Chinthamani News: ಆಸ್ಪತ್ರೆಗೆ ದಾಖಲಾದ ಎರಡು ಕುಟುಂಬಗಳ ವ್ಯಕ್ತಿಗಳು: ಸರ್ಕಾರಿ ಆಸ್ಪತ್ರೆ ಎದುರುಗಡೆ ಹೈಡ್ರಾಮಾ
ಗಲಾಟೆಯಲ್ಲಿ ರಾಮಾಂಜಪ್ಪ(೩೦ ವರ್ಷ)ನಾರಾಯಣಪ್ಪ(೬೫ ವರ್ಷ)ವೆಂಕಟಪ್ಪ(೬೫ ವರ್ಷ) ವೆಂಕಟ ರಾಜು(೨೫) ನಾಗಮ್ಮ(೫೫) ಮತ್ತೊಂದು ಕುಟುಂಬದವರಾದ ಗೋವಿಂದಪ್ಪ(೪೫ ವರ್ಷ) ಲಕ್ಷ್ಮಮ್ಮ(೩೯ ವರ್ಷ) ಹರೀಶ್ (೧೫ ವರ್ಷ)ಒಬ್ಬರಿಗೆ ಒಬ್ಬರು ಹೊಡೆದಾಡಿಕೊಂಡು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
-
Ashok Nayak
Oct 26, 2025 10:38 AM
ಚಿಂತಾಮಣಿ: ತಿಪ್ಪೆ ಹಾಕುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸದರಿ ಗ್ರಾಮದ ಅಖಿಲಮ್ಮ(೨೫ ವರ್ಷ)ಎಂಬುವರು ತಮ್ಮ ಮನೆ ಸಮೀಪ ಇರುವ ತಿಪ್ಪೆ ಗುಂಡಿ ಯಲ್ಲಿ ತಿಪ್ಪೆ ಎಸೆಯಲು ಹೋದಾಗ ಅಲ್ಲೇ ಸಮೀಪವಿರುವ ಮನೆಯವರಾದ ವೆಂಕಟರವಣಮ್ಮ (೩೫ ವರ್ಷ)ನಡುವೆ ಮಾತಿಗೆ ಮಾತು ನಡೆದು ಗಲಾಟೆಯಾಗಿದೆ.
ಇದನ್ನೂ ಓದಿ: Chikkaballapur News: ಅ.26ಕ್ಕೆ ಸ್ಮೈಲ್ಸ್ ಆಸ್ಪತ್ರೆ ವತಿಯಿಂದ ಉಚಿತ ಫೈಲ್ಸ್ ತಪಾಸಣಾ ಶಿಬಿರ
ಗಲಾಟೆಯಲ್ಲಿ ರಾಮಾಂಜಪ್ಪ(೩೦ ವರ್ಷ)ನಾರಾಯಣಪ್ಪ(೬೫ ವರ್ಷ)ವೆಂಕಟಪ್ಪ(೬೫ ವರ್ಷ) ವೆಂಕಟರಾಜು(೨೫)ನಾಗಮ್ಮ(೫೫ )ಮತ್ತೊಂದು ಕುಟುಂಬದವರಾದ ಗೋವಿಂದಪ್ಪ(೪೫ ವರ್ಷ) ಲಕ್ಷ್ಮಮ್ಮ(೩೯ ವರ್ಷ)ಹರೀಶ್(೧೫ ವರ್ಷ)ಒಬ್ಬರಿಗೆ ಒಬ್ಬರು ಹೊಡೆದಾಡಿಕೊಂಡು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಷ್ಟೇ ಅಲ್ಲದೆ ಆಸ್ಪತ್ರೆಯ ಎದುರುಗಡೆ ರಾಮಾಂಜಪ್ಪ ನಿಲ್ಲಿಸಿದ್ದ ಕಾರಿನ ಕೆಲ ಭಾಗಗಳಿಗೆ ಮತ್ತೊಂದು ಕುಟುಂಬದ ಕೆಲ ವ್ಯಕ್ತಿಗಳು ಹಾನಿ ಉಂಟು ಮಾಡಿದ್ದಾರೆ ಎಂದು ಗೊತ್ತಾಗಿದೆ.
ಘಟನೆಯ ವಿಚಾರ ತಿಳಿದ ತಕ್ಷಣ ಗ್ರಾಮಾಂತರ ಠಾಣೆಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.