ಕಾನ್ಪುರ: ಜೈಲಿನಿಂದ (Kanpur Jail) ಕೊಲೆ ಆರೋಪಿ (Murder accused ) ಪರಾರಿಯಾಗಿರುವ ಘಟನೆ ಅಸ್ಸಾಂನ (assam) ಕಾನ್ಪುರದಲ್ಲಿ ನಡೆದಿದೆ. ಸ್ನೇಹಿತನನ್ನೇ ಕೊಂದು (Friend Murder case) ಜೈಲು ಸೇರಿದ್ದ ಜಜ್ಮೌವಿನ (Jajmau) ತಿವಾರಿ ಪುರ್ (Tiwari Pur) ನಿವಾಸಿ ಅಸಾರುದ್ದೀನ್ ಪರಾರಿಯಾಗಿರುವ ಕೊಲೆ ಆರೋಪಿ. ಶುಕ್ರವಾರ ರಾತ್ರಿ ಜಿಲ್ಲಾ ಜೈಲಿನಿಂದ (Kanpur Jailbreak) ಪರಾರಿಯಾಗಿರುವ ಅಸಾರುದ್ದೀನ್ ನನ್ನು ಹುಡುಕಲು ಕಾನ್ಪುರದ ಜೈಲು ಅಧಿಕಾರಿಗಳು ಪೊಲೀಸರೊಂದಿಗೆ ಸೇರಿ ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಆದರೆ ಇದುವರೆಗೂ ಆತನ ಪತ್ತೆಯಾಗಿಲ್ಲ.

ಜಜ್ಮೌವಿನ ತಿವಾರಿ ಪುರ್‌ನಲ್ಲಿ ನಿವಾಸಿ ಅಸಾರುದ್ದೀನ್ ಜನವರಿ 8 ರಂದು ತನ್ನ ಸ್ನೇಹಿತ ಇಸ್ಮಾಯಿಲ್ ನನ್ನು ಕೊಂದ ಆರೋಪದ ಮೇರೆಗೆ ಜೈಲು ಸೇರಿದ್ದ. ಅಸಾರುದ್ದೀನ್ ಪತ್ನಿ ಇಸ್ಮಾಯಿಲ್ ಜೊತೆ ಸಂಬಂಧ ಹೊಂದಿರುವ ಶಂಕೆಯಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನ್ಪುರದ ಜೈಲಿನ ಬ್ಯಾರಕ್ ಸಂಖ್ಯೆ 14ರಲ್ಲಿ ಬಂಧನದಲ್ಲಿದ್ದ ಅಸಾರುದ್ದೀನ್ ಜೈಲಿನಲ್ಲಿ ಇಲ್ಲದೇ ಇರುವುದು ಶುಕ್ರವಾರ ರಾತ್ರಿ 10.30ರ ಸುಮಾರಿಗೆ ತಿಳಿದುಬಂದಿದೆ. ಜೈಲು ಅಧಿಕಾರಿಯು ಕೈದಿಗಳ ಎಣಿಕೆ ಮಾಡುತ್ತಿದ್ದ ವೇಳೆ ಒಬ್ಬ ಕಾಣೆಯಾಗಿರುವುದನ್ನು ಗಮನಿಸಿ ಕೂಡಲೇ ಮೇಲಾಧಿಕಾರಿಗೆ ತಿಳಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಜೈಲು ಸೂಪರಿಂಟೆಂಡೆಂಟ್ ಬಿಡಿ ಪಾಂಡೆ, ಎಲ್ಲಾ ಬ್ಯಾರಕ್ ಗಳ ಮರು ಎಣಿಕೆಗೆ ಆದೇಶಿಸಿದರು. ಆದರೆ ಆತನ ಪತ್ತೆಯಾಗಿಲ್ಲ. ಬಳಿಕ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಕಾನ್ಪುರ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ಜೈಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು ಜೈಲಿನ ಒಳಭಾಗ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆದರೆ ಅಸಾರುದ್ದೀನ್ ಜೈಲಿನಿಂದ ಹೊರಬಂದಿರುವ ಬಗ್ಗೆ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ. ಹೀಗಾಗಿ ಆತ ಜೈಲಿನಲ್ಲೇ ಅಡಗಿಕೊಂಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದು, ಪೊಲೀಸರು ಮತ್ತು ಜೈಲು ಸಿಬ್ಬಂದಿ ಜೈಲಿನ ಆವರಣದಲ್ಲಿರುವ ಮರಗಳು, ಶೌಚಾಲಯದ ನಾಳಗಳು ಮತ್ತು ಇತರ ಗುಪ್ತ ಪ್ರದೇಶಗಳನ್ನೂ ಜಾಲಾಡಿದ್ದಾರೆ. ಆದರೆ ಇದುವರೆಗೆ ಆತನ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Operation in Kishtwar: ಕಣಿವೆ ರಾಜ್ಯದಲ್ಲಿ ಗುಂಡಿನ ಚಕಮಕಿ- ಸೇನೆಯ ಮೇಲೆ ಉಗ್ರರಿಂದ ಫೈರಿಂಗ್‌

ಡಿಸಿಪಿ (ಪೂರ್ವ) ಸತ್ಯಜಿತ್ ಗುಪ್ತಾ ಮತ್ತು ಎಡಿಸಿಪಿ ಅಂಜಲಿ ವಿಶ್ವಕರ್ಮ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು 150 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಆರೋಪಿಯು ಜೈಲಿನಿಂದ ಹೊರಬಂದಿರುವ ಯಾವುದೇ ದೃಶ್ಯ ಇದರಲ್ಲಿ ಕಂಡು ಬಂದಿಲ್ಲ. ಆದ್ದರಿಂದ ಆತನ ಹುಡುಕಾಟಕ್ಕೆ ತನಿಖೆ ಮುಂದುವರಿದಿದ್ದು, ಇತರ ಕೈದಿಗಳ ವಿಚಾರಣೆ ನಡೆಸಲಾಗುತ್ತಿದೆ.